ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಸಾಕ್ಷಿದಾರರೊಬ್ಬರಿಗೆ ಬುಧವಾರ (ಮೇ.28) ಬೆದರಿಕೆ ಹಾಕಲಾಗಿದೆ. ಈ ವಿಚಾರವನ್ನು ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ವಿಶೇಷ ಸಾರ್ವಜನಿಕ ಅಭಿಯೋಜಕ ಬಾಲನ್ ಅವರು ನಾನುಗೌರಿ.ಕಾಂಗೆ ಖಚಿತಪಡಿಸಿದ್ದಾರೆ.
ಸಾಕ್ಷಿದಾರರೊಬ್ಬರು ನ್ಯಾಯಾಲಯದ ವಿಚಾರಣೆ ಹಾಜರಾಗಲು ಬುಧವಾರ ಬಸ್ ಮೂಲಕ ಬರುತ್ತಿದ್ದಾಗ, ಅವರಿಗೆ ಫೋನ್ ಕರೆಯೊಂದು ಬಂದಿದ್ದು. ಅದರಲ್ಲಿ ಮಾತನಾಡಿದವರು “ಕೋರ್ಟ್‌ಗೆ ಹೋದಾಗ ನಿನ್ನ ಮುಂದೆ ನಾಲ್ಕು ಮಂದಿ ಇರುತ್ತಾರೆ. ಅವರ ಗುರುತು ಇಲ್ಲ” ಎಂದು ಹೇಳುವಂತೆ ಒತ್ತಾಯಿಸಿದ್ದಾರೆ ಎಂದು ಬಾಲನ್ ತಿಳಿಸಿದ್ದಾರೆ.
ಈ ವಿಚಾರವನ್ನು ನ್ಯಾಯಾಧೀಶರ ಗಮನಕ್ಕೆ ತರಲಾಗಿದೆ ಬಾಲನ್ ಹೇಳಿದ್ದಾರೆ.
ಸಾಕ್ಷಿದಾರ ಕೂಡ ಪ್ರಾಸಿಕ್ಯೂಷನ್ ವಿರುದ್ದ ಸಾಕ್ಷಿ ಹೇಳುವಂತೆ ತನಗೆ ಫೋನ್ ಬಂದಿದೆ ಎಂದು ನ್ಯಾಯಾಧೀಶರಿಗೆ ದೂರು ನೀಡಿದ್ದಾರೆ. ಅದರಲ್ಲಿ ವಕೀಲ ಬಾಲನ್ ಹೇಳಿದ ವಿಚಾರವನ್ನು ಅವರು ಉಲ್ಲೇಖಿಸಿದ್ದಾರೆ.
ಗೌರಿ ಲಂಕೇಶ್ ಅವರನ್ನು 2017ರ ಸೆಪ್ಟೆಂಬರ್ 5ರಂದು ಬೆಂಗಳೂರಿನ ಆರ್.ಆರ್ ನಗರದ ಅವರ ಮನೆಯ ಮುಂದೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಒಟ್ಟು 18 ಆರೋಪಿಗಳನ್ನು ಗುರುತಿಸಲಾಗಿದ್ದು, 17 ಮಂದಿಯನ್ನು ಬಂಧಿಸಲಾಗಿತ್ತು. ಇನ್ನೋರ್ವ ಆರೋಪಿ ವಿಕಾಸ್ ಪಾಟೀಲ್ ಎಂಬಾತ ತಲೆಮರೆಸಿಕೊಂಡಿದ್ದು, ಇನ್ನೂ ಬಂಧನವಾಗಿಲ್ಲ.
2025ರ ಜನವರಿ ವೇಳೆಗೆ ಪ್ರಕರಣದಲ್ಲಿ ಬಂಧಿತ ಎಲ್ಲಾ ಆರೋಪಿಗಳಿಗೆ ಜಾಮೀನು ದೊರೆತಿದೆ.
ಮುಸ್ಲಿಂ ಮೀಸಲು ಮಸೂದೆ ಮತ್ತೆ ವಾಪಸ್: ಸುಪ್ರೀಂ ತೀರ್ಪು ಉಲ್ಲೇಖಿಸಿದ ರಾಜ್ಯಪಾಲರು


