ಆಪರೇಷನ್ ಸಿಂಧೂರ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧದ ಭಾರತದ ನಿಲುವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರು ಮತ್ತು ವಿವಿಧ ರಾಷ್ಟ್ರಗಳಿಗೆ ತಿಳಿಸಲು ನಿಯೋಗವೊಂದನ್ನು ಭಾರತ ಸರ್ಕಾರ ರಚಿಸಿದ ಬೆನ್ನಲ್ಲೆ ಪಾಕಿಸ್ತಾನ ಕೂಡಾ ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ರಾಜತಾಂತ್ರಿಕ ತಂಡವನ್ನು ಕಳುಹಿಸುವುದಾಗಿ ಘೋಷಿಸಿದೆ. ಭಾರತಕ್ಕೆ ಸೆಡ್ಡು ಹೊಡೆಯಲು
ಭಾರತದ ಪ್ರಮುಖ ಪಕ್ಷಗಳ 7 ಸಂಸದರ ನಿಯೋಗ ಈ ತಿಂಗಳ ಕೊನೆಯಲ್ಲಿ ವಿಶ್ವದ ಪ್ರಮುಖ ದೇಶಗಳಿಗೆ ಪ್ರವಾಸ ಕೈಗೊಳ್ಳಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವಾಲಯ ಮೇ 17ರಂದು ಪ್ರಕಟಣೆಯಲ್ಲಿ ತಿಳಿಸಿತ್ತು. ಇದರ ಬೆನ್ನಲ್ಲೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ದೇಶದ ನಿಲುವನ್ನು ಮಂಡಿಸಲು ಪ್ರಮುಖ ರಾಷ್ಟ್ರಗಳಿಗೆ ರಾಜತಾಂತ್ರಿಕ ತಂಡವನ್ನು ಕಳುಹಿಸುವುದಾಗಿ ಘೋಷಿಸಿದ್ದಾರೆ.
ಮಾಜಿ ವಿದೇಶಾಂಗ ಸಚಿವ ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮುಖ್ಯಸ್ಥ ಬಿಲಾವಲ್ ಭುಟ್ಟೋ ಜರ್ದಾರಿ ಅವರೊಂದಿಗೆ ದೂರವಾಣಿ ಸಂಭಾಷಣೆಯ ನಂತರ ಶನಿವಾರ ಪ್ರಧಾನಿ ಶೆಹಬಾಜ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
“ಭಾರತದ ಪ್ರೊಪಗಾಂಡವನ್ನು ಬಹಿರಂಗಪಡಿಸಲು ವಿಶ್ವದ ಪ್ರಮುಖ ರಾಜಧಾನಿಗಳಿಗೆ ಉನ್ನತ ಮಟ್ಟದ ರಾಜತಾಂತ್ರಿಕ ನಿಯೋಗವನ್ನು ಕಳುಹಿಸಲು ಪ್ರಧಾನಿ ಶೆಹಬಾಜ್ ನಿರ್ಧರಿಸಿದ್ದಾರೆ” ಎಂದು ಸರ್ಕಾರಿ ರೇಡಿಯೋ ಪಾಕಿಸ್ತಾನ ವರದಿ ಮಾಡಿದೆ. ಅವರು ನಿಯೋಗದ ನಾಯಕತ್ವವನ್ನು ಬಿಲಾವಲ್ ಅವರಿಗೆ ವಹಿಸಿದ್ದಾರೆ.
“ಇಂದು ಮುಂಜಾನೆ ಪ್ರಧಾನಿ [ಶೆಹಬಾಜ್ ಷರೀಫ್] ನನ್ನನ್ನು ಸಂಪರ್ಕಿಸಿದರು. ಅವರು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಶಾಂತಿಗಾಗಿ ಪಾಕಿಸ್ತಾನದ ವಾದವನ್ನು ಮಂಡಿಸಲು ನಿಯೋಗದ ನೇತೃತ್ವ ವಹಿಸುವಂತೆ ವಿನಂತಿಸಿದರು. ಈ ಜವಾಬ್ದಾರಿಯನ್ನು ಸ್ವೀಕರಿಸಲು ಮತ್ತು ಈ ಸವಾಲಿನ ಸಮಯದಲ್ಲಿ ಪಾಕಿಸ್ತಾನಕ್ಕೆ ಸೇವೆ ಸಲ್ಲಿಸಲು ಬದ್ಧರಾಗಿರಲು ನನಗೆ ಹೆಮ್ಮೆಯಿದೆ” ಎಂದು ಬಿಲಾವಲ್ ಶನಿವಾರ ಎಕ್ಸ್‌ನಲ್ಲಿ ಬರೆದಿದ್ದಾರೆ.
ಬಿಲಾವಲ್ ಜೊತೆಗೆ, ನಿಯೋಗದಲ್ಲಿ ಇಂಧನ ಸಚಿವ ಮುಸಾದಿಕ್ ಮಲಿಕ್, ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ ನಾಯಕ ಖುರ್ರಾಮ್ ದಸ್ತಗೀರ್ ಖಾನ್, ಸೆನೆಟರ್ ಶೆರ್ರಿ ರೆಹಮಾನ್, ಮಾಜಿ ವಿದೇಶಾಂಗ ಸಚಿವೆ ಹಿನಾ ರಬ್ಬಾನಿ ಖಾರ್, ಮುತ್ತಹಿದಾ ಕ್ವಾಮಿ ಚಳವಳಿಯ ಶಾಸಕ ಫೈಸಲ್ ಸಬ್ಜ್ವಾರಿ, ಮಾಜಿ ವಿದೇಶಾಂಗ ಕಾರ್ಯದರ್ಶಿ ತೆಹ್ಮಿನಾ ಜಂಜುವಾ ಮತ್ತು ಜಲೀಲ್ ಅಬ್ಬಾಸ್ ಜಿಲಾನಿ ಸೇರಿದ್ದಾರೆ.
ನಿಯೋಗವು “ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಗಾಗಿ ಪಾಕಿಸ್ತಾನದ ಪ್ರಾಮಾಣಿಕ ಪ್ರಯತ್ನಗಳನ್ನು ಒತ್ತಿಹೇಳುತ್ತದೆ” ಎಂದು ಪ್ರಧಾನಿ ಕಚೇರಿ ತಿಳಿಸಿದೆ. ಇತ್ತೀಚಿನ ಸಂಘರ್ಷದ ಕುರಿತು ಪಾಕಿಸ್ತಾನದ ನಿಲುವನ್ನು ಎತ್ತಿ ತೋರಿಸಲು ನಿಯೋಗವು ಶೀಘ್ರದಲ್ಲೇ ಅಮೆರಿಕ, ಯುಕೆ, ಬೆಲ್ಜಿಯಮ್, ಫ್ರಾನ್ಸ್ ಮತ್ತು ರಷ್ಯಾಕ್ಕೆ ಭೇಟಿ ನೀಡಲಿದೆ ಎಂದು ಉಪ ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ಹೇಳಿದ್ದಾರೆ.
ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದಕ್ಕೆ ಪ್ರತಿಯಾಗಿ ಭಾರತವು ಮೇ 7 ರಂದು ಮುಂಜಾನೆ ‘ಆಪರೇಷನ್ ಸಿಂಧೂರ’ ಅಡಿಯಲ್ಲಿ ಭಯೋತ್ಪಾದಕ ಕೇಂದ್ರಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸಿತ್ತು. ಭಾರತದ ಈ ದಾಳಿಯ ನಂತರ, ಪಾಕಿಸ್ತಾನವು ಮೇ 8, 9 ಮತ್ತು 10 ರಂದು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತ್ತು.
ನಾಲ್ಕು ದಿನಗಳ ತೀವ್ರ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ನಂತರ ಸಂಘರ್ಷವನ್ನು ಕೊನೆಗೊಳಿಸಲು ಭಾರತ ಮತ್ತು ಪಾಕಿಸ್ತಾನ ಮೇ 10 ರಂದು ಒಪ್ಪಂದಕ್ಕೆ ಬಂದವು. ಭಾರತಕ್ಕೆ ಸೆಡ್ಡು ಹೊಡೆಯಲು
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ತುಮಕೂರು ಮೆಟ್ರೋ ಕಾರ್ಯಸಾಧ್ಯತಾ ಅಧ್ಯಯನ ವರದಿ ಸಲ್ಲಿಸಿದ ಬಿಎಂಆರ್‌ಸಿಎಲ್
ತುಮಕೂರು ಮೆಟ್ರೋ ಕಾರ್ಯಸಾಧ್ಯತಾ ಅಧ್ಯಯನ ವರದಿ ಸಲ್ಲಿಸಿದ ಬಿಎಂಆರ್‌ಸಿಎಲ್

