Homeಕರ್ನಾಟಕಜನರನ್ನು ಸಜ್ಜುಗೊಳಿಸುವಲ್ಲಿ ನಮ್ಮಲ್ಲೇ ಲೋಪವಿದೆ: ನೂರ್ ಶ್ರೀಧರ್

ಜನರನ್ನು ಸಜ್ಜುಗೊಳಿಸುವಲ್ಲಿ ನಮ್ಮಲ್ಲೇ ಲೋಪವಿದೆ: ನೂರ್ ಶ್ರೀಧರ್

- Advertisement -
- Advertisement -

ನಾವು ಪ್ರಚಂಡ ಚಳವಳಿಯನ್ನು ಕಟ್ಟುವ ಅಗತ್ಯವಿದೆ, ಆದರೆ ಅಗುತ್ತಿಲ್ಲ. ಯುವ ಜನರನ್ನು ಸಜ್ಜುಗೊಳಿಸಬೇಕಿದೆ, ಸಾಧ್ಯವಾಗುತ್ತಿಲ್ಲ. ಬೃಹತ್ ಜನಾಂದೋಲನ ಕಟ್ಟಬೇಕಿದೆ, ಅದೂ ಆಗುತ್ತಿಲ್ಲ. ಇದಕ್ಕೆಲ್ಲ ಮುಖ್ಯ ಕಾರಣ ನಮ್ಮಲ್ಲೆ ಇರುವ ಲೋಪವಾಗಿದೆ ಎಂದು ಕರ್ನಾಟಕ ಜನಶಕ್ತಿಯ ನೂರ್ ಶ್ರೀಧರ್ ಹೇಳಿದರು.

ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ನಡೆಯುತ್ತಿರುವ ‘ಸಂವಿಧಾನ ಸಂರಕ್ಷಕರ ಸಮಾವೇಶ’ದಲ್ಲಿ ಮಾತನಾಡಿದ ಅವರು, “ನಾವು ಅನೇಕ ಹೋರಾಟಗಳನ್ನು ಮಾಡುತ್ತಿದ್ದೇವೆ. ಆದರೆ, ಆಳುವವರನ್ನು ಅಲುಗಾಡಿಸಲು ಅಗುತ್ತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಲೋಪ ನಮ್ಮಲ್ಲೇ ಇದೆ. ಅದನ್ನೆಲ್ಲ ಮೀರುವುದರ ಭಾಗವಾಗಿ ಈ ಸಂವಿಧಾನ ಸಂರಕ್ಷಕರ ಸಮಾವೇಶ ಆಯೋಜಿಸಲಾಗಿದೆ” ಎಂದರು.

ನಾಡೋಜ ಬರಗೂರು ರಾಮಚಂದ್ರಪ್ಪನವರು ಮಾತನಾಡುತ್ತಾ ನಾವು ಆಳುವವರನ್ನು ಪ್ರಶ್ನಿಸಬೇಕು, ಅದಕ್ಕೂ ಮುನ್ನ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು ಎಂದು ಹೇಳಿದರು. ಅದನ್ನು ನಾನು ಒಪ್ಪುತ್ತೇನೆ. ನಮ್ಮಲ್ಲಿ ಒಂದು ರೀತಿಯ ತೊಳಲಾಟವಿದೆ. ಅದನ್ನು ಮೀರಬೇಕು ಎಂದು ಹೇಳಿದರು.

ಕಳೆದ ಎರಡು ಚುನಾವಣೆಗಳಲ್ಲಿ ಕೆಲಸ ಮಾಡಿದ ಎದ್ದೇಳು ಕರ್ನಾಟಕದ ಮುಂದಿನ ಕಾರ್ಯಚಟುವಟಿಕೆಯೇನು ಎಂಬ ಪ್ರಶ್ನೆ ಮುಂದೆ ಬಂದಾಗ 24 ರಾಜ್ಯಗಳ ಹಲವರು ಸೇರಿ ಜು.27,28ರಂದು ಎರಡು ದಿನದ ಕಾರ್ಯಗಾರವನ್ನು ನಡೆಸಲಾಯಿತು. ಅಲ್ಲಿ ಹಲವು ವಿಷಯಗಳನ್ನು ಚರ್ಚಿಸಲಾಯಿತು. ಅದರ ಭಾಗವಾಗಿ ಈ ಸಂವಿಧಾನ ಸಂರಕ್ಷಕರ ಪಡೆ ಕಟ್ಟುವ ತೀರ್ಮಾನ ಮಾಡಲಾಯಿತು. ಕಳೆದ 4 ತಿಂಗಳಿನಿಂದ ಈ ಪಡೆ ಕಟ್ಟಿ, ಸಮಾವೇಶ ನಡೆಸುವ ತಯಾರಿ ನಡೆದಿದೆ. ಇದರಲ್ಲಿ ಏನೊ ಸತ್ವವಿದೆ ಎಂದು ನಮಗೆ ಅನಿಸಿದೆ ಎಂದು ತಿಳಿಸಿದರು.

ಈ ಸಂವಿಧಾನ ಸಂರಕ್ಷಕರ ಪಡೆಯನ್ನು ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ಕಟ್ಟಬೇಕಿದೆ. ನಾವು ಹೇಳುವ ವಿಚಾರಗಳು ಜನರಿಗೆ ತಲುಪಬೇಕಾದರೆ ಕಾರ್ಯಕರ್ತರ ಗಣ ಕಟ್ಟಲೇಬೇಕು. ನಾವು ಉದ್ದೇಶಿಸಿರುವ 1 ಲಕ್ಷ ಸಂರಕ್ಷಕರ ಪಡೆ ಕಟ್ಟುವ ಉದ್ದೇಶ ಯಶಸ್ಸು ಆಗಬೇಕಾದರೆ ಇಲ್ಲಿನ ವೇದಿಕೆಯ ಮೇಲಿರುವ ಗಣ್ಯರು ಮತ್ತು ಸಭೆಯ ಮುಂದಿರುವ ನಿಮ್ಮೆಲ್ಲರ ಜವಾಬ್ದಾರಿ ಇದೆ. ಅದನ್ನು ಒಟ್ಟಿಗೆ ಸೇರಿ ನಿರ್ವಹಿಸಬೇಕಿದೆ. ಎಲ್ಲರೂ ಸೇರಿ ದೃಢ ನಿರ್ಧಾರ ಮಾಡಬೇಕಿದೆ. ಪ್ರತಿಯೊಬ್ಬರು ಯೋಧರಂತೆ ಕೆಲಸ ಮಾಡಬೇಕು. ಪ್ರತಿಯೊಬ್ಬರು ತಮ್ಮ ಜೊತೆ 5 ಜನ ಸಂವಿಧಾನ ಸಂರಕ್ಷಕರನ್ನು ತಯಾರು ಮಾಡುವ ತೀರ್ಮಾನ ಮಾಡಿದರೆ ಎಲ್ಲವೂ ಸಾಧ್ಯವಾಗುತ್ತದೆ. ಇದು ಆದರೆ ಮುಂದಿನ 3 ವರ್ಷದಲ್ಲಿ 1 ಲಕ್ಷ ಪಡೆ ಕಟ್ಟುವ ನಮ್ಮ ಗುರಿಯನ್ನು ಮುಟ್ಟಬಹುದು ಎಂದು ನೂರ್ ಆಶಯ ವ್ಯಕ್ತಪಡಿಸಿದರು.

ರಾಜ್ಯ ಮಟ್ಟದಲ್ಲಿ ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಇಂದು ಎಲ್ಲ ಸಂಘಟನೆಗಳ ನಾಯಕರ ಮಟ್ಟದಲ್ಲಿ ಒಳ್ಳೆಯ ವಾತಾವರಣವಿದೆ. ಆದರೆ, ಕೆಳಮಟ್ಟದಲ್ಲಿ  ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ.  ತಳಮಟ್ಟದಲ್ಲಿ ಅಂದರೆ, ಜನಸಾಮಾನ್ಯರ ಮಧ್ಯೆ ಕೆಲಸ ಮಾಡಬೇಕಿದೆ. ಇದಕ್ಕಾಗಿ 100 ಜನ ಶಿಕ್ಷಕರನ್ನು ಸಿದ್ದಗೊಳಿಸಲಾಗಿದೆ. ಬರುವ ಜುಲೈನಲ್ಲಿ ರಾಜ್ಯದ ಎಲ್ಲ ಜಿಲ್ಲೆ, ತಾಲೂಕುಗಳಲ್ಲಿ ಶಿಬಿರ ನಡೆಸಲು ಸಿದ್ಧತೆಗಾಗಿ ಪಠ್ಯ ಪುಸ್ತಕಗಳು ರೂಪಿಸಲಾಗಿದೆ. ಈ ಮೂಲಕ ಒಂದು ಗಟ್ಟಿ ತಂಡವನ್ನು ಕಟ್ಟಲು ಸಾಧ್ಯವಾಗುತ್ತದೆ. ಮತ್ತೊಂದು ಕಡೆ ಜನಸಾಮಾನ್ಯರನ್ನು ತಲುಪಲು ಎರಡು ಕೆಲಸ ಮಾಡಬೇಕಿದೆ. ಒಂದು ಜನ ಸಾಂಸ್ಕೃತಿಕ ತಂಡ ಇನ್ನೊಂದು ಜನ ಮಾಧ್ಯಮಗಳನ್ನು ಬಲಪಡಿಸುವುದು ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾರ್ಯ ಮುಂದುವರಿಯುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಈ ಸಮಾವೇಶದಲ್ಲಿ ನಾಲ್ಕು ಮುಖ್ಯ ಚಟುವಟಿಕೆಗಳ ಕುರಿತು ನಿಮ್ಮ ಮುಂದಿಡುತ್ತಿದ್ದೇವೆ. ಸಮಾಜದ ಎಲ್ಲ ಕಡೆ ವಿಷ ಹರಡಿದೆ. ಒಂದು ಕಡೆ ಕೇಂದ್ರದ ಜೊತೆ ಗುದ್ದಾಟ ನಡೆಸಬೇಕಿದೆ. ಅದರ ಜೊತೆಗೆ ನಮ್ಮ ರಾಜ್ಯದ ಸರಕಾರದ ವಿರುದ್ದ ಗುದ್ದಾಟ ನಡೆಸಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮ ಸರ್ಕಾರ ನಮ್ಮೆಲ್ಲರ ಆಸೆಯನ್ನು ನಿರಾಶೆಗೊಳಿಸಿದೆ. ತಮ್ಮ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿನ ಭರವಸೆಯನ್ನು ಈಡೇರಿಸುತ್ತಿಲ್ಲ. ತಮ್ಮ ಪಕ್ಷದ ಜನಪ್ರತಿನಿಧಿಗಳು ಸ್ವಜನಪಕ್ಷಪಾತಿಗಳಾಗಿದ್ದಾರೆ. ಭ್ರಷ್ಟರಾಗಿದ್ದಾರೆ. ಇದಕ್ಕಾಗಿ ನಾವೆಲ್ಲ ಈ ರಾಜ್ಯ ಸರಕಾರವನ್ನು ಚುಚ್ಚಬೇಕಾಗಿದೆ ಎಂದರು.

ಇದೇ ಮೇ 20ರಂದು ಕಾರ್ಮಿಕ, ರೈತ ಸಂಘಟನೆಗಳು ರಾಷ್ಟ್ರೀಯ ಮುಷ್ಕರಕ್ಕೆ ಕರೆಕೊಟ್ಟಿವೆ. ಅದರಲ್ಲಿ ನಾವೆಲ್ಲ ಸಕ್ರಿಯವಾಗಿ ಮತ್ತು ಅಷ್ಟೇ ಪರಿಣಾಮಕಾರಿಯಾಗಿ ಭಾಗವಹಿಸಬೇಕಿದೆ. ಅದಕ್ಕಾಗಿ ಸಂಯುಕ್ತ ಹೋರಾಟ ವತಿಯಿಂದ ರಾಜ್ಯದ ಆಯ್ದ 100 ಅಯಕಟ್ಟಿನ ಪ್ರದೇಶಗಳಲ್ಲಿ ಸರಕಾರವನ್ನು ನಡುಗಿಸುವ ಹೋರಾಟವನ್ನು ಕಟ್ಟಬೇಕಿದೆ. ಅದರಲ್ಲಿ ಎದ್ದೇಳು ಕರ್ನಾಟಕ ಸಕ್ರಿಯ ಭಾಗವಹಿಸಬೇಕು ಎಂದು ಕರೆ ಕೊಡುತ್ತಿದ್ದೇವೆ. ಜನ ಪ್ರತಿನಿಧಿಗಳ ಕೆಲಸ ಕಾರ್ಯಗಳ ಕುರಿತು ರಿಪೋರ್ಟ್ ಕಾರ್ಡ್ ಅನ್ನು ತಯಾರಿಸಿ ಸರ್ಕಾರದ ಮುಂದಿಡಬೇಕಿದೆ. ಧರ್ಮಾಂಧ ಶಕ್ತಿಗಳನ್ನು ಸೋಲಿಸದೆ ಜನಸಾಮಾನ್ಯರ ಸಂಕಷ್ಟಗಳಿಗೆ ಮುಕ್ತಿಯಿಲ್ಲವಾಗಿದೆ. ಅದಕ್ಕಾಗಿ ಕೆಲವು ತಿಂಗಳೊಳಗೆ ಇಲ್ಲವೆ ವರ್ಷದೊಳಗೆ ರಾಷ್ಟ್ರೀಯ ಜನಾಂದೋಲನ ಕಟ್ಟಲು ಒಂದು ರಾಷ್ಟ್ರೀಯ ಸಮಾವೇಶ ನಡೆಸಲು ಸಿದ್ದತೆ ಮಾಡಿಕೊಳ್ಳಲು ಸಿದ್ಧತೆಯನ್ನು ಅದಷ್ಟು ತೀವ್ರಗೊಳಿಸಬೇಕು ಎಂದು ನೂರ್ ಅವರು ಹೇಳಿದರು.

ಈ ಸಂದರ್ಭದಲ್ಲಿ ಸಂವಿಧಾನ ಸಂರಕ್ಷಣಾ ಪಡೆ ಅತ್ಯಗತ್ಯ: ಗುರುಪ್ರಸಾದ್ ಕೆರಗೋಡು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...