ಇತ್ತಿಚೆಗಷ್ಟೆ ಕೋಮು ಘಟನೆಗೆ ನಲುಗಿ ಹೋಗಿದ್ದ ದಕ್ಷಿಣ ಕನ್ನಡದಲ್ಲಿ ಮಂಗಳವಾರ ಅಪರಾಹ್ನ ಮತ್ತೊಂದು ಯುವಕನ ಕೊಲೆ ನಡೆದಿದ್ದು, ನಾಗರಿಕರನ್ನು ಆತಂಕ ಮೂಡಿಸಿದೆ. ಜಿಲ್ಲೆಯ ಬಂಟ್ವಾಳ ಬಳಿಯ ಕೊಲ್ತಮಜಲು ಎಂಬಲ್ಲಿ ದುಷ್ಕರ್ಮಿಗಳ ತಂಡವೊಂದು ಪಿಕ್‌ಅಪ್ ವಾಹನದಲ್ಲಿದ್ದ ಇಬ್ಬರ ಮೇಲೆ ತಲವಾರು ದಾಳಿ ನಡಸಿದ್ದು, ಈ ವೇಳೆ ಒಬ್ಬ ಯುವಕ ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮಂಗಳೂರು | ದುಷ್ಕರ್ಮಿಗಳಿಂದ
ಘಟನೆಯಲ್ಲಿ ಮೃತಪಟ್ಟವರನ್ನು ಅಬ್ದುಲ್ ರಹಿಮಾನ್ ಎಂದು ಗುರುತಿಸಲಾಗಿದ್ದು, ಗಾಯಗೊಂಡ ಯುವಕ ಕಲಂದರ್ ಶಾಫಿ ಎಂದು ತಿಳಿದು ಬಂದಿದೆ. ಇಬ್ಬರು ಯುವಕರ ಕೊಲ್ತಮಜಲು ಬಳಿ ಪಿಕ್‌ಅಪ್ ವಾಹನದಲ್ಲಿ ಮರಳು ಅನ್ ಲೋಡ್ ಮಾಡುತ್ತಿದ್ದ ವೇಳೆ ದುಷ್ಕರ್ಮಿಗಳು ತಲವಾರು ದಾಳಿ ಮಾಡಿದ್ದಾರೆ ಎನ್ನಲಾಗಿದೆ.
ಘಟನೆಯ ಬಗ್ಗೆ ನಾಗರಿಕರು ಸೇರಿದಂತೆ ಜನಪರ ಸಂಘಟನೆಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, ಇದಕ್ಕೆಲ್ಲಾ ಕಾರಣ ರಾಜ್ಯದ ಸರ್ಕಾರ ಮತ್ತು ಜಿಲ್ಲೆಯ ಪೊಲೀಸರ ನಿಷ್ಕ್ರಿಯತೆ ಎಂದು ಆರೋಪಿಸಿದ್ದಾರೆ.
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ, ಹೋರಾಟಗಾರ ಮುನೀರ್ ಕಾಟಿಪಳ್ಳ ಪ್ರತಿಕ್ರಿಯಿಸಿ, “ಮಂಗಳೂರಿನ ಹೊರ ವಲಯದಲ್ಲಿ ಮತ್ತೊಂದು ಯುವಕನ ಕೊಲೆಯಾಗಿದೆ. ದುಡಿಮೆಗೆ ಹೊರಟಿದ್ದ ಅಮಾಯಕ ಪಿಕಪ್ ಚಾಲಕ ಕತ್ತಿಯೇಟಿಗೆ ಬಲಿಯಾಗಿದ್ದಾನೆ. ಜನತೆ ಆತಂಕಗೊಂಡಿದ್ದಾರೆ. ಪ್ರತೀಕಾರದ, ದ್ವೇಷದ ಭಾಷಣಗಳು ಕರಾವಳಿಯನ್ನು ಸ್ಮಶಾನವಾಗಿಸುತ್ತಿದೆ.” ಎಂದು ಹೇಳಿದ್ದಾರೆ.
ರೌಡಿ ಸುಹಾಸ್ ಶೆಟ್ಟಿಯ ಕೊಲೆಯ ನಂತರ ಜಿಲ್ಲೆಯಲ್ಲಿ ಹಲವಾರು ಅಹಿತಕರ ಘಟನೆಗಳು ನಡೆದಿತ್ತು. ಜೊತೆಗೆ ಬಿಜೆಪಿ ನಾಯಕರು ತಮ್ಮ ಸಹ ಸಂಘಟನೆಗಳ ಜೊತೆಗೂಡಿ ನಡೆಸಿದ್ದ ಹಲವಾರು ಕಾರ್ಯಕ್ರಮಗಳಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಪ್ರಚೋದನೆ ನಡೆಸಿದ್ದರು. ಈ ಬಗ್ಗೆ ಪ್ರಕರಣ ಕೂಡಾ ದಾಖಲಾಗಿತ್ತು.
ಅಲ್ಲದೆ, ದಿನಗಳ ಹಿಂದೆಯಷ್ಟೆ ಬಿಜೆಪಿ ಪರ ಸಂಘಟನೆಗಳು ನಗರದ ಬಜ್ಪೆಯಲ್ಲಿ ರೌಡಿ ಸುಹಾಸ್ ಪರ ಸಭೆ ನಡೆಸಿದ್ದರು. ಈ ವೇಳೆ ಕೂಡಾ ದ್ವೇಷ ಭಾಷಣ ಮಾಡಲಾಗಿತ್ತು. ಅದಾಗಿ ಕೆಲವೆ ದಿನಗಳಲ್ಲಿ ಜಿಲ್ಲೆಯಲ್ಲಿ ಮತ್ತೊಂದು ಕೊಲೆ ನಡೆದಿದ್ದು ನಾಗರಿಕರಲ್ಲಿ ಆತಂಕ ಹುಟ್ಟುಹಾಕಿದೆ. ಮಂಗಳೂರು | ದುಷ್ಕರ್ಮಿಗಳಿಂದ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ತಿಪಟೂರು | ದಲಿತ ಪತ್ರಕರ್ತನ ಮೇಲೆ ಹಲ್ಲೆ ಖಂಡಿಸಿ ದಲಿತಪರ ಸಂಘಟನೆಗಳಿಂದ ಪ್ರತಿಭಟನೆ
ತಿಪಟೂರು | ದಲಿತ ಪತ್ರಕರ್ತನ ಮೇಲೆ ಹಲ್ಲೆ ಖಂಡಿಸಿ ದಲಿತಪರ ಸಂಘಟನೆಗಳಿಂದ ಪ್ರತಿಭಟನೆ

