ಛತ್ತೀಸ್‌ಗಢದ ಬಿಜೆಪಿ ಸರ್ಕಾರವು ಪೊಲೀಸ್ ದಾಖಲೆಗಳಲ್ಲಿ ಬಳಸಲಾಗುವ ಉರ್ದು ಮತ್ತು ಪರ್ಷಿಯನ್ ಪದಗಳನ್ನು ಕಿತ್ತು ಹಾಕಿ ಹಿಂದಿ ಪದಗನ್ನು ಪರಿಚಯಿಸಿದೆ ಎಂದು ಶನಿವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾಮಾನ್ಯ ವ್ಯಕ್ತಿಗೆ ಸುಲಭವಾಗಿ ಅರ್ಥವಾಗುವ ಹಿಂದಿ ಪದಗಳೊಂದಿಗೆ ಇದನ್ನು ಬದಲಾಯಿಸಲಾಗಿದ್ದು, ಇದು ಪೊಲೀಸ್ ಸೇವೆಯನ್ನು ಹೆಚ್ಚು ಸುಲಭವಾಗಿ, ಪಾರದರ್ಶಕ ಮತ್ತು ಸಂವಹನಶೀಲವಾಗಿಸುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ. ಛತ್ತೀಸ್‌ಗಢ | ಪೊಲೀಸ್ ದಾಖಲೆಗಳಲ್ಲಿ
‘ಹಲಾಫ್‌ನಾಮಾ’ ಬದಲಿಗೆ ‘ಶಪತ್ ಪತ್ರ’ (ಅಫಿಡವಿಟ್), ‘ದಫಾ’ ಬದಲಿಗೆ ‘ಧಾರಾ’ (ವಿಭಾಗ), ‘ಫರಿಯಾದಿ’ ಬದಲಿಗೆ ‘ಶಿಕಾಯತ್ಕರ್ತಾ’ (ದೂರುದಾರ) ಮತ್ತು ‘ಚಸ್ಮ್‌ದಿದ್’ ಬದಲಿಗೆ ‘ಪ್ರತ್ಯಕ್ಷದರ್ಶಿ’ ಪದಗಳನ್ನು ಬಳಸಲಾಗಿದೆ.
ಗೃಹ ಖಾತೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಅವರ ಸೂಚನೆಯ ಮೇರೆಗೆ, ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ (ಎಸ್‌ಪಿ) ಪತ್ರ ಬರೆದಿದ್ದು, ಪೊಲೀಸ್ ಕಾರ್ಯದಲ್ಲಿ ಬಳಸುವ ಕಠಿಣ ಮತ್ತು ಸಾಂಪ್ರದಾಯಿಕ ಪದಗಳನ್ನು ಸರಳ ಮತ್ತು ಸ್ಪಷ್ಟ ಹಿಂದಿ ಪದಗಳೊಂದಿಗೆ ಬದಲಾಯಿಸಬೇಕು ಎಂದು ಹೇಳಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಹಳೆಯ ಕಠಿಣ ಪದಗಳ ಬದಲಿಗೆ ಹಿಂದಿ ಪರ್ಯಾಯಗಳನ್ನು ಹೊಂದಿರುವ 109 ಪದಗಳ ಪಟ್ಟಿಯನ್ನು ಪತ್ರದೊಂದಿಗೆ ನೀಡಲಾಗಿದೆ ಎಂದು ಅದು ತಿಳಿಸಿದೆ. “ಪೊಲೀಸರ ಉದ್ದೇಶ ನಾಗರಿಕರಿಗೆ ಸಹಾಯ ಮಾಡುವುದು ಮತ್ತು ರಕ್ಷಿಸುವುದಾಗಿದ್ದರೆ, ಅದರ ಭಾಷೆ ನಾಗರಿಕರಿಗೆ ಅರ್ಥವಾಗುವ ಮತ್ತು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವಂತಿರಬೇಕು” ಉಪ ಮುಖ್ಯಮಂತ್ರಿ ಶರ್ಮಾ ಶುಕ್ರವಾರ ಹೇಳಿದ್ದಾರೆ.
“ಸಾಮಾನ್ಯ ನಾಗರಿಕರು ಯಾವುದೇ ದೂರು, ಅಪರಾಧ ಮಾಹಿತಿ ಅಥವಾ ಇತರ ಕೆಲಸಕ್ಕಾಗಿ ಪೊಲೀಸ್ ಠಾಣೆಗೆ ಭೇಟಿ ನೀಡಿದಾಗ, ಅವರು / ಅವಳು ಆಗಾಗ್ಗೆ ಎಫ್‌ಐಆರ್ ಅಥವಾ ಪೊಲೀಸರ ಇತರ ದಾಖಲೆಗಳಲ್ಲಿ ಬಳಸಲಾದ ಭಾಷೆಯ ಬಗ್ಗೆ ಗೊಂದಲಕ್ಕೊಳಗಾಗುತ್ತಾರೆ. ಇತರ ಭಾಷೆಗಳ ಪದಗಳು ಸಾಮಾನ್ಯ ಜನರಿಗೆ ತಿಳಿದಿಲ್ಲ, ಇದರಿಂದಾಗಿ ಅವರು ತಮ್ಮ ವಿಚಾರವನ್ನು ಸರಿಯಾಗಿ ವಿವರಿಸಲು ಅಥವಾ ಸಂಪೂರ್ಣ ಪ್ರಕ್ರಿಯೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಎಲ್ಲಾ ಅಧೀನ ಅಧಿಕಾರಿಗಳಿಗೆ ಬದಲಾವಣೆಯ ಬಗ್ಗೆ ಅರಿವು ಮೂಡಿಸಬೇಕು ಮತ್ತು ಆದೇಶವು ಕೇವಲ ಔಪಚಾರಿಕವಾಗಿ ಉಳಿಯಬಾರದು, ಬದಲಾಗಿ ಅದರ ನಿಜವಾದ ಅನುಷ್ಠಾನವನ್ನು ರಾಜ್ಯದ ಪ್ರತಿಯೊಂದು ಪೊಲೀಸ್ ಠಾಣೆ ಮತ್ತು ಕಚೇರಿಗಳಲ್ಲಿ ಮಾಡಬೇಕೆಂದು ಪತ್ರದಲ್ಲಿ ನಿರ್ದೇಶಿಸಲಾಗಿದೆ ಎಂದು ಹೇಳಿಕೆಯು ತಿಳಿಸಿದೆ.
ಛತ್ತೀಸ್‌ಗಢ ಪೊಲೀಸರು ಈಗ ಕಾನೂನನ್ನು ಜಾರಿಗೊಳಿಸುವ ಸಂಸ್ಥೆಯಾಗುವುದಲ್ಲದೆ ಸಾರ್ವಜನಿಕ ಸಂವಹನ ಮಾಧ್ಯಮವೂ ಆಗಲಿದ್ದಾರೆ. ಭಾಷೆಯ ಈ ಸರಳೀಕರಣವು ದೂರುದಾರರು ತಮ್ಮ ಪ್ರಕರಣವನ್ನು ಸ್ಪಷ್ಟವಾಗಿ ಹೇಳಲು, ಕೇಳಲು ಮತ್ತು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದುವರೆಗೆ ವಕೀಲರು ಅಥವಾ ಪೊಲೀಸ್ ಸಿಬ್ಬಂದಿ ಮಾತ್ರ ಅರ್ಥಮಾಡಿಕೊಳ್ಳುತ್ತಿದ್ದ ಎಫ್‌ಐಆರ್‌ನಂತಹ ಕಾರ್ಯವಿಧಾನಗಳು ಈಗ ಸಾಮಾನ್ಯ ನಾಗರಿಕರಿಗೂ ಅರ್ಥವಾಗಲಿವೆ ಎಂದು ಅದು ಹೇಳಿದೆ. ಛತ್ತೀಸ್‌ಗಢ | ಪೊಲೀಸ್ ದಾಖಲೆಗಳಲ್ಲಿ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಇರಾನ್‌ನ ದಾಳಿಗೂ ಮೊದಲು ದೇಶ ತೊರೆದ ಇಸ್ರೇಲ್ ಪ್ರಧಾನಿಯ ಅಧಿಕೃತ ವಿಮಾನ!
ಇರಾನ್‌ನ ದಾಳಿಗೂ ಮೊದಲು ದೇಶ ತೊರೆದ ಇಸ್ರೇಲ್ ಪ್ರಧಾನಿಯ ಅಧಿಕೃತ ವಿಮಾನ!

