ವೇಗವಾಗಿ ಸೇವೆ ಪಡೆಯಲು ಮುಂಚಿತವಾಗಿ ಟಿಪ್ ಪಾವತಿಸುವಂತೆ ಬಳಕೆದಾರರ ಮೇಲೆ ಒತ್ತಡ ಹೇರಿದ ಆರೋಪದ ಮೇಲೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಉಬರ್‌ಗೆ ನೋಟಿಸ್ ನೀಡಿದೆ. ಇತ್ತೀಚಿನ ತಿಂಗಳುಗಳಲ್ಲಿ, ಅಪ್ಲಿಕೇಶನ್ ಆಧಾರಿತ ಟ್ಯಾಕ್ಸಿ ವೇದಿಕೆಯಾದ ತ್ವರಿತ ಸೇವೆಗಾಗಿ ಮುಂಚಿತವಾಗಿ ಟಿಪ್ ಪಾವತಿಸಲು ಬಳಕೆದಾರರನ್ನು ಪ್ರೋತ್ಸಾಹಿಸುತ್ತಿದೆ. ವೇಗದ ಸೇವೆ ಬೇಕಿದ್ದರೆ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಇಂತಹ ಪದ್ಧತಿಗಳು “ಅನ್ಯಾಯ ವ್ಯವಹಾರ”ಕ್ಕೆ ಸಮನಾಗಿರುತ್ತದೆ ಮತ್ತು ಅದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಪ್ರಹ್ಲಾದ್ ಜೋಶಿ, ‘ಮುಂಗಡ ಟಿಪ್ಪಿಂಗ್’ ಅಭ್ಯಾಸ ತೀವ್ರ ಕಳವಳಕಾರಿ ವಿಚಾರವಾಗಿದೆ. ಟಿಪ್ಪಿಂಗ್ ಐಚ್ಛಿಕವಾಗಿರಬೇಕಿದ್ದು ಮತ್ತು ಗ್ರಾಹಕರು ತಮ್ಮ ಸೇವಾ ಅನುಭವದ ಆಧಾರದ ಮೇಲೆ ನಿರ್ಧರಿಸಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.
“ವೇಗದ ಸೇವೆಗಾಗಿ ಮುಂಚಿತವಾಗಿ ಟಿಪ್ ಪಾವತಿಸಲು ಬಳಕೆದಾರರನ್ನು ಒತ್ತಾಯಿಸುವುದು ಅಥವಾ ಅದನ್ನು ಮುಂದಕ್ಕೆ ತಳ್ಳುವುದು ಅನೈತಿಕ ಮತ್ತು ಶೋಷಣೆಯಾಗಿದೆ. ಅಂತಹ ಕ್ರಮಗಳು ಅನ್ಯಾಯದ ವ್ಯವಹಾರದ ಪದ್ಧತಿಗಳ ಅಡಿಯಲ್ಲಿ ಬರುತ್ತವೆ. ಟಿಪ್ ಕೃತಜ್ಞತೆಯ ಸಂಕೇತವಾಗಿದ್ದು, ಬಾಧ್ಯತೆಯಲ್ಲ, ಮತ್ತು ಸೇವೆಯನ್ನು ಒದಗಿಸಿದ ನಂತರ ಅದನ್ನು ನೀಡಬೇಕು” ಎಂದು ಅವರು ಬರೆದಿದ್ದಾರೆ.
ಈ ಬಗ್ಗೆ ತನಿಖೆ ಮಾಡಲು CCPA ಗೆ ನಿರ್ದೇಶನ ನೀಡಿದ್ದೇನೆ ಎಂದು ಜೋಶಿ ಹೇಳಿದ್ದಾರೆ. “ಇಂದು, CCPA ಈ ವಿಷಯದ ಬಗ್ಗೆ ಉಬರ್‌ಗೆ ನೋಟಿಸ್ ನೀಡಿ, ವೇದಿಕೆಯಿಂದ ವಿವರಣೆಯನ್ನು ಕೋರಿದೆ. ಎಲ್ಲಾ ಗ್ರಾಹಕರ ಸಂವಹನಗಳಲ್ಲಿ ನ್ಯಾಯಸಮ್ಮತತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಎತ್ತಿಹಿಡಿಯಬೇಕು” ಎಂದು ಅವರು ಹೇಳಿದ್ದಾರೆ.
ಮತ್ತೊಂದೆಡೆ ರ್‍ಯಾಪಿಡೊ ಕೂಡಾ ವೇಗದ ಸೇವೆಗಾಗಿ ಬಳಕೆದಾರರಿಗೆ ಮುಂಚಿತವಾಗಿ ಟಿಪ್ ನೀಡಬೇಕೆಂದು ಒತ್ತಾಯಿಸುತ್ತಿದೆ ಎಂದು ವರದಿಯಾಗಿದೆ. ಆದಾಗ್ಯೂ ಸರ್ಕಾರ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಗ್ರಾಹಕರ ಕಳವಳವನ್ನು ಎತ್ತಿ ತೋರಿಸುವ ಡಿಜಿಟಲ್ ಸಮುದಾಯ ವೇದಿಕೆಯಾದ ಲೋಕಲ್‌ಸರ್ಕಲ್ಸ್‌ನ ಸಂಸ್ಥಾಪಕ ಸಚಿನ್ ತಪರಿಯಾ, ಅಂತಹ ಅಭ್ಯಾಸಗಳು “ಡಾರ್ಕ್ ಪ್ಯಾಟರ್ನ್ಸ್” ಎಂದು ಕರೆಯಲ್ಪಡುವ ವಿದ್ಯಮಾನದ ಭಾಗವಾಗಿದೆ ಎಂದು ಹೇಳಿದ್ದಾರೆ. “ಲೋಕಲ್‌ಸರ್ಕಲ್ಸ್ ನಡೆಸಿದ ಆನ್‌ಲೈನ್ ಸಮೀಕ್ಷೆಯಲ್ಲಿ ವರದಿಯಾಗಿರುವಂತೆ ಗ್ರಾಹಕರು ವಿವಿಧ ಡಾರ್ಕ್ ಪ್ಯಾಟರ್ನ್‌ಗಳ ಬಗ್ಗೆ ಜಾಗೃತರಾಗುತ್ತಿದ್ದಾರೆ” ಎಂದು ತಪರಿಯಾ ಹೇಳಿದ್ದಾರೆ.
ಡಾರ್ಕ್ ಪ್ಯಾಟರ್ನ್ ಒಂದು ಮೋಸಗೊಳಿಸುವ ಬಳಕೆದಾರ ಇಂಟರ್ಫೇಸ್ ವಿನ್ಯಾಸವನ್ನು ಸೂಚಿಸುತ್ತದೆ. ಅದು ಬಳಕೆದಾರರು ತಾವು ಆಯ್ಕೆ ಮಾಡದೇ ಇರುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಾಡುತ್ತದೆ ಮತ್ತು ಗ್ರಾಹಕರ ಸ್ವಾಯತ್ತತೆ ಮತ್ತು ಆಯ್ಕೆಯನ್ನು ದುರ್ಬಲಗೊಳಿಸುತ್ತದೆ. ಉದಾಹರಣೆಗೆ ವಹಿವಾಟುಗಳನ್ನು ರದ್ದುಗೊಳಿಸುವುದು ಕಷ್ಟಕರವಾಗಿಸುವುದು, ಅತಿಯಾದ ಸ್ಕ್ರೋಲಿಂಗ್, ಸ್ವಯಂ-ಪ್ಲೇಯಿಂಗ್ ವೀಡಿಯೊಗಳು ಮತ್ತು ಆಗಾಗ್ಗೆ ಬರುವ ನೋಟಿಫಿಕೇಷನ್‌ಗಳು ಇದರಲ್ಲಿ ಸೇರಿವೆ. ವೇಗದ ಸೇವೆ ಬೇಕಿದ್ದರೆ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಹಿಂದೂ ಧಾರ್ಮಿಕ ದತ್ತಿ ಮಂಡಳಿಗಳ ಜೊತೆ ವಕ್ಫ್ ಬೋರ್ಡ್ ಹೋಲಿಕೆ ಸಲ್ಲದು: ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರದ ವಾದ
ಹಿಂದೂ ಧಾರ್ಮಿಕ ದತ್ತಿ ಮಂಡಳಿಗಳ ಜೊತೆ ವಕ್ಫ್ ಬೋರ್ಡ್ ಹೋಲಿಕೆ ಸಲ್ಲದು: ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರದ ವಾದ

