ಇರಾನ್ ಸರ್ಕಾರಿ ಟಿವಿ ನಿರೂಪಕಿಯೊಬ್ಬರು ಸೋಮವಾರ ಸ್ಟುಡಿಯೋದಲ್ಲಿ ಸುದ್ದಿ ಓದುತ್ತಿರುವಾಗಲೇ ಇಸ್ರೇಲ್ ವಾಯುದಾಳಿ ನಡೆಸಿದ್ದು, ನೇರಪ್ರಸಾದಲ್ಲಿ ದಾಳಿ ಭೀಕರತೆ ದಾಖಲಾಗಿದೆ. ಟೆಹ್ರಾನ್ ಪ್ರದೇಶವನ್ನು ಸ್ಥಳಾಂತರಿಸುವಂತೆ ಇಸ್ರೇಲ್ ಎಚ್ಚರಿಕೆ ನೀಡಿದ ಒಂದು ಗಂಟೆಯ ನಂತರ ಸ್ಫೋಟ ಸಂಭವಿಸಿದ್ದು, ಪ್ರಾಣ ಉಳಿಸಿಕೊಳ್ಳಲು ನಿರೂಪಕಿ ಸ್ಟುಡಿಯೋ ತೊರೆದಿರುವುದುನ್ನು ಕಾಣಬಹುದು.
ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ನ್ಯೂಸ್ ನೆಟ್‌ವರ್ಕ್‌ನ ವರದಿಗಾರ್ತಿ ಮಾತನಾಡುತ್ತಾ, “ತಾಯ್ನಾಡಿನ ವಿರುದ್ಧ ಆಕ್ರಮಣದ ಶಬ್ದ, ಸತ್ಯ ಮತ್ತು ಸದಾಚಾರದ ವಿರುದ್ಧ ಆಕ್ರಮಣದ ಶಬ್ದ” ಎಂದು ಹೇಳುತ್ತಿದ್ದಂತೆಯೇ ದಾಳಿ ನಡೆದಿದದ್ದು, ಇಡೀ ಸ್ಟುಡಿಯೋ ಧೂಳಿನಿಂದ ಆವೃತವಾಯಿತು.
ನಿರೂಪಕಿ ಸಹರ್ ಎಮಾಮಿ ಅವರು ನೇರಪ್ರಸಾರದಿಂದ ಹೊರಗೆ ಓಡಿಹೋದರು. ಈ ಸಂದರ್ಭದಲ್ಲಿ ಚಾನೆಲ್ ಸಿಬ್ಬಂದಿ ‘ಅಲ್ಲಾಹು ಅಕ್ಬರ್’ ಎಂದು ಕೂಗಿಕೊಂಡು ಪ್ರಾಣರಕ್ಷಣೆಗೆ ಓಡಿದ್ದಾರೆ.
ಚಾನೆಲ್‌ನ ಪ್ರಸಾರವು ಕೂಡಲೇ ರೆಕಾರ್ಡ್ ಮಾಡಿದ ಕಾರ್ಯಕ್ರಮಗಳಿಗೆ ಬದಲಾಯಿತು. ಶೀಘ್ರದಲ್ಲೇ, ಎಮಾಮಿ ಮತ್ತೊಂದು ಸ್ಟುಡಿಯೋದಿಂದ ನೇರ ಪ್ರಸಾರಕ್ಕೆ ಹಿಂತಿರುಗಿದರು. ಮತ್ತೋರ್ವ ನಿರೂಪಕನೊಂದಿಗೆ ಕುಳಿತು ಮಾತನಾಡುತ್ತಿರುವುದು ಕಂಡುಬಂದಿತು.
ದಾಳಿಯ ಹೊಣೆಯನ್ನು ಇಸ್ರೇಲ್‌ನ ರಕ್ಷಣಾ ಸಚಿವಾಲಯ ಒಪ್ಪಿಕೊಂಡಿದೆ. “ದಾಳಿ ಪ್ರದೇಶದ ನಿವಾಸಿಗಳನ್ನು ವ್ಯಾಪಕವಾಗಿ ಸ್ಥಳಾಂತರಿಸಿದ ನಂತರ ಇರಾನಿನ ಆಡಳಿತದ ಪ್ರಚಾರ ಮತ್ತು ಪ್ರಚೋದನೆ ಪ್ರಸಾರ ಪ್ರಾಧಿಕಾರದ ಮೇಲೆ ಐಡಿಎಫ್ ದಾಳಿ ಮಾಡಿದೆ” ಎಂದು ಇಸ್ರೇಲ್ ಕಾಟ್ಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ನಾವು ಎಲ್ಲೆಡೆ ಇರಾನಿನ ಸರ್ವಾಧಿಕಾರಿಯನ್ನು ಹೊಡೆಯುತ್ತೇವೆ” ಎಂದು ಘೋಷಿಸಿದ್ದಾರೆ.
ಚಾನೆಲ್ ಮೇಲಿನ ದಾಳಿಯ ಒಂದು ಗಂಟೆಯ ಮೊದಲು, ಇಸ್ರೇಲಿ ಮಿಲಿಟರಿ ದೇಶದ ರಾಜ್ಯ ಟಿವಿ ಮತ್ತು ಪೊಲೀಸ್ ಪ್ರಧಾನ ಕಚೇರಿ ಮತ್ತು ಮೂರು ದೊಡ್ಡ ಆಸ್ಪತ್ರೆಗಳನ್ನು ಒಳಗೊಂಡಿರುವ ಮಧ್ಯ ಟೆಹ್ರಾನ್‌ನ ಒಂದು ಭಾಗದಲ್ಲಿ ಸುಮಾರು 330,000 ಜನರ ಮೇಲೆ ಪರಿಣಾಮ ಬೀರುವ ಬಗ್ಗೆ ಮೊದಲೇ ಎಚ್ಚರಿಕೆ ನೀಡಿತ್ತು.
ಸಂಘರ್ಷದ ನಾಲ್ಕನೇ ದಿನದಂದು ಇಸ್ರೇಲಿ ಮಿಲಿಟರಿ ಇರಾನಿನ ರಾಜಧಾನಿಯ ಮೇಲೆ ವಾಯು ಪ್ರಾಬಲ್ಯವನ್ನು ಸಾಧಿಸಿದೆ.
ಇರಾನ್ ವಿರುದ್ಧ ಯುದ್ಧ | ಟ್ರಂಪ್ ಅಧಿಕಾರ ತಡೆಯುವ ಮಸೂದೆ ಮಂಡಿಸಿದ ಯುಎಸ್ ಸೆನೆಟರ್


