ತಮಿಳುನಾಡು ರಾಜ್ಯಪಾಲರು ವಿಧಾನಸಭೆ ಅಂಗೀಕರಿಸಿದ ಮಸೂದೆಗಳ ಬಗ್ಗೆ ತೀರ್ಮಾನ ಕೈಗೊಳ್ಳಲು ಕಾಲಮಿತಿಯನ್ನು ನಿಗದಿಪಡಿಸಿದ್ದ ತನ್ನ ಇತ್ತೀಚಿನ ತೀರ್ಪು ಕೇರಳ ಸಲ್ಲಿಸಿದ ಪ್ರಕರಣಕ್ಕೆ ಅನ್ವಯಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ. ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೋಯ್‌ಮಾಲಾ ಬಾಗ್ಚಿ ಅವರ ಪೀಠವು 2023 ರಲ್ಲಿ ಕೇರಳ ಸರ್ಕಾರವು ಮಸೂದೆಗಳ ಮೇಲೆ ಕ್ರಮ ಕೈಗೊಳ್ಳುವಲ್ಲಿ ರಾಜ್ಯಪಾಲರು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸುತ್ತಿತ್ತು. ತಮಿಳುನಾಡು ರಾಜ್ಯಪಾಲರ
ಕೇರಳ ಸರ್ಕಾರವನ್ನು ಪ್ರತಿನಿಧಿಸುವ ವಕೀಲ ಕೆ.ಕೆ. ವೇಣುಗೋಪಾಲ್, ತಮಿಳುನಾಡು ರಾಜ್ಯಪಾಲರಿಗೆ ಸಂಬಂಧಿಸಿದ ವಿಷಯದಲ್ಲಿ ಸುಪ್ರೀಂಕೋರ್ಟ್‌ನ ಏಪ್ರಿಲ್ 8 ರ ತೀರ್ಪು ಕೇರಳದ ಪ್ರಕರಣವನ್ನೂ ಒಳಗೊಂಡಿದೆ ಎಂದು ವಾದಿಸಿದರು.
ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಮೂರು ವರ್ಷಗಳಿಗೂ ಹೆಚ್ಚು ಕಾಲ ಹಲವಾರು ಮಸೂದೆಗಳ ಮೇಲೆ ಕ್ರಮ ಕೈಗೊಳ್ಳದೆ ಅವುಗಳನ್ನು ತಿರಸ್ಕರಿಸಿ ಕೆಲವನ್ನು ರಾಷ್ಟ್ರಪತಿಗೆ ಕಳುಹಿಸಿದ ನಂತರ ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್‌ನ ತೀರ್ಪು ನೀಡಿತ್ತು.
ರಾಜ್ಯ ವಿಶ್ವವಿದ್ಯಾಲಯಗಳ ಕುಲಪತಿಯಾಗಿ ರಾಜ್ಯಪಾಲರನ್ನು ತೆಗೆದುಹಾಕುವ ಕ್ರಮಗಳು ಸೇರಿದಂತೆ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಹೆಚ್ಚಿನ ಮಸೂದೆಗಳು ಇನ್ನೂ ಅಂಗೀಕಾರಕ್ಕಾಗಿ ಕಾಯುತ್ತಿವೆ. ನವೆಂಬರ್ 2023 ರಲ್ಲಿ ರಾಷ್ಟ್ರಪತಿಗಳಿಗೆ ಕಳುಹಿಸಲಾದ 10 ಮರು ಜಾರಿಮಾಡಲಾದ ಮಸೂದೆಗಳಲ್ಲಿ ಒಂದನ್ನು ಅನುಮೋದಿಸಲಾಗಿದ್ದು, ಏಳು ತಿರಸ್ಕರಿಸಲಾಗಿದೆ ಮತ್ತು ಎರಡು ಬಾಕಿ ಉಳಿದಿವೆ.
ಜನವರಿ 2020 ರಿಂದ ಬಾಕಿ ಉಳಿದಿದ್ದ 10 ಮಸೂದೆಗಳಿಗೆ ಒಪ್ಪಿಗೆ ನೀಡುವುದನ್ನು ತಡೆಹಿಡಿದು, ವಿಧಾನಸಭೆಯಿಂದ ಮರು-ಜಾರಿಗೊಳಿಸಲ್ಪಟ್ಟ ನಂತರ ರಾಷ್ಟ್ರಪತಿಗಳಿಗೆ ಉಲ್ಲೇಖಿಸುವ ರವಿ ಅವರ ನಿರ್ಧಾರವು “ಕಾನೂನುಬಾಹಿರ ಮತ್ತು ತಪ್ಪಾಗಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
10 ಮಸೂದೆಗಳನ್ನು ಶಾಸಕಾಂಗವು ಎರಡನೇ ಬಾರಿಗೆ ಅಂಗೀಕರಿಸಿದ ದಿನಾಂಕದಿಂದ ರಾಜ್ಯಪಾಲರ ಒಪ್ಪಿಗೆಯನ್ನು ಪಡೆದಿದೆ ಎಂದು ಪರಿಗಣಿಸಲಾಗುತ್ತದೆ ಎಂದು ನ್ಯಾಯಾಲಯ ಘೋಷಿಸಿದೆ. ರಾಜ್ಯಪಾಲರ ಉಲ್ಲೇಖದ ಆಧಾರದ ಮೇಲೆ ರಾಷ್ಟ್ರಪತಿಗಳು ತೆಗೆದುಕೊಳ್ಳುವ ಯಾವುದೇ ಕ್ರಮವನ್ನು ಸಹ ಅದು ರದ್ದುಗೊಳಿಸಿತು. ತನ್ನ 414 ಪುಟಗಳ ತೀರ್ಪಿನಲ್ಲಿ, ನ್ಯಾಯಾಲಯವು ಅಂತಹ ಮಸೂದೆಗಳನ್ನು ಅನುಮೋದಿಸಲು ಅಥವಾ ತಿರಸ್ಕರಿಸಲು ರಾಷ್ಟ್ರಪತಿಗಳಿಗೆ ಮೂರು ತಿಂಗಳ ಗಡುವನ್ನು ವಿಧಿಸಿತು.
ನವೆಂಬರ್ 2023 ರಲ್ಲಿ, ಕೇರಳ ಸರ್ಕಾರವು ಆ ಸಮಯದಲ್ಲಿ ರಾಜ್ಯದ ರಾಜ್ಯಪಾಲರಾಗಿದ್ದ ಆರಿಫ್ ಮೊಹಮ್ಮದ್ ಖಾನ್ ಅವರು ಮಸೂದೆಗಳನ್ನು ಅಂಗೀಕರಿಸುವಲ್ಲಿ ವಿಳಂಬ ಮಾಡುವುದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಮಂಗಳವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತೀರ್ಪಿನ ವ್ಯಾಪ್ತಿಯನ್ನು ಪರಿಶೀಲಿಸಲು ಸಮಯ ಕೋರಿದ್ದಾರೆ. ಆದಾಗ್ಯೂ, ಕೇರಳ ಪ್ರಕರಣವು ತೀರ್ಪಿನ ವ್ಯಾಪ್ತಿಗೆ “ನೇರವಾಗಿ” ಒಳಪಟ್ಟಿದೆಯೇ ಅಥವಾ ಇಲ್ಲವೇ ಎಂದು ಹೇಳಲು ರಾಜ್ಯ ಸರ್ಕಾರದ ವಕೀಲರಾದ ವೇಣುಗೋಪಾಲ್ ಅವರು ಮೆಹ್ತಾ ಅವರನ್ನು ಕೇಳಿದಾಗ, “ಅದು ಒಳಗೊಳ್ಳುವುದಿಲ್ಲ” ಎಂದು ಹೇಳಿದ್ದಾರೆ.
ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಕೂಡ ತೀರ್ಪು ಕೇರಳಕ್ಕೆ ಸಂಬಂಧಿಸಿದ ಪ್ರಕರಣವನ್ನು ಒಳಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಅದರಲ್ಲಿ “ವಾಸ್ತವಿಕ ವ್ಯತ್ಯಾಸಗಳಿವೆ” ಎಂದು ವಾದಿಸಿದ್ದಾರೆ. ತೀರ್ಪು ಕೇರಳದ ಪ್ರಕರಣಕ್ಕೆ ಅನ್ವಯಿಸುತ್ತದೆಯೇ ಎಂದು ಪರಿಶೀಲಿಸುವುದಾಗಿ ಪೀಠ ಹೇಳಿದ್ದು, ಮುಂದಿನ ಮೇ 6 ರಂದು ಈ ವಿಷಯವನ್ನು ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದೆ.
ಈ ನಡುವೆ, ನ್ಯಾಯಾಂಗವು ರಾಷ್ಟ್ರಪತಿಗಳಿಗೆ ನಿರ್ದೇಶನಗಳನ್ನು ನೀಡುವ ಪರಿಸ್ಥಿತಿ ಇರಬಾರದು ಎಂದು ಉಪಾ ರಾಷ್ಟ್ರಪತಿ ಜಗದೀಪ್ ಧಂಖರ್ ಅವರು ಸುಪ್ರಿಂಕೋರ್ಟ್ ವಿರುದ್ಧ ಏಪ್ರಿಲ್ 17 ರಂದು ಹೇಳಿಕೆ ನೀಡಿದ್ದರು. ಇದರ ನಂತರ ಶನಿವಾರದಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕೂಡ ಸುಪ್ರೀಂ ಕೋರ್ಟ್ ವಿರುದ್ಧ ಹೇಳಿಕೆ ನೀಡಿದ್ದಾರೆ. ಅದಾಗ್ಯೂ, ದುಬೆ ಹೇಳಿಕೆಗಳಿಂದ ಬಿಜೆಪಿ ಅಂತರ ಕಾಪಾಡಿಕೊಂಡಿದೆ. ತಮಿಳುನಾಡು ರಾಜ್ಯಪಾಲರ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಸಂವಿಧಾನ ಸಂರಕ್ಷಣಾ ಪಡೆ ಕಟ್ಟುವ ಅಭಿಯಾನ | ಏಪ್ರಿಲ್ 26ರಂದು ದಾವಣಗೆರೆಯಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶ
ಸಂವಿಧಾನ ಸಂರಕ್ಷಣಾ ಪಡೆ ಕಟ್ಟುವ ಅಭಿಯಾನ | ಏಪ್ರಿಲ್ 26ರಂದು ದಾವಣಗೆರೆಯಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶ

