Homeಅಂಕಣಗಳುಇಸ್ರೇಲ್-ಇರಾನ್ ಯುದ್ಧಕ್ಕೆ ಕಾರಣವೇನು? ಮುಂದೇನು?

ಇಸ್ರೇಲ್-ಇರಾನ್ ಯುದ್ಧಕ್ಕೆ ಕಾರಣವೇನು? ಮುಂದೇನು?

- Advertisement -
- Advertisement -

ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವ ಅಂಚಿನಲ್ಲಿದೆ. ಇರಾನ್ ಪರಮಾಣು ಹೊಂದುವ ಮೊದಲು ನಾವು ಆ ದೇಶದ ಮೇಲೆ ಬಾಂಬ್ ದಾಳಿ ಮಾಡಬೇಕು. ಇದೇ ಏಕೈಕ ಮಾರ್ಗ ಎಂದು ನಿರಂತರವಾಗಿ ಕಳೆದ ಮೂರು ದಶಕಗಳಿಂದಲೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳುತ್ತಲೇ ಬಂದಿದ್ದಾರೆ.

ಶುಕ್ರವಾರ (ಜೂನ್ 13) ಇಸ್ರೇಲ್ ಅಂತಿಮವಾಗಿ ಇರಾನ್ ಮೇಲೆ ದಾಳಿ ಮಾಡಲು ಒಪ್ಪಿಗೆ ನೀಡಿತು. ಇರಾನಿನ ಹಲವು ಕಡೆ ಇಸ್ರೇಲ್ ನಡೆಸಿದ ವಾಯುದಾಳಿಗೆ ಕನಿಷ್ಠ 78 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ 20 ಮಕ್ಕಳು, ಕೆಲವು ಉನ್ನತ ಇರಾನಿ ಮಿಲಿಟರಿ ಅಧಿಕಾರಿಗಳು ಮತ್ತು ಪ್ರಮುಖ ಪರಮಾಣು ವಿಜ್ಞಾನಿಗಳು ಸೇರಿದ್ದಾರೆ.

ಇದಕ್ಕೆ ಪ್ರತಿಕಾರವಾಗಿ ಇರಾನ್ ನಿಂದ ಇಸ್ರೇಲಿನಾದ್ಯಂತ ಹಲವಾರು ಸ್ಥಳಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗಳು ನಡೆದಿವೆ. ಇದರಿಂದ ತನ್ನ ದೇಶದ ಮೂವರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಶುಕ್ರವಾರ ಹೇಳಿತ್ತು. ಪಶ್ಚಿಮ ಏಷ್ಯಾದಲ್ಲಿನ ಇಬ್ಬರು ಪರಮ ವಿರೋಧಿಗಳ ನಡುವಿನ ಈ ಸಂಘರ್ಷವು ಮನುಕುಲಕ್ಕೆ ಹೆಚ್ಚು ಪ್ರತಿಕೂಲವೆಂದು ಹೇಳಲಾಗಿದೆ. ಅಮೆರಿಕ ಮತ್ತು ಇರಾನ್ ಮಧ್ಯೆ ನಡೆಯುತ್ತಿದ್ದ ಪರಮಾಣು ಒಪ್ಪಂದದ ಮಾತುಕತೆಗಳ ಸಂದರ್ಭದಲ್ಲೇ ಇರಾನ್ ಮೇಲೆ ಇಸ್ರೇಲ್ ದಾಳಿ ನಡೆದಿದೆ.

ಇತ್ತೀಚಿನವರೆಗೂ ಇರಾನ್ ಮತ್ತು ಅಮೆರಿಕ ಅಂತಿಮವಾಗಿ ಪರಮಾಣು ಒಪ್ಪಂದಕ್ಕೆ ಬರಬಹುದೆಂದು ಹಲವರು ನಿರೀಕ್ಷಿಸಿದ್ದರು. ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (IAEA) ಇರಾನ್ ರಹಸ್ಯ ಪರಮಾಣು ಶಸ್ತ್ರಾಸ್ತ್ರಗಳ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದ ತಕ್ಷಣ ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಿತು. ಈ ಆರೋಪವನ್ನು ಇರಾನ್ ನಿರಾಕರಿಸಿತು. IAEAಯು ಜಿಯೋನಿಸ್ಟ್ ಘಟಕ(ಇಸ್ರೇಲ್)ದ ಪರವಾಗಿ ವರದಿ ನೀಡುತ್ತಿದೆ ಎಂದು ಇರಾನ್ ಆರೋಪಿಸಿದೆ.

ಇದಕ್ಕೂ ಮೊದಲು ಡೊನಾಲ್ಡ್ ಟ್ರಂಪ್ ಮಾತನಾಡಿ, ಇಸ್ರೇಲ್ ದೇಶವು ಅಮೆರಿಕ ಮತ್ತು ಇರಾನ್ ಪರಮಾಣು ಒಪ್ಪಂದವನ್ನು ಹಾಳುಮಾಡಬಾರದು ಎಂದು ಹೇಳಿದ್ದರು. ಇರಾನಿಯನ್ನರು ಇಸ್ರೇಲಿನ ದಾಳಿಯನ್ನು ನಿರೀಕ್ಷಿಸಿದ್ದರು. ಆದರೆ ಅಮೆರಿಕದೊಂದಿಗೆ ಪರಮಾಣು ಒಪ್ಪಂದದಲ್ಲಿ ತೊಡಗಿಸಿಕೊಂಡಿದ್ದ ಸಮಯದಲ್ಲಿ ಈ ದಾಳಿ ನಡೆಯುತ್ತದೆ ಎಂದು ಇರಾನ್ ನಿರೀಕ್ಷಿಸಿರಲಿಲ್ಲವೆಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಇರಾನ್ ನ ಪರಮಾಣು ಕಾರ್ಯಕ್ರಮವು 1957ರಲ್ಲಿ ‘ಶಾಂತಿಗಾಗಿ ಪರಮಾಣುಗಳು’ ಕಾರ್ಯಕ್ರಮದ ಅಡಿಯಲ್ಲಿ ಆಗಿನ ಅಮೆರಿಕದ ಅಧ್ಯಕ್ಷ ಡ್ವೈಟ್ ಡಿ. ಐಸೆನ್ಹೋವರ್ ಅವರ ಸಹಾಯದೊಂದಿಗೆ ಪ್ರಾರಂಭವಾಯಿತು. ಸೋವಿಯತ್ ವಿರುದ್ಧ ವಿಶ್ವಾಸಾರ್ಹ ಮಿತ್ರರೆಂದು ಪರಿಗಣಿಸಿ ಆಗ ಇರಾನ್ ಅನ್ನು ಆಳುತ್ತಿದ್ದ ಪಹ್ಲವಿಯರು 1970ರಲ್ಲಿ ಅಪ್ರಸರಣ ಒಪ್ಪಂದಕ್ಕೆ (NPT) ಸಹಿ ಹಾಕಿದ್ದರು.

ಆಗ ಭಾರತವು ಈ NPTಗೆ ಸಹಿ ಹಾಕಿರಲಿಲ್ಲ. P5 ಎಂದು ಗುರುತಿಸಲ್ಪಟ್ಟ ದೇಶಗಳಿಗೆ ಮಾತ್ರ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವ ಹಕ್ಕನ್ನು ನೀಡಿರುವುದು ತಾರತಮ್ಯ ಎಂದು ಆಗ ಭಾರತವು ಹೇಳಿತ್ತು. 1979ರಲ್ಲಿ ಇರಾನ್ ನಲ್ಲಿ ಇಸ್ಲಾಮಿಕ್ ಕ್ರಾಂತಿಯ ಸಮಯದಲ್ಲಿ ಅಯತೊಲ್ಲಾ ಖೊಮಿನಿಯವರು ಪಹ್ಲವಿ ಆಡಳಿತವನ್ನು ಉರುಳಿಸಿದರು. ಆಗಿನಿಂದ ಅಮೆರಿಕದೊಂದಿಗೆ ಇರಾನಿನ ಭಿನ್ನಾಭಿಪ್ರಾಯ ಪ್ರಾರಂಭವಾಯಿತು. 1980ರಿಂದ ಈ ಎರಡೂ ದೇಶಗಳು ಯಾವುದೇ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿಲ್ಲ. ಅಂದಿನಿಂದಲೂ ಅವು ಪರಸ್ಪರ ದಾಳಿಗಳನ್ನು ನಡೆಸುತ್ತಾ ಬರುತ್ತಿವೆ.

2000ರ ಆರಂಭದಲ್ಲಿ ಇರಾನ್ ದೇಶವು ಯುರೇನಿಯಂ ಅಭಿವೃದ್ಧಿಪಡಿಸಲು ಪ್ರಾರಂಭಿಸಿದಾಗ ಇರಾನ್-ಅಮೆರಿಕಗಳ ಮಧ್ಯೆ ಸಂಘರ್ಷ ಪ್ರಾರಂಭವಾಯಿತು. ಆಗ ಅಮೆರಿಕವು ಏಕಕಾಲದಲ್ಲಿ ಇರಾಕ್ ಮತ್ತು ಅಫ್ಘಾನಿಸ್ತಾನದ ಮೇಲೆ ಆಕ್ರಮಣ ಮಾಡಿತು.

ಈ ರೀತಿ ಎರಡು ವರ್ಷಗಳ ಉದ್ವಿಗ್ನತೆಯ ನಂತರ ಅಂದರೆ 2004ರಲ್ಲಿ ಇರಾನ್ ತನ್ನ ಪರಮಾಣು ಅಸ್ತ್ರ ಹೊಂದುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಫ್ರಾನ್ಸ್, ಜರ್ಮನಿ ಮತ್ತು ಯುಕೆ ಜೊತೆಗೆ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿತು. ದೀರ್ಘಕಾಲದವರೆಗೆ ಈ ಕುರಿತು ಮಾತುಕತೆಗಳು ನಿಂತುಹೋದವು ಮತ್ತು ಅಮೆರಿಕದಂತಹ ದೇಶಗಳನ್ನು ವಿರೋಧಿಸುವ ಇರಾನ್ ಅಧ್ಯಕ್ಷರಲ್ಲಿ ಒಬ್ಬರಾದ ಮಹಮೂದ್ ಅಹ್ಮದಿನೆಜಾದ್ ಅವರ ಅಡಿಯಲ್ಲಿ ಇರಾನ್ ಮತ್ತೆ ಪರಮಾಣು ಅಸ್ತ್ರ ಹೊಂದುವ ಪ್ರಕ್ರಿಯೆಯನ್ನು ಪುನರಾರಂಭಿಸಿತು. ಇದರಿಂದಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ಇರಾನ್ ನಿರ್ಬಂಧಗಳಿಗೆ ಒಳಗಾಯಿತು.

NPT ಒಪ್ಪಂದದ ಅಡಿಯಲ್ಲಿ ‘ಶಾಂತಿಯುತ ಪರಮಾಣು ತಂತ್ರಜ್ಞಾನ’ವನ್ನು ಅಭಿವೃದ್ಧಿಪಡಿಸಲು ತನಗೆ ಹಕ್ಕಿದೆ ಎಂದು ಇರಾನ್ ವಾದಿಸಿತು. ಆಗಿನ ಅಮೆರಿಕದ ಅಧ್ಯಕ್ಷ ಬುಷ್ ಆಡಳಿತವು ಇದರ ನಿಜವಾದ ಉದ್ದೇಶಗಳನ್ನು ಪ್ರಶ್ನಿಸಿತು.

2015ರಲ್ಲಿ ಅಗಿನ ಅಮೆರಿಕದ ಅಧ್ಯಕ್ಷ ಒಬಾಮಾ ಆಡಳಿತವು ಚೀನಾ, ಫ್ರಾನ್ಸ್, ಯುಕೆ, ರಷ್ಯಾ ಮತ್ತು ಜರ್ಮನಿ ಜೊತೆಗೆ ಇರಾನಿನೊಂದಿಗೆ ಐತಿಹಾಸಿಕ ಜಂಟಿ ಸಮಗ್ರ ಕ್ರಿಯಾ ಯೋಜನೆ (JCPOA) ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಿತು. ಇರಾನ್ ತನ್ನ ಪರಮಾಣು ಅಸ್ತ್ರಗಳ ಸಂಗ್ರಹವನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಮತ್ತು ಯುರೇನಿಯಂ ಅಭಿವೃದ್ದಿಪಡಿಸುವ ಮಟ್ಟವನ್ನು 3.67%ಕ್ಕೆ ಇಳಿಸಲು ಒಪ್ಪಿಕೊಂಡಿತು. ಇದಕ್ಕೆ ಪ್ರತಿಯಾಗಿ ವಿಶ್ವಸಂಸ್ಥೆಯು ಇರಾನ್ ಮೇಲೆ ವಿಧಿಸಿದ್ದ ನಿರ್ಬಂಧಗಳನ್ನು ತೆಗೆದುಹಾಕಿತು.

ಇದು ಸಾಮಾನ್ಯ ಇರಾನಿಯನ್ನರಿಗೆ ಎಷ್ಟು ಮುಖ್ಯವಾಗಿತ್ತು ಎಂದರೆ ಮಾಜಿ ವಿದೇಶಾಂಗ ಸಚಿವ ಜಾವಿದ್ ಝರೀಫ್ ಇದ್ದಕ್ಕಿದ್ದಂತೆ ಆಗ ಇರಾನಿನಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿಯಾದರು. ಆಗ ಇರಾನ್ ನ ಯುವ ಜನಾಂಗ ಝರೀಫ್ ಅವರ ಭಾವಚಿತ್ರದೊಂದಿಗೆ ಟೆಹ್ರಾನ್ ಬೀದಿಗಳಲ್ಲಿ ಮೆರವಣಿಗೆ ನಡೆಸಿತು. ಇದರಿಂದಾಗಿ ಅಧ್ಯಕ್ಷ ಹಸನ್ ರೌಹಾನಿ ದೇಶಾದ್ಯಂತ ಅಪಾರ ಬೆಂಬಲವನ್ನು ಪಡೆದರು.

ಒಂದು ದಶಕದವರೆಗೂ ಇರಾನಿನ ಆರ್ಥಿಕತೆಯು ತೀವ್ರ ನಿರ್ಬಂಧಗಳಿಂದ ದುರ್ಬಲಗೊಂಡಿತ್ತು. JCPOA ಒಪ್ಪಂದದ ವಿರುದ್ಧ ಇದ್ದ ಕೆಲವು ಪ್ರಬಲ ಸಂಪ್ರದಾಯವಾದಿಗಳ ವಿರೋಧದ ಹೊರತಾಗಿಯೂ ಇರಾನಿನಲ್ಲಿ ಈ ಒಪ್ಪಂದವನ್ನು ವ್ಯಾಪಕವಾಗಿ ಒಪ್ಪಿಕೊಳ್ಳಲಾಯಿತು. ಇದು ಇರಾನ್ ನೊಂದಿಗಿನ ಪಾಶ್ಚಿಮಾತ್ಯ ರಾಜತಾಂತ್ರಿಕತೆಯ ಅತಿದೊಡ್ಡ ಯಶಸ್ಸುಗಳಲ್ಲಿ ಒಂದಾಗಿತ್ತು.

ಆಗಲೂ ಕೂಡ ಇರಾನ್ ಅಭಿವೃದ್ಧಿಪಡಿಸಿದ ಯುರೇನಿಯಂನ ದೊಡ್ಡ ಸಂಗ್ರಹವನ್ನು ಮತ್ತು ಸುಮಾರು 20,000 ಸೆಂಟ್ರಿಫ್ಯೂಜ್ಗಳನ್ನು ಹೊಂದಿತ್ತು. ಇದು 8ರಿಂದ10 ಬಾಂಬ್ ಗಳನ್ನು ನಿರ್ಮಿಸಲು ಸಾಕಾಗಿತ್ತು. ಈ ಒಪ್ಪಂದವನ್ನು ಕಡೆಗಣಿಸಿ ಇರಾನ್ ಬಾಂಬ್ ತಯಾರಿಸಲು ಧಾವಿಸಿದರೆ ಅದು ಎರಡು ಅಥವಾ ಮೂರು ತಿಂಗಳಲ್ಲಿ ಸಾಕಷ್ಟು ಯುರೇನಿಯಂ ಅನ್ನು ಸಿದ್ಧಪಡಿಸಬಹುದು. ಆದರೆ ಈ JCPOA ಒಪ್ಪಂದವು ಬಾಂಬ್ ರಚಿಸಲು ಅಗತ್ಯವಿರುವ ಪ್ರಮುಖ ಅಂಶಗಳನ್ನು ತೆಗೆದುಹಾಕಿತು.

ಟ್ರಂಪ್ 2018ರಲ್ಲಿ ಹಲವು ಕಾರಣದಿಂದ ಏಕಪಕ್ಷೀಯವಾಗಿ ಈ ಒಪ್ಪಂದವನ್ನು ಮುರಿದರು. ಟ್ರಂಪ್ ಅವರ ನಿರ್ಧಾರವನ್ನು ಉಳಿದ P5 ಪಾಲುದಾರ ದೇಶಗಳು ಟೀಕಿಸಿದವು. ಆದರೆ ಅವು ಇರಾನಿನ ತೈಲ ಉದ್ಯಮದ ಮೇಲೆ ನಿರ್ಬಂಧಗಳನ್ನು ಮತ್ತೆ ಹೇರಿದವು. 2020ರಲ್ಲಿ ಇರಾನ್‌ನಲ್ಲಿ ಎರಡನೇ ಪ್ರಮುಖ ವ್ಯಕ್ತಿಯಾಗಿದ್ದ ಇರಾನಿನ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ (IRGC) ಮುಖ್ಯಸ್ಥ ಜನರಲ್ ಕಾಸೆಮ್ ಸುಲೈಮಾನಿ ಅವರನ್ನು ಅಮೆರಿಕವು ಹತ್ಯೆ ಮಾಡಿತು.

ಸುಲೈಮಾನಿ ಅವರು ಇರಾನ್ ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಆಪ್ತ ವಲಯದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದ್ದರು. ಈತನ ನಾಯಕತ್ವದಡಿ ಸಿರಿಯಾದ ಅಲಾವೈಟ್ ಆಡಳಿತ, ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಬಂಡುಕೋರರು, ಗಾಜಾದ ಹಮಾಸ್, ಇರಾಕ್‌ನಲ್ಲಿ IRGC-ತರಬೇತಿ ಪಡೆದ ಶಿಯಾ ಬಂಡುಕೋರರು ಮತ್ತು ಯೆಮೆನ್‌ನಲ್ಲಿ ಹೂತಿಗಳು ರಹಸ್ಯ ಕ್ಷಿಪಣಿ ಮತ್ತು ಡ್ರೋನ್ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸಿದ್ದರು.

ಸುಲೈಮಾನಿಯ ಹತ್ಯೆಯು ಅಮೆರಿಕ-ಇರಾನ್ ಸಂಬಂಧದಲ್ಲಿ ಹೊಸ ಬಿರುಕಿಗೆ ಕಾರಣವಾಯಿತು. ಇರಾನ್ ಪರಮಾಣು ಒಪ್ಪಂದದ ಮಿತಿಗಳನ್ನು ತ್ಯಜಿಸಿತು. ಈ ನಡೆ ಒಪ್ಪಂದವನ್ನು ಪುನರುಜ್ಜೀವನಗೊಳಿಸುವ ಯಾವುದೇ ಭರವಸೆಯನ್ನು ಸಹ ಕೊನೆಗೊಳಿಸಿತು. ಇರಾನ್ ಸುಲೈಮಾನಿಯ ಹತ್ಯೆಯ ಪ್ರತೀಕಾರವಾಗಿ ಇರಾಕ್‌ನಲ್ಲಿರುವ ಅಮೆರಿಕದ ಎರಡು ವಾಯುನೆಲೆಗಳ ಮೇಲೆ ದಾಳಿ ಮಾಡಿತು.

2025ರ ಮಾರ್ಚ್ 25ರವರೆಗೆ ಇರಾನ್ ಯಾವುದೇ ಪರಮಾಣು ಬೆದರಿಕೆಯನ್ನು ಹೊಂದಿರಲಿಲ್ಲ ಎಂದು ಅಮೆರಿಕ ಗುಪ್ತಚರ ಇಲಾಖೆ ಹೇಳಿತ್ತು. “ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ನಿರ್ಮಿಸುತ್ತಿಲ್ಲ ಮತ್ತು ಸರ್ವೋಚ್ಚ ನಾಯಕ ಖಮೇನಿ 2003ರಲ್ಲಿ ಸ್ಥಗಿತಗೊಳಿಸಿದ ಪರಮಾಣು ಶಸ್ತ್ರಾಸ್ತ್ರ ಕಾರ್ಯಕ್ರಮಕ್ಕೆ ಅಧಿಕಾರ ನೀಡಿಲ್ಲ” ಎಂದು ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಹೇಳಿದ್ದರು.

ಇದರ ಮಧ್ಯೆ ಅಮೆರಿಕ ಮತ್ತು ಇರಾನ್ ನಡುವೆ ಪರಮಾಣು ಒಪ್ಪಂದ ಮಾತುಕತೆಗಳು ಒಂದು ಷರತ್ತಿನ ಮೇಲೆ ನಿಂತಿದ್ದವು. ಇರಾನ್ ತನ್ನ ಪರಮಾಣು ತಂತ್ರಜ್ಞಾನವನ್ನು ಸಂಪೂರ್ಣವಾಗಿ ತ್ಯಜಿಸಲು ಬಯಸಿರಲಿಲ್ಲ. ಹಾಗೆ ಮಾಡುವುದು ದೇಶದ ಸಾವಿರಾರು ಪರಮಾಣು ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ದ್ರೋಹ ಬಗೆದಂತೆ ಆಗುತ್ತದೆ ಎಂದು ಖಮೇನಿ ಹೇಳಿದ್ದರು. ಈ ಕುರಿತು ಅಂದರೆ ಇರಾನ್‌ನಲ್ಲಿ ಈಗ ಪರಮಾಣು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕಳೆದ ವಾರವಷ್ಟೆ IAEA ಆರೋಪ ಮಾಡಿತ್ತು.

ಈ ನಡುವೆ ಸುಮಾರು ಎರಡು ವರ್ಷದಿಂದ ಗಾಜಾದ ಮೇಲೇ ಇಸ್ರೇಲ್ ದಾಳಿ ಮಾಡುತ್ತಲೇ ಇದೆ. ಇದರಿಂದಾಗಿ ತನ್ನ ಸಾಮ್ರಾಜ್ಯ ಕುಸಿಯುವ ಭೀತಿಯನ್ನು ಇರಾನ್ ಎದುರಿಸುತ್ತಿದೆ. ಸಿರಿಯಾದಲ್ಲಿ ಅಲಾವೈಟ್ ಆಡಳಿತವನ್ನು ಉರುಳಿಸಲಾಗಿದೆ. ಇರಾನ್‌ನ ಅತ್ಯಂತ ವಿಶ್ವಾಸಾರ್ಹ ಮಿತ್ರ ಹಿಜ್ಬುಲ್ಲಾದ ನಾಯಕ ಹಸನ್ ನಸ್ರಲ್ಲಾ ಮೃತಪಟ್ಟಿದ್ದಾರೆ. ಇಸ್ರೇಲ್‌ಗೆ ಅತಿ ಹತ್ತಿರದ ಬೆದರಿಕೆಯಾದ ಹಿಜ್ಬುಲ್ಲಾವು ಧ್ವಂಸಗೊಂಡಿದೆ. ಇದೆಲ್ಲದರ ಪರಿಣಾಮವಾಗಿ ಇರಾನ್ ಬಿಗಿಯಾದ ಹಗ್ಗದ ಮೇಲೆ ನಡೆಯುವಂತಾಗಿದೆ.

ಇರಾನ್‌ನಲ್ಲಿ ಉನ್ನತ ಮಟ್ಟದ ಹತ್ಯೆಗಳನ್ನು ನಡೆಸುವಲ್ಲಿ ಇಸ್ರೇಲ್ ಯಾವುದೇ ಸಂಯಮವನ್ನು ತೋರಿಸಿಲ್ಲ. ಅದು ಈಗ ತನ್ನ ಕಾರ್ಯಾಚರಣೆಗಳನ್ನು ವಿಸ್ತರಿಸಲು ಮತ್ತು ಇರಾನ್ ಅನ್ನು ತನ್ನ ಪ್ರಾಥಮಿಕ ಗುರಿಯನ್ನಾಗಿ ಮಾಡಲು ಬಯಸಿದೆ. ಈ ಹಿಂದೆ ಇಸ್ರೆಲ್ ಇರಾನಿನ ನೆಲದಲ್ಲಿ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯಾ ಅವರನ್ನು ಕೊಂದಿತು ಮತ್ತು ಅದು IRGC ಒಳಗೂ ಕೂಡ ನುಸುಳಿತ್ತು.

ಅಮೆರಿಕ ಮತ್ತು ಇರಾನ್ ನಡುವಿನ ಪರಮಾಣು ಒಪ್ಪಂದವು ಬಹಳ ಹತ್ತಿರವಾಗಿದ್ದವು ಎಂದು ಹಲವರು ಅಭಿಪ್ರಾಯಿಸಿದ್ದರು. ಇಲ್ಲಿಯವರೆಗೂ ನೆತನ್ಯಾಹು ಅವರ ಇರಾನ್ ಮೇಲಿನ ಯುದ್ಧದಾಹಕ್ಕೆ ಟ್ರಂಪ್ ಅತೃಪ್ತರಾಗಿದ್ದರು ಎಂದು ವರದಿಯಾಗಿತ್ತು. ಈಗ ಇಸ್ರೇಲ್ –ಇರಾನ್ ಸಂಘರ್ಷದ ಕುರಿತು ಟ್ರಂಪ್ ಪ್ರತಿಕ್ರಿಯೆ ನೋಡಿದರೆ ಅಮೆರಿಕನ್ನರು ಇಸ್ರೇಲ್‌ ನ ಇತ್ತೀಚಿನ ದಾಳಿಗಳ ಬಗ್ಗೆ ಮೊದಲಿನಿಂದಲೂ ತಿಳಿದಿದ್ದರು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಸಾಮಾನ್ಯ ಇರಾನಿಯನ್ನರು ಇದನ್ನು ದ್ರೋಹ ಎಂದು ಪರಿಗಣಿಸಿದ್ದಾರೆ.

ಮುಂದೆ ಏನು?

ಇರಾನ್ ಹತ್ತಿರ ಈಗ ಕೆಲವು ಆಯ್ಕೆಗಳಿವೆ. ಅದೀಗ ಇಸ್ರೇಲ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸುತ್ತಿದೆ. ಅದು ಅಮೆರಿಕದೊಂದಿಗೆ ಪರಮಾಣು ಒಪ್ಪಂದವನ್ನು ಕೈಬಿಟ್ಟಿದೆ. ಅಮೆರಿಕವು ನೇರವಾಗಿ ತಮ್ಮ ಮೇಲೆ ದಾಳಿ ಮಾಡುವುದನ್ನು ತಪ್ಪಿಸಲು ಅಮೆರಿಕದ ಆಸ್ತಿಗಳ ಮೇಲೆ ದಾಳಿ ಮಾಡದಂತೆ ಇರಾನ್ ಎಚ್ಚರಿಕೆ ವಹಿಸಿದೆ.
ಮತ್ತೊಂದೆಡೆ ಇಸ್ರೇಲ್ ಕೂಡ ಇರಾನ್ ಮೇಲೆ ದಾಳಿ ನಡೆಸುತ್ತಿದೆ. ಇದು ತನ್ನ ದಾಳಿಯ ಆರಂಭ ಮಾತ್ರ ಎಂದು ಹೇಳುತ್ತಿದೆ. ಇಸ್ರೇಲ್ ಇತ್ತೀಚೆಗೆ ಇರಾನ್‌ನ ತೈಲ ಕ್ಷೇತ್ರಗಳ ಮೇಲೆ ದಾಳಿ ಮಾಡಿದಾಗ, ಇಸ್ರೇಲ್ ನ ಹೈಫಾ ಬಂದರು ಮತ್ತು ಟೆಲ್ ಅವಿವ್ ಮೇಲೆ ಇರಾನ್ ದಾಳಿ ಮಾಡಿದೆ.

ಜಾಗತಿಕ ತೈಲ ವ್ಯಾಪಾರದ ಸುಮಾರು ಐದನೇ ಒಂದು ಭಾಗವಾದ ಓಮನ್ ಕೊಲ್ಲಿ ಮತ್ತು ಪರ್ಷಿಯನ್ ಕೊಲ್ಲಿ ನಡುವಿನ ಕಿರಿದಾದ ಮಾರ್ಗವನ್ನು ಇರಾನ್ ನಿಯಂತ್ರಿಸುತ್ತದೆ. ಇದು ಅಮೆರಿಕಗೆ ಅತ್ಯಂತ ಮುಖ್ಯವಾಗಿದೆ. ಇದು ಅಮೆರಿಕನ್ನರೊಂದಿಗೆ ನೇರ ಸಂಘರ್ಷಕ್ಕೆ ಕಾರಣವಾಗಬಹುದೇ? ನಮಗೆ ಇನ್ನೂ ತಿಳಿದಿಲ್ಲ, ಆದರೆ ಇದು ಇನ್ನು ಮುಂದೆ ಅಸಾಧ್ಯವಾದ ಸನ್ನಿವೇಶವಲ್ಲ.

ಪಶ್ಚಿಮ ಏಷ್ಯಾದಾದ್ಯಂತ ಯುದ್ದದ ಕಾರ್ಮೋಡಗಳು ದೊಡ್ಡದಾಗಿ ಆವರಿಸಿಕೊಂಡಿವೆ. ಅಮೆರಿಕ-ಇರಾನ್ ಪರಮಾಣು ಒಪ್ಪಂದದ ಯಾವುದೇ ಸಾಧ್ಯತೆಯು ಇಲ್ಲವಾಗಿದೆ. ಇದು ಸದ್ಯಕ್ಕಂತು ಬಹುತೇಕ ಖಚಿತವಾಗಿದೆ. ಇರಾನ್ NPT ಯಿಂದ ಹಿಂದೆ ಸರಿಯುವುದಾಗಿ ಬೆದರಿಕೆ ಹಾಕಿದೆ. ತನ್ನ ನೆಲೆದಲ್ಲಿ ಹೆಚ್ಚುತ್ತಿರುವ ಆಕ್ರೋಶದಿಂದಾಗಿ ಇರಾನ್ ಇನ್ನು ಮುಂದೆ ಸಮೂಹ ವಿನಾಶಕಾರಿ ಪರಮಾಣು ಶಸ್ತ್ರಾಸ್ತ್ರಗಳನ್ನು ಇನ್ನು ಹೆಚ್ಚು ಹೊಂದುವುದರತ್ತ ಹೆಜ್ಜೆ ಹಾಕಬಹುದು.

ಆಹಾರ ಭದ್ರತೆಯ ಖಾತ್ರಿಗಾಗಿ ಕೃಷಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...