ಮಾಜಿ ಕೇಂದ್ರ ಸಚಿವ ಆರ್‌ಸಿಪಿ ಸಿಂಗ್ ಅವರು ಭಾನುವಾರ ಪಾಟ್ನಾದಲ್ಲಿ ನಡೆದ ಸಮಾರಂಭದಲ್ಲಿ ತಾನು ಹೊಸದಾಗಿ ಸ್ಥಾಪಿಸಿದ ಪಕ್ಷವಾದ ಆಪ್ ಸಬ್ಕಿ ಆವಾಜ್ (ಎಎಸ್‌ಎ) ಅನ್ನು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಸ್ಥಾಪಿಸಿದ ಜನ ಸುರಾಜ್ ಪಕ್ಷದೊಂದಿಗೆ ವಿಲೀನಗೊಳಿಸುವುದಾಗಿ ಘೋಷಿಸಿದ್ದಾರೆ. ಬಿಹಾರ | ಪ್ರಶಾಂತ್ ಕಿಶೋರ್
ಈ ಬೆಳವಣಿಗೆ ಜನ ಸುರಾಜ್ ಪಕ್ಷಕ್ಕೆ ನೈತಿಕ ಉತ್ತೇಜನ ನೀಡಿದ್ದು, ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 243 ಸ್ಥಾನಗಳಿಗೂ ಸ್ಪರ್ಧಿಸುವುದಾಗಿ ಪಕ್ಷವು ಈಗಾಗಲೇ ಘೋಷಿಸಿದೆ.
ಮಾಜಿ ರಾಜ್ಯಸಭಾ ಸದಸ್ಯರಾಗಿರುವ ಆರ್‌ಸಿಪಿ ಸಿಂಗ್, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ತವರು ಜಿಲ್ಲೆ ನಳಂದದವರಾಗಿದ್ದು, ಅವರದೇ ಕುರ್ಮಿ ಜಾತಿಗೆ ಸೇರಿದವರಾಗಿದ್ದಾರೆ. ನಿತೀಶ್ ಅವರ ಜನಪ್ರಿಯತೆ ಕುಸಿಯುತ್ತಿರುವುದರಿಂದ ಸಿಂಗ್ ಅವರನ್ನು ಕುರ್ಮಿ ಸಮುದಾಯದ ಸಂಭಾವ್ಯ ಉದಯೋನ್ಮುಖ ನಾಯಕ ಎಂದು ನೋಡಲಾಗುತ್ತಿದೆ ಎಂದು ವರದಿಗಳು ಹೇಳಿವೆ.
ಜೆಡಿ(ಯು) ವರಿಷ್ಠ ನಿತೀಶ್ ಕುಮಾರ್ ಅವರೊಂದಿಗಿನ ಒಲವು ಕಳೆದುಕೊಂಡ ನಂತರ ತಮ್ಮ ಸಚಿವ ಸ್ಥಾನ ತ್ಯಜಿಸಬೇಕಾಗಿ ಬಂದಿದ್ದ ಆರ್‌ಸಿಪಿಎಸ್ ಸಿಂಗ್, ಅಕ್ಟೋಬರ್ 31, 2024 ರಂದು ಆಪ್ ಸಬ್ಕಿ ಆವಾಜ್ ಅನ್ನು ರಚಿಸಿದ್ದರು. ಮೇ 2023 ರಲ್ಲಿ ನಿತೀಶ್ ಅವರು ಪಕ್ಷ ಬದಲಿಸಿ ಮಹಾಘಟಬಂಧನ್ ಅಥವಾ ಮಹಾಮೈತ್ರಿಕೂಟ ಸೇರಿದ ನಂತರ ಅವರು ಜೆಡಿ(ಯು)ಗೆ ರಾಜೀನಾಮೆ ನೀಡಿದ್ದರು.
ಪ್ರಶಾಂತ್ ಕಿಶೋರ್ ಅವರು ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ‘ವಾಸ್ತವಿಕ ಪರಿಶೀಲನೆ’ಯನ್ನು ಘೋಷಿಸಿದ್ದಾರೆ. “ನಿತೀಶ್ ಅವರ ಸ್ವಂತ ಜಿಲ್ಲೆಯಲ್ಲಿ ಅಭಿವೃದ್ಧಿಯ ನಿಜವಾದ ಸ್ಥಿತಿಯನ್ನು ನಾನು ಬಹಿರಂಗಪಡಿಸುತ್ತೇನೆ” ಎಂದು ಅವರು ಹೇಳಿದ್ದಾರೆ. ಬಿಹಾರ | ಪ್ರಶಾಂತ್ ಕಿಶೋರ್
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಪಹಲ್ಗಾಮ್ ದಾಳಿ ಮತ್ತು ಭಾರತ-ಪಾಕ್ ಯುದ್ಧದ ಕುರಿತು 10 ಪ್ರಶ್ನೆಗಳ ಪಟ್ಟಿ ಮಾಡಿದ ‘ಕೌಂಟರ್ ಕರೆಂಟ್ಸ್’ ನ ಬಿನುದಾ
ಪಹಲ್ಗಾಮ್ ದಾಳಿ ಮತ್ತು ಭಾರತ-ಪಾಕ್ ಯುದ್ಧದ ಕುರಿತು 10 ಪ್ರಶ್ನೆಗಳ ಪಟ್ಟಿ ಮಾಡಿದ ‘ಕೌಂಟರ್ ಕರೆಂಟ್ಸ್’ ನ ಬಿನುದಾ

