ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಬುಧವಾರ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಬಿಜೆಪಿ ಪ್ರತಿಭಟನೆಯನ್ನು ವರದಿ ಮಾಡುವಾಗ ಹಿರಿಯ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಹಲ್ಗಾಮ್ ಭದ್ರತಾ ಲೋಪದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕಾಗಿ ಅವರ ಮೇಲೆ ಬಿಜೆಪಿ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂದು ವರದಿಗಳು ಹೇಳಿವೆ.
ಕಾಲಿಬರಿ ಚೌಕ್‌ನಲ್ಲಿ ದೈನಿಕ್ ಜಾಗರಣ್ ವರದಿಗಾರ ರಾಕೇಶ್ ಶರ್ಮಾ ಅವರ ಮೇಲೆ ಬಿಜೆಪಿಯ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ದಾಳಿಯನ್ನು ಪತ್ರಿಕೋದ್ಯಮ ವಲಯಗಳು ತೀವ್ರವಾಗಿ ಖಂಡಿಸಿದ್ದು, ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿವೆ.
ಶಾಸಕರಾದ ದೇವಿಂದರ್ ಮಾನ್ಯಲ್, ರಾಜೀವ್ ಜಸ್ರೋಟಿಯಾ ಮತ್ತು ಭರತ್ ಭೂಷಣ್ ನೇತೃತ್ವದಲ್ಲಿ ನಡೆಯುತ್ತಿರುವ ಬಿಜೆಪಿಯ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರಿದಯಾಗಿದೆ. ಪತ್ರಕರ್ತ ರಾಕೇಶ್ ಅವರು, ಘಟನೆಯ ಭದ್ರತಾ ಲೋಪಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಎತ್ತುತ್ತಿದ್ದಾಗ, ಬಿಜೆಪಿ ಕಾರ್ಯಕರ್ತ ಹಿಮಾಂಶು ಶರ್ಮಾ ಆಕ್ರೋಶಗೊಂಡಿದ್ದು, ರಾಕೇಶ್ ಅವರು “ಪ್ರತ್ಯೇಕತಾವಾದಿ ಭಾಷೆ”ಯಲ್ಲಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾಗಿ ವರದಿಯಾಗಿದೆ.
ಶಾಸಕ ಮಾನ್ಯಲ್ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಪತ್ರಕರ್ತರ ಜೊತೆಗೆ ಮಾತನಾಡಿದ ಶಾಸಕ ಮಾನ್ಯಲ್, ಭಯೋತ್ಪಾದಕರ ವಿರುದ್ಧ “ಕಠಿಣ ಕ್ರಮ” ಕೈಗೊಳ್ಳಲು ಪ್ರಧಾನಿಗೆ ಪತ್ರ ಬರೆಯುತ್ತಿದ್ದೇವೆ ಎಂದು ಹೇಳುತ್ತಿದ್ದರು.
ಈ ವೇಳೆ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಕಥುವಾಗೆ ಭಯೋತ್ಪಾದಕರ ಒಳನುಸುಳುವಿಕೆ ನಡೆದಿದೆ. ಹಾಗಾಗಿ ಕೇಂದ್ರ ಸರ್ಕಾರವು ಗಡಿಯಾಚೆಯಿಂದ ಒಳನುಸುಳುವಿಕೆಯನ್ನು ತಡೆಯುವಲ್ಲಿ ವಿಫಲವಾಗಿದೆಯೇ ಎಂದು ಅವರನ್ನು ಕೇಳಿದ್ದು, ಈ ವೇಳೆ ಬಿಜೆಪಿಯ ದುಷ್ಕರ್ಮಿಗಳು ಸಿಟ್ಟಿಗೆದ್ದರು ಎಂದು ವರದಿಯಾಗಿದೆ.
ಈ ವೇಳೆ ಪ್ರತಿಭಟನೆಯನ್ನು ಬಹಿಷ್ಕರಿಸಲು ನಿರ್ಧರಿಸಿದ ಪತ್ರಕರ್ತರು ನಂತರ ಸ್ಥಳದಿಂದ ಹೊರಬಂದರು, ಈ ವೇಳೆ ಬಿಜೆಪಿ ಕಾರ್ಯಕರ್ತ ಹಿಮಾಂಶು ಅವರ ಪತ್ರಕರ್ತರನ್ನು ಪುನರಾವರ್ತಿತವಾಗಿ ಆಕ್ಷೇಪಿಸಿದರು ಎಂದು ವರದಿಯಾಗಿದೆ. ಈ ಮಧ್ಯೆ, ಹಿಮಾಂಶು ಅವರೊಂದಿಗೆ ರವೀಂದರ್ ಸಿಂಗ್, ಅಶ್ವನಿ ಶರ್ಮಾ, ಮಂಜಿತ್ ಸಿಂಗ್, ಟೋನಿ ಮತ್ತು ಪರ್ವೀನ್ ಚುನಾ ಸೇರಿದಂತೆ ಅನೇಕರು ಸೇರಿಕೊಂಡರು ಅವರನ್ನು ಸಾರ್ವಜನಿಕವಾಗಿ ಥಳಿಸಿದ್ದಾರೆ ಎಂದು ರಾಕೇಶ್ ಹೇಳಿದ್ದಾರೆ.
ಈ ವೇಳೆ ಉಪ ಪೊಲೀಸ್ ವರಿಷ್ಠಾಧಿಕಾರಿ ರವೀಂದರ್ ಸಿಂಗ್ ತನ್ನನ್ನು ರಕ್ಷಿಸಿದ್ದು, ನಂತರ ಅವರು ಚಿಕಿತ್ಸೆಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರು ಎಂದು ರಾಕೇಶ್ ಹೇಳಿದ್ದಾರೆ. ಈ ನಡುವೆ, ಹಿರಿಯ ಪತ್ರಕರ್ತರ ಗುಂಪೊಂದು ಕಥುವಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶೋಭಿತ್ ಸಕ್ಸೇನಾ ಅವರನ್ನು ಭೇಟಿ ಮಾಡಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವುದು ಮತ್ತು ಅವರ ಬಂಧನ ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ಕಥುವಾದ ಶಹೀದಿ ಚೌಕ್‌ನಲ್ಲಿ ನಡೆದ ಈ ಘಟನೆಯನ್ನು ಖಂಡಿಸಿ, ತೋಳುಗಳಿಗೆ ಕಪ್ಪು ಪಟ್ಟಿ ಧರಿಸಿದ ಪತ್ರಕರ್ತರು ಇಂದು ಸಂಜೆ ಪ್ರತಿಭಟನಾ ಪ್ರದರ್ಶನ ನಡೆಸಿದರು ಮತ್ತು ಆರೋಪಿಗಳ ವಿರುದ್ಧ ಪಕ್ಷ ಕ್ರಮ ಕೈಗೊಳ್ಳುವವರೆಗೆ ಬಿಜೆಪಿಯ ಎಲ್ಲಾ ಕಾರ್ಯಕ್ರಮಗಳನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ. ಕಥುವಾದ ಪ್ರತಿಭಟನಾ ನಿರತ ಸಹೋದ್ಯೋಗಿಗಳಿಗೆ ಬೆಂಬಲಿಸಿ ಜಮ್ಮುವಿನ ಪ್ರೆಸ್ ಕ್ಲಬ್ ಹೊರಗೆ ಕೂಡಾ ಕೆಲವು ಪತ್ರಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಪ್ರದೇಶ ಕಾಂಗ್ರೆಸ್ ಸಮಿತಿಯು ರಾಕೇಶ್ ಅವರ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಹೆಚ್ಚುತ್ತಿರುವ ಭಯೋತ್ಪಾದಕ ದಾಳಿಗಳ ಹಿನ್ನೆಲೆಯಲ್ಲಿ ಭದ್ರತಾ ಪರಿಸ್ಥಿತಿಯ ಕುರಿತು ಅವರು ಕೆಲವು “ಅನಪೇಕ್ಷಿತ ಪ್ರಶ್ನೆಗಳನ್ನು” ಕೇಳಿದ್ದೆ ಅವರು ಮಾಡಿದ ಏಕೈಕ ಅಪರಾಧ ಎಂದು ಕಾಂಗ್ರೆಸ್ ಹೇಳಿದೆ.
“ಈಗ ಪತ್ರಕರ್ತರು ಪ್ರಶ್ನೆಗಳನ್ನು ಕೇಳುವುದು ದೊಡ್ಡ ಪಾಪವಾಗಿದೆ. ರಾಷ್ಟ್ರೀಯ ದಿನಪತ್ರಿಕೆಯ ಪ್ರಸಿದ್ಧ ಪತ್ರಕರ್ತ ಕೂಡ ಸುರಕ್ಷಿತವಾಗಿಲ್ಲ. ಇದಕ್ಕಿಂತ ದುರದೃಷ್ಟಕರ ಮತ್ತು ಖಂಡನೀಯವಾದದ್ದು ಇನ್ನೊಂದಿಲ್ಲ” ಎಂದು ಜಮ್ಮು ಕಾಶ್ಮೀರದ ಕಾಂಗ್ರೆಸ್ ಮುಖ್ಯ ವಕ್ತಾರ ರವೀಂದರ್ ಶರ್ಮಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಘಟನೆಗೆ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರು ಕ್ಷಮೆಯಾಚಿಸಬೇಕು ಮತ್ತು ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. ಪಹಲ್ಗಾಮ್ ಭದ್ರತಾ


