ಜಮ್ಮು ಕಾಶ್ಮೀರದಲ್ಲಿ ಶುಕ್ರವಾರದಿಂದ ಸುರಿಯುತ್ತಿರುವ ಭಾರೀ ಮಳೆ ಮತ್ತು ಭೂಕುಸಿತದಿಂದ ಉಂಟಾಗಿರುವ ಹವಾಮಾನ ವೈಪರೀತ್ಯದಿಂದ ಐದು ಜನರು ಸಾವನ್ನಪ್ಪಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಮಿಂಚು, ಬಿರುಗಾಳಿ, ಆಲಿಕಲ್ಲು ಮತ್ತು ಹಿಮ ಬಿದ್ದಿದ್ದು, ರಂಬನ್ ಜಿಲ್ಲೆಯಲ್ಲಿ ಮೇಘಸ್ಫೋಟದಿಂದ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದೆ. ಹಲವಾರು ವಸತಿ ಮತ್ತು ವಾಣಿಜ್ಯ ಕಟ್ಟಡಗಳು ಕುಸಿದು ಬಿದ್ದಿದ್ದು, ಕನಿಷ್ಠ 500 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.
“ಭಾನುವಾರ ರಿಯಾಸಿಯ ಅರ್ನಾಸ್‌ನ ಜಮೇದಿ ಗ್ರಾಮದಲ್ಲಿ ಸಿಡಿಲು ಬಡಿದಿದೆ. ಇದರಿಂದ ಇಬ್ಬರು ಸ್ಥಳೀಯರು ಸಾವನ್ನಪ್ಪಿದರು. ಸುಮಾರು 40 ಜಾನುವಾರುಗಳು ಸಿಡಿಲಿಗೆ ಬಲಿಯಾದವು.” ಎಂದು ಸಮುದಾಯದ ನಾಯಕ ತಾಲಿಬ್ ಹುಸಿಯಾನ್ ಹೇಳಿರುವುದಾಗಿ ದಿ ಹಿಂದೂ ವರದಿ ಮಾಡಿದೆ.
ರಾಂಬನ್ ಜಿಲ್ಲೆಯ ಬಾಗ್ನಾದಲ್ಲಿ ಮನೆ ಕುಸಿದು ಇಬ್ಬರು ಮಕ್ಕಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. “ರಾಂಬನ್ ಪಟ್ಟಣದ ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ರಾಂಬನ್ ಪ್ರದೇಶದಲ್ಲಿ ರಾತ್ರಿಯಿಡೀ ಭಾರೀ ಆಲಿಕಲ್ಲು ಮಳೆ, ಹಲವಾರು ಭೂಕುಸಿತಗಳು ಮತ್ತು ವೇಗದ ಗಾಳಿ ಬೀಸಿತು” ಎಂದು ಉಧಂಪುರ್ ಬಿಜೆಪಿ ಸಂಸದ ಜಿತೇಂದ್ರ ಸಿಂಗ್ ಎಕ್ಸ್‌ನಲ್ಲಿ ಹೇಳಿದ್ದಾರೆ. “ರಾಷ್ಟ್ರೀಯ ಹೆದ್ದಾರಿ ಮುಚ್ಚಿಹೋಗಿದ್ದು, ದುರದೃಷ್ಟವಶಾತ್ ಮೂರು ಸಾವುನೋವುಗಳು ಮತ್ತು ಎರಡು ಕುಟುಂಬಗಳಿಗೆ ಆಸ್ತಿ ನಷ್ಟ ಸಂಭವಿಸಿದೆ.” ಎಂದು ಅವರು ಹೇಳಿದ್ದಾರೆ.
ಜಮ್ಮು ಕಾಶ್ಮೀರ ಸರ್ಕಾರವು ಅಧಿಕೃತವಾಗಿ ಯಾವುದೇ ಸಾವುನೋವುಗಳ ಅಂಕಿ ಅಂಶ ಬಿಡುಗಡೆ ಮಾಡಿಲ್ಲ. ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ರಾಂಬನ್‌ನ ತಗ್ಗು ಪ್ರದೇಶಗಳಿಂದ ನಿವಾಸಿಗಳನ್ನು ರಕ್ಷಿಸಲು ಕೇಂದ್ರಾಡಳಿತ ಪ್ರದೇಶದ ತುರ್ತು ನಿಯಂತ್ರಣ ಕೇಂದ್ರವು ಕಂದಾಯ ಇಲಾಖೆ ಮತ್ತು ಪೊಲೀಸ್ ತಂಡಗಳನ್ನು ನೇಮಿಸಿದೆ.
ಜಮ್ಮು ಕಾಶ್ಮೀರದಲ್ಲಿ ಭಾನುವಾರದವರೆಗೆ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಗುರುವಾರ ತಿಳಿಸಿತ್ತು. ಭಾನುವಾರ ಹೊಸದಾಗಿ ನೀಡಿರುವ ಸಲಹೆಯಲ್ಲಿ, ಸೋಮವಾರದವರೆಗೆ ಪ್ರದೇಶದಾದ್ಯಂತ ಗುಡುಗು ಮತ್ತು ಮಿಂಚಿ ಸಹಿತ ಮಳೆ ಇರಲಿದೆ ಎಂದು ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ.
STORY | Fresh snowfall in Kashmir's higher reaches, rain lashes plains
READ: https://t.co/BG7VEUVNVo
VIDEO |
(Full video available on PTI Videos – https://t.co/n147TvrpG7) pic.twitter.com/94gNxBwqnK
— Press Trust of India (@PTI_News) April 19, 2025
ಅನಿರೀಕ್ಷಿತ ಹಠಾತ್ ಪ್ರವಾಹದ ಅಪಾಯವನ್ನು ಉಲ್ಲೇಖಿಸಿ, ರಸ್ತೆ ಅಂಡರ್‌ಪಾಸ್‌ಗಳು, ಒಳಚರಂಡಿ ಹಳ್ಳಗಳು ಮತ್ತು ನೀರು ಸಂಗ್ರಹವಾಗುವ ತಗ್ಗು ಪ್ರದೇಶಗಳಿಂದ ದೂರವಿರಲು ಸಾರ್ವಜನಿಕರಿಗೆ ಹವಮಾನ ಇಲಾಖೆ ಸಲಹೆ ನೀಡಿದೆ.
“ಪ್ರವಾಹಕ್ಕೆ ಸಿಲುಕಿರುವ ರಸ್ತೆಯನ್ನು ದಾಟಲು ಪ್ರಯತ್ನಿಸಬೇಡಿ. ನೀರು ನೀವು ಕಾಣುವುದಕ್ಕಿಂತ ಆಳ ಮತ್ತು ತೀವ್ರವಾಗಿರಬಹುದು ಮತ್ತು ಬಂಡೆಯ ರಾಶಿಗಳು, ಚೂಪಾದ ಅಥವಾ ಅಪಾಯಕಾರಿ ವಸ್ತುಗಳು, ಗುಂಡಿಗಳು ಅಥವಾ ವಿದ್ಯುತ್ ತಂತಿಗಳು ಇರದಲ್ಲಿ ಬಿದ್ದಿರಬಹುದು” ಎಂದು ಇಲಾಖೆ ಹೇಳಿದೆ.
ರಂಬನ್‌ನಲ್ಲಿ ಭೂಕುಸಿತ ಮತ್ತು ಹಠಾತ್ ಪ್ರವಾಹದಿಂದ “ತೀವ್ರ ದುಃಖಿತನಾಗಿದ್ದೇನೆ” ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. “ಅಗತ್ಯವಿರುವಲ್ಲೆಲ್ಲಾ ತಕ್ಷಣದ ರಕ್ಷಣಾ ಪ್ರಯತ್ನಗಳನ್ನು ಖಚಿತಪಡಿಸಿಕೊಳ್ಳಲು ನಾವು ಸ್ಥಳೀಯ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದೇವೆ” ಎಂದು ಅವರು ಹೇಳಿದ್ದಾರೆ ಎಂದು ಪತ್ರಿಕೆ ಉಲ್ಲೇಖಿಸಿದೆ. ಜಮ್ಮು ಕಾಶ್ಮೀರದಲ್ಲಿ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ತಮಿಳುನಾಡಿನಲ್ಲಿ ಹೇಗಾದರೂ ಹಿಂದಿ ಹೇರಲು ಕೇಂದ್ರ ಸರ್ಕಾರ ಬಯಸುತ್ತಿದೆ: ಉದಯನಿಧಿ ಸ್ಟಾಲಿನ್
ತಮಿಳುನಾಡಿನಲ್ಲಿ ಹೇಗಾದರೂ ಹಿಂದಿ ಹೇರಲು ಕೇಂದ್ರ ಸರ್ಕಾರ ಬಯಸುತ್ತಿದೆ: ಉದಯನಿಧಿ ಸ್ಟಾಲಿನ್

