ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 497 ರ ಅಡಿಯಲ್ಲಿ ರದ್ದುಗೊಂಡಿರುವ ವ್ಯಭಿಚಾರದ ಆರೋಪಗಳನ್ನು ಒಳಗೊಂಡ 2010 ರ ಪ್ರಕರಣವನ್ನು ತೀರ್ಪು ನೀಡುವಾಗ, ಮಹಾಭಾರತದಲ್ಲಿ ದ್ರೌಪದಿಯನ್ನು ನಡೆಸಿಕೊಂಡ ರೀತಿಯನ್ನು ದೆಹಲಿ ಹೈಕೋರ್ಟ್ ಉಲ್ಲೇಖಿಸಿದ್ದು, ಈ ಮೂಲಕ ಮಹಿಳೆಯರನ್ನು ಆಸ್ತಿಯಂತೆ ಪರಿಗಣಿಸುವುದರ ವಿರುದ್ಧ ಎಚ್ಚರಿಕೆ ನೀಡಿದೆ. ಮಹಾಭಾರತದ ದ್ರೌಪದಿಯಂತಹ
ಏಪ್ರಿಲ್ 17 ರಂದು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರು ನೀಡಿದ್ದ ತೀರ್ಪಿನಲ್ಲಿ, ಮಹಾಭಾರತದಲ್ಲಿ ದ್ರೌಪದಿಯ ಸ್ಥಿತಿ ಮತ್ತು ನಂತರದ ಪರಿಣಾಮಗಳನ್ನು ಉತ್ತಮವಾಗಿ ದಾಖಲಿಸಲಾಗಿದ್ದರೂ, ಮಹಿಳೆಯರು ಆಸ್ತಿ ಎಂಬ ಸ್ತ್ರೀದ್ವೇಷ ಮತ್ತು ಪಿತೃಪ್ರಧಾನ ಮನಸ್ಥಿತಿ ನಮ್ಮ ಸಮಾಜದಲ್ಲಿ ಚಾಲ್ತಿಯಲ್ಲಿದೆ ಎಂದು ಹೇಳಿದ್ದಾರೆ.
“ಮಹಿಳೆಯನ್ನು ಗಂಡನ ಆಸ್ತಿ ಎಂದು ಪರಿಗಣಿಸುವುದು ಮತ್ತು ಅದರ ವಿನಾಶಕಾರಿ ಪರಿಣಾಮಗಳನ್ನು ಮಹಾಭಾರತದಲ್ಲಿ ಚೆನ್ನಾಗಿ ದಾಖಲಿಸಲಾಗಿದೆ. ಇದರಲ್ಲಿ ದ್ರೌಪದಿಯನ್ನು ಅವಳ ಸ್ವಂತ ಪತಿ ಯುಧಿಷ್ಠಿರನು ಜೂಜಾಟದಲ್ಲಿ ಪಣಕ್ಕಿಟ್ಟನು. ಅಲ್ಲಿ ಇತರ ನಾಲ್ವರು ಸಹೋದರರು ಮೂಕ ಪ್ರೇಕ್ಷಕರಾಗಿದ್ದರು ಮತ್ತು ದ್ರೌಪದಿಗೆ ಅವಳ ಘನತೆಗಾಗಿ ಪ್ರತಿಭಟಿಸಲು ಯಾವುದೇ ಧ್ವನಿ ಇರಲಿಲ್ಲ.” ಎಂದು ಅವರು ಹೇಳಿದ್ದಾರೆ.
“ಅದು ಸಂಭವಿಸಿದಂತೆ, ಅವಳು ಜೂಜಾಟದಲ್ಲಿ ಕಳೆದುಹೋದಳು ಮತ್ತು ನಂತರ ನಡೆದದ್ದು ಮಹಾಭಾರತದ ಮಹಾ ಯುದ್ಧವಾಗಿದ್ದು, ಸಾಮೂಹಿಕ ಜೀವಹಾನಿ ಮತ್ತು ಕುಟುಂಬದ ಅನೇಕ ಸದಸ್ಯರು ನಾಶವಾಗಲು ಕಾರಣವಾಯಿತು. ಮಹಿಳೆಯನ್ನು ಆಸ್ತಿಯಾಗಿ ಪರಿಗಣಿಸುವ ಅಸಂಬದ್ಧತೆಯ ಪರಿಣಾಮವನ್ನು ಪ್ರದರ್ಶಿಸಲು ಅಂತಹ ಉದಾಹರಣೆಯಿದ್ದರೂ, ಜೋಸೆಫ್ ಶೈನ್ (ಸುಪ್ರಾ) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸೆಕ್ಷನ್ 497 ಐಪಿಸಿಯನ್ನು ಅಸಂವಿಧಾನಿಕ ಎಂದು ಘೋಷಿಸಿದಾಗ ಮಾತ್ರ ನಮ್ಮ ಸಮಾಜದ ಸ್ತ್ರೀದ್ವೇಷಿ ಮನಸ್ಥಿತಿ ಇದನ್ನು ಅರ್ಥಮಾಡಿಕೊಂಡಿತು” ಎಂದು ನ್ಯಾಯಾಲಯ ಹೇಳಿದೆ.
ಐಪಿಸಿಯ ಸೆಕ್ಷನ್ 497 ವ್ಯಭಿಚಾರದ ಅಪರಾಧವನ್ನು ಅಪರಾಧೀಕರಿಸಲು ಬಳಸಲಾಗುತ್ತಿತ್ತು, ಆದರೆ ವಿವಾಹಿತ ಮಹಿಳೆ ಸಂಬಂಧ ಹೊಂದಿದ್ದ ಪುರುಷನನ್ನು ಮಾತ್ರ ಹೊಣೆಗಾರರನ್ನಾಗಿ ಮಾಡುತ್ತದೆ. ಇದಲ್ಲದೆ, ಮಹಿಳೆಯ ಪತಿ ಅಂತಹ ಸಂಬಂಧಕ್ಕೆ ಒಪ್ಪಿಗೆ ನೀಡಿದರೆ, ಯಾವುದೇ ಅಪರಾಧ ಆಗಿ ಪರಿಗಣಿಸುತ್ತಿರಲಿಲ್ಲ. 2018 ರಲ್ಲಿ, ಸುಪ್ರೀಂ ಕೋರ್ಟ್ ಐಪಿಸಿಯ ಸೆಕ್ಷನ್ 497 ಅನ್ನು ಅಸಂವಿಧಾನಿಕ ಎಂದು ಘೋಷಿಸಿತು. ಆದಾಗ್ಯೂ, ದೆಹಲಿ ಹೈಕೋರ್ಟ್‌ನ ಈ ವ್ಯಭಿಚಾರ ಪ್ರಕರಣವು 2010 ರ ಹಿಂದಿನದ್ದಾಗಿದೆ.
ಈ ಪ್ರಕರಣವು 1998 ರಲ್ಲಿ ವಿವಾಹವಾದ ದಂಪತಿಗಳಿಗೆ ಸಂಬಂಧಿಸಿದೆ. 2010 ರಲ್ಲಿ, ಪತಿಯು ತನ್ನ ಹೆಂಡತಿ ಇನ್ನೊಬ್ಬ ಪುರುಷನೊಂದಿಗೆ ವ್ಯಭಿಚಾರ ಸಂಬಂಧ ಹೊಂದಿದ್ದಾಳೆಂದು ಕಂಡುಕೊಂಡಿದ್ದಾಗಿ ಆರೋಪಿಸಲಾಗಿದೆ. ತನ್ನ ಹೆಂಡತಿಯ ಕರೆ ದಾಖಲೆಗಳನ್ನು ಪರಿಶೀಲಿಸಿದಾಗ ಅವಳು ರಾತ್ರಿ ವೇಳೆ ಆ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಳು, ಜೊತಗೆ ಲಕ್ನೋದ ಹೋಟೆಲ್‌ನಲ್ಲಿ ಆ ವ್ಯಕ್ತಿಯೊಂದಿಗೆ ರಾತ್ರಿ ತಂಗಿದ್ದಳು ಎಂದು ಅವನು ಕಂಡುಕೊಂಡಿದ್ದನು.
ಮೊದಲು ಅವನು ತನ್ನ ಹೆಂಡತಿಗೆ ವ್ಯಭಿಚಾರವನ್ನು ನಿಲ್ಲಿಸುವಂತೆ ಕಾನೂನು ನೋಟಿಸ್ ಜಾರಿ ಮಾಡಿದನು. ನಂತರ, ಅವಳು ವಿವಾಹೇತರ ಸಂಬಂಧ ಹೊಂದಿದ್ದಳು ಎಂದು ಹೇಳಲಾದ ಪುರುಷನ ವಿರುದ್ಧ ವ್ಯಭಿಚಾರದ ಕ್ರಿಮಿನಲ್ ದೂರು ದಾಖಲಿಸಿದ್ದರು. ಅದಾಗ್ಯೂ, ವಿಚಾರಣಾ ನ್ಯಾಯಾಲಯವು ಅವರ ಪತ್ನಿ ಮತ್ತು ವ್ಯಕ್ತಿಯ ನಡುವೆ ಲೈಂಗಿಕ ಸಂಬಂಧವಿರುವ ಯಾವುದೆ ಸಾಕ್ಷಿ ಇಲ್ಲದ ಕಾರಣ ವ್ಯಭಿಚಾರ ಆರೋಪದಿಂದ ಬಿಡುಗಡೆ ಮಾಡಿತ್ತು. ಅದಾಗ್ಯೂ, ಈ ತೀರ್ಪಿನ ವಿರುದ್ಧ ಮಹಿಳೆಯ ಪತಿ ಮೇಲ್ಮನವಿ ಸಲ್ಲಿಸಿದ್ದು, ವಿಚಾರಣೆ ನಡೆಸಿ ಸೆಷನ್ಸ್ ನ್ಯಾಯಾಲಯ ತೀರ್ಪನ್ನು ರದ್ದುಗೊಳಿತ್ತು, ಜೊತೆಗೆ ಪತ್ನಿಯ ಜೊತೆಗೆ ಸಂಬಂಧವಿದೆ ಎಂದು ಆರೋಪಿಸಲಾದ ವ್ಯಕ್ತಿಗೆ ಕ್ರಿಮಿನಲ್ ವಿಚಾರಣೆಯನ್ನು ಎದುರಿಸಲು ಸಮನ್ಸ್ ನೀಡಿತ್ತು.
ಇದರ ನಂತರ ವ್ಯಕ್ತಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ತನಗೆ ನೀಡಲಾದ ಸಮನ್ಸ್ ರದ್ದುಗೊಳಿಸುವಂತೆ ಒತ್ತಾಯಿಸಿದ್ದರು. ಈ ಮಧ್ಯೆ, ಪತ್ನಿ 2016 ರಲ್ಲಿ ತನ್ನ ಪತಿಯಿಂದ ವಿಚ್ಛೇದನ ಪಡೆದಿದ್ದರು.
ಐಪಿಸಿ ಸೆಕ್ಷನ್ 497 ಅನ್ನು ಅಸಂವಿಧಾನಿಕ ಎಂದು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ನೀಡಿದ 2018 ರ ಜೋಸೆಫ್ ಶೈನ್ ತೀರ್ಪು 2010 ರಲ್ಲಿ ದಾಖಲಾಗಿರುವ ಪ್ರಸ್ತುತ ಪ್ರಕರಣಕ್ಕೆ ಪೂರ್ವಾನ್ವಯವಾಗಿ ಅನ್ವಯಿಸುತ್ತದೆಯೇ ಎಂಬ ವಿಚಾರವನ್ನು ಹೈಕೋರ್ಟ್ ಪರಿಗಣಿಸಿತು. 2018 ರ ತೀರ್ಪು ಪೂರ್ವಾನ್ವಯವಾಗಿ ಅನ್ವಯಿಸುತ್ತದೆ ಎಂದು ನ್ಯಾಯಾಲಯ ತೀರ್ಮಾನಿಸಿದೆ.
“ಈ ಅಂಶವನ್ನು ಮೇಜರ್ ಜನರಲ್ ಎ.ಎಸ್. ಗೌರಯ & ಅನರ್. ವರ್ಸಸ್ ಎಸ್.ಎನ್. ಠಾಕೂರ್ 1986 ಎಐಆರ್ 1440 ರ ತೀರ್ಪಿನಲ್ಲಿ ಪರಿಗಣಿಸಲಾಗಿದೆ. ಇದರಲ್ಲಿ ಸುಪ್ರೀಂ ಕೋರ್ಟ್‌ನ ಕಾನೂನು ಘೋಷಣೆಯು ಪೂರ್ವಾನ್ವಯವಾಗಿಯೂ ಸಹ ಬಾಕಿ ಇರುವ ಎಲ್ಲಾ ವಿಚಾರಣೆಗಳಿಗೆ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ,” ಎಂದು ನ್ಯಾಯಾಲಯ ಹೇಳಿದೆ.
ಲಕ್ನೋದ ಹೋಟೆಲ್‌ನಲ್ಲಿ ಪತ್ನಿ ಬೇರೆ ವ್ಯಕ್ತಿಯೊಂದಿಗೆ ಒಂದೇ ಕೋಣೆಯಲ್ಲಿ ರಾತ್ರಿ ತಂಗಿದ್ದಾಳೆ ಎಂಬ ಕಾರಣಕ್ಕೆ ಲೈಂಗಿಕ ಸಂಭೋಗ ನಡೆದಿದೆ ಎಂದು ಊಹೆ ಮಾಡಲು ಸಾಧ್ಯವಿಲ್ಲ ಎಂದು ವಿಚಾರಣಾ ನ್ಯಾಯಾಲಯ ಸರಿಯಾಗಿಯೇ ಹೇಳಿದೆ ಎಂದು ನ್ಯಾಯಾಲಯವು ಹೇಳಿದೆ. ಆದ್ದರಿಂದ, ಸಮನ್ಸ್ ಆದೇಶವನ್ನು ರದ್ದುಗೊಳಿಸಿ, ಆರೋಪಿ ವ್ಯಕ್ತಿಯನ್ನು ಕ್ರಿಮಿನಲ್ ಪ್ರಕರಣದಿಂದ ಬಿಡುಗಡೆ ಮಾಡಿದೆ. ಮಹಾಭಾರತದ ದ್ರೌಪದಿಯಂತಹ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಬಿಹಾರ| ಸಹೋದ್ಯೋಗಿಯನ್ನು ಸರ್ವಿಸ್ ರೈಫಲ್‌ನಿಂದ ಗುಂಡು ಹಾರಿಸಿ ಕೊಂದ ಪೊಲೀಸ್ ಕಾನ್‌ಸ್ಟೆಬಲ್
ಬಿಹಾರ| ಸಹೋದ್ಯೋಗಿಯನ್ನು ಸರ್ವಿಸ್ ರೈಫಲ್‌ನಿಂದ ಗುಂಡು ಹಾರಿಸಿ ಕೊಂದ ಪೊಲೀಸ್ ಕಾನ್‌ಸ್ಟೆಬಲ್

