ನಗರದಲ್ಲಿ ಇರುವ ಹರೇ ಕೃಷ್ಣ ದೇವಸ್ಥಾನವು ಬೆಂಗಳೂರು ಇಸ್ಕಾನ್ ಸೊಸೈಟಿಗೆ ಸೇರಿದೆ ಎಂದು ಸುಪ್ರೀಂಕೋರ್ಟ್ ಶುಕ್ರವಾರ ತೀರ್ಪು ನೀಡಿದೆ. ನಗರದಲ್ಲಿರುವ ಹರೇ ಕೃಷ್ಣ ದೇವಸ್ಥಾನ ಮತ್ತು ಶೈಕ್ಷಣಿಕ ಸಂಕೀರ್ಣದ ನಿಯಂತ್ರಣದ ಕುರಿತು ಇಸ್ಕಾನ್ ಮುಂಬೈ ಪರವಾಗಿ ತೀರ್ಪು ನೀಡಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಇಸ್ಕಾನ್ ಬೆಂಗಳೂರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿತ್ತು. ಬೆಂಗಳೂರಿನ ಹರೇ ಕೃಷ್ಣ ದೇವಸ್ಥಾನ
ನ್ಯಾಯಮೂರ್ತಿಗಳಾದ ಎ.ಎಸ್. ಓಕಾ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠವು ಈ ತೀರ್ಪು ನೀಡಿದೆ. ಮೇ 23, 2011 ರ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಇಸ್ಕಾನ್ ಬೆಂಗಳೂರು ಜೂನ್ 2, 2011 ರಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಇಸ್ಕಾನ್ ಬೆಂಗಳೂರು ಪ್ರತಿನಿಧಿಸುವ ಪದಾಧಿಕಾರಿ ಕೋದಂಡರಾಮ ದಾಸ ಸಲ್ಲಿಸಿದ್ದ ಅರ್ಜಿಯಲ್ಲಿ, ಬೆಂಗಳೂರಿನ ಸ್ಥಳೀಯ ನ್ಯಾಯಾಲಯದ 2009 ರ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿದ್ದರು.
ವಿಚಾರಣಾ ನ್ಯಾಯಾಲಯವು ಈ ಹಿಂದೆ ಇಸ್ಕಾನ್ ಬೆಂಗಳೂರಿನ ಪರವಾಗಿ ತೀರ್ಪು ನೀಡಿತ್ತು. ಅದರ ಕಾನೂನುಬದ್ಧ ಮಾಲಿಕತ್ವವನ್ನು ಗುರುತಿಸಿ ಮತ್ತು ಇಸ್ಕಾನ್ ಮುಂಬೈ ವಿರುದ್ಧ ಶಾಶ್ವತ ತಡೆಯಾಜ್ಞೆಯನ್ನು ನೀಡಿತು. ಆದಾಗ್ಯೂ, ಹೈಕೋರ್ಟ್ ಈ ತೀರ್ಪನ್ನು ರದ್ದುಗೊಳಿಸಿ ಇಸ್ಕಾನ್ ಮುಂಬೈನ ಪ್ರತಿವಾದವನ್ನು ಎತ್ತಿಹಿಡಿದಿತ್ತು.
ಒಂದೇ ರೀತಿಯ ಹೆಸರುಗಳು ಮತ್ತು ಆಧ್ಯಾತ್ಮಿಕ ಕಾರ್ಯಗಳನ್ನು ಹೊಂದಿರುವ ಎರಡು ಸೊಸೈಟಿಗಳು ಪರಸ್ಪರ ವಿರುದ್ಧವಾಗಿ ಈ ಕಾನೂನು ಹೋರಾಟವನ್ನು ನಡೆಸುತ್ತಿತ್ತು.
ಕರ್ನಾಟಕ-ನೋಂದಾಯಿತ ಸೊಸೈಟಿಯಾದ ಇಸ್ಕಾನ್ ಬೆಂಗಳೂರು, ದಶಕಗಳಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಬೆಂಗಳೂರಿನ ಇಸ್ಕಾನ್ ದೇವಾಲಯವನ್ನು ನಿರ್ವಹಿಸುತ್ತಿದೆ ಎಂದು ಅದು ವಾದಿಸುತ್ತದೆ.
1860 ರ ರಾಷ್ಟ್ರೀಯ ಸಂಘಗಳ ನೋಂದಣಿ ಕಾಯ್ದೆ ಮತ್ತು 1950ರ ಬಾಂಬೆ ಸಾರ್ವಜನಿಕ ಟ್ರಸ್ಟ್ ಕಾಯ್ದೆ ಅಡಿಯಲ್ಲಿ ನೋಂದಾಯಿಸಲಾದ ಇಸ್ಕಾನ್ ಮುಂಬೈ, ಇಸ್ಕಾನ್ ಬೆಂಗಳೂರು ಕೇವಲ ತನ್ನ ಶಾಖೆಯಾಗಿದ್ದು, ಅದರ ಆಸ್ತಿಯು ತನ್ನ ವ್ಯಾಪ್ತಿಗೆ ಸೇರಿದೆ ಎಂದು ವಾದಿಸಿತ್ತು. ಬೆಂಗಳೂರಿನ ಹರೇ ಕೃಷ್ಣ ದೇವಸ್ಥಾನ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ತೆಲಂಗಾಣ| ಮಿಸ್ ವರ್ಲ್ಡ್ ಸ್ಪರ್ಧಿಗಳ ಪಾದ ತೊಳೆದ ಸ್ಥಳೀಯ ಮಹಿಳೆಯರು; ವಿಡಿಯೋ ವೈರಲ್
ತೆಲಂಗಾಣ| ಮಿಸ್ ವರ್ಲ್ಡ್ ಸ್ಪರ್ಧಿಗಳ ಪಾದ ತೊಳೆದ ಸ್ಥಳೀಯ ಮಹಿಳೆಯರು; ವಿಡಿಯೋ ವೈರಲ್

