ಇರಾನ್ ಮತ್ತು ಇಸ್ರೇಲ್ ನಡುವೆ ವಾಯು ಯುದ್ಧ ಹೆಚ್ಚುತ್ತಿರುವ ಮಧ್ಯೆ, ಇರಾನ್‌ನ ಪ್ರಮುಖ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಒಂದಾದ ”ಸೆಪಾ ಬ್ಯಾಂಕ್” ಮೇಲೆ ಮಂಗಳವಾರ ಸೈಬರ್ ದಾಳಿ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇರಾನ್‌ನ ಸೈನ್ಯ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC)ನೊಂದಿಗೆ ಸಂಬಂಧ ಹೊಂದಿರುವ ಇರಾನ್‌ನ ಅತ್ಯಂತ ಹಳೆಯ ಹಣಕಾಸು ಸಂಸ್ಥೆಗಳಲ್ಲಿ ಇದು ಒಂದಾಗಿದೆ. ಇರಾನ್ | ಸರ್ಕಾರಿ
“ಸೆಪಾ ಬ್ಯಾಂಕಿನ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಸೈಬರ್ ದಾಳಿ ನಡೆಸಲಾಗಿದ್ದು, ಸಂಸ್ಥೆಯ ಆನ್‌ಲೈನ್ ಸೇವೆಗಳಿಗೆ ಅಡ್ಡಿ ಉಂಟಾಗಿದೆ” ಎಂದು ಫಾರ್ಸ್ ಸುದ್ದಿ ಸಂಸ್ಥೆ ಹೇಳಿದ್ದು, ಮುಂದಿನ ಕೆಲವು ಗಂಟೆಗಳಲ್ಲಿ ಸಮಸ್ಯೆ ಬಗೆಹರಿಯುವ ನಿರೀಕ್ಷೆಯಿದೆ ಎಂದು ಹೇಳಿದೆ.
ಹ್ಯಾಕರ್‌ಗಳ ಗುಂಪಾದ ಪ್ರಿಡೇಟರಿ ಸ್ಪ್ಯಾರೋ ಈ ಸೈಬರ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, ತಾನು ಬ್ಯಾಂಕ್‌ನ ಎಲ್ಲಾ ಡೇಟಾವನ್ನು ನಾಶಪಡಿಸಿದ್ದೇನೆ ಎಂದು ಅದು ಹೇಳಿಕೊಂಡಿದೆ. ಇರಾನ್‌ನಲ್ಲಿ ವ್ಯಾಪಕ ಬ್ಯಾಂಕಿಂಗ್ ಅಡಚಣೆಗಳ ವರದಿಗಳ ನಡುವೆ ಈ ಹೇಳಿಕೆ ಹೊರಬಿದ್ದಿದೆ.
ಸೈಬರ್ ದಾಳಿಯ ಹಿನ್ನಲೆ ಮಂಗಳವಾರ ಹಲವಾರು ಸೆಪಾ ಬ್ಯಾಂಕ್‌ನ ಶಾಖೆಗಳನ್ನು ಮುಚ್ಚಲಾಯಿತು ಮತ್ತು ಗ್ರಾಹಕರು ತಮ್ಮ ಖಾತೆಗಳಿಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಹಕರು ಹೇಳಿದ್ದಾಗಿ ಇರಾನ್ ಇಂಟರ್‌ನ್ಯಾಷನಲ್ ವರದಿ ಮಾಡಿದೆ.
ಸೆಪಾ ಬ್ಯಾಂಕ್ ಇರಾನ್‌ನಲ್ಲಿ 1,800 ಶಾಖೆಗಳನ್ನು ಹೊಂದಿದ್ದು, ಜೊತೆಗೆ ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ಇಟಲಿಯಲ್ಲಿ ಕೂಡಾ ಶಾಖೆಗಳನ್ನು ಹೊಂದಿದೆ. 2015ರ ವೇಳೆ ಇರಾನ್ ಪರಮಾಣು ಒಪ್ಪಂದದಿಂದ ಹಿಂದೆ ಸರಿದ ನಂತರ ಅಮೆರಿಕ 2019 ರಲ್ಲಿ ಸೆಪಾ ಬ್ಯಾಂಕ್ ಮೇಲೆ ನಿರ್ಬಂಧಗಳನ್ನು ವಿಧಿಸಿತ್ತು.
ಅದಾಗ್ಯೂ, ಇರಾನ್ ಅಧಿಕಾರಿಗಳು ಬ್ಯಾಂಕ್ ಸ್ಥಗಿತವಾಗಿರುವ ಬಗ್ಗೆ ಅಥವಾ ಸೈಬರ್ ದಾಳಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದಾಗ್ಯೂ, ಸೆಪಾ ಬ್ಯಾಂಕಿನಲ್ಲಿನ ಸಮಸ್ಯೆಯನ್ನು ಕೆಲವೇ ಗಂಟೆಗಳಲ್ಲಿ ಪರಿಹರಿಸಲಾಗುವುದು ಎಂದು ಫಾರ್ಸ್ ನ್ಯೂಸ್ ಹೇಳಿದೆ.
ಈ ಹಿಂದೆ ಇರಾನಿನ ಉಕ್ಕಿನ ಸ್ಥಾವರಗಳು ಮತ್ತು ಇಂಧನ ಕೇಂದ್ರಗಳ ವಿರುದ್ಧ ನಡೆದ ಸೈಬರ್ ಕಾರ್ಯಾಚರಣೆಗಳ ಹೊಣೆಯನ್ನು ಹೊತ್ತುಕೊಂಡಿದ್ದ ಪ್ರಿಡೇಟರಿ ಸ್ಪ್ಯಾರೋ, ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಸೆಪಾ ಬ್ಯಾಂಕ್ ಮಿಲಿಟರಿ ಕಾರ್ಯಕ್ರಮಗಳಿಗೆ ಹಣಕಾಸು ಒದಗಿಸಲು ಮತ್ತು ಅಂತರರಾಷ್ಟ್ರೀಯ ನಿರ್ಬಂಧಗಳನ್ನು ತಪ್ಪಿಸಲು ಬಳಸಲಾಗಿದೆ ಎಂದು ಹೇಳಿದೆ. ಇರಾನ್ | ಸರ್ಕಾರಿ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಜಾಗತಿಕ ರಾಜತಾಂತ್ರಿಕ ಸಂಪರ್ಕದ ನಂತರ ಭಾರತಕ್ಕೆ ಎಷ್ಟು ದೇಶಗಳು ಬೆಂಬಲ ನೀಡಿವೆ: ಕೇಂದ್ರಕ್ಕೆ ಟಿಎಂಸಿ ಪ್ರಶ್ನೆ
ಜಾಗತಿಕ ರಾಜತಾಂತ್ರಿಕ ಸಂಪರ್ಕದ ನಂತರ ಭಾರತಕ್ಕೆ ಎಷ್ಟು ದೇಶಗಳು ಬೆಂಬಲ ನೀಡಿವೆ: ಕೇಂದ್ರಕ್ಕೆ ಟಿಎಂಸಿ ಪ್ರಶ್ನೆ

