“ಅಕ್ರಮ ವಲಸಿಗರು” ಎಂದು ಹೇಳಲಾದವರನ್ನು ರಾಷ್ಟ್ರೀಯ ನಾಗರಿಕರ ನೋಂದಣಿಯಲ್ಲಿ ಹೆಸರಿಸಿದ್ದರೂ ಸಹ ಬಾಂಗ್ಲಾದೇಶಕ್ಕೆ “ಗಡಿಪಾರು” ಮಾಡಲಿದ್ದೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬುಧವಾರ ಹೇಳಿದ್ದಾರೆ. “ಅವರು ಅಕ್ರಮ ವಲಸಿಗರು ಎಂದು ನಮಗೆ ಖಚಿತವಾಗಿದ್ದರೆ, ನಾವು ಅವರನ್ನು ತಕ್ಷಣವೇ ಗಡಿಪಾರು ಮಾಲಿದ್ದೇವೆ” ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಅಕ್ರಮ ವಲಸಿಗರ ಹೆಸರು
ಅಸ್ಸಾಂನಲ್ಲಿ ಭಾರತೀಯ ನಾಗರಿಕರನ್ನು ರಾಜ್ಯದಲ್ಲಿ ವಾಸಿಸುವ ದಾಖಲೆರಹಿತ ವಲಸಿಗರಿಂದ ಬೇರ್ಪಡಿಸುವ ಉದ್ದೇಶದಿಂದ ಆಗಸ್ಟ್ 2019 ರಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ಪ್ರಕಟಿಸಲಾಯಿತು. ಪಟ್ಟಿಯಲ್ಲಿ ಸೇರಿಸಬೇಕಾದರೆ ನಿವಾಸಿಗಳು ಮಾರ್ಚ್ 24, 1971 ರ ಮಧ್ಯರಾತ್ರಿಯ ಮೊದಲು ಅಸ್ಸಾಂಗೆ ಪ್ರವೇಶಿಸಿದ್ದಾರೆ ಎಂದು ಸಾಬೀತುಪಡಿಸಬೇಕಾಗಿತ್ತು.
19 ಲಕ್ಷಕ್ಕೂ ಹೆಚ್ಚು ಜನರು, ಅಥವಾ ಅರ್ಜಿದಾರರಲ್ಲಿ 5.77% ರಷ್ಟು ಜನರನ್ನು ಅಂತಿಮ ಪಟ್ಟಿಯಿಂದ ಹೊರಗಿಡಲಾಗಿದೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಮತ್ತು ಅಸ್ಸಾಂ ರಾಷ್ಟ್ರೀಯತಾವಾದಿ ಗುಂಪುಗಳು ಮರುಪರಿಶೀಲನೆಗೆ ಒತ್ತಾಯಿಸಿದ ನಂತರ ಕೇಂದ್ರ ಸರ್ಕಾರವು NRC ಗೆ ಅಧಿಸೂಚನೆ ಹೊರಡಿಸಿಲ್ಲ.
ರಾಜ್ಯ ಸರ್ಕಾರವು ಮಂಗಳವಾರ 19 “ಅಕ್ರಮ ವಲಸಿಗರನ್ನು” ಗಡಿಪಾರು ಮಾಡಿದೆ ಮತ್ತು ಬುಧವಾರ ಇನ್ನೂ ಒಂಬತ್ತು ಜನರನ್ನು ಗಡಿಪಾರು ಮಾಡಲಿದೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಸಿಎಂ ಹೇಳಿದ್ದಾರೆ.
“ಹಲವು ಹೆಸರುಗಳನ್ನು ವಂಚನೆಯಿಂದ NRC [ನಾಗರಿಕರ ರಾಷ್ಟ್ರೀಯ ನೋಂದಣಿ]ಯಲ್ಲಿ ಸೇರಿಸಲಾಗಿದೆ. NRC ಪ್ರಕ್ರಿಯೆಯನ್ನು ನಡೆಸಿದ ರೀತಿ ಗಂಭೀರ ಅನುಮಾನಗಳು ಮತ್ತು ಕಳವಳಗಳನ್ನು ಹುಟ್ಟುಹಾಕಿದೆ. ಯಾರನ್ನಾದರೂ ಅಕ್ರಮ ವಲಸಿಗರಲ್ಲ ಎಂದು ನಿರ್ಧರಿಸಲು ರಿಜಿಸ್ಟರ್‌ನಲ್ಲಿ ಹೆಸರಿರುವುದು ಮಾತ್ರ ಸಾಕಾಗುವುದಿಲ್ಲ” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ವಿದೇಶಿಯರೆಂದು ಘೋಷಿಸಲ್ಪಟ್ಟ ವ್ಯಕ್ತಿಗಳನ್ನು ಕಾನೂನು ಚೌಕಟ್ಟಿನ ಅಡಿಯಲ್ಲಿ ಬಾಂಗ್ಲಾದೇಶಕ್ಕೆ “ಹಿಂದಕ್ಕೆ ತಳ್ಳಲಾಗುತ್ತಿದೆ” ಎಂದು ಸಿಎಂ ಹೇಳಿಕೊಂಡ ನಾಲ್ಕು ದಿನಗಳ ನಂತರ ಈ ಹೇಳಿಕೆ ಬಂದಿದೆ.
ಜೂನ್ 7 ರಂದು, 1955 ರ ಪೌರತ್ವ ಕಾಯ್ದೆಯ ಸೆಕ್ಷನ್ 6Aಯ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸುವ ವೇಳೆ ಸುಪ್ರೀಂಕೋರ್ಟ್, “ವಿದೇಶಿಯರನ್ನು ಗುರುತಿಸಲು ಅಸ್ಸಾಂ ಸರ್ಕಾರವು ಯಾವಾಗಲೂ ನ್ಯಾಯಾಂಗವನ್ನು ಸಂಪರ್ಕಿಸಲು ಯಾವುದೇ ಕಾನೂನು ಅವಶ್ಯಕತೆಯಿಲ್ಲ” ಎಂದು ಹೇಳಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
“‘ವಲಸಿಗರ ಹೊರಹಾಕುವ ಆದೇಶ’ ಎಂಬ ಹಳೆಯ ಕಾನೂನು ಅಸ್ತಿತ್ವದಲ್ಲಿದೆ. ಈ ಕಾನೂನು ಇನ್ನೂ ಜಾರಿಯಲ್ಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಕಾನೂನಿನ ಪ್ರಕಾರ, ಜಿಲ್ಲಾಧಿಕಾರಿಗೆ ಆದೇಶ ಹೊರಡಿಸುವ ಮತ್ತು ತಕ್ಷಣದ ನಿರಾಕರಣೆಗೆ ಅವಕಾಶ ನೀಡುವ ಅಧಿಕಾರವಿದೆ.” ಎಂದು ಅವರು ಹೇಳಿದ್ದಾರೆ.
ಅಕ್ಟೋಬರ್‌ನಲ್ಲಿ, ಸುಪ್ರೀಂಕೋರ್ಟ್ 1955 ರ ಪೌರತ್ವ ಕಾಯ್ದೆಯ ಸೆಕ್ಷನ್ 6A ಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿತ್ತು.
1985 ರಲ್ಲಿ ಕೇಂದ್ರ ಸರ್ಕಾರ ಮತ್ತು ಅಸ್ಸಾಂ ಚಳವಳಿಯ ನಾಯಕರ ನಡುವೆ ಅಸ್ಸಾಂ ಒಪ್ಪಂದಕ್ಕೆ ಸಹಿ ಹಾಕಿದಾಗ ಕಾಯಿದೆಯಡಿಯಲ್ಲಿ ವಿಶೇಷ ನಿಬಂಧನೆಯಾಗಿ ಸೆಕ್ಷನ್ 6A ಅನ್ನು ಪರಿಚಯಿಸಲಾಯಿತು. ಇದು ಜನವರಿ 1, 1966 ಮತ್ತು ಮಾರ್ಚ್ 25, 1971 ರ ನಡುವೆ ಅಸ್ಸಾಂಗೆ ಬಂದ ವಿದೇಶಿಯರಿಗೆ ಭಾರತೀಯ ಪೌರತ್ವವನ್ನು ಪಡೆಯಲು ಅವಕಾಶ ನೀಡುತ್ತದೆ.
ಅಸ್ಸಾಂನಲ್ಲಿರುವ ಸ್ಥಳೀಯ ಗುಂಪುಗಳು ಕಾಯಿದೆಯಲ್ಲಿನ ಈ ನಿಬಂಧನೆಯು ಬಾಂಗ್ಲಾದೇಶದಿಂದ ವಲಸೆ ಬಂದವರ ಒಳನುಸುಳುವಿಕೆಯನ್ನು ಕಾನೂನುಬದ್ಧಗೊಳಿಸಿದೆ ಎಂದು ಆರೋಪಿಸಿವೆ. ಸೋಮವಾರ ಅಸ್ಸಾಂ ಸರ್ಕಾರವು 303 “ವಿದೇಶಿಯರನ್ನು” “ಹಿಂದಕ್ಕೆ ತಳ್ಳಿದೆ(ಗಡಿಪಾರು ಮಾಡಿದೆ)” ಮತ್ತು 1950 ರ ಅಸ್ಸಾಂನಿಂದ ವಲಸಿಗರ ಹೊರಹಾಕುವಿಕೆ ಕಾಯ್ದೆಯಡಿಯಲ್ಲಿ ಅದನ್ನು ಮುಂದುವರಿಸುತ್ತದೆ ಎಂದು ಸಿಎಂ ಹೇಳಿದ್ದಾರೆ.ಅಕ್ರಮ ವಲಸಿಗರ ಹೆಸರು
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಗುಜರಾತ್ | ಇ-ಕೆವೈಸಿ ಲೋಪ; ಪಡಿತರವಿಲ್ಲದೆ ಬಳಲುತ್ತಿರುವ 10 ಲಕ್ಷ ಜನರು
ಗುಜರಾತ್ | ಇ-ಕೆವೈಸಿ ಲೋಪ; ಪಡಿತರವಿಲ್ಲದೆ ಬಳಲುತ್ತಿರುವ 10 ಲಕ್ಷ ಜನರು

