ಅಸ್ಸಾಂನ ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ಅಪರಿಚಿತ ವ್ಯಕ್ತಿಗಳು ನಡೆಸಿದ ದಾಳಿಯಲ್ಲಿ ದಂಪತಿ ಸಾವನ್ನಪ್ಪಿದ್ದು, ಅವರ ಮೂವರು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಬರ್ಪಥಾರ್ ಪ್ರದೇಶದ ನಂಬುರ್ನಾಡಿ ಚಹಾ ಎಸ್ಟೇಟ್‌ನ ಮುಂಡಾ ಬಸ್ತಿಯಲ್ಲಿರುವ ಜೂಲೋ ಮುಂಡಾ ಅವರ ಮನೆಯಲ್ಲಿ ಶನಿವಾರ ರಾತ್ರಿ ಈ ದಾಳಿ ನಡೆದಿದೆ. ಅಸ್ಸಾಂ
ಜೂಲೋ ಮುಂಡಾ ಮತ್ತು ಅವರ ಪತ್ನಿ ಪಂಚಮಿ ಅವರನ್ನು ದುಷ್ಕರ್ಮಿಗಳು ಥಳಿಸಿ ಅವರ ಮನೆಯಿಂದ ಅಪಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 9 ರಿಂದ 13 ವರ್ಷ ವಯಸ್ಸಿನ ದಂಪತಿಯ ಮೂವರು ಮಕ್ಕಳ ಮೇಲೂ ಗ್ಯಾಂಗ್ ಹಲ್ಲೆ ನಡೆಸಿ ಗಾಯಗೊಂಡ ಸ್ಥಿತಿಯಲ್ಲಿ ಬಿಟ್ಟು ಹೋಗಿದೆ ಎಂದು ಅವರು ಹೇಳಿದ್ದಾರೆ.
“ಒಂಬತ್ತು ವರ್ಷದ ಮಗನ ಹೇಳಿಕೆಯ ಪ್ರಕಾರ, ದೈಹಿಕವಾಗಿ ಹಲ್ಲೆ ನಡೆಸಿದ ನಂತರ ಅವರ ಪೋಷಕರನ್ನು ಕರೆದುಕೊಂಡು ಹೋಗಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹತ್ತಿರದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದ ನಂತರ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಗೋಲಾಘಾಟ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾಳಿಯ ಮಾಹಿತಿ ಬಂದ ತಕ್ಷಣ ಕಾಣೆಯಾದ ದಂಪತಿಗಳನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಅವರು ಹೇಳಿದ್ದಾರೆ. ಮುಂಡಾ ಅವರ ಮನೆಯಿಂದ ಸ್ವಲ್ಪ ದೂರದಲ್ಲಿರುವ ನೀರು ತುಂಬಿದ ಕಲ್ಲಿದ್ದಲು ಗಣಿಗಾರಿಕೆ ಗುಂಡಿಯಲ್ಲಿ ಭಾನುವಾರ ಮಧ್ಯಾಹ್ನ ಎರಡು ಶವಗಳು ಪತ್ತೆಯಾಗಿವೆ ಎಂದು ಅಧಿಕಾರಿ ಹೇಳಿದ್ದಾರೆ.
“ಇಬ್ಬರ ಕಾಲುಗಳು ಮತ್ತು ಕೈಗಳನ್ನು ಕಟ್ಟಿಹಾಕಲಾಗಿತ್ತು, ಮತ್ತು ಶವಗಳನ್ನು ಗೋಣಿಚೀಲಗಳಲ್ಲಿ ತುಂಬಿಸಿ ಕುತ್ತಿಗೆಗೆ ಕಲ್ಲುಗಳನ್ನು ಕಟ್ಟಲಾಗಿತ್ತು. ಅವರನ್ನು ಈ ಸ್ಥಿತಿಯಲ್ಲಿ ನೀರು ತುಂಬಿದ ಗುಂಡಿಗೆ ಎಸೆದಿದ್ದು, ಹೀಗಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ನಾವು ಶಂಕಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
“ಶವಗಳ ಮರಣೋತ್ತರ ಪರೀಕ್ಷೆಯನ್ನು ಸೋಮವಾರ ನಡೆಸಲಾಗುವುದು, ನಂತರ ಹೆಚ್ಚಿನ ವಿವರಗಳು ತಿಳಿದುಬರಲಿವೆ” ಎಂದು ಅಧಿಕಾರಿ ಹೇಳಿದ್ದಾರೆ. ಪೊಲೀಸರು ಈಗಾಗಲೇ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದಾರೆ, ಆದರೆ ಈ ಅಘಾತಕಾರಿ ದಾಳಿಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅವರು ಹೇಳಿದ್ದಾರೆ. ಅಸ್ಸಾಂ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ‘ಸಾಮಾಜಿಕ ಮಾಧ್ಯಮದಲ್ಲಿ ಲೈಕ್ ಒತ್ತುವುದು ಹಂಚಿಕೆಗೆ ಸಮನಲ್ಲ..’; ವ್ಯಕ್ತಿ ವಿರುದ್ಧದ ಪ್ರಕರಣ ಕೈಬಿಟ್ಟ ನ್ಯಾಯಾಲಯ
‘ಸಾಮಾಜಿಕ ಮಾಧ್ಯಮದಲ್ಲಿ ಲೈಕ್ ಒತ್ತುವುದು ಹಂಚಿಕೆಗೆ ಸಮನಲ್ಲ..’; ವ್ಯಕ್ತಿ ವಿರುದ್ಧದ ಪ್ರಕರಣ ಕೈಬಿಟ್ಟ ನ್ಯಾಯಾಲಯ

