ಪಶ್ಚಿಮ ಬಂಗಾಳ ಸರ್ಕಾರವು 140 ಸಮುದಾಯಗಳನ್ನು ಇತರ ಹಿಂದುಳಿದ ವರ್ಗಗಳೆಂದು ವರ್ಗೀಕರಿಸುವ ಅಧಿಸೂಚನೆಯ ಅನುಷ್ಠಾನಕ್ಕೆ ಕಲ್ಕತ್ತಾ ಹೈಕೋರ್ಟ್ ಮಂಗಳವಾರ ತಡೆ ನೀಡಿದೆ ಎಂದು ಬಾರ್ ಆಂಡ್ ಬೆಂಚ್ ವರದಿ ಮಾಡಿದೆ. ಪಶ್ಚಿಮ ಬಂಗಾಳದ ಹೊಸ
ನ್ಯಾಯಮೂರ್ತಿಗಳಾದ ತಪಬ್ರತ ಚಕ್ರವರ್ತಿ ಮತ್ತು ರಾಜಶೇಖರ್ ಮಾಂಥ ಅವರನ್ನೊಳಗೊಂಡ ಪೀಠವು, ಪ್ರಕರಣದ ಮುಂದಿನ ವಿಚಾರಣೆ ನಡೆಯಲಿರುವ ಜುಲೈ 31 ರವರೆಗೆ ಪಟ್ಟಿಯ ಆಧಾರದ ಮೇಲೆ ಕ್ರಮಗಳನ್ನು ತೆಗೆದುಕೊಳ್ಳದಂತೆ ರಾಜ್ಯ ಸರ್ಕಾರಕ್ಕೆ ತಿಳಿಸಿದೆ.
ಪಶ್ಚಿಮ ಬಂಗಾಳ ಸರ್ಕಾರವು ಈ ತಿಂಗಳ ಆರಂಭದಲ್ಲಿ 76 ಉಪಜಾತಿಗಳನ್ನು ಇತರ ಹಿಂದುಳಿದ ವರ್ಗಗಳ ವರ್ಗಕ್ಕೆ ಸೇರಿಸುವ ಅಧಿಸೂಚನೆಯನ್ನು ಹೊರಡಿಸಿತ್ತು. ಇದರಿಂದಾಗಿ ಗುಂಪಿನಲ್ಲಿರುವ ಒಟ್ಟು ಸಮುದಾಯಗಳ ಸಂಖ್ಯೆ 140 ಕ್ಕೆ ತಲುಪಿದೆ.
140ರಲ್ಲಿ 80 ಸಮುದಾಯಗಳು ಮುಸ್ಲಿಮರಿಗೆ ಸೇರಿದವುಗಳಾಗಿದ್ದು, ಉಳಿದ 60 ಮುಸ್ಲಿಮೇತರರಾಗಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಮುಸ್ಲಿಮರು ಒಬಿಸಿ ವರ್ಗದಲ್ಲಿ ಸೇರಿಸಲಾದ ಜನಸಂಖ್ಯೆಯ 57.1% ರಷ್ಟಿದ್ದಾರೆ.
ರಾಜ್ಯ ಸರ್ಕಾರದ ಹಿಂದಿನ ಒಬಿಸಿಗಳ ಪಟ್ಟಿಯಲ್ಲಿ 113 ಉಪಗುಂಪುಗಳಿದ್ದವು, ಅದರಲ್ಲಿ 77 ಮುಸ್ಲಿಮರು ಮತ್ತು 36 ಮುಸ್ಲಿಮೇತರರಿದ್ದರು. ಆದಾಗ್ಯೂ, ಹೈಕೋರ್ಟ್ ಮೇ 2024 ರಲ್ಲಿ ಪಟ್ಟಿಯನ್ನು ರದ್ದುಗೊಳಿಸಿ, OBC ಮೀಸಲಾತಿಯನ್ನು 17% ರಿಂದ 7% ಕ್ಕೆ ಇಳಿಸಿತ್ತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಹೊಸ ಪಟ್ಟಿಯು ರಾಜ್ಯ ಸರ್ಕಾರಕ್ಕೆ OBC ಮೀಸಲಾತಿಯನ್ನು 17% ಗೆ ಪುನಃಸ್ಥಾಪಿಸಲು ಅವಕಾಶ ನೀಡುತ್ತದೆ.
ಹೈಕೋರ್ಟ್‌ನ ಮೇ 2024 ರ ನಿರ್ಧಾರವು ಸುಮಾರು ಐದು ಲಕ್ಷ ಪ್ರಮಾಣಪತ್ರಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ತೀರ್ಪಿನ ವಿರುದ್ಧ ರಾಜ್ಯ ಸರ್ಕಾರದ ಅರ್ಜಿ ಸುಪ್ರೀಂಕೋರ್ಟ್ ಮುಂದೆ ಬಾಕಿ ಇದೆ.
ಸರ್ಕಾರ ಸಿದ್ಧಪಡಿಸಿದ ಹೊಸ ಪಟ್ಟಿಯು ನ್ಯಾಯಾಂಗ ನಿಂದನೆಗೆ ಸಮ ಎಂದು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಹೇಳಿಕೊಂಡಿದ್ದಾರೆ. “ತೃಣಮೂಲ ಕಾಂಗ್ರೆಸ್ ಸರ್ಕಾರವು ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಪ್ರಯತ್ನಿಸುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.
2010 ರ ಮೊದಲು, OBC ಪಟ್ಟಿಯಲ್ಲಿ 66 ಸಮುದಾಯಗಳಿದ್ದವು, ಅದರಲ್ಲಿ ಕೇವಲ 11 ಸಮುದಾಯಗಳು ಮುಸ್ಲಿಮರದ್ದಾಗಿತ್ತು ಎಂದು ಅವರು ಹೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಆದಾಗ್ಯೂ, OBC ಪಟ್ಟಿಯಲ್ಲಿ ಈ ಗುಂಪುಗಳನ್ನು ಧರ್ಮದ ಕಾರಣಕ್ಕೆ ಸೇರಿಸಿಲ್ಲ, ಬದಲಾಗಿ ಆ ಸಮುದಾಯವು ಹಿಂದುಳಿದಿರುವಿಕೆಯನ್ನು ಮಾನದಂಡವಾಗಿಸಿ ಇದನ್ನು ಮಾಡಲಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ. ಬಿಜೆಪಿಯು ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸುತ್ತಿದ್ದು, “ಒಡೆದು ಆಳುವ” ನೀತಿಯನ್ನು ಅನುಸರಿಸುತ್ತಿದೆ ಎಂದು ಅದು ಆರೋಪಿಸಿದೆ. ಪಶ್ಚಿಮ ಬಂಗಾಳದ ಹೊಸ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಅನ್ನು ‘ಭಯೋತ್ಪಾದಕರು’ ಎಂದು ಘೋಷಿಸಿ: ಕೆನಡಾ ಪ್ರಾಂತ್ಯದ ಮುಖ್ಯಸ್ಥ ಒತ್ತಾಯ
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಅನ್ನು ‘ಭಯೋತ್ಪಾದಕರು’ ಎಂದು ಘೋಷಿಸಿ: ಕೆನಡಾ ಪ್ರಾಂತ್ಯದ ಮುಖ್ಯಸ್ಥ ಒತ್ತಾಯ

