Homeಮುಖಪುಟಮೂರನೇ ಭಾಷೆಯಾಗಿ ಹಿಂದಿ ಕಡ್ಡಾಯಗೊಳಿಸಿದ ಆದೇಶ ತಡೆ ಹಿಡಿದ ಮಹಾರಾಷ್ಟ್ರ ಸರ್ಕಾರ: ವರದಿ

ಮೂರನೇ ಭಾಷೆಯಾಗಿ ಹಿಂದಿ ಕಡ್ಡಾಯಗೊಳಿಸಿದ ಆದೇಶ ತಡೆ ಹಿಡಿದ ಮಹಾರಾಷ್ಟ್ರ ಸರ್ಕಾರ: ವರದಿ

- Advertisement -
- Advertisement -

ಮರಾಠಿ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ 1 ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಿ ಏಪ್ರಿಲ್ 16ರಂದು ಹೊರಡಿಸಲಾದ ಆದೇಶವನ್ನು ಮಹಾರಾಷ್ಟ್ರ ಸರ್ಕಾರ ತಡೆಹಿಡಿದಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಸಚಿವ ದಾದಾ ಭೂಸೆ ಮಂಗಳವಾರ ತಿಳಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

“ಕೇಂದ್ರವು ರಾಜ್ಯಗಳ ಮೇಲೆ ಹಿಂದಿ ಹೇರುತ್ತಿಲ್ಲ, ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020ರ ನಿಬಂಧನೆಗಳನ್ನು ಮಾತ್ರ ಜಾರಿಗೆ ತರುತ್ತಿದೆ” ಎಂದು ಸಚಿವ ಭೂಸೆ ಸಮರ್ಥಿಸಿಕೊಂಡಿದ್ದಾರೆ.

ತ್ರಿಭಾಷಾ ನೀತಿ ಜಾರಿಯಲ್ಲಿದೆ, ಆದರೆ ವಿದ್ಯಾರ್ಥಿಗಳು ತಮ್ಮ ಮೂರನೇ ಭಾಷೆಯಾಗಿ ಹಿಂದಿಯನ್ನೇ ಕಲಿಯಬೇಕಾಗಿಲ್ಲ ಎಂದು ಸಚಿವ ಭೂಸೆ ಹೇಳಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿದೆ.

ತ್ರಿಭಾಷಾ ಸೂತ್ರವು ವಿದ್ಯಾರ್ಥಿಗಳಿಗೆ ಇಂಗ್ಲಿಷ್, ಹಿಂದಿ ಮತ್ತು ರಾಜ್ಯದ ಸ್ಥಳೀಯ ಭಾಷೆಯನ್ನು ಕಲಿಸುವುದನ್ನು ಸೂಚಿಸುತ್ತದೆ. ಇದನ್ನು 1968ರಲ್ಲಿ ಮೊದಲ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪರಿಚಯಿಸಲಾಯಿತು ಮತ್ತು 2020ರಲ್ಲಿ ಪರಿಚಯಿಸಲಾದ ಹೊಸ ನೀತಿಯಲ್ಲಿ ಅದನ್ನು ಉಳಿಸಿಕೊಳ್ಳಲಾಯಿತು.

ಏಪ್ರಿಲ್ 16ರಂದು ಮಹಾರಾಷ್ಟ್ರ ರಾಜ್ಯ ಸರ್ಕಾರವು 2025-26ರ ಶೈಕ್ಷಣಿಕ ವರ್ಷದಿಂದ 2020ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ಯೋಜನೆಯನ್ನು ಘೋಷಿಸಿತ್ತು.

ಈ ಯೋಜನೆಯು ಮರಾಠಿ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ 1 ರಿಂದ 5 ನೇ ತರಗತಿಯ ವಿದ್ಯಾರ್ಥಿಗಳು ಮೂರನೇ ಭಾಷೆಯಾಗಿ ಹಿಂದಿಯನ್ನು ಕಲಿಯುವುದನ್ನು ಕಡ್ಡಾಯಗೊಳಿಸಿತ್ತು.

ಯೋಜನೆಯ ಹಂತ ಹಂತದ ಅನುಷ್ಠಾನವು 2025-26ರಲ್ಲಿ 1 ನೇ ತರಗತಿಯಿಂದ ಪ್ರಾರಂಭವಾಗಿ 2028-29 ರ ವೇಳೆಗೆ ಎಲ್ಲಾ ತರಗತಿಗಳನ್ನು ಒಳಗೊಳ್ಳಬೇಕಿತ್ತು.

ಪಹಲ್ಗಾಮ್‌ ದಾಳಿ ಖಂಡಿಸಿ ಇಂದು ‘ಕಾಶ್ಮೀರ ಬಂದ್‌’: ಆಡಳಿತ, ಪ್ರತಿಪಕ್ಷಗಳ ಬೆಂಬಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೆಂಪು ಕೋಟೆ ಸ್ಫೋಟಕ್ಕೆ ಜಮಾತೆ-ಇ-ಇಸ್ಲಾಮ್ ಗುಂಪನ್ನು ಸಂಪರ್ಕಿಸುವ ಹೇಳಿಕೆ: ಬಿಜೆಪಿ ನಾಯಕನಿಗೆ ಲೀಗಲ್‌ ನೋಟಿಸ್

ಜಮಾತೆ-ಇ-ಇಸ್ಲಾಮಿ ಹಿಂದ್ (ಜೆಐಎಚ್) ಕೇರಳವು, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್, ಮನೋರಮಾ ನ್ಯೂಸ್ ಸಂಪಾದಕ, ಕಾರ್ಯಕ್ರಮಕ್ಕೆ ಸಂಬಂಧಿಸಿದ ಸಂದರ್ಶಕರಿಗೆ ಕಾನೂನು ನೋಟಿಸ್ ಜಾರಿ ಮಾಡಿದೆ. ಸಂಸ್ಥೆಯನ್ನು ಕೆಂಪು ಕೋಟೆ ಬಾಂಬ್...

ಅತ್ಯಾಚಾರ ಆರೋಪ : ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನಕ್ಕೆ ಹೈಕೋರ್ಟ್ ತಡೆ

ಮಹಿಳೆ ಮೇಲೆ ಅತ್ಯಾಚಾರ ಎಸಗಿ ಗರ್ಭಪಾತ ಮಾಡಿಸಲು ಒತ್ತಾಯಿಸಿದ ಆರೋಪ ಪ್ರಕರಣದಲ್ಲಿ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಡಿಸೆಂಬರ್ 15ರವರೆಗೆ ಬಂಧಿಸದಂತೆ ಕೇರಳ ಹೈಕೋರ್ಟ್ ಶನಿವಾರ (ಡಿಸೆಂಬರ್ 6) ಪೊಲೀಸರಿಗೆ ನಿರ್ಬಂಧ ವಿಧಿಸಿದೆ. ನಿರೀಕ್ಷಣಾ...

ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪಾದಯಾತ್ರೆ; ಸಿದ್ದರಾಮನಹುಂಡಿಯಲ್ಲಿ ಹೋರಾಟಗಾರರ ಬಂಧನ

ಪರಿಶಿಷ್ಟ ಜಾತಿ (ಎಸ್‌ಸಿ) ಸಮಗ್ರ ಒಳಮೀಸಲಾತಿ ಜಾರಿಗೆ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆಗ್ರಹಿಸಿ, 'ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ'ಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಗ್ರಾಮವಾದ ಸಿದ್ದರಾಮನಹುಂಡಿಯಿಂದ ಮೈಸೂರಿನವರೆಗೆ...

ಇಂಡಿಗೋ ಏರ್‌ಲೈನ್ಸ್‌ ಕಾರ್ಯಾಚರಣೆ ಅಸ್ತವ್ಯಸ್ತ; ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ

ಇಂಡಿಗೋದ ದೊಡ್ಡ ಪ್ರಮಾಣದ ವಿಮಾನ ರದ್ದತಿಯಿಂದ ಉಂಟಾದ ಬೃಹತ್ ಅಡಚಣೆಯ ಬಗ್ಗೆ ಕೇಂದ್ರ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಶುಕ್ರವಾರ ಘೋಷಿಸಿದೆ. ಸಾವಿರಾರು ಪ್ರಯಾಣಿಕರು ದೇಶಾದ್ಯಂತ...

ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದ ಗರ್ಭಿಣಿ ಮಹಿಳೆ, ಮಗನನ್ನು ವಾಪಸ್ ಕರೆ ತಂದ ಅಧಿಕಾರಿಗಳು

ದಾಖಲೆರಹಿತ ವಲಸಿಗರೆಂದು ಆರೋಪಿಸಿ ಅಧಿಕಾರಿಗಳು ಬಾಂಗ್ಲಾದೇಶಕ್ಕೆ 'ತಳ್ಳಿದ್ದ' ಪಶ್ಚಿಮ ಬಂಗಾಳದ ಗರ್ಭಿಣಿ ಮಹಿಳೆ ಮತ್ತು ಅವರ ಎಂಟು ವರ್ಷದ ಮಗನನ್ನು ಶುಕ್ರವಾರ (ಡಿಸೆಂಬರ್ 5) ಭಾರತಕ್ಕೆ ಮರಳಿ ಕರೆತರಲಾಗಿದೆ. ಸುನಾಲಿ ಖಾತೂನ್ ಎಂಬ ಮಹಿಳೆ...

‘ಜೈ ಶ್ರೀ ರಾಮ್’ ಹೇಳಲು ನಿರಾಕರಿಸಿದ ಮುಸ್ಲಿಂ ಚಾಲಕನಿಗೆ ಕಿರುಕುಳ; ಬಿಜೆಪಿ ಕಾರ್ಯಕರ್ತನ ಬಂಧನ

ಉತ್ತರ ಪ್ರದೇಶದ ಆಗ್ರಾದ 57 ವರ್ಷದ ಮುಸ್ಲಿಂ ಟ್ಯಾಕ್ಸಿ ಚಾಲಕನೊಬ್ಬ ಜೈ ಶ್ರೀರಾಮ್ ಎಂದು ಹೇಳಲು ನಿರಾಕರಿಸಿದ್ದಕ್ಕಾಗಿ ಕಿರುಕುಳ ನೀಡಿ ಹಲ್ಲೆ ನಡೆಸಿದ ಒಂದು ವಾರದ ನಂತರ, ಪ್ರಮುಖ ಆರೋಪಿ ರೋಹಿತ್ ಠಾಕೂರ್‌ನನ್ನು...

ಇಂಡಿಗೋ ವಿಮಾನ ಸೇವೆಯಲ್ಲಿ ವ್ಯತ್ಯಯ : ಪೈಲಟ್‌ಗಳಿಗೆ ವಾರದ ವಿಶ್ರಾಂತಿ ನಿಯಮ ಹಿಂಪಡೆದ ಡಿಜಿಸಿಎ

ಡಿಸೆಂಬರ್ 4 ಗುರುವಾರ ದೇಶದಾದ್ಯಂತ 1,000ಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿದ್ದು ಮತ್ತು ದೆಹಲಿಯಿಂದ ಎಲ್ಲಾ 235 ದೇಶೀಯ ನಿರ್ಗಮನಗಳು 24 ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಪರಿಣಾಮ ಬೆಂಗಳೂರು ಸೇರಿದಂತೆ ದೇಶದ...

​ಚನ್ನರಾಯಪಟ್ಟಣ ರೈತರಿಗೆ ಅಂತಿಮ ವಿಜಯ; ​ಬೆಂಬಲಕ್ಕೆ ನಿಂತವರಿಗೆ ಧನ್ಯವಾದ ತಿಳಿಸಿದ ‘ಹೋರಾಟ ಸಮಿತಿ’

​ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಭೂ ಹೋರಾಟ ಕೊನೆಗೂ ಸುಖಾಂತ್ಯವಾಗಿದೆ. ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಜೊತೆಗೆ ರಾಜ್ಯದ ಹತ್ತಾರು ಜನಪರ ಸಂಘಟನೆಗಳು ನಡೆಸಿದ ಸುದೀರ್ಘ ಹೋರಾಟ...

ಸಚಿವ ಸಂಪುಟ ಸಭೆಯಲ್ಲಿ ಅಲೆಮಾರಿಗಳ ಬಗ್ಗೆ ತುಟಿ ಬಿಚ್ಚದ ಸರ್ಕಾರ; ‘ಬೆಳಗಾವಿ ಚಲೋ’ ಹೋರಾಟಕ್ಕೆ ಕರೆ

ಗುರುವಾರ (ಡಿ.4) ನಡೆದ ಸಚಿವ ಸಂಪುಟ ಸಭೆಯಲ್ಲಿ ಅಲೆಮಾರಿಗಳ ಮೀಸಲಾತಿ ಬಗ್ಗೆ ತುಟಿ ಬಿಚ್ಚದ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತವಾಗಿದ್ದು, 'ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ' 'ಬೆಳಗಾವಿ ಚಲೋ'...

ಅಖಂಡ ಕರ್ನಾಟಕದ ಪ್ರದೇಶಗಳನ್ನು ಸಾಂಸ್ಕೃತಿಕವಾಗಿ ವಿಲೀನಗೊಳಿಸಲು ಇದು ಸಕಾಲ: ಡಾ.ಪುರುಷೋತ್ತಮ ಬಿಳಿಮಲೆ

ಕರ್ನಾಟಕ ಮತ್ತು ನೆರೆ ರಾಜ್ಯಗಳ ಅಚ್ಚ ಕನ್ನಡ ಪ್ರದೇಶಗಳ ನಡುವಿನ ಭೌತಿಕ ಗಡಿಗಳು ಇದ್ದಂತೆ ಇದ್ದರೂ ಸಾಂಸ್ಕೃತಿಕವಾಗಿ ಹೇರಲಾಗುತ್ತಿರುವ ಗಡಿಗಳನ್ನು ಅಪ್ರಸ್ತುತವಾಗಿಸುವುದು ಸಾಧ್ಯವಿದೆ. ಇಂತಹ ಪ್ರದೇಶಗಳೊಂದಿಗೆ ಕರ್ನಾಟಕದ ಭಾವನಾತ್ಮಕ ಸಂಬಂಧದ ವಿಸ್ತರಣೆಗೆ ಇದು...