ಮುಂಬೈನ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ವಿಲೇ ಪಾರ್ಲೆ (ಪೂರ್ವ)ನಲ್ಲಿದ್ದ 90 ವರ್ಷ ಹಳೆಯದಾದ ದಿಗಂಬರ ಜೈನ ದೇವಾಲಯ ಶ್ರೀ 1008 ಪಾರ್ಶ್ವನಾಥ ದೇರಾಸರ್ ಅನ್ನು ‘ಕಾನೂನುಬಾಹಿರ’ ಎಂದು ಆರೋಪಿಸಿ ಕೆಡವಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಬಿಎಂಸಿಯ ಕ್ರಮ ಖಂಡಿಸಿ ಶನಿವಾರ ಜೈನ ಸಮುದಾಯದ ಸಾವಿರಾರು ಮಂದಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕೌಶಲ ಸಚಿವ ಮಂಗಲ್ ಪ್ರಭಾತ್ ಲೋಧಾ, ವಿಲೆಪಾರ್ಲೆ ಶಾಸಕ ಪರಾಗ್ ಅಲವಾನಿ, ಸಂಸದೆ ವರ್ಷಾ ಗಾಯಕ್ವಾಡ್ ಮತ್ತು ಘಾಟ್‌ಕೋಪರ್ ಶಾಸಕ ಪರಾಗ್ ಶಾ ಮತ್ತು ಜೈನ ಸಮುದಾಯದ ಸಂತರು ಬಿಎಂಸಿ ಕೆ/ಪೂರ್ವ ವಾರ್ಡ್ ಕಚೇರಿವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
THIS IS MASSIVE 🚨⚡
Huge protest by Jain community against BJP Govt in Mumbai over the demolition of a sacred temple
Where are Godi Media & IT cell trolls who cheer bulldozer mafia? pic.twitter.com/1eKJxbIvhP
— Ankit Mayank (@mr_mayank) April 19, 2025
ದೇವಾಲಯದ ತೆರವು ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಜೈನ ಸಮುದಾಯದ ಧಾರ್ಮಿಕ ವಸ್ತುಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ, ಅದರಲ್ಲಿ ಜೈನ ಸಮುದಾಯಕ್ಕೆ ಸೇರಿದ ಪವಿತ್ರ ಪುಸ್ತಕಗಳು ಮತ್ತು ವಸ್ತುಗಳು ಸೇರಿವೆ ಎಂದು ಹೇಳಲಾಗಿದೆ.
ದೇವಾಲಯದ ವಿಷಯವು ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿದ್ದು, ಸುಪ್ರೀಂ ಕೋರ್ಟ್ ತಲುಪಿದ್ದರೂ, ದೇವಾಲಯದ ಪರವಾಗಿ ಯಾವುದೇ ತೀರ್ಪು ಬಂದಿರಲಿಲ್ಲ. ಧ್ವಂಸವನ್ನು ತಡೆಯುವ ಪ್ರಯತ್ನದಲ್ಲಿ ಭಕ್ತರು ಕೊನೆಯ ಕ್ಷಣದಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಯಾವುದೇ ವಿಚಾರಣೆ ನಡೆಯುವ ಮೊದಲು, ಭಾರೀ ಪೊಲೀಸ್ ಭದ್ರತೆಯಲ್ಲಿ ದೇವಾಲಯ ಧ್ವಂಸಗೊಳಿಸಲಾಗಿದೆ.
ದೇವಾಲಯದ ಟ್ರಸ್ಟಿ ಅನಿಲ್ ಶಾ ಅವರ ಪ್ರಕಾರ, ದೇವಾಲಯವು 1935ರಿಂದ ಅಸ್ತಿತ್ವದಲ್ಲಿತ್ತು. ಮುಂಬೈ ಪಾಲಿಕೆಯ ನಿಯಮಗಳ ಪ್ರಕಾರ, 1961-62 ಕ್ಕಿಂತ ಮೊದಲು ನಿರ್ಮಿಸಲಾದ ರಚನೆಗಳನ್ನು ಕಾನೂನುಬದ್ಧವೆಂದು ಪರಿಗಣಿಸಲಾಗುತ್ತದೆ. ಅಧಿಕಾರಿಗಳು ದೇವಾಲಯವನ್ನು ಕೆಡವಲು ಪಿತೂರಿ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ದೇವಾಲಯವು ಜೈನರ ನಂಬಿಕೆಯ ಸಂಕೇತವಾಗಿತ್ತು ಎಂದು ಅವರು ಹೇಳಿದ್ದಾರೆ.
ದೇವಾಲಯ ಧ್ವಂಸಗೊಂಡಿದ್ದರೂ, ಭಕ್ತರು ಆ ಸ್ಥಳದಲ್ಲಿ ಪೂಜೆಯನ್ನು ಪುನರಾರಂಭಿಸಿದ್ದಾರೆ ಮತ್ತು ಕಾನೂನು ಮಾರ್ಗಗಳ ಮೂಲಕ ದೇವಾಲಯವನ್ನು ಪುನರ್ನಿರ್ಮಿಸುವ ಪ್ರತಿಜ್ಞೆ ಮಾಡಿದ್ದಾರೆ. ಧ್ವಂಸಗೊಳಿಸುವ ಸಮಯದಲ್ಲಿ, ಪ್ರತಿಭಟನಾ ನಿರತ ಭಕ್ತರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ (ಲಾಠಿ ಚಾರ್ಜ್) ನಡೆಸಿದ್ದಾರೆಂದು ವರದಿಯಾಗಿದೆ.
ಸುಪ್ರೀಂ ಕೋರ್ಟ್ ಕೆಳ ನ್ಯಾಯಾಲಯದಲ್ಲಿ ದಾಖಲೆಗಳನ್ನು ಹಾಜರುಪಡಿಸಲು ಎಂಟು ದಿನಗಳ ಕಾಲಾವಕಾಶ ನೀಡಿದ್ದರೂ, ಪಾಲಿಕೆಯು ಬುಧವಾರ ಮುಂಜಾನೆ ಸಣ್ಣ ಸೂಚನೆ ನೀಡಿ ದೇವಾಲಯ ಕಡೆವಿದೆ ಎಂದು ಟ್ರಸ್ಟಿ ಅನಿಲ್ ಶಾ ಆರೋಪಿಸಿದ್ದಾರೆ.
ವಿಲೇ ಪಾರ್ಲೆ ಶಾಸಕ ಪರಾಗ್ ಅಲವಾನಿ ಅವರು ದೇವಾಲಯ ತೆರವುಗೊಳಿಸುವ ಪ್ರಕ್ರಿಯೆ ಮುಂದೂಡುವಂತೆ ಮತ್ತು ನ್ಯಾಯಾಲಯದ ವಿಚಾರಣೆಗೆ ಸಮಯಾವಕಾಶ ನೀಡುವಂತೆ ವಿನಂತಿಸಿದ್ದರು. ಆದರೆ, ಬಿಎಂಸಿ ದೇವಾಲಯವನ್ನು ಕಾನೂನುಬಾಹಿರವೆಂದು ಘೋಷಿಸಿದ ನ್ಯಾಯಾಲಯದ ಈ ಹಿಂದಿನ ಆದೇಶಗಳನ್ನು ಉಲ್ಲೇಖಿಸಿ ತೆರವು ಕಾರ್ಯಾಚರಣೆ ಮುಂದುವರೆಸಿದೆ ಎಂದು ವರದಿಗಳು ಹೇಳಿವೆ.
ಕಾನೂನು ಪ್ರಕಾರವೇ ದೇವಾಲಯದ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಈ ವಿವಾದವು ಕಳೆದ 20 ವರ್ಷಗಳಿಂದ ನಗರ ಸಿವಿಲ್ ನ್ಯಾಯಾಲಯ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿದೆ. ನ್ಯಾಯಾಲಯ ದೇವಾಲಯ ತೆರವಿಗೆ ಯಾವುದೇ ತಡೆಯನ್ನು ನೀಡಿಲ್ಲ. ಶಿಷ್ಟಾಚಾರದ ಪ್ರಕಾರ ಧ್ವಂಸ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಬಿಎಂಸಿಯ ಕೆ/ಪೂರ್ವ ವಾರ್ಡ್ ಅಧಿಕಾರಿಗಳು ಹೇಳಿದ್ದಾರೆ.
ಹೋಳಿ ಹಬ್ಬದ ಸಂದರ್ಭದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹೇಳಿಕೆ; ಸಂಭಾಲ್ ವೃತ್ತ ನಿರೀಕ್ಷಕರಿಗೆ ಕ್ಲೀನ್ ಚಿಟ್


