ನಕಲಿ ದಾಖಲೆಗಳು ಸೇರಿದಂತೆ ಅನ್ಯಾಯದ ವಿಧಾನಗಳನ್ನು ಬಳಸಿ ಜೆಇಇ (ಮುಖ್ಯ) ಪರೀಕ್ಷೆ ಬರೆದ 110 ಅಭ್ಯರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಹೇಳಿದೆ.
ಶನಿವಾರ ಜೆಇಇ (ಮುಖ್ಯಪರೀಕ್ಷೆ) ಎರಡನೇ ಆವೃತ್ತಿಯ ಫಲಿತಾಂಶ ಪ್ರಕಟವಾಗಿದ್ದು, 24 ಅಭ್ಯರ್ಥಿಗಳು ಶೇಕಡ 100 ಅಂಕ ಗಳಿಸಿದ್ದಾರೆ.
ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ 24 ಅಭ್ಯರ್ಥಿಗಳು ಶೇ. 100 ಅಂಕ ಗಳಿಸಿದ್ದು, ರಾಜಸ್ಥಾನದಲ್ಲಿ ಪರಿಪೂರ್ಣ ಅಂಕಗಳನ್ನು ಪಡೆದ ಅಭ್ಯರ್ಥಿಗಳ ಸಂಖ್ಯೆ ಅತಿ ಹೆಚ್ಚಿದೆ. ಒಬ್ಬರು ಮಹಿಳಾ ಅಭ್ಯರ್ಥಿ ಅತಿ ಹೆಚ್ಚು ಅಂಕ ಪಡೆದವರಲ್ಲಿ ಸೇರಿದ್ದಾರೆ.
ಜೆಇಇ (ಮುಖ್ಯ) ಪತ್ರಿಕೆ 1 ಮತ್ತು ಪತ್ರಿಕೆ 2ರ ಫಲಿತಾಂಶಗಳ ಆಧಾರದ ಮೇಲೆ, ಅಭ್ಯರ್ಥಿಗಳನ್ನು ಜೆಇಇ (ಅಡ್ವಾನ್ಸ್ಡ್) ಗೆ ಹಾಜರಾಗಲು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಇದು 23 ಪ್ರಮುಖ ಭಾರತೀಯ ತಂತ್ರಜ್ಞಾನ ಸಂಸ್ಥೆಗಳಿಗೆ (ಐಐಟಿ) ಪ್ರವೇಶಕ್ಕಾಗಿ ನಡೆಸುವ ಪರೀಕ್ಷೆಯಾಗಿದೆ.
ಈ ಬಾರಿ ದೇಶದಾದ್ಯಂತ 10,61,840 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಈ ಪೈಕಿ 9,92,350 ಮಂದಿ ಪರೀಕ್ಷೆಗೆ ಹಾಜರಾಗಿದ್ದರು.
ಚುನಾವಣಾ ಗೆಲುವು ಪ್ರಶ್ನಿಸಿ ಅರ್ಜಿ: ಮಹಾರಾಷ್ಟ್ರ ಸಿಎಂ ಫಡ್ನವಿಸ್‌ಗೆ ಹೈಕೋರ್ಟ್ ಸಮನ್ಸ್


