ರಾಜ್ಯದ ಹಿಂಸಾಚಾರ ಪೀಡಿತ ಮುರ್ಷಿದಾಬಾದ್‌ನಲ್ಲಿ ಪರಿಸ್ಥಿತಿ ಸ್ಥಿರವಾಗಿದೆ ಎಂದು ಹೇಳಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಗಲಭೆಗಳ ಕುರಿತು ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ಗೃಹ ಸಚಿವಾಲಯಕ್ಕೆ (MHA) ನೀಡಿರುವ ವರದಿಯ ಬಗ್ಗೆ ಅಥವಾ ರಾಜ್ಯದಲ್ಲಿ 356ನೇ ವಿಧಿಯ ಅನುಷ್ಠಾನದ ಬಗ್ಗೆ ಅವರು ನೀಡಿರುವ ಉಲ್ಲೇಖದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸೋಮವಾರ ಹೇಳಿದ್ದಾರೆ. ಮುರ್ಷಿದಾಬಾದ್ ಹಿಂಸಾಚಾರದ
ಸೋಮವಾರ ಮಧ್ಯಾಹ್ನ ಮುರ್ಷಿದಾಬಾದ್‌ಗೆ ಎರಡು ದಿನಗಳ ಭೇಟಿಗೆ ತೆರಳಿದ್ದ ಮಮತಾ ಬ್ಯಾನರ್ಜಿ, ತಾನು ಮೊದಲೇ ಭೇಟಿ ನೀಡಬಹುದಿತ್ತು, ಆದರೆ ಪರಿಸ್ಥಿತಿ ಸಾಮಾನ್ಯವಾಗುವವರೆಗೆ ಕಾಯಲು ನಿರ್ಧರಿಸಿದದಾಗಿ ಹೇಳಿದ್ದಾರೆ.
“ಬೋಸ್ ಅವರು ಗೃಹ ಸಚಿವಾಲಯಕ್ಕೆ ನೀಡಿರುವ ವರದಿಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ರಾಜ್ಯಪಾಲರ ಆರೋಗ್ಯ ಸರಿಯಿಲ್ಲ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ” ಎಂದು ಮುರ್ಷಿದಾಬಾದ್‌ಗೆ ಹೆಲಿಕಾಪ್ಟರ್ ಹತ್ತುವ ಮೊದಲು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
“ನಾನು ಮೊದಲೇ ಮುರ್ಷಿದಾಬಾದ್‌ಗೆ ಹೋಗಬಹುದಿತ್ತು. ಆದರೆ ಅಲ್ಲಿ ಶಾಂತಿ ಮತ್ತು ಸ್ಥಿರತೆ ಇಲ್ಲದಿದ್ದರೆ, ನಾವು ಹೋಗಿ ತೊಂದರೆ ನೀಡಬಾರದು. ಈ ಹಿಂದೆಯೇ ಮುರ್ಷಿದಾಬಾದ್ ಸಹಜತೆಗೆ ಮರಳಿದೆ. ಇಂದು, ನಾನು ಅಲ್ಲಿಗೆ ಹೋಗುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಅವರು ಆ ದಿನದ ನಂತರ ಬೆರ್ಹಾಂಪೋರ್‌ನಲ್ಲಿ ಜಿಲ್ಲಾ ಪರಿಶೀಲನಾ ಸಭೆ ನಡೆಸುವುದಾಗಿ ಹೇಳಿದ್ದಾರೆ. “ನಾಳೆ, ನಾನು ಹಿಂಸಾಚಾರ ಪೀಡಿತ ಧುಲಿಯನ್‌ಗೆ ಭೇಟಿ ನೀಡುತ್ತೇನೆ ಮತ್ತು ಮನೆಗಳು ಮತ್ತು ಅಂಗಡಿಗಳಿಗೆ ಹಾನಿಗೊಳಗಾದ ಜನರಿಗೆ ಪರಿಹಾರ ನೀಡುತ್ತೇನೆ” ಎಂದು ಅವರು ಹೇಳಿದ್ದಾರೆ.
ಮುರ್ಷಿದಾಬಾದ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಗಲಭೆಗಳ ಕುರಿತು ಬೋಸ್ ಗೃಹ ಸಚಿವಾಲಯಕ್ಕೆ ವರದಿಯನ್ನು ಕಳುಹಿಸಿದ್ದಾರೆ, “ಮೂಲಭೂತವಾದಿಕರಣ ಮತ್ತು ಉಗ್ರಗಾಮಿತ್ವದ ಅವಳಿ ಭೂತ” ರಾಜ್ಯಕ್ಕೆ ಗಂಭೀರ ಸವಾಲನ್ನು ಒಡ್ಡುತ್ತದೆ ಎಂದು ಉಲ್ಲೇಖಿಸಿದ್ದಾರೆ.
ತಮ್ಮ ವರದಿಯಲ್ಲಿ, ಬಾಂಗ್ಲಾದೇಶದ ಗಡಿಯಲ್ಲಿರುವ ಜಿಲ್ಲೆಗಳಲ್ಲಿ ತನಿಖಾ ಆಯೋಗ ಮತ್ತು ಕೇಂದ್ರ ಪಡೆಗಳ ಹೊರಠಾಣೆಗಳನ್ನು ಸ್ಥಾಪಿಸುವುದು ಸೇರಿದಂತೆ ಹಲವಾರು ಕ್ರಮಗಳನ್ನು ಅವರು ಸೂಚಿಸಿದ್ದಾರೆ. ಜೊತೆಗೆ “ಹೆಚ್ಚುವರಿಯಾಗಿ ಹೇಳುವ ಅಗತ್ಯವಿಲ್ಲ, ಭಾರತೀಯ ಸಂವಿಧಾನದ 356ನೇ ವಿಧಿಯಡಿಯ ಷರತ್ತುಗಳು ಕೂಡ ಉಳಿದಿವೆ.” ಎಂದು ಅವರು ವರದಿಯಲ್ಲಿ ಬರೆದಿದ್ದಾರೆ. ಸಂವಿಧಾನದ 356 ನೇ ವಿಧಿಯ ಹೇರಿಕೆಯು ಒಂದು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಸೂಚಿಸುತ್ತದೆ.
ಒಬ್ಬ ವ್ಯಕ್ತಿ ಮತ್ತು ಅವರ ಮಗ ಸೇರಿದಂತೆ ಕನಿಷ್ಠ ಮೂರು ಜನರ ಜೀವಗಳನ್ನು ಬಲಿತೆಗೆದುಕೊಂಡ ಮತ್ತು ಹಲವಾರು ಜನರು ಗಾಯಗೊಂಡ ಹಿಂಸಾಚಾರದ ನಂತರ ರಾಜ್ಯಪಾಲರು ಹಲವಾರು ಕ್ರಮಗಳನ್ನು ಸೂಚಿಸಿದ್ದಾರೆ. ವಕ್ಫ್ (ತಿದ್ದುಪಡಿ) ಕಾಯ್ದೆ ವಿರೋಧಿ ಪ್ರತಿಭಟನೆಗಳ ನಡುವೆ ಈ ಗಲಭೆ ಸಂಭವಿಸಿತ್ತು. ವರದಿಯಲ್ಲಿ, ಗಲಭೆಗಳು “ಪೂರ್ವಯೋಜಿತ” ಎಂದು ತೋರುತ್ತಿದೆ ಮತ್ತು ರಾಜ್ಯ ಸರ್ಕಾರವು “ಮುರ್ಷಿದಾಬಾದ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂಬ ಬಗ್ಗೆ ತಿಳಿದಿತ್ತು” ಎಂದು ರಾಜ್ಯಪಾಲರು ಹೇಳಿದ್ದಾರೆ. ಮುರ್ಷಿದಾಬಾದ್ ಹಿಂಸಾಚಾರದ
ಇದನ್ನೂಓದಿ: ಕ್ರೈಸ್ತ ಧರ್ಮದಲ್ಲಿ ಜಾತಿ ಇಲ್ಲ, ಮತಾಂತರಗೊಂಡವರಿಗೆ ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ರಕ್ಷಣೆ ಇಲ್ಲ: ಆಂಧ್ರ ಹೈಕೋರ್ಟ್
ಕ್ರೈಸ್ತ ಧರ್ಮದಲ್ಲಿ ಜಾತಿ ಇಲ್ಲ, ಮತಾಂತರಗೊಂಡವರಿಗೆ ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ರಕ್ಷಣೆ ಇಲ್ಲ: ಆಂಧ್ರ ಹೈಕೋರ್ಟ್


