ವೈಯಕ್ತಿಕ ವಿಷಯಕ್ಕೆ ಜಗಳವಾಡಿದ ನಂತರ 36 ವರ್ಷದ ಸಹೋದ್ಯೋಗಿಯನ್ನು ತನ್ನ ಸರ್ವಿಸ್ ರೈಫಲ್‌ನಿಂದ (ಎಸ್‌ಎಲ್‌ಆರ್) ಕೊಂದ ಆರೋಪದ ಮೇಲೆ 35 ವರ್ಷದ ಪೊಲೀಸ್ ಕಾನ್‌ಸ್ಟೆಬಲ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬೆಟ್ಟಿಯಾ ಪೊಲೀಸ್ ಲೈನ್‌ನಲ್ಲಿ ಈ ಅವಘಡ ನಡೆದಿದೆ.
“ಪ್ರಾಥಮಿಕ ತನಿಖೆಯಲ್ಲಿ, ಕಾನ್‌ಸ್ಟೆಬಲ್ ಸರ್ವಜೀತ್ ಕುಮಾರ್ ಮತ್ತೋರ್ವ ಕಾನ್‌ಸ್ಟೆಬಲ್ ಸೋನು ಕುಮಾರ್ (ಮೃತ) ಜೊತೆ ವೈಯಕ್ತಿಕ ವಿಷಯಕ್ಕೆ ವಾಗ್ವಾದ ನಡೆಸಿ, ಕ್ಷಣಾರ್ಧದಲ್ಲಿ ಗುಂಡು ಹಾರಿಸಿದ್ದಾರೆ ಎಂದು ಬೆಳಕಿಗೆ ಬಂದಿದೆ” ಎಂದು ಬೆಟ್ಟಿಯಾ ಅವರ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ವಿವೇಕ್ ದೀಪ್ ಹೇಳಿದ್ದಾರೆ.
ಭೋಜ್‌ಪುರ ನಿವಾಸಿ ಸೋನು, ಕೈಮೂರ್ ನಿವಾಸಿ ಸರ್ವಜೀತ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದರು ಎಂದು ವರದಿಯಾಗಿದೆ. ಇಬ್ಬರೂ 2013 ರಲ್ಲಿ ಸಶಸ್ತ್ರ ಕಾನ್‌ಸ್ಟೆಬ್ಯುಲರಿ ಪಡೆಗೆ ಸೇರಿದ್ದರು. ಪಶ್ಚಿಮ ಚಂಪಾರಣ್‌ನ ಸಿಕ್ತಾದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಅವರನ್ನು ಇತ್ತೀಚೆಗೆ ಬೆಟ್ಟಿಯಾ ಪೊಲೀಸ್ ಲೈನ್‌ಗೆ ವರ್ಗಾಯಿಸಲಾಗಿತ್ತು.
ಶನಿವಾರ ಬೆಳಿಗ್ಗೆ 10.20 ರ ಸುಮಾರಿಗೆ ಪೊಲೀಸ್ ಲೈನ್ಸ್‌ನಲ್ಲಿ ಈ ಘಟನೆ ನಡೆದಿದೆ ಎಂದು ಎಸ್‌ಡಿಪಿಒ ದೀಪ್ ತಿಳಿಸಿದ್ದಾರೆ.
ಸ್ಥಳದಿಂದ ಹನ್ನೊಂದು ಖಾಲಿ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
“ಸರ್ವಜೀತ್ ಕುಮಾರ್ ಅವರನ್ನು ಬಂಧಿಸಲಾಗಿದೆ” ಎಂದು ಚಂಪಾರಣ್ ಶ್ರೇಣಿಯ ಉಪ ಮಹಾನಿರ್ದೇಶಕ (ಡಿಐಜಿ) ಹರ್ಕಿಶೋರ್ ರೈ ಹೇಳಿದರು.
ಈ ಇಬ್ಬರೂ ರಾತ್ರಿ ಗಸ್ತು ತಂಡದ ಭಾಗವಾಗಿದ್ದರು. ರಾತ್ರಿ 11 ಗಂಟೆಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕಿತ್ತು ಎಂದು ರೈ ಹೇಳಿದರು. “ಸೋನು ಕುಮಾರ್ ರಾತ್ರಿ ಕರ್ತವ್ಯಕ್ಕೆ ಸಿದ್ಧರಾಗುತ್ತಿದ್ದಾಗ ಅವರು ಜಗಳವಾಡಿದರು. ಆದರೆ, ಸರ್ವಜೀತ್ ಕುಮಾರ್ ಈಗಾಗಲೇ ತಮ್ಮ ಸರ್ವಿಸ್ ರೈಫಲ್‌ನೊಂದಿಗೆ ಸಿದ್ಧರಾಗಿದ್ದರು” ಎಂದು ಡಿಐಜಿ ರೈ ಹೇಳಿದರು.
ಜಿಲ್ಲಾ ಪೊಲೀಸರ ಹಿರಿಯ ಅಧಿಕಾರಿಯೊಬ್ಬರು ಸರ್ವಜೀತ್ ಕುಮಾರ್ ತಮ್ಮ ಪತ್ನಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಸೋನು ಕುಮಾರ್ ಶಂಕಿಸಿದ್ದಾರೆ ಎಂದು ಹೇಳಿದ್ದಾರೆ. ಇದು ಇತ್ತೀಚೆಗೆ ಅವರ ಸಂಬಂಧದಲ್ಲಿ ಗಮನಾರ್ಹ ಒತ್ತಡವನ್ನುಂಟುಮಾಡಿದೆ.
ಸಂಭಾಲ್‌ನಲ್ಲಿ ಕಾಣಿಸಿಕೊಂಡ ‘ಫ್ರೀ ಗಾಜಾ, ಫ್ರೀ ಪ್ಯಾಲೆಸ್ತೀನ್’ ಪೋಸ್ಟರ್‌ಗಳು


