ದಲಿತ ಸಮುದಾಯದ ಸದಸ್ಯರು ಹೇರ್‌ಕಟ್ ಮಾಡುವಂತೆ ಕೇಳಿದ ಬಳಿಕ ತಮ್ಮ ಎಲ್ಲಾ ಅಂಗಡಿಗಳನ್ನು ಕ್ಷೌರಿಕರು ಬಂದ್ ಮಾಡಿದ್ದ ಪ್ರಕರಣ ಕೊಪ್ಪಳ ಜಿಲ್ಲಾ ಕೇಂದ್ರದಿಂದ ಸುಮಾರು 7 ಕಿ.ಮೀ ದೂರದಲ್ಲಿರುವ ಮುದ್ದಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಮುದ್ದಬಳ್ಳಿಯ ದಲಿತರು ಕ್ಷೌರ ಮಾಡಿಸಿಕೊಳ್ಳಲು ಪ್ರತಿ ಬಾರಿ ಕೊಪ್ಪಳ ನಗರಕ್ಕೆ ಪ್ರಯಾಣಿಸುವುದು ಅನಿವಾರ್ಯವಾಗಿತ್ತು.
ಪದೇಪದೆ ಅಸ್ಪೃಶ್ಯತೆ ಪ್ರಕರಣದಲ್ಲಿ ಸುದ್ದಿಯಲ್ಲಿರುವ ಕೊಪ್ಪಳ ಜಿಲ್ಲೆಯಲ್ಲಿ, ಇದೀಗ ಮತ್ತೊಂದು ದಲಿತರ ವಿರುದ್ಧದ ತಾರತಮ್ಯ ಪ್ರಕರಣ ಬೆಳಕಿಗೆ ಬಂದಿದೆ. ದಲಿತರಿಗೆ ಸೇವೆ ಸಲ್ಲಿಸಲು ನಿರಾಕರಿಸುವ ಕ್ಷೌರಿಕರ ಬಗ್ಗೆ ಎರಡು ತಿಂಗಳ ಹಿಂದೆ ಸಂಬಂಧಪಟ್ಟ ಇಲಾಖೆಗಳಿಗೆ ದೂರು ದಾಖಲಾಗಿತ್ತು. ಕೊಪ್ಪಳ ಜಿಲ್ಲಾ ಕೇಂದ್ರದಿಂದ ಸುಮಾರು 7 ಕಿ.ಮೀ ದೂರದಲ್ಲಿರುವ ಮುದ್ದಬಳ್ಳಿಯಲ್ಲಿರುವ ಘಟನೆ ನಡೆದಿದ್ದು, ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.
‘ಅಸ್ಪೃಶ್ಯತೆ’ ಆಚರಿಸುವ ಕ್ಷೌರಿಕರಿಗೆ ಶಿಕ್ಷೆ ವಿಧಿಸುವುದಾಗಿ ಪೊಲೀಸರು ಬೆದರಿಕೆ ಹಾಕಿದ ಬಳಿಕ ಮಣಿದ ಅಂಗಡಿ ಮಾಲೀಕರು ದಲಿತ ಗ್ರಾಹಕರಿಗೆ ಸೇವೆ ಸಲ್ಲಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಪ್ರಬಲ ಸಮುದಾಯಗಳ ಗ್ರಾಹಕರ ಮನೆಗಳಿಗೆ ಭೇಟಿ ನೀಡುವ ಕ್ಷೌರಿಕರು, ಉದ್ದೇಶಪೂರ್ವಕವಾಗಿ ದಲಿತರನ್ನು ದೂರವಿಡುತ್ತಿದ್ದಾರೆ ಎಂದು ಈಗ ವರದಿಯಾಗಿದೆ.
ಘಟನೆ ಬಗ್ಗೆ ಬಿಜೆಪಿಯ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ದಾಡೇಸಗುರು ಪ್ರತಿಕ್ರಿಯಿಸಿ, ದಲಿತರ ದುಃಸ್ಥಿತಿಯ ಬಗ್ಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವನ್ನು ಪ್ರಶ್ನಿಸಿದ್ದಾರೆ.
ಪುದುಕ್ಕೊಟ್ಟೈ ದಲಿತ ದೌರ್ಜನ್ಯ ಪ್ರಕರಣ| 14 ಜನರ ಬಂಧನ; 200 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ


