ಉತ್ತರ ಪ್ರದೇಶದ ಮೀರತ್‌ನ ಹಾಪುರದ ಹಳ್ಳಿಯೊಂದರಲ್ಲಿ 10 ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಕೋಪಗೊಂಡ ಗುಂಪೊಂದು 28 ವರ್ಷದ ಯುವಕನನ್ನು ಥಳಿಸಿದ್ದ, ಆತ ಗುರುವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಆರೋಪಿಯ ವಿರುದ್ಧ ಬಿಎನ್‌ಎಸ್ ಅತ್ಯಾಚಾರ ವಿಭಾಗದ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಥಳಿತದ ತೀವ್ರತೆಯಿಂದಾಗಿ, ಅವನಿಗೆ ಏಳು ದಿನಗಳ ನ್ಯಾಯಾಂಗ ಕಸ್ಟಡಿಯನ್ನು ನೀಡಿದ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಅವಕಾಶ ನೀಡಲಾಯಿತು.
ಏಪ್ರಿಲ್ 17 ರಂದು, 4 ನೇ ತರಗತಿಯಲ್ಲಿ ಓದುತ್ತಿರುವ ತನ್ನ ಬಾಲಕಿ ಗುಡಿಸಲಿನಲ್ಲಿ ಒಂಟಿಯಾಗಿದ್ದಳು. ಆಕೆಯ ಕುಟುಂಬವು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ, ಆರೋಪಿ ಶ್ರವಣ್ ಕುಮಾರ್ ಎಂಬಾತ ಬಾಲಕಿಯನ್ನು ಖಾಲಿ ಕಾರ್ಖಾನೆಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ.
ಬಾಲಕಿ ಕಾಣೆಯಾಗಿರುವುದನ್ನು ಆರಿತುಕೊಂಡ ಪೋಷಕರು ಹುಡುಕಾಟ ಪ್ರಾರಂಭಿಸಿದ್ದಾರೆ. ಆದರೆ, ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಕುಟುಂಬ ಮತ್ತು ಸ್ಥಳೀಯರು ಆಕೆಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಹಚ್ಚಿದ್ದಾರೆ. ಆಕೆಯ ಪಕ್ಕದಲ್ಲಿ ಆರೋಪಿ ಇದ್ದುದನ್ನು ನೋಡಿದ ಅವರು, ಪೊಲೀಸರು ಬರುವ ಮೊದಲೇ ಆತನನ್ನು ಥಳಿಸಿದ್ದಾರೆ.
ಪೊಲೀಸರು ಆತನನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಮೀರತ್‌ನಲ್ಲಿರುವ ಮತ್ತೊಂದು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಗುರುವಾರ ಆತ ಮೃತಪಟ್ಟಿದ್ದಾನೆ. ಆತನ ಸಾವಿಗೆ ಮುನ್ನ, ಕುಮಾರ್‌ನ ಚಿಕ್ಕಪ್ಪ ಗರ್ ಮುಕ್ತೇಶ್ವರ ಪೊಲೀಸ್ ಠಾಣೆಯಲ್ಲಿ ಹುಡುಗಿಯ ಕುಟುಂಬ ಮತ್ತು ಕೆಲವು ಗ್ರಾಮಸ್ಥರ ವಿರುದ್ಧ ‘ಕೊಲೆ ಯತ್ನ’ ಪ್ರಕರಣ ದಾಖಲಿಸಿದರು.
ಗರ್ ಮುಕ್ತೇಶ್ವರದ ಎಸ್‌ಎಚ್‌ಒ ನೀರಜ್ ಕುಮಾರ್ ಮಾತನಾಡಿ, “ಕುಮಾರ್ ಸಾವಿನ ನಂತರ, ಕ್ರಾಸ್-ಎಫ್‌ಐಆರ್‌ನಲ್ಲಿನ ಆರೋಪಗಳನ್ನು ಕೊಲೆ ಎಂದು ಮೇಲ್ದರ್ಜೆಗೇರಿಸುವ ಸಾಧ್ಯತೆಯಿದೆ. ಆತನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ. ಬಾಲಕಿಯ ಕುಟುಂಬದೊಂದಿಗೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ, ಬಾಲಕಿ ಸ್ಥಿರವಾಗಿದ್ದಾಳೆ. ಆದರೆ, ಇನ್ನೂ ತೀವ್ರ ಆಘಾತಕ್ಕೊಳಗಾಗಿದ್ದಾಳೆ” ಎಂದು ಹೇಳಿದರು.
ಉತ್ತರ ಪ್ರದೇಶ| ಪ್ರತಾಪ್‌ಗಢ ಗ್ರಾಮದಲ್ಲಿ ದಲಿತರಿಗೆ ಸೇರಿದ 9 ಮನೆಗಳು ಬೆಂಕಿಗೆ ಆಹುತಿ


