ಉತ್ತರಪ್ರದೇಶದ ಶ್ರಾವಸ್ತಿ ಜಿಲ್ಲೆಯಲ್ಲಿ ಫತೇಹ್‌ಪುರ್ ಬಂಗೈ ಗ್ರಾಮದಲ್ಲಿರುವ 65 ವರ್ಷಗಳ ಹಳೆಯ ಇಸ್ಲಾಮಿಯಾ ಅರೇಬಿಯಾ ಅನ್ವರುಲ್ ಉಲೂಮ್ ಮದರಸಾವನ್ನು ಸ್ಥಳೀಯ ಆಡಳಿತವು ನೆಲಸಮಗೊಳಿಸಿದೆ. ಈ ಕುರಿತು ಸ್ಥಳೀಯ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ (ಜೂನ್ 19) ಸ್ಥಳೀಯ ತಹಸೀಲ್ದಾರ್ ಜಮುನ್ಹಾ ಅವರ ಆದೇಶದ ಮೇರೆಗೆ ಈ ಮದರಸಾದ ನೆಲಸಮಗೊಳಿಸುವ ಕಾರ್ಯಾಚರಣೆಯನ್ನು ನಡೆಸಲಾಗಿದೆ. ‘ಮದರಸಾವನ್ನು ಗ್ರಾಮಸಭಾ ಭೂಮಿಯಲ್ಲಿ ಅನುಮತಿಯಿಲ್ಲದೆ ಕಟ್ಟಲಾಗಿತ್ತು. ಈ ಭೂಮಿ ಸರ್ಕಾರಕ್ಕೆ ಸೇರಿದ್ದಾಗಿದೆ. ಇದಕ್ಕೂ ಮೊದಲು ಮದರಸಾ ಸಂಸ್ಥೆಗೆ ಅನೇಕ ನೋಟಿಸ್‌ಗಳನ್ನು ನೀಡಲಾಗಿದೆ’ ಎಂದು ತಹಸೀಲ್ದಾರ್ ಹೇಳಿದರು.
ಸ್ಥಳೀಯ ಗ್ರಾಮಸ್ಥರು ಮತ್ತು ಮುಸ್ಲಿಂ ಮುಖಂಡರು ತಹಶೀಲ್ದಾರ್ ಅವರ ಈ ಹೇಳಿಕೆಯನ್ನು ಆಕ್ಷೇಪಿಸಿದ್ದಾರೆ. “ಈ ಮದರಸಾ ಆರು ದಶಕಗಳಿಂದ ನಮ್ಮ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ” ಎಂದು ಸ್ಥಳೀಯ ನಿವಾಸಿ ಅಬ್ದುಲ್ ರಶೀದ್ ಹೇಳುತ್ತಾರೆ.
ಶ್ರಾವಸ್ತಿಯಲ್ಲಿರುವ 297 ಮದರಸಾಗಳಲ್ಲಿ ಕೇವಲ 105 ಮಾತ್ರ ಉತ್ತರಪ್ರದೇಶ ಮದರಸಾ ಮಂಡಳಿಯಿಂದ ಅಧಿಕೃತವಾಗಿ ಗುರುತಿಸಲ್ಪಟ್ಟಿವೆ. ಉಳಿದವುಗಳನ್ನು ಅಕ್ರಮ ಎಂದು ಸರಕಾರವು ಹಣೆಪಟ್ಟಿ ಹಚ್ಚಿ ಅವುಗಳನ್ನು ನೆಲಸಮಗೊಳಿಸುತ್ತಿದೆ.
ಈ 65 ವರ್ಷಗಳ ಹಳೆಯ ಮದರಸಾದ ಕೆಡವಿದ ದಿನವೇ, ಹರ್ದತ್ತ್ ನಗರ ಗಿರಂಟ್ ಪೊಲೀಸ್ ಠಾಣಾ ವ್ಯಾಪ್ತಿಯ ಬೇಗಂಪುರ್ ಗ್ರಾಮದಲ್ಲಿ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾದ ಇನ್ನೂ ಎರಡು ಮದರಸಾಗಳನ್ನು ನೆಲಸಮಗೊಳಿಸಲಾಗಿದೆ.
ಅದು ಯಾರೇ ಭಾಗಿಯಾಗಿರಲಿ, ಸರ್ಕಾರಿ ಭೂಮಿಯ ಮೇಲಿನ ಅತಿಕ್ರಮಣವನ್ನು ಸಹಿಸಲಾಗುವುದಿಲ್ಲ ಎಂದು ಸ್ಥಳೀಯ ಆಡಳಿತದ ಅಧಿಕಾರಿಗಳು ಹೇಳಿದ್ದಾರೆ.
उत्तर प्रदेश: श्रावस्ती में 65 साल पुराना मदरसा पर चला बुलडोजर, 1960 से चल रहा था मदरसा!
जानकारी के मुताबिक तहसीलदार जमुनहा के आदेश पर फतेहपुर बनगई में ग्राम सभा की सरकारी जमीन से मदरसा इस्लामिया अरबिया अनवारुल उलूम बनगई को कथित सरकारी जमीन से हटाया गया।
श्रावस्ती में 20 से… pic.twitter.com/6BR2RIOUdx
— The Muslim Spaces (@TheMuslimSpaces) June 19, 2025
ಸರ್ಕಾರದ ಈ ಬುಲ್ಡೋಜರ್ ನೀತಿಯು ಮುಸ್ಲಿಂ ಸಮುದಾಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಈ ಮದರಸಾಗಳು ಕಲಿಕೆ ಮತ್ತು ಶಾಂತಿಯ ಕೇಂದ್ರಗಳಾಗಿವೆ ಎಂದು ಶ್ರಾವಸ್ತಿಯ ಧಾರ್ಮಿಕ ವಿದ್ವಾಂಸ ಮೌಲಾನಾ ಇಮ್ರಾನ್ ಖುರೇಶಿ ಹೇಳಿದರು.
ದೇಶದಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಸೀದಿಗಳು, ಮದರಸಾಗಳು, ಈದ್ಗಾಗಳು ಮತ್ತು ಸ್ಮಶಾನಗಳನ್ನು ವ್ಯಾಪಕವಾಗಿ ಗುರಿಮಾಡಲಾಗುತ್ತಿದೆ ಎಂದು ವರದಿಯಾಗಿದೆ.
ರಾಜಕೀಯ ಒತ್ತಡದಲ್ಲಿ ಶತಮಾನಗಳಷ್ಟು ಹಳೆಯ ಮದರಸಾಗಳನ್ನು ಬುಲ್ಡೋಜರ್‌ನಿಂದ ಕೆಡವುದು ನಮ್ಮ ಗುರುತಿನ ಮೇಲೆ ನಡೆಸಿದ ದಾಳಿಯಾಗಿದೆ ಎಂದು ಸಮುದಾಯದ ನಾಯಕ ರಹೀಮ್ ಖಾನ್ ಅವರು ಕಳವಳ ವ್ಯಕ್ತಪಡಿಸಿದರು.
ನಾನು ಕಾನೂನು ಮತ್ತು ಸುವ್ಯವಸ್ಥೆಯನ್ನು ವಿರೋಧಿಸುವುದಿಲ್ಲ. ಆದರೆ ಏಕೆ ಕೇವಲ ಮುಸ್ಲಿಂ ಸಂಸ್ಥೆಗಳನ್ನು ಮಾತ್ರ ಗುರಿಪಡಿಸಲಾಗುತ್ತಿದೆ? ಎಂದು ಸಾಮಾಜಿಕ ಕಾರ್ಯಕರ್ತ ಫೈಜಾನ್ ಅಹ್ಮದ್ ಪ್ರಶ್ನಿಸಿದರು.
ಜಿಲ್ಲೆಯಾದ್ಯಂತ ಹೆಚ್ಚಿನ ಮದರಸಾಗಳ ಕುರಿತ ತನಿಖೆಗಳು ಮುಂದುವರಿಯುತ್ತಿವೆ. ಸಮುದಾಯವು ಇಂತಹ ನೆಲಸಮ ಕಾರ್ಯಾಚರಣೆಯ ಬದಲು ನ್ಯಾಯಕ್ಕಾಗಿ ಆಶಿಸುತ್ತಿದೆ. ನಮಗೆ ಶಾಂತಿ, ಗೌರವ ಮತ್ತು ಮಕ್ಕಳಿಗೆ ಶಿಕ್ಷಣ ನೀಡುವ ಹಕ್ಕು ಬೇಕು ಎಂದು ಅಬ್ದುಲ್ ರಶೀದ್ ಹೇಳಿದರು.
ಇನ್ನು ಮುಂದೆ ನೆಲಸಮಗೊಳಿಸಬೇಕೆಂದು ಗುರುತಿಸಲ್ಪಟ್ಟ ಮದರಸಾಗಳನ್ನು ರಕ್ಷಿಸಲು ಮುಸ್ಲಿಂ ಸಂಘಟನೆಗಳು ರಾಜ್ಯ ಸರ್ಕಾರಕ್ಕೆ ಮಧ್ಯಪ್ರವೇಶಿಸುವಂತೆ ಮನವಿ ಸಲ್ಲಿಸಲು ಯೋಜಿಸಿವೆ.
ಗಾಜಾ ನರಮೇಧ: ಹೈದರಾಬಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಎದುರು ಪ್ರತಿಭಟನೆ; ವಿದ್ಯಾರ್ಥಿಗಳ ಬಂಧನ


