2025-26ರ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ಅನ್ನು ಜಾರಿಗೆ ತರಲು ಮಹಾರಾಷ್ಟ್ರ ಸರ್ಕಾರ ವಿವರವಾದ ಯೋಜನೆಯನ್ನು ಪ್ರಕಟಿಸಿದೆ. ಈ ಯೋಜನೆಯ ಪ್ರಮುಖ ಅಂಶವೆಂದರೆ, ಮರಾಠಿ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ 1 ರಿಂದ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ಹಿಂದಿಯನ್ನು ಕಡ್ಡಾಯ ಮೂರನೇ ಭಾಷೆಯಾಗಿ ಪರಿಚಯಿಸಲಾಗುತ್ತಿದೆ.
ಎನ್‌ಇಪಿ 2020 ರ ಅಡಿಯಲ್ಲಿ ಹೊಸ ಪಠ್ಯಕ್ರಮವು ಹಂತ ಹಂತವಾಗಿ ವೇಳಾಪಟ್ಟಿಯನ್ನು ಜಾರಿ ಮಾಡಲಾಗುತ್ತದೆ. 2025-26 ಶೈಕ್ಷಣಿಕ ವರ್ಷದಲ್ಲಿ 1 ನೇ ತರಗತಿಯಿಂದ ಪ್ರಾರಂಭವಾಗಿ 2028-29 ರ ವೇಳೆಗೆ ಎಲ್ಲಾ ಶ್ರೇಣಿಗಳಿಗೆ ವಿಸ್ತರಿಸಲಾಗುತ್ತದೆ.
ಭಾಷಾ ನೀತಿಯ ಭಾಗವಾಗಿ, ಆರಂಭಿಕ ದರ್ಜೆಯ ವಿದ್ಯಾರ್ಥಿಗಳಿಗೆ ಹಿಂದಿಯನ್ನು ಕಡ್ಡಾಯ ಮೂರನೇ ಭಾಷೆಯಾಗಿ ಪರಿಚಯಿಸಲಾಗುವುದು. ಈ ಪರಿವರ್ತನೆಯನ್ನು ಬೆಂಬಲಿಸಲು, ರಾಜ್ಯ ಸರ್ಕಾರವು 2025 ರ ವೇಳೆಗೆ 80% ಶಿಕ್ಷಕರಿಗೆ ಹೊಸ ಶಿಕ್ಷಣ ವಿಧಾನಗಳು ಮತ್ತು ಡಿಜಿಟಲ್ ಪರಿಕರಗಳಲ್ಲಿ ತರಬೇತಿ ನೀಡಲು ಯೋಜಿಸಿದೆ.
ಹೊಸ ನೀತಿಯಡಿಯಲ್ಲಿ, ಮಹಾರಾಷ್ಟ್ರವು 5+3+3+4 ಶೈಕ್ಷಣಿಕ ರಚನೆಯನ್ನು ಅಳವಡಿಸಿಕೊಳ್ಳಲಿದೆ, ಪಠ್ಯಕ್ರಮ ಅಭಿವೃದ್ಧಿಯನ್ನು ಎಸ್‌ಸಿಇಆರ್‌ಟಿ ಮತ್ತು ಬಾಲಭಾರತಿ ಸ್ಥಳೀಯವಾಗಿ ನಿರ್ವಹಿಸುತ್ತದೆ. ಎನ್‌ಇಪಿ 2020 ಹೊಸ ಪಠ್ಯಕ್ರಮದ ಅಡಿಯಲ್ಲಿ ಪರಿಚಯಿಸಿದ 5+3+3+4 ಶೈಕ್ಷಣಿಕ ರಚನೆಯು ಶಾಲಾ ಶಿಕ್ಷಣವನ್ನು ನಾಲ್ಕು ಹಂತಗಳಾಗಿ ವಿಂಗಡಿಸುತ್ತದೆ: ಮೂಲಭೂತ ಹಂತ, ಪೂರ್ವಸಿದ್ಧತಾ ಹಂತ, ಮಧ್ಯಮ ಹಂತ ಮತ್ತು ಮಾಧ್ಯಮಿಕ ಹಂತವಾಗಿ.
“ಈ ಹೊಸ ನೀತಿಯು ಹಿಂದಿನ 10+2+3 ವ್ಯವಸ್ಥೆಯನ್ನು 5+3+3+4 ಸ್ವರೂಪಕ್ಕೆ ಪುನರ್ರಚಿಸುತ್ತದೆ. ಇದು ಮೂಲಭೂತ ಹಂತದಿಂದ ಉನ್ನತ ಮಟ್ಟದವರೆಗೆ ಶಿಕ್ಷಣವನ್ನು ಒಳಗೊಂಡಿದೆ. ಈ ನೀತಿಯನ್ನು ರಾಜ್ಯದಲ್ಲಿ ಕ್ರಮೇಣ ಜಾರಿಗೆ ತರಲಾಗುತ್ತಿದೆ. ಇದು ಐದು ಸ್ತಂಭಗಳ ಮೇಲೆ ನಿರ್ಮಿಸಲಾಗಿದೆ: ಪ್ರವೇಶ, ಸಮಾನತೆ, ಗುಣಮಟ್ಟ, ಕೈಗೆಟುಕುವಿಕೆ ಮತ್ತು ಹೊಣೆಗಾರಿಕೆ. 2030 ರ ವೇಳೆಗೆ ಸಾಧಿಸಬೇಕಾದ ಸುಸ್ಥಿರ ಅಭಿವೃದ್ಧಿ ಗುರಿಗಳೊಂದಿಗೆ ಹೊಂದಿಕೆಯಾಗುತ್ತದೆ” ಎಂದು ರಾಜ್ಯ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ತುಷಾರ್ ಮಹಾಜನ್ ನೋಟಿಸ್‌ನಲ್ಲಿ ತಿಳಿಸಿದ್ದಾರೆ.
ಶಾಲಾ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ರಾಜ್ಯ ಸ್ಟೀರಿಂಗ್ ಸಮಿತಿ ಸೇರಿದಂತೆ ಹಂತ ಹಂತದ ಅನುಷ್ಠಾನಕ್ಕಾಗಿ ಮಹಾರಾಷ್ಟ್ರ ಸರ್ಕಾರವು ಹಲವಾರು ಸಮಿತಿಗಳನ್ನು ರಚಿಸಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಮುರ್ಷಿದಾಬಾದ್ ಹಿಂಸಾಚಾರಕ್ಕೆ ಬಿಜೆಪಿಯನ್ನು ದೂಷಿಸಿದ ದೀದಿ; ‘ಬಿಎಸ್‌ಎಫ್ ಉತ್ತೇಜನ ನೀಡಿದೆ’ ಎಂದ ಬಂಗಾಳ ಸಿಎಂ


