ರಾಜ್ಯದ ಪ್ರತಿ ಊರು, ಕೇರಿ, ಹಾಡಿ, ಮೊಹಲ್ಲಾಗಳಲ್ಲಿ3 ವರ್ಷಗಳಲ್ಲಿ 1 ಲಕ್ಷ ‘ಸಂವಿಧಾನ ಸಂರಕ್ಷಣಾ ಪಡೆ’ ಕಟ್ಟುವ ಮಹಾಯಾನ
ಬೆಂಗಳೂರು: ಎದ್ದೇಳು ಕರ್ನಾಟಕದ ವತಿಯಿಂದ ದಾವಣಗೇರೆಯಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶವು ಇದೇ ಏಪ್ರಿಲ್ 26ರಂದು ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುವ ಅಂದಿನ ಕಾರ್ಯಕ್ರಮದ ವೇಳಾಪಟ್ಟಿಯನ್ನು ಎದ್ದೇಳು ಕರ್ನಾಟಕದ ಅಧ್ಯಕ್ಷೀಯ ಮಂಡಳಿ ಬಿಡುಗಡೆ ಮಾಡಿದೆ.
ಬೆಳಗ್ಗೆ 10.30ರಿಂದ 11.30ರವರೆಗೆ ಸಾಂಸ್ಕೃತಿಕ ಕಲರವ ನಡೆಯಲಿದ್ದು, 11.30ರಿಂದ 1ರವರೆಗೆ ನಗರದಾದ್ಯಂತ 10 ಸಾವಿರಕ್ಕೂ ಹೆಚ್ಚು ಸೇರುವ ಸಂವಿಧಾನ ಸಂರಕ್ಷಕರ ಪಡೆಯಿಂದ ಸಂವಿಧಾನ ಪೆರೇಡ್ ನಡೆಯಲಿದೆ. 1ರಿಂದ 2 ಗಂಟೆಯವರೆಗೆ ಸಾಂಸ್ಕೃತಿಕ ಸಜ್ಜಿಕೆ, 2ರಿಂದ ಸಂಜೆ 6ರವರೆಗೆ ಬಹಿರಂಗ ಸಮಾವೇಶ ನಡೆಯಲಿದೆ ಎಂದು ತಂಡವು ಹೇಳಿದೆ.

ಬೆಳಗ್ಗೆ 11.30ರಿಂದ ಪ್ರಾರಂಭವಾಗುವ ಸಂವಿಧಾನ ಪೆರೇಡ್ ನಿನ ಉದ್ಘಾಟನೆಯನ್ನು ಹಿರಿಯ ದಸಂಸ ನೇತಾರರಾದ ಚಿಂತಾಮಣಿಯ ಎನ್, ವೆಂಕಟೇಶ್, ಸೆಂಟ್ರಲ್ ವರ್ಕಿಂಗ್ ಕಮಿಟಿ ಸದಸ್ಯರು ಮತ್ತು ಎದ್ದೇಳು ಕರ್ನಾಟಕದ ಶ್ರೀಮತಿ ತಾರಾ ರಾವ್, ರಾಜ್ಯ ಜಮಾತ್-ಎ-ಇಸ್ಲಾಮಿ-ಹಿಂದ್ ನ ಕಾರ್ಯದರ್ಶಿಗಳಾದ ಮೊಹಮ್ಮದ್ ಯೂಸುಫ್ ಕನ್ನಿ, ನಿರ್ದೇಶಕರು, ಬೆಂಗಳೂರಿನ ಸೇಂಟ್ ಜೋಸೆಫ್ ಕಾನೂನು ಮಹಾವಿದ್ಯಾಲಯದ ನಿರ್ದೇಶಕರಾದ ಫಾದರ್ ಜರಾಲ್ಡ್ ಡಿಸೋಜಾ ನೆರವೇರಿಸಲಿದ್ದಾರೆ ಎಂದು ತಂಡವು ಹೇಳಿದೆ.
ಕಾರ್ಯಕ್ರಮದ ವಿಶೇಷ ಉಪಸ್ಥಿತಿಯಾಗಿ ಕರ್ನಾಟಕದ ಬದ್ಧತೆಯ ದಿಟ್ಟ ಹೋರಾಟಗಾರರಾದ ಎಸ್. ಆರ್. ಹಿರೇಮಠ, ಹಿರಿಯ ಪತ್ರಕರ್ತೆ, ಸ್ತ್ರೀವಾದಿ ಚಿಂತಕರು ಹಾಗೂ ಬರಹಗಾರರಾದ ಡಾ. ವಿಜಯ, ಜನಪರ ಸಾಹಿತಿಗಳು ಮತ್ತು ಹೋರಾಟಗಾರರಾದ ಅಲ್ಲಮಪ್ರಭು ಬೆಟ್ಟದೂರು, ಕರ್ನಾಟಕದ ರೈತ ಚಳವಳಿಯ ಹಿರಿಯ ಹೋರಾಟಗಾರರಾದ ಚಾಮರಸ ಮಾಲಿ ಪಾಟೀಲ್ ಹಾಜರಿರಲಿದ್ದಾರೆ ಎಂದು ಅದು ತಿಳಿಸಿದೆ.

ಬಹಿರಂಗ ಸಭೆಯ ಉದ್ಘಾಟನಾ ಮಾತುಗಳನ್ನು ಹಿರಿಯ ಸಾಹಿತಿಗಳಾದ ನಾಡೋಜ ಬರಗೂರು ರಾಮಚಂದ್ರಪ್ಪ ನುಡಿಯಲಿದ್ದಾರೆ. ಮಹಾಯಾನದ ಪರಿಕಲ್ಪನೆಯನ್ನು ಎದ್ದೇಳು ಕರ್ನಾಟಕದ ಸೆಂಟ್ರಲ್ ವರ್ಕಿಂಗ್ ಗ್ರೂಪ್ ಪರವಾಗಿ ನೂರ್ ಶ್ರೀಧರ್ ಮಂಡಿಸಲಿದ್ದಾರೆ.
ಸಮಾರೋಪ ಮಾತುಗಳನ್ನು ಸಮಾವೇಶ ಸಂಘಟನಾ ಸಮಿತಿಯ ಸಂಚಾಲಕರಾದ ಕೆ.ಎಲ್. ಅಶೋಕ್ ನುಡಿಯಲಿದ್ದಾರೆ ಎಂದು ತಂಡವು ಹೇಳಿದೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಿಂದ ಸಂದೇಶವಿರುತ್ತದೆ. ಅವರು ಈ ಕೆಳಗಿನಂತೆ ಇದೆ.
ಪ್ರಕಾಶ್ ರಾಜ್, ಪ್ರಸಿದ್ಧ ನಟರು ಹಾಗೂ ಪ್ರಖರ ಚಿಂತಕರು
ಮೇಧಾ ಪಾಟ್ಕರ್, ಆದಿವಾಸಿ ಮತ್ತು ಪರಿಸರ ಹೋರಾಟಗಾರರು [ಆನ್ ಲೈನ್ ಮೂಲಕ]
ಜಿಗ್ನೇಶ್ ಮೇವಾನಿ, ಹೋರಾಟಗಾರರು ಮತ್ತು ಶಾಸಕರು, ಗುಜರಾತ್
ಪರಕಾಲ ಪ್ರಭಾಕರ್, ಪ್ರಸಿದ್ಧ ಆರ್ಥಿಕ ವಿಶ್ಲೇಷಕಾರರು.
ದರ್ಶನ್ ಪಾಲ್, ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ನಾಯಕರು [ಆನ್ ಲೈನ್ ಮೂಲಕ]
ಡಾ. ಸುನೀಲಮ್, ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ನಾಯಕರು, ಮಧ್ಯಪ್ರದೇಶ
ಕೆ ಎಂ ರಾಮಚಂದ್ರಪ್ಪ, ಪ್ರಧಾನ ಸಂಚಾಲಕರು, ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ
ಪುರುಷೊತ್ತಮ ಬಿಳಿಮಲೆ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು
ಮೊಹಮ್ಮದ್ ಸಲೀಂ, ಪ್ರಧಾನ ಕಾರ್ಯದರ್ಶಿಗಳು, ಡೆಮೊಕ್ರೆಟಿಕ್ ಅಂಡ್ ಕಮ್ಯುನಲ್ ಅಮಿಟಿ, ನವದೆಹಲಿ
ಕವಿತಾ ಲಂಕೇಶ್, ಸಿನೆಮಾ ನಿರ್ದೇಶಕರು ಮತ್ತು ಹೋರಾಟದ ಒಡನಾಡಿಗಳು
ಬಿ. ಆರ್. ಪಾಟೀಲ್, ಹಿರಿಯ ಸಮಾಜವಾದಿಗಳು.
ಮಾವಳ್ಳಿ ಶಂಕರ್, ರಾಜ್ಯ ಸಂಚಾಲಕರು, ದಸಂಸ (ಅಂಬೇಡ್ಕರ್ ವಾದ)
ಫಾ. ವೀರೇಶ್ ಮೋರಸ್, ಕ್ರೈಸ್ತ ಸಮುದಾಯದ ಪಾದ್ರಿಗಳು
ವಿ. ನಾಗರಾಜ್, ರಾಜ್ಯ ಮುಖಂಡರು, ದಸಂಸ.
ಡಾ. ಸಿದ್ದನಗೌಡ ಪಾಟೀಲ್, ಚಿಂತಕರು ಹಾಗೂ ಹೋರಾಟಗಾರರು
ಪ್ರೊ. ಜಾಫೆಟ್, ನಿವೃತ್ತ ಉಪಕುಲಾಪತಿಗಳು, ಬೆಂಗಳೂರು ವಿವಿ
ಡಾ. ಫಾ. ರೆವೆರೆಂಡ್ ಮನೋಹರ್ ಚಂದ್ರಪ್ರಸಾದ್, ಬರಹಗಾರರು ಮತ್ತು ಮುಖಂಡರು ದಲಿತ-ಕ್ರೆöÊಸ್ತ ಒಕ್ಕೂಟ
ಅಂಬಣ್ಣ ಆರೋಲಿಕರ್, ರಾಜ್ಯ ಮುಖಂಡರು, ಒಳಮೀಸಲಾತಿ ಹೋರಾಟ ಸಮಿತಿ
ಯಶವಂತ್ ಟಿ, ಮುಖಂಡರು, ಕರ್ನಾಟಕ ಪ್ರಾಂತ ರೈತ ಸಂಘ
ಬಸವರಾಜ್, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ
ಅಬ್ದುಲ್ ಖಾದರ್ ಮಸೂದ್, ಸಮನ್ವಯಕರು, ಕರ್ನಾಟಕ ಮುಸ್ಲಿಂ ಮುತ್ತಹದೇ ಮಹಾಜ್
ರವಿ ನಾಯ್ಕರ್, ಮಾನವ ಬಂಧುತ್ವ ವೇದಿಕೆ
ಜನಾರ್ಧನ್ ಕೇಸರಗದ್ದೆ, ಜನಪರ ಸಾಹಿತ್ಯ ರಚನೆಕಾರರು
ಕೆ.ವಿ. ಭಟ್, ಸಮನ್ವಯಕರು, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಎಅಖಿU)
ಪ್ರೊ.ಜೆ.ಎಸ್.ಪಾಟೀಲ್, ಬಸವ ತತ್ವ ಪ್ರಚಾರಕರು.
ಮೌಲಾನ ಸಮೀಉಲ್ಲಾ ಕಾಸ್ಮಿ, ಜಾಮಿಯತ್ ಉಲ್ಮಾ ಕರ್ನಾಟಕ.
ರಮೇಶ್ ಹೆಗ್ಗಡೆ, ಒಕ್ಕಲಿಗ ಸಮುದಾಯದ ಮುಖಂಡರು, ಶಿವಮೊಗ್ಗ
ಮಲ್ಲು ಕುಂಬಾರ್, ಲೈಂಗಿಕ ಅಲ್ಪಸಂಖ್ಯಾತರು ಮತ್ತು ಸಾಮಾಜಿಕ ಹೋರಾಟಗಾರರು.
ಡಿ.ಹೆಚ್. ಪೂಜಾರ್, ರಾಜ್ಯ ಮುಖಂಡರು, ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ
ಬಿ ಸಿ ಬಸವರಾಜ್, ಜಾಗೃತ ಕರ್ನಾಟಕ ಮುಂತಾದವರು ತಮ್ಮ ಸಂದೇಶವನ್ನು ಕಾರ್ಯಕ್ರಮದಲ್ಲಿ ರವಾನಿಸಲಿದ್ದಾರೆ ಎಂದು ಅದು ಮಾಹಿತಿ ನೀಡಿದೆ.

ಹೆಚ್ಚಿನ ಮಾಹಿತಿಗಾಗಿ ಬೆಂಗಳೂರಿನ ಕೇಂದ್ರ ಕಛೇರಿ – 8056035809, 8884872595, ದಾವಣಗೆರೆಯ ಸಮಾವೇಶ ಸಂಘಟನಾ ಸಮಿತಿ 9844188128, 9742171342, 9916274999, 9148319357 ಸಂಪರ್ಕಿಸಲು ಸಮಾವೇಶದ ಕೇಂದ್ರ ತಂಡವು ಕೋರಿದೆ.
ಸಂವಿಧಾನ ಸಂರಕ್ಷಣಾ ಪಡೆ ಕಟ್ಟುವ ಅಭಿಯಾನ | ಏಪ್ರಿಲ್ 26ರಂದು ದಾವಣಗೆರೆಯಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶ


