ಒಳನಾಡು ಮತ್ತು ಜಲಸಾರಿಗೆ ಸಚಿವ ಸಚಿವ ಮಂಕಾಳ ವೈದ್ಯ ಅವರು 2007 ರಲ್ಲಿ ಜಿಲ್ಲಾ ಪಂಚಾಯತ್ (ಜಿಪಂ) ಚುನಾವಣೆಯಲ್ಲಿ ಸ್ಪರ್ಧಿಸಲು ನಕಲಿ ಎಸ್‌ಸಿ ಜಾತಿ ಪ್ರಮಾಣಪತ್ರವನ್ನು ಬಳಸಿದ್ದಾರೆ ಎಂದು ಭಟ್ಕಳ ಮೂಲದ ಕರ್ನಾಟಕ ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ರಕ್ಷಣಾ ವೇದಿಕೆ ಆರೋಪಿಸಿದೆ. ‘ನಕಲಿ’ ಎಸ್‌ಸಿ ಪ್ರಮಾಣಪತ್ರದ
ಈ ಆರೋಪದ ಬಗ್ಗೆ ತನಿಖೆ ಮಾಡಲು ಸಿಬಿಐಗೆ ಶಿಫಾರಸು ಮಾಡುವಂತೆ ವೇದಿಕೆಯು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಒತ್ತಾಯಿಸಿದೆ. ಈ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡುವಂತೆ ವೇದಿಕೆ ಮನವಿ ಮಾಡಿದೆ.
“ಮೊಗೇರ್ ಎಂಬ ಹೆಸರಿನ ಎರಡು ಸಮುದಾಯಗಳಿವೆ. ಮೊಲ ಬೇಟೆಯಲ್ಲಿ ತೊಡಗಿರುವ ಒಂದು ಸಮುದಾಯವನ್ನು ‘ಅಸ್ಪೃಶ್ಯ’ ಎಂದು ಪರಿಗಣಿಸಿದರೆ, ಇನ್ನೊಂದು ಒಬಿಸಿಗಳಲ್ಲಿ ವರ್ಗ 1 ರ ಅಡಿಯಲ್ಲಿ ಬರುವ ಮೀನುಗಾರಿಕೆ ಸಮುದಾಯವಾಗಿದೆ.” ಎಂದು ಸಂಘಟನೆ ಹೇಳಿದೆ.
ಸಚಿವ ಮಂಕಾಳ ವೈದ್ಯ ಅವರು ಒಬಿಸಿ ಮೊಗೇರ್ ಸಮುದಾಯಕ್ಕೆ ಸೇರಿದವರಾಗಿದ್ದು, ಆದರೆ ಅವರು ಎಸ್‌ಸಿ ಮೊಗೇರ್ ಎಂದು ಹೇಳಿಕೊಂಡು 2007 ರಲ್ಲಿ ಜಿಪಂ ಉಪಾಧ್ಯಕ್ಷ ಹುದ್ದೆಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಎಂದು ಎಂದು ಕರ್ನಾಟಕ ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ರಕ್ಷಣಾ ವೇದಿಕೆ ಭಟ್ಕಳ ತನ್ನ ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದಾರೆ. ‘ನಕಲಿ’ ಎಸ್‌ಸಿ ಪ್ರಮಾಣಪತ್ರದ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ನ್ಯಾ. ಬೇಲಾ ತ್ರಿವೇದಿ ನಿವೃತ್ತಿ: ಬೀಳ್ಕೊಡುಗೆ ಆಯೋಜಿಸದ ಸುಪ್ರೀಂ ಕೋರ್ಟ್ ವಕೀಲರ ಸಂಘದ ಬಗ್ಗೆ ಸಿಜೆಐ ಅಸಮಾಧಾನ
ನ್ಯಾ. ಬೇಲಾ ತ್ರಿವೇದಿ ನಿವೃತ್ತಿ: ಬೀಳ್ಕೊಡುಗೆ ಆಯೋಜಿಸದ ಸುಪ್ರೀಂ ಕೋರ್ಟ್ ವಕೀಲರ ಸಂಘದ ಬಗ್ಗೆ ಸಿಜೆಐ ಅಸಮಾಧಾನ

