ಗೋಡ್ಸೆಯನ್ನು ದೇಶಭಕ್ತ ಎಂದು ಶಿವಸೇನೆಯ ಮುಖವಾಣಿ ಸಾಮ್ನಾ ಕೂಡ ಹೇಳಿತ್ತು, ಅವರೊಡನೆ ಹೇಗೆ ಸರ್ಕಾರ ರಚಿಸಿದಿರಿ ಎಂದು ಕಾಂಗ್ರೆಸ್ ಪಕ್ಷವನ್ನು ಬಿಜೆಪಿ ಸಂಸದ ಪ್ರಶ್ನಿಸಿದ್ದಾರೆ.
ನಿನ್ನೆಯಿಂದಲೂ ಪ್ರಗ್ಯಾ ಠಾಕೂರ್ ಸಂಸತ್ತಿನಲ್ಲಿ ಗೋಡ್ಸೆಯನ್ನು ದೇಶಭಕ್ತ ಎಂದಾಗಿನಿಂದ ವಿವಾದ ಎದ್ದಿದ್ದು ದಿನಕ್ಕೊಂದು ರೂಪ ಪಡೆಯುತ್ತಿದೆ. ಒಂದು ಕಡೆ ಪ್ರಗ್ಯಾ ಠಾಕೂರ್ ಕ್ಷಮೆಯಾಚಿಸಿ ವಿವಾದ ತಣ್ಣಗಾಗಿಸಲು ನೋಡಿದರೆ ಬಿಜೆಪಿಯ ಸಂಸದ ನಿಶಿಕಾಂತ್ ದುಬೆ ಕಾಂಗ್ರೆಸ್ ಅನ್ನು ಪ್ರಶ್ನಿಸುವ ಮೂಲಕ ವಿವಾದವನ್ನು ಬೆಳೆಸಿದ್ದಾರೆ.
ಇದನ್ನೂ ಓದಿ; ಭಯೋತ್ಪಾದಕಿ ಪ್ರಗ್ಯಾ ಠಾಕೂರ್ , ಭಯೋತ್ಪಾದಕ ಗೋಡ್ಸೆಯನ್ನು ದೇಶಭಕ್ತ ಎಂದಿದ್ದಾರೆ: ರಾಹುಲ್ ಗಾಂಧಿ
ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆ ಕಾಂಗ್ರೆಸ್ ಜೊತೆಗೂಡಿ ಸರ್ಕಾರ ರಚಿಸಿದೆ. ಶಿವಸೇನೆಯು ತನ್ನ ಪತ್ರಿಕೆ ‘ಸಾಮ್ನಾ’ದಲ್ಲಿ ನಾಥುರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದೆ. ಅಧಿಕಾರ ಮತ್ತು ದುರಾಶೆಗಾಗಿ ಕಾಂಗ್ರೆಸ್ ಯಾವುದೇ ಮಟ್ಟಿಗೆ ಹೋಗಬಹುದು ಎಂದು ಲೋಕಸಭೆಯಲ್ಲಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೇಳಿದ್ದಾರೆ.
ಜಾರ್ಖಂಡ್‌ನ ಸಂಸದ ನಿಶಿಕಾಂತ್ ದುಬೆ ಪ್ರಗ್ಯಾರವರನ್ನು ಭಯೋತ್ಪಾದಕಿ ಎಂದು ಕರೆದ ರಾಹುಲ್ ಗಾಂಧಿ ಕೂಡ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.


