ರಾಜಸ್ಥಾನದ ಸಿಕಾರ್ ಜಿಲ್ಲೆಯ 19 ವರ್ಷದ ಯುವಕನ ಮೇಲೆ ಇಬ್ಬರು ದುಷ್ಕರ್ಮಿಗಳು ಲೈಂಗಿಕ ದೌರ್ಜನ್ಯ ಎಸಗಿ, ಮೂತ್ರ ವಿಸರ್ಜಿಸಿ, ಜಾತಿಯ ಆಧಾರದ ಮೇಲೆ ನಿಂದಿನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಆರೋಪಿಗಳು ಯುವಕನಿಗೆ ಮದ್ಯದ ಬಾಟಲಿಯಿಂದ ಹೊಡೆದು, ದೂರು ನೀಡಿದರೆ ಅವರನ್ನು ಮತ್ತು ಅವರ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತ ಯುವಕ ಆರೋಪಿಸಿದ್ದಾರೆ. ರಾಜಸ್ಥಾನ
ಆಪಾದಿತ ಅಪರಾಧವು ಏಪ್ರಿಲ್ 8 ರಂದು ಸಿಕಾರ್ ಜಿಲ್ಲೆಯ ಫತೇಪುರ್ ಪ್ರದೇಶದಲ್ಲಿ ನಡೆದಿದ್ದು, ಏಪ್ರಿಲ್ 16 ರಂದು ಪ್ರಕರಣ ದಾಖಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ತಾನು ಭಯಭೀತರಾಗಿರುವುದಿಂರ ದೂರು ದಾಖಲಿಸಲು ವಿಳಂಬ ಮಾಡಿರುವುದಾಗಿ ಅವರು ಹೇಳಿದ್ದಾರೆ. ಅಷ್ಟೆ ಅಲ್ಲದೆ, ಆರೋಪಿಗಳು ತಮ್ಮ ಕೃತ್ಯಗಳ ವೀಡಿಯೊಗಳನ್ನು ಚಿತ್ರೀಕರಿಸಿ ವೀಡಿಯೊಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆ ದಲಿತ ಯುವಕ ಹೇಳಿದ್ದಾರೆ.
ಏಪ್ರಿಲ್ 8 ರಂದು ಆಪಾದಿತ ಅಪರಾಧ ನಡೆದ ಸಮಯದಲ್ಲಿ, ದಲಿತ ವ್ಯಕ್ತಿಯ ಕುಟುಂಬವು ಅವರ ಗ್ರಾಮದಲ್ಲಿ ನಡೆದ ಮದುವೆಯಲ್ಲಿ ಭಾಗವಹಿಸಲು ತೆರಳಿತ್ತು ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.. “ಡಿಜೆ ಮದುವೆ ಮನೆಯ ಬಳಿ ಬಂದಾಗ, ನಾನು ಕೂಡ ಅದನ್ನು ವೀಕ್ಷಿಸಲು ನನ್ನ ಮನೆಯಿಂದ ಹೊರಟೆ. ನಾನು ಹೋಗುವಾಗ, [ಆರೋಪಿಗಳು] ನನ್ನನ್ನು ತಡೆದು, [ಬಸ್] ನಿಲ್ದಾಣಕ್ಕೆ ಅವರೊಂದಿಗೆ ಕೆಲಸಕ್ಕಾಗಿ ಬರುವಂತೆ ಕೇಳಿಕೊಂಡರು.”
“ಆದರೆ, ಕುಡಿದ ಮತ್ತಿನಲ್ಲಿದ್ದ ಇಬ್ಬರೂ ಆರೋಪಿಗಳು, ತನ್ನನ್ನು ಗ್ರಾಮದ ಹೊರಗಿನ ನಿರ್ಜನ ಸ್ಥಳಕ್ಕೆ ಕರೆದೊಯ್ದು ಜಾತಿ ನಿಂದನೆ ಮಾಡಲು ಪ್ರಾರಂಭಿಸಿದರು. ಅವರು ನನ್ನ ತಂದೆಯನ್ನು ಕೊಲ್ಲಲು ಬಯಸಿದ್ದಾಗಿ ಹೇಳಿದ್ದು, ಆದರೆ ಅವರು ದೇಶದ ಹೊರಗಿರುವುದರಿಂದ, ಈಗ ನಿನ್ನ ಸರದಿ [ಹೊಡೆಯುವುದು]” ಎಂದು ಅವರು ಹೇಳಿದ್ದಾರೆ ಎಂದು ಸಂತ್ರಸ್ತ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
“ನಂತರ ಆರೋಪಿಗಳು ನನ್ನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿ ನನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ. ಅದರ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ. ಅವರಲ್ಲಿ ಒಬ್ಬ ವ್ಯಕ್ತಿ ನನ್ನ ಬೆನ್ನು, ತೋಳುಗಳು, ಹೊಟ್ಟೆ ಮತ್ತು ಜನನಾಂಗಗಳಿಗೆ ಕೋಲಿನಿಂದ ಹೊಡೆದಿದ್ದಾರೆ” ಎಂದು ಅವರು ಹೇಳಿದ್ದಾರೆ. ಈ ವೇಳೆ ಹತ್ತಿರದ ಪ್ರದೇಶದ ಇಬ್ಬರು ವ್ಯಕ್ತಿಗಳು ಮಧ್ಯಪ್ರವೇಶಿಸಿ ತನ್ನನ್ನು ರಕ್ಷಿಸಿದ್ದಾಗಿ ದೂರುದಾರ ಯುವಕ ಹೇಳಿದ್ದಾರೆ.
ಸಂತ್ರಸ್ತ ಯುವಕ ಘಟನೆಯ ಬಗ್ಗೆ ಆರಂಭದಲ್ಲಿ ತಮ್ಮ ಕುಟುಂಬಕ್ಕೆ ತಿಳಿಸಿರಲಿಲ್ಲ, ಆದರೆ ನಂತರ ಮೂತ್ರ ವಿಸರ್ಜನೆಯಲ್ಲಿ ತೊಂದರೆಯಾದ ನಂತರ ಅವರ ಬಳಿ ಈ ಹೇಳಿಕೊಂಡರು ಎಂದು ಹೇಳಿದ್ದಾರೆ. ಅವರ ದೂರಿನ ನಂತರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ವಿವಿಧ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಫತೇಪುರದ ಉಪ ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಕುಮಾರ್ ಜಾಟ್ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ರಾಜಸ್ಥಾನ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಸುಪ್ರೀಂ ಕೋರ್ಟ್ ಕಾನೂನುಗಳನ್ನು ರೂಪಿಸುವುದಾದರೆ ಸಂಸತ್ ಕಟ್ಟಡವನ್ನು ಮುಚ್ಚಿ: ಬಿಜೆಪಿಯ ಸಂಸದ ನಿಶಿಕಾಂತ್ ದುಬೆ
ಸುಪ್ರೀಂ ಕೋರ್ಟ್ ಕಾನೂನುಗಳನ್ನು ರೂಪಿಸುವುದಾದರೆ ಸಂಸತ್ ಕಟ್ಟಡವನ್ನು ಮುಚ್ಚಿ: ಬಿಜೆಪಿಯ ಸಂಸದ ನಿಶಿಕಾಂತ್ ದುಬೆ

