Homeಮುಖಪುಟಡಾರ್ಕ್ ಪ್ಯಾಟರ್ನ್ಸ್ | ಆಧುನಿಕ ಕಾಲದ ಆಧುನಿಕ ಶೋಷಣೆ!

ಡಾರ್ಕ್ ಪ್ಯಾಟರ್ನ್ಸ್ | ಆಧುನಿಕ ಕಾಲದ ಆಧುನಿಕ ಶೋಷಣೆ!

ಉಬರ್, ರ್‍ಯಾಪಿಡೊದಲ್ಲಿ ವೇಗವಾಗಿ ಸೇವೆ ಬೇಕಿದ್ದರೆ ಮುಂಗಡವಾಗಿ ಟಿಪ್‌ ಹಾಕಿ ಎಂಬ ಒತ್ತಾಯಕ್ಕೆ ಒಳಗಾಗಿದ್ದೀರಾ? ಇದನ್ನು ಓದಿ...

- Advertisement -
- Advertisement -

ಸಾಮಾಜಿಕ ಮಾಧ್ಯಮ ಬಳಸುವಾಗ ಅಥವಾ ಆನ್‌ಲೈನ್ ಶಾಪಿಂಗ್‌ ಮಾಡುವಾಗ ಸ್ವಯಂ-ಪ್ಲೇ ಆಗುವ ವೀಡಿಯೊಗಳು ಬಂದರೆ, ಆಗಾಗ್ಗೆ ನೋಟಿಫಿಕೇಷನ್‌ ಬಂದರೆ, ವಹಿವಾಟುಗಳನ್ನು ರದ್ದುಗೊಳಿಸುವುದು ಕಷ್ಟಕರವಾದರೆ, ಅಗತ್ಯಕ್ಕಿಂತ ಹೆಚ್ಚಾಗಿ ಸ್ಕ್ರೋಲಿಂಗ್ ಮಾಡುವಂತೆ ಆಗುವ ತೊಂದರೆಗಳು ನಿಮಗೆ ಆಗಿದ್ದರೆ ಅಷ್ಟೆ ಅಲ್ಲದೆ, ಉಬರ್, ರ್‍ಯಾಪಿಡೊದಲ್ಲಿ ವೇಗದ ಸೇವೆ ಬೇಕಿದ್ದರೆ ಮುಂಗಡವಾಗಿ ಟಿಪ್‌ ಹಾಕುವಂತಹ ಒತ್ತಾಯಕ್ಕೆ ಒಳಗಾಗಿದ್ದರೆ ನೀವು “ಡಾರ್ಕ್ ಪ್ಯಾಟರ್ನ್ಸ್ (Dark Patterns)”ಗೆ ಒಳಗಾಗಿದ್ದೀರಿ ಎಂದರ್ಥ.

ಡಾರ್ಕ್ ಪ್ಯಾಟರ್ನ್ಸ್ ಎಂಬುದು ಡಿಜಿಟಲ್ ಇಂಟರ್‌ಫೇಸ್‌ಗಳಲ್ಲಿ (ವೆಬ್‌ಸೈಟ್‌ಗಳು, ಆಪ್‌ಗಳು) ಬಳಕೆದಾರರನ್ನು ಉದ್ದೇಶಪೂರ್ವಕವಾಗಿ ಗೊಂದಲಗೊಳಿಸುವ, ಮೋಸಗೊಳಿಸುವ ಅಥವಾ ಅವರ ಒಪ್ಪಿಗೆ ಇಲ್ಲದೆ ಆಯ್ಕೆಗಳನ್ನು ಒತ್ತಾಯಿಸುವ ವಿನ್ಯಾಸ ತಂತ್ರಗಳಾಗಿವೆ. ಇವು ಬಳಕೆದಾರರಿಗೆ ತಮ್ಮ ಆಯ್ಕೆಗಳ ಬಗ್ಗೆ ಪೂರ್ಣ ಅರಿವಿಲ್ಲದಂತೆ ಮಾಡಿ, ಕಂಪನಿಗಳ ಲಾಭಕ್ಕಾಗಿ ಅವರನ್ನು ತಿರುಗಾಡಿಸುವ ತಂತ್ರಗಳಾಗಿವೆ.

ಇಂತಹ ಡಾರ್ಕ್ ಪ್ಯಾಟರ್ನ್ಸ್‌ಗಳು ಆಧುನಿಕ ಕಾಲದ ಆಧುನಿಕ ಶೋಷಣೆಯಾಗಿದೆ. ಈ ಡಾರ್ಕ್ ಪ್ಯಾಟರ್ನ್‌ಗಳು ಬಳಕೆದಾರರನ್ನು ತಪ್ಪು ಆಯ್ಕೆಗಳಿಗೆ ಒಡ್ಡುವ ಅಥವಾ ಗೌಪ್ಯತೆಯನ್ನು ಉಲ್ಲಂಘಿಸುವ ಉದ್ದೇಶವನ್ನು ಹೊಂದಿರುತ್ತವೆ. ಉದಾಹರಣೆಗೆ ಹೇಳಬೇಕೆಂದರೆ ಬಳಕೆದಾರರಿಗೆ ತಿಳಿಯದಂತೆ ಸಬ್‌ಸ್ಕ್ರಿಪ್ಶನ್‌ಗೆ ಸೇರಿಕೊಳ್ಳುವಂತೆ ಮಾಡುವುದು ಅಥವಾ ಅವರ ಮಾಹಿತಿಯನ್ನು ಅವರಿಗೆ ತಿಳಿಯದಂತೆ ಸಂಗ್ರಹಕ್ಕೆ ಒಪ್ಪಿಗೆ ನೀಡುವಂತೆ ಒತ್ತಾಯಿಸುವುದು ಇದರಲ್ಲಿ ಸೇರಿವೆ.

ಡಾರ್ಕ್ ಪ್ಯಾಟರ್ನ್ಸ್‌ ವಿಧಗಳು

ಡಾರ್ಕ್ ಪ್ಯಾಟರ್ನ್ಸ್ ವಿವಿಧ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ ಕೆಲವು ಪಟ್ಟಿಗಳು ಕೆಳಗಿನಂತಿವೆ.

ಬೈಟ್ ಆಂಡ್ ಸ್ವಿಚ್ (Bait and Switch):
ಬಳಕೆದಾರರು ಒಂದನ್ನು ಆಯ್ಕೆ ಮಾಡಿದರೆ, ಉದ್ದೇಶಪೂರ್ವಕವಾಗಿ ಬೇರೊಂದು ಫಲಿತಾಂಶವನ್ನು ನೀಡುವುದಾಗಿದೆ ಬೈಟ್ ಆಂಡ್ ಸ್ವಿಚ್. ಉದಾಹರಣೆ: “ರದ್ದು” ಬಟನ್ ಒತ್ತಿದರೆ ಸಬ್‌ಸ್ಕ್ರಿಪ್ಶನ್‌ಗೆ ಸೈನ್-ಅಪ್ ಆಗುವಂತೆ ವಿನ್ಯಾಸ.

ಸ್ನೀಕ್ ಇಂಟು ಬಾಸ್ಕೆಟ್ (Sneak into Basket):
ಶಾಪಿಂಗ್ ಕಾರ್ಟ್‌ಗೆ ಬಳಕೆದಾರರಿಗೆ ತಿಳಿಯದಂತೆ ಹೆಚ್ಚುವರಿ ಉತ್ಪನ್ನಗಳನ್ನು ಸೇರಿಸುವುದು. ಉದಾಹರಣೆ: ಚೆಕ್‌ಔಟ್ ಸಮಯದಲ್ಲಿ ವಿಮೆ ಅಥವಾ ದಾನವನ್ನು ಡೀಫಾಲ್ಟ್ ಆಗಿ ಸೇರಿಸುವುದು.

ಗೌಪ್ಯತೆ ಜಂಗಲ್ (Privacy Zuckering):
ಗೌಪ್ಯತೆ ಸೆಟ್ಟಿಂಗ್‌ಗಳನ್ನು ಗೊಂದಲಗೊಳಿಸುವಂತೆ ವಿನ್ಯಾಸಗೊಳಿಸಿ, ಬಳಕೆದಾರರು ತಮ್ಮ ಡೇಟಾವನ್ನು ಒಪ್ಪಿಗೆ ಇಲ್ಲದೆ ಹಂಚಿಕೊಳ್ಳುವಂತೆ ಮಾಡುವುದು. ಉದಾಹರಣೆ: “ಎಲ್ಲವನ್ನೂ ಒಪ್ಪಿಕೊಳ್ಳಿ” ಆಯ್ಕೆಯನ್ನು ಕ್ಲಿಕ್ ಮಾಡಲು ಒತ್ತಾಯಿಸುವುದು.

ಫೋರ್ಸ್ಡ್ ಕಂಟಿನ್ಯೂಯಿಟಿ (Forced Continuity):
ಉಚಿತ ಟ್ರಯಲ್‌ನಿಂದ ಸಬ್‌ಸ್ಕ್ರಿಪ್ಶನ್ ರದ್ದುಗೊಳಿಸಲು ಕಷ್ಟವಾಗುವಂತೆ ಮಾಡುವುದು. ಉದಾಹರಣೆ: ಸೇವೆಯನ್ನು ರದ್ದು ಮಾಡಲು ಕಷ್ಟಕರವಾದ ಪ್ರಕ್ರಿಯೆ ಇಡುವುದು ಅಥವಾ ಗುಪ್ತ ಆಯ್ಕೆಗಳನ್ನು ಮಾಡುವುದು.

ರೋಚ್ ಮೋಟೆಲ್ (Roach Motel):
ಸೈನ್-ಅಪ್ ಮಾಡುವುದು ಸುಲಭವಾದರೂ, ಖಾತೆ ರದ್ದುಗೊಳಿಸಲು ತುಂಬಾ ಕಷ್ಟವಾಗಿರುವುದು. ಉದಾಹರಣೆ: ಒಂದೇ ಕ್ಲಿಕ್‌ನಲ್ಲಿ ಸೈನ್-ಅಪ್, ಆದರೆ ರದ್ದತಿಗೆ ಕಾಲ್ ಸೆಂಟರ್‌ಗೆ ಕರೆ ಮಾಡುವಂತೆ ಮಾಡುವುದು.

ಟ್ರಿಕ್ ಕ್ವೆಸ್ಚನ್ಸ್ (Trick Questions):
ಗೊಂದಲಗೊಳಿಸುವ ಪ್ರಶ್ನೆಗಳು ಅಥವಾ ಡಬಲ್-ನೆಗೆಟಿವ್ ಆಯ್ಕೆಗಳನ್ನು ಬಳಸಿ ಬಳಕೆದಾರರನ್ನು ತಪ್ಪು ಆಯ್ಕೆಗೆ ಒಡ್ಡುವುದು. ಉದಾಹರಣೆ: “ನೀವು ಇಮೇಲ್ ಸುದ್ದಿಪತ್ರವನ್ನು ಸ್ವೀಕರಿಸಲು ಒಪ್ಪದಿರಲು ಒಪ್ಪದಿರುವಿರಾ?” ಎಂಬಂತಹ ಪ್ರಶ್ನೆ ಹಾಕುವುದು.

ಡಿಸ್ಗೈಸ್ಡ್ ಆಡ್ಸ್ (Disguised Ads):
ಜಾಹೀರಾತುಗಳನ್ನು ನಿಯಮಿತ ಕಂಟೆಂಟ್‌ನಂತೆ ತೋರಿಸುವುದು. ಉದಾಹರಣೆ: ಡೌನ್‌ಲೋಡ್ ಬಟನ್‌ನಂತೆ ತೋರುವ ಜಾಹೀರಾತು.

ಕೌಂಟ್‌ಡೌನ್ ಟೈಮರ್‌ಗಳು (False Urgency):
ಕೃತಕ ಕೊರತೆಯ ಭಾವನೆಯನ್ನು ಸೃಷ್ಟಿಸಿ ತಕ್ಷಣದ ಖರೀದಿಗೆ ಒತ್ತಾಯಿಸುವುದು. ಉದಾಹರಣೆ: “ಈ ಆಫರ್ 10 ನಿಮಿಷಗಳಲ್ಲಿ ಕೊನೆಗೊಳ್ಳುತ್ತದೆ!” (ನಿಜವಾಗಿ ಆಫರ್ ಯಾವಾಗಲೂ ಇರುತ್ತದೆ).

ಅಷ್ಟೆ ಅಲ್ಲದೆ, ಉಬರ್, ರ್‍ಯಾಪಿಡೊದಲ್ಲಿ ವೇಗದ ಸೇವೆ ಬೇಕಿದ್ದರೆ ಮುಂಗಡವಾಗಿ ಟಿಪ್‌ ಹಾಕುವಂತೆ ಒತ್ತಾಯ ಮಾಡುವುದು ಕೂಡಾ ಡಾರ್ಕ್ ಪ್ಯಾಟರ್ನ್ಸ್‌ನ ಒಂದು ವಿಧವಾಗಿದೆ ಎನ್ನುತ್ತಾರೆ ಲೋಕಲ್‌ಸರ್ಕಲ್ಸ್‌ನ ಸಂಸ್ಥಾಪಕ ಸಚಿನ್ ತಪರಿಯಾ ಅವರು.

ಪರಿಹಾರ ಏನು?

ಡಿಜಿಟಲ್ ಸಾಕ್ಷರತೆಯ ಕಾರ್ಯಕ್ರಮಗಳ ಮೂಲಕ ಜನರಿಗೆ ತಿಳಿವಳಿಕೆ ನೀಡುವುದೆ ಇದಕ್ಕೆ ಇರುವ ಪರಿಣಾಮಕಾರಿ ಪರಿಹಾರವಾಗಿದೆ. ಅದರಲ್ಲೂ ಸರ್ಕಾರಗಳು ಡಾರ್ಕ್ ಪ್ಯಾಟರ್ನ್ಸ್‌ಗಳನ್ನು ಗುರುತಿಸಿ, ಅವುಗಳನ್ನು ನಿಷೇಧಿಸುವ ಕಾನೂನುಗಳನ್ನು ಜಾರಿಗೊಳಿಸಬೇಕಿದೆ. ವಾಸ್ತವದಲ್ಲಿ ಭಾರತದಲ್ಲಿ 2023ರಲ್ಲೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಡಾರ್ಕ್ ಪ್ಯಾಟರ್ನ್ಸ್ ವಿರುದ್ಧ ಮಾರ್ಗಸೂಚಿಗಳನ್ನು ಜಾರಿಗೊಳಿಸಿತ್ತು. ಈ ವೇಳೆ ಅದು 13 ರೀತಿಯ ಡಾರ್ಕ್ ಪ್ಯಾಟರ್ನ್ಸ್‌ಗಳನ್ನು ಗುರುತಿಸಿ, ಅವುಗಳನ್ನು ನಿಷೇಧಿಸಿತ್ತು. ತಜ್ಞರು ಇದನ್ನು ಗ್ರಾಹಕರ ರಕ್ಷಣೆಗೆ ಒಂದು ಮಹತ್ವದ ಹೆಜ್ಜೆ ಎಂದು ಪರಿಗಣಿಸಿದ್ದಾರೆ.

ಡಾರ್ಕ್ ಪ್ಯಾಟರ್ನ್ಸ್ ಬಳಸುವ ಕಂಪನಿಗಳಿಗೆ ದಂಡ ವಿಧಿಸುವುದು. ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಕಟ್ಟುನಿಟ್ಟಾದ ಗೌಪ್ಯತೆ ಕಾನೂನುಗಳನ್ನು ಜಾರಿಗೊಳಿಸುವುದರಿಂದ ಡಾರ್ಕ್ ಪ್ಯಾಟರ್ನ್ಸ್‌ಗಳಿಂದ ಜನರ ಶೋಷಣೆಯನ್ನು ತಡೆಯಬಹುದಾಗಿದೆ. ಬಳಕೆದಾರ ಜಾಗೃತಿ, ಕಂಪನಿಗಳ ಪಾರದರ್ಶಕತೆ, ಮತ್ತು ಸರ್ಕಾರದ ಕಟ್ಟುನಿಟ್ಟಾದ ಕಾನೂನುಗಳು ಇದಕ್ಕೆ ಅಗತ್ಯವಿದೆ.

ಮೊದಲೇ ಹೇಳಿದಂತೆ, ಡಾರ್ಕ್ ಪ್ಯಾಟರ್ನ್ಸ್‌ ಆಧುನಿಕ ಕಾಲದ ಆಧುನಿಕ ಶೋಷಣೆಯಾಗಿದೆ. ಈ ಬಗ್ಗೆ ಸರ್ಕಾರ ಹಾಗೂ ಜನರು ಎಚ್ಚೆತ್ತುಕೊಳ್ಳುತ್ತಿದ್ದರೂ, ಹೆಚ್ಚಿನ ಜನರಿಗೆ ಇಂಟರ್‌ನೆಂಟ್‌ ಮೂಲಕ ನಮ್ಮನ್ನು ಹೀಗೆ ಶೋಷಣೆ ಮಾಡುತ್ತಿದ್ದಾರೆ ಎಂಬುವುದು ತಿಳಿದಿಲ್ಲ. ಹಾಗಾಗಿ ಈ ಬಗ್ಗೆ ಹೆಚ್ಚಿನ ಚರ್ಚೆಗಳು ಕೂಡಾ ನಡೆಯುತ್ತಿಲ್ಲ.

ಡಿಜಿಟಲ್ ತಜ್ಞರು ಡಾರ್ಕ್ ಪ್ಯಾಟರ್ನ್ಸ್‌ಗಳನ್ನು ಡಿಜಿಟಲ್ ಜಗತ್ತಿನಲ್ಲಿ ನೈತಿಕತೆಗೆ ವಿರುದ್ಧವಾದ ತಂತ್ರಗಳೆಂದು ಪರಿಗಣಿಸುತ್ತಾರೆ. ಇದು ಗ್ರಾಹಕರ ಗೌಪ್ಯತೆ ಮತ್ತು ಸ್ವಾಯತ್ತತೆಯನ್ನು ಉಲ್ಲಂಘಿಸುತ್ತವೆ. ಜೊತೆಗೆ ದೀರ್ಘಕಾಲೀನವಾಗಿ ಕಂಪನಿಗಳಿಗೆ ವಿಶ್ವಾಸದ ಕೊರತೆಯನ್ನು ಉಂಟುಮಾಡಬಹುದು ಎಂದು ಅವರು ಅಭಿಪ್ರಾಯ ಪಡುತ್ತಾರೆ.

GDPR (ಯುರೋಪ್‌ನ ಡೇಟಾ ರಕ್ಷಣಾ ಕಾನೂನು) ಮತ್ತು CCPA (ಕ್ಯಾಲಿಫೋರ್ನಿಯಾ ಗ್ರಾಹಕ ಗೌಪ್ಯತೆ ಕಾಯ್ದೆ) ತಜ್ಞರು ಡಾರ್ಕ್ ಪ್ಯಾಟರ್ನ್ಸ್‌ಗಳನ್ನು ಗೌಪ್ಯತೆ ಉಲ್ಲಂಘನೆಯ ಒಂದು ರೂಪವೆಂದು ಪರಿಗಣಿಸುತ್ತಾರೆ. ಇವು ಬಳಕೆದಾರರಿಗೆ ತಿಳಿಯದಂತೆ ಡೇಟಾ ಸಂಗ್ರಹಕ್ಕೆ ಒಪ್ಪಿಗೆಯನ್ನು ಒತ್ತಾಯಿಸುತ್ತವೆ ಎಂದು ಹೇಳುವ ಅವರು ಕಾನೂನು ಚೌಕಟ್ಟಿನ ಮೂಲಕ ಡಾರ್ಕ್ ಪ್ಯಾಟರ್ನ್ಸ್‌ಗೆ ಕಡಿವಾಣ ಹಾಕವ ಬಗ್ಗೆ ಶಿಫಾರಸು ಮಾಡುತ್ತಾರೆ. Dark Patterns

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ವೇಗದ ಸೇವೆ ಬೇಕಿದ್ದರೆ ಮುಂಗಡ ಟಿಪ್‌ಗೆ ಒತ್ತಾಯ: ಉಬರ್‌ಗೆ ಸರ್ಕಾರದಿಂದ ನೋಟಿಸ್

ವೇಗದ ಸೇವೆ ಬೇಕಿದ್ದರೆ ಮುಂಗಡ ಟಿಪ್‌ಗೆ ಒತ್ತಾಯ: ಉಬರ್‌ಗೆ ಸರ್ಕಾರದಿಂದ ನೋಟಿಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೆಲಸದ ಅವಧಿ ಬಳಿಕ ಯಾವುದೇ ಕರೆಗಳು, ಇಮೇಲ್‌ಗಳಿಗೆ ಉತ್ತರಿಸಬೇಕಿಲ್ಲ : ಸಂಪರ್ಕ ಕಡಿತ ಹಕ್ಕು ಮಸೂದೆ ಹೇಳುವುದೇನು?

ದೇಶದಲ್ಲಿ ಕಾರ್ಪೋರೇಟ್ ಸಂಸ್ಥೆಗಳು ಉದ್ಯೋಗಿಗಳ ಮೇಲೆ ಅತೀವ ಕೆಲಸದ ಹೊರೆಯನ್ನು ಹೇರಿ ಅವರ ಖಾಸಗಿ ಜೀವನವನ್ನು ಕಿತ್ತುಕೊಳ್ಳುವ ಮೂಲಕ ಮಾನಸಿಕ ಒತ್ತಡಕ್ಕೆ ತಳ್ಳುತ್ತಿರುವ ಪರಿಸ್ಥಿತಿ ಗಂಭೀರ ಹಂತಕ್ಕೆ ತಲುಪಿದೆ. ಅದಾಗ್ಯೂ ಕೆಲ ಕಾರ್ಪೋರೇಟ್‌...

ಯುದ್ಧ ವಿರೋಧಿ ವಾಟ್ಸಾಪ್ ಸ್ಟೇಟಸ್ : ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದ ದಲಿತ ಪ್ರಾಧ್ಯಾಪಕಿ ವಜಾ

ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ವೇಳೆ ಯುದ್ಧ ವಿರೋಧಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದ ಚೆನ್ನೈನ ಎಸ್‌ಆರ್‌ಎಂ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಲೋರಾ ಶಾಂತಕುಮಾರ್ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಎಸ್‌ಆರ್‌ಎಂನ ಆಂತರಿಕ ಸಮಿತಿಯ ವರದಿಯು ಲೋರಾ...

ಗಾಝಾದಲ್ಲಿ ಕದನ ವಿರಾಮ : ಎರಡು ವರ್ಷಗಳ ಬಳಿಕ ಬೆಥ್ಲೆಹೆಮ್‌ನಲ್ಲಿ ಮರುಕಳಿಸಿದ ಕ್ರಿಸ್‌ಮಸ್ ಸಂಭ್ರಮ

ಗಾಝಾದಲ್ಲಿ ಕದನ ವಿರಾಮ ಜಾರಿಯಾಗಿರುವ ಹಿನ್ನೆಲೆ, ಎರಡು ವರ್ಷಗಳ ನಂತರ ಈ ಬಾರಿ ಯೇಸು ಕ್ರಿಸ್ತನ ಜನ್ಮಸ್ಥಳ ಜೆರುಸಲೇಂನ ಬೆಥ್ಲೆಹೆಮ್‌ನಲ್ಲಿ ಕ್ರಿಸ್‌ಮಸ್‌ ಸಂಭ್ರಮಾಚರಣೆ ಮರುಕಳಿಸಿದೆ. ಶನಿವಾರ (ಡಿಸೆಂಬರ್ 6) ಬೆಥ್ಲೆಹೆಮ್‌ನ ಮ್ಯಾಂಗರ್ ಸ್ಕ್ವೇರ್‌ನಲ್ಲಿರುವ ಚರ್ಚ್...

ರಾಷ್ಟ್ರವ್ಯಾಪಿ ವಿಮಾನಯಾನ ಬಿಕ್ಕಟ್ಟು : ಜೆಪಿಸಿ ವಿಚಾರಣೆ ಕೋರಿ ಪ್ರಧಾನಿಗೆ ಪತ್ರ ಬರೆದ ಸಂಸದ ಜಾನ್ ಬ್ರಿಟ್ಟಾಸ್

ಇಂಡಿಗೋ ವಿಮಾನಗಳ ಹಾರಾಟ ವ್ಯತ್ಯಯದಿಂದ ಉಂಟಾದ ರಾಷ್ಟ್ರವ್ಯಾಪಿ ವಿಮಾನಯಾನ ಬಿಕ್ಕಟ್ಟಿನ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ವಿಚಾರಣೆ ಅಥವಾ ನ್ಯಾಯಾಂಗ ತನಿಖೆ ಮಾಡಿಸುವಂತೆ ಕೋರಿ ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಪ್ರಧಾನಿ...

ಒಳಮೀಸಲಾತಿ : ಶೇ.17ರ ಪ್ರಮಾಣದಲ್ಲೇ ಮುಂದುವರಿಯಲು ಸರ್ಕಾರ ತೀರ್ಮಾನ?

ಒಳಮೀಸಲಾತಿಗೆ ಸಂಬಂಧಿಸಿದಂತೆ ಉಂಟಾಗಿರುವ ಕಗ್ಗಂಟನ್ನು ಎದುರಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಶೇಕಡ 17ರ ಮೀಸಲಾತಿ ಪ್ರಮಾಣದಲ್ಲೇ ಮುಂದುವರಿಯಲು ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ. ಶನಿವಾರ ಸಂಜೆ (ಡಿಸೆಂಬರ್ 6) ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ...

ಗೋವಾ ನೈಟ್ ಕ್ಲಬ್‌ನಲ್ಲಿ ಸಿಲಿಂಡರ್ ಸ್ಫೋಟ; 25 ಮಂದಿ ಸಾವು

ಉತ್ತರ ಗೋವಾದ ನೈಟ್‌ ಕ್ಲಬ್‌ವೊಂದರಲ್ಲಿ ಶನಿವಾರ (ಡಿಸೆಂಬರ್ 6) ತಡರಾತ್ರಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ ಕನಿಷ್ಠ 25 ಜನರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸಾವಿಗೀಡಾದವರಲ್ಲಿ ಹೆಚ್ಚಿನವರು ಕ್ಲಬ್‌ನ ಅಡುಗೆ ಸಿಬ್ಬಂದಿಯಾಗಿದ್ದು,...

ಮೈಸೂರು| ಒಳಮೀಸಲಾತಿ ಹೋರಾಟ ಹತ್ತಿಕ್ಕಲು ನಿಷೇಧಾಜ್ಞೆ ಹೇರಿದ ಕಾಂಗ್ರೆಸ್ ಸರ್ಕಾರ

ಪೂರ್ಣ ಪ್ರಮಾಣದ ಒಳಮೀಸಲಾತಿ ಜಾರಿಗೆ ಆಗ್ರಹಿಸಿ 'ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ' ನಡೆಸುತ್ತಿದ್ದ ಹೋರಾಟಕ್ಕೆ ಜಿಲ್ಲಾ ಪೊಲೀಸರು ಅನುಮತಿ ನಿರಾಕರಿಸಿದ್ದು, ಸಿದ್ದರಾಮನಹುಂಡಿಯಿಂದ ಮೈಸೂರಿಗೆ ಇಂದು ಪಾದಯಾತ್ರೆ ಆರಂಭಿಸಿದ ಹೋರಾಟಗಾರರನ್ನು...

‘ನಕಲಿ ಬ್ಯಾಂಕ್ ಗ್ಯಾರಂಟಿ’ ಪ್ರಕರಣ : ರಿಲಯನ್ಸ್ ಪವರ್, ಇತರ ಸಂಸ್ಥೆಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಇಡಿ

ರಿಲಯನ್ಸ್ ಪವರ್ ಕಂಪನಿಯು ಭಾರತೀಯ ಸೌರಶಕ್ತಿ ನಿಗಮಕ್ಕೆ (ಎಸ್‌ಇಸಿಐ) ಟೆಂಡರ್ ಪಡೆಯಲು ಸಲ್ಲಿಸಿದ 68 ಕೋಟಿ ರೂಪಾಯಿಗಳ ನಕಲಿ ಬ್ಯಾಂಕ್ ಗ್ಯಾರಂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಪವರ್ ಲಿಮಿಟೆಡ್ ಮತ್ತು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್‌ನ...

ಉತ್ತರ ಪ್ರದೇಶ| ಬಾಬರಿ ಮಸೀದಿ ಮೇಲಿನ ದಾಳಿಗೆ 33 ವರ್ಷ; ಅಯೋಧ್ಯೆ-ವಾರಣಾಸಿಯಲ್ಲಿ ಬಿಗಿ ಭದ್ರತೆ

ಬಾಬರಿ ಮಸೀದಿ ಧ್ವಂಸವಾಗಿ 33ನೇ ವರ್ಷ ತುಂಬುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಅಯೋಧ್ಯೆ ಮತ್ತು ಉತ್ತರ ಪ್ರದೇಶದ ಇತರ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಜಾಗರೂಕರಾಗಿದ್ದು, ಎಲ್ಲಾ ಮಾರ್ಗಗಳಲ್ಲಿ ವಾಹನಗಳ ಸಂಪೂರ್ಣ ತಪಾಸಣೆ ನಡೆಸುತ್ತಿವೆ. ಈ ಕುರಿತು...

ನ್ಯಾಷನಲ್ ಹೆರಾಲ್ಡ್‌ಗೆ ದೇಣಿಗೆ: ‘ಡಿಕೆ’ ಸಹೋದರರಿಗೆ ಇಡಿ-ದೆಹಲಿ ಪೊಲೀಸರಿಂದ ಸಮನ್ಸ್

ನ್ಯಾಷನಲ್ ಹೆರಾಲ್ಡ್ ಮತ್ತು ಯಂಗ್ ಇಂಡಿಯಾ ಸಂಸ್ಥೆಗಳಿಗೆ ನೀಡಿದ ದೇಣಿಗೆಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕೈಗೊಂಡಿರುವ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮತ್ತು ಜಾರಿ ನಿರ್ದೇಶನಾಲಯವು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು...