ಇತ್ತಿಚೆಗೆ ಆಯ್ಕೆಯಾದ ಹೊಸ ನಾಯಕತ್ವದೊಂದಿಗೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) [ಸಿಪಿಐ(ಎಂ)] ತನ್ನ ಪ್ರಭಾವವನ್ನು ಕಾಪಾಡಿಕೊಳ್ಳಲು ಮತ್ತು ವಿವಿಧ ರಾಜ್ಯಗಳಲ್ಲಿ ತನ್ನ ಬೆಂಬಲಿಗರ ನೆಲೆಯನ್ನು ವಿಸ್ತರಿಸಲು ಸಮಗ್ರ ಕಾರ್ಯಕ್ರಮವನ್ನು ರೂಪಿಸಿದೆ ಎಂದು TNIE ವರದಿ ಮಾಡಿದೆ. ದೇಶದಾದ್ಯಂತ ಪಕ್ಷದ ಸಂಘಟನೆ
ಒಂದು ತಿಂಗಳೊಳಗೆ, ಪಕ್ಷವು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸರಣಿ ಸಭೆಗಳ ಮೂಲಕ ಎಲ್ಲಾ 10 ಲಕ್ಷ ಸದಸ್ಯರನ್ನು ತೊಡಗಿಸಿ ಕೊಳ್ಳುವ ಗುರಿಯನ್ನು ಹೊಂದಿದ್ದು, ಪಕ್ಷದ ಇತ್ತಿಚಿನ ಮಹಾ ಅಧಿವೇಶನದಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳನ್ನು ಕಾರ್ಯಗತಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.
ಸಿಪಿಐ(ಎಂ) ತಾನು ವರ್ಷಗಳ ಕಾಲ ಆಡಳಿತ ನಡೆಸಿದ ರಾಜ್ಯಗಳಲ್ಲಿ ಪರಿಚಯಿಸಿದ ಸುಧಾರಣೆಗಳನ್ನು ಸಕ್ರಿಯವಾಗಿ ಎತ್ತಿ ತೋರಿಸಲು ಮತ್ತು ಅವುಗಳನ್ನು ಸಾರ್ವಜನಿಕರಿಗೆ ನೆನಪಿಸಲು ಯೋಜಿಸಿದೆ. ಪಂಜಾಬ್ ಮತ್ತು ಕೇರಳ ಎಂಬ ಎರಡು ರಾಜ್ಯಗಳಲ್ಲಿ ಈಗಾಗಲೇ ಈ ಬಗ್ಗೆ ಸಭೆಗಳು ನಡೆದಿವೆ ಎಂದು ವರದಿಯಾಗಿದೆ.
“ನಮ್ಮ ಕಾರ್ಯವನ್ನು ಶೀಘ್ರದಲ್ಲೇ ಗುರುತಿಸಲಾಗುವುದು. ಪಕ್ಷದ ಮಹಾ ಅಧಿವೇಶನದ ಪ್ರಮುಖ ನಿರ್ಧಾರಗಳನ್ನು ಪಕ್ಷದೊಳಗೆ ಹೇಗೆ ತಿಳಿಸಬೇಕು ಎಂಬುದನ್ನು ವಿವರಿಸುವ ಟಿಪ್ಪಣಿಯನ್ನು ನಾವು ಸಿದ್ಧಪಡಿಸಿದ್ದೇವೆ. ಜೂನ್ ಮಧ್ಯದ ವೇಳೆಗೆ ಸಂದೇಶವು ಇಡೀ ಸಂಘಟನೆಯನ್ನು ತಲುಪುತ್ತದೆ” ಎಂದು ಹೊಸದಾಗಿ ಆಯ್ಕೆಯಾದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಹೇಳಿದ್ದಾರೆ.
“ಸಂಘಟನೆ ವಿಸ್ತರಿಸಲು, ನಾವು ಬಡವರಲ್ಲಿ ಬಡವರೊಂದಿಗೆ ಕೆಲಸ ಮಾಡಬೇಕು. ಈ ಕೆಂಪು ಧ್ವಜದ ಪಕ್ಷವು ತಮ್ಮದು ಎಂದು ಅವರು ಭಾವಿಸಬೇಕು. ಮತ್ತು ಬೇರೆ ಯಾವುದೇ ಪಕ್ಷದ ಮೂಲಕ ಅವರು ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂಬುವುದು ಅರಿಯಬೇಕು” ಎಂದು ಅವರು ಹೇಳಿದ್ದಾರೆ.
ರಾಜಕೀಯ ಆವೇಗವನ್ನು ಉಳಿಸಿಕೊಳ್ಳುವ ವಿಶಾಲ ಪ್ರಯತ್ನಗಳ ಭಾಗವಾಗಿ, ಪಕ್ಷದ ಅಸ್ತಿತ್ವದಲ್ಲಿರುವ ನೆಲೆಯನ್ನು ಬಲಪಡಿಸುವ ಅಗತ್ಯವನ್ನು ಬೇಬಿ ಒತ್ತಿ ಹೇಳಿದ್ದಾರೆ. “ನಮಗೆ ಯಾವುದೇ ಸ್ಥಳೀಯ ಪ್ರಭಾವವಿದ್ದರೂ, ಮತ್ತಷ್ಟು ಸವೆತ ಉಂಟಾಗದಂತೆ ನಾವು ಖಚಿತಪಡಿಸಿಕೊಳ್ಳಬೇಕು.” ಎಂದು ಅವರು ಹೇಳಿದ್ದಾರೆ.
ಮುಂಬರುವ ದಿನಗಳಲ್ಲಿ, ಸಿಪಿಐಎಂ ತನ್ನ ಆಡಳಿತ ಸಾಧನೆಗಳನ್ನು, ವಿಶೇಷವಾಗಿ ಕೇರಳ ಕೃಷಿ ಸಂಬಂಧ ಮಸೂದೆ ಮತ್ತು ತ್ರಿಪುರ ಭೂ ಕಂದಾಯ ಮತ್ತು ಭೂ ಸುಧಾರಣಾ ಕಾಯ್ದೆಯಂತಹ ಐತಿಹಾಸಿಕ ಭೂಸುಧಾರಣೆಗಳನ್ನು ಪ್ರದರ್ಶಿಸುವ ಮೂಲಕ ಜನರೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಅಭಿಯಾನಗಳನ್ನು ಕೈಗೊಳ್ಳುವ ನಿರೀಕ್ಷೆಯಿದೆ.
ಪಕ್ಷವು ಈಗ ತನ್ನ ಐತಿಹಾಸಿಕ ಪಾತ್ರವನ್ನು ಪುನರುಚ್ಚರಿಸಲು ಉದ್ದೇಶಿಸಿದೆ ಎಂದು ಅವರು ಒತ್ತಿ ಹೇಳಿದ್ದಾರೆ. “ಸಿಪಿಎಂ ಅವರೊಂದಿಗೆ ನಿಂತಿದೆ ಎಂದು ನಾವು ಜನರಿಗೆ ತಿಳಿಸಬೇಕಾಗಿದೆ. ನಾವು ಜನರ ನಡುವೆ ಬದುಕಬೇಕು. ಸಿಪಿಎಂ ಯಾವಾಗಲೂ ಅವರ ಪರವಾಗಿ ನಿಂತಿದೆ, ಮತ್ತು ಅವರ ಬೇಡಿಕೆಗಳನ್ನು ಸಮರ್ಥಿಸುವ ಶಕ್ತಿ ನಾವು ಎಂದು ಅವರು ಅರಿತುಕೊಳ್ಳಬೇಕು.” ಎಂದು ಅವರು ಹೇಳಿದ್ದಾರೆ.
ಈ ನಡುವೆ ಸಂಸದ ಬ್ರಿಟ್ಟಾಸ್ ಅವರು ರಾಜ್ಯಸಭೆಯಲ್ಲಿ ಸಿಪಿಎಂ ಪಕ್ಷದ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಿಪಿಎಂ ತನ್ನ ರಾಜ್ಯಸಭಾ ಸಂಸದೀಯ ಪಕ್ಷದ ನಾಯಕರಾಗಿ ಜಾನ್ ಬ್ರಿಟ್ಟಾಸ್ ಅವರನ್ನು ನೇಮಿಸಿದೆ.
ಕೇರಳದ ಸಂಸದರಾಗಿರುವ ಅವರು ಮೂರು ದಶಕಗಳಿಗೂ ಹೆಚ್ಚು ಕಾಲ ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಬ್ರಿಟ್ಟಾಸ್ ಅವರು ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿ, ಸಾರ್ವಜನಿಕ ಉದ್ಯಮಗಳ ಸಮಿತಿ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ. ದೇಶದಾದ್ಯಂತ ಪಕ್ಷದ ಸಂಘಟನೆ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಪರಿಶಿಷ್ಟ ಜಾತಿ ಒಳ ಮೀಸಲಾತಿ| ಇಂದಿನಿಂದ ವೈಜ್ಞಾನಿಕ ದತ್ತಾಂಶ ಸಂಗ್ರಹ: ಮೂರೂ ಹಂತಗಳಲ್ಲಿ ಸಮೀಕ್ಷೆ
ಪರಿಶಿಷ್ಟ ಜಾತಿ ಒಳ ಮೀಸಲಾತಿ| ಇಂದಿನಿಂದ ವೈಜ್ಞಾನಿಕ ದತ್ತಾಂಶ ಸಂಗ್ರಹ: ಮೂರೂ ಹಂತಗಳಲ್ಲಿ ಸಮೀಕ್ಷೆ

