Homeಅಂಕಣಗಳುಆಘಾತವಾಣಿ | ಅಟ್ಯಾಕ್ ಹನ್ಮಂತಕಕ್ಕಸು ಗುಂಡೀಲಿ ತರ್ಕಾರಿ ಬ್ಯೆಳ್ಕಂಡು ತಿನ್ಕಳಿ !

ಕಕ್ಕಸು ಗುಂಡೀಲಿ ತರ್ಕಾರಿ ಬ್ಯೆಳ್ಕಂಡು ತಿನ್ಕಳಿ !

- Advertisement -
- Advertisement -

ಎಲ್ಲರಿಗೂ ನಮಸ್ಕಾರ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ ಅಂತ. ಬನ್ನಿ ಈ ವಾರದ ಆಘಾತಕಾರಿ ಸುದ್ದಿಗಳು ಏನೇನಿವೆ ಎಂದು ಒಂಚೂರು ಬಗ್ಗಿ ನೋಡೋಣ.

ಹಾರೆಸ್ಸೆಸ್‍ಗೆ ಬಂತು ಮುಸ್ಲಿಮರ ಮೇಲೆ ಯದ್ವಾತದ್ವಾ ಲವ್ವು: ಎಲೆಕ್ಷನ್ ಟೈಮಲ್ಲಿ ಶುರುವಾಯ್ತು ಕುರಾನ್ ಮೇಲೆ ಪ್ಯಾರು..
ದಿನದ ಇಪ್ಪತ್ನಾಲ್ಕೂ ತಾಸೂ ದೇಶದ ಮುಸ್ಲಿಮರ ಮೇಲೆ ಕತ್ತಿ, ಕೊಡಲಿ, ಮಚ್ಚು, ಬ್ಲೇಡು, ಗರಗಸ ಹೀಗೆ ಕೈಗೆ ಸಿಕ್ಕಿದ್ದೆಲ್ಲವನ್ನೂ ಮಸೆದು ಕೊಯಕೊಯ ಅನ್ನುವ ಹಾರೆಸ್ಸೆಸ್ ಎಂಬ ಬ್ರಿಟಿಷರಿಗೆ ಗುಲಾಮಗಿರಿ ಮಾಡುತ್ತಿದ್ದ ಗೂಢಚಾರಿಗಳ ಸಂಸ್ಥೆಗೆ ಇದ್ದಕ್ಕಿದ್ದಂತೆ ಮುಸ್ಲಿಮರ ಮೇಲೆ ಪ್ಯಾರ್‍ಗೆ ಆಗ್ಬುಟ್ಟೈತೆ ಎಂಬ ನಸುಗುನ್ನಿ ನ್ಯೂಸೊಂದು ನಮಗೆ ಲಭ್ಯವಾಗಿದೆ. ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳಿರುವ ಈ ಸಂದರ್ಭದಲ್ಲಿ ಹಾರೆಸ್ಸೆಸ್ ಬುಡ್ಡಾಗಳು ಅಯೋಧ್ಯೆಯಲ್ಲಿ ಕುರಾನ್ ಪಠಣ ಮತ್ತು ನಮಾಜ್ ಪ್ರೋಗ್ರಾಂ ಹಮ್ಮಿಕೊಂಡಿದ್ದಾರೆ. ಮುಸ್ಲಿಮರ ಓಟು ನಮಗೆ ಬೇಡವೇ ಬೇಡ ಎಂದು ಈಗ ಅಬ್ಬೇಪಾರಿ ಪರಿಸ್ಥಿತಿಗೆ ತಲುಪಿರುವ ಹಾರೆಸ್ಸೆಸ್.. ಇದೀಗ ಸಾಬರ ಗಡ್ಡಕ್ಕೆ ಕೊಬ್ರಿ ಎಣ್ಣೆ ಸವರಿ ‘ಗಡ್ಡ ಎಳೀತೀವಿ ಮಿಠಾಯಿ ಕೊಡಿ’ ಎಂದು ಗಡ್ಡ ನೀವಲು ಹೊರಟಿರುವುದು ನಿಜಕ್ಕೂ ಅವರು ತಲುಪಿರುವ ದರ್ವೇಸಿ ಗತಿಗೆ ಸಾಕ್ಷಿಯಾಗಿದೆಯೆಂದು ತಿಳಿದು ಬಂದಿದೆ.
.                                       *****
ಅಚ್ಛೇದಿನ್ ಕೊಡ್ತೀವಿ ಅಂತ ಜನರ ಓಟು ತಗೊಂಡ್ರು; ಟಾಯ್ಲೆಟ್ ಗೊಬ್ಬರದಲ್ಲಿ ಬೆಳೆದ ತರಕಾರಿ ತಿನ್ನಿ ಅಂದ್ರು
ಬಾಲಿವುಡ್ ಚಿತ್ರರಂಗದ ಒನ್ & ಓನ್ಲಿ ಕೆನಡಾ ಮೂಲದ ದೇಶಭಕ್ತ ನಟ ಅಕ್ಷಯ್‍ಕುಮಾರ್ ಕಡೆಯಿಂದ ಸುದ್ದಿಯೊಂದು ಎಗರಿ ಬಂದಿದೆ. ಅತ್ಯುತ್ತಮ ಗುಣಮಟ್ಟದ ತರಕಾರಿಗಳು ಮತ್ತು ಉತ್ಕøಷ್ಟ ರುಚಿಗಾಗಿ ನಿಮ್ಮ ಮನೆಯ ಕಕ್ಕಸ್ಸುಗುಂಡಿಯ ಗೊಬ್ಬರದಲ್ಲಿ ನೀವೇ ತರಕಾರಿ ಬೆಳೆದು ಚಪ್ಪರಿಸಿಕೊಂಡು ತಿನ್ನಿರೆಂದು ಅಕ್ಷಯ್ ಕುಮಾರ್ ಕೇಂದ್ರ ಸರ್ಕಾರದ ಜಾಹೀರಾತಿನಲ್ಲಿ ಹೇಳಿ ಕಾಸೆತ್ತಿಕೊಂಡು ಹೋಗಿದ್ದಾರೆ. ಅಧಿಕಾರಕ್ಕೆ ಬಂದ್ರೆ ನಿಮ್ಮ ಶರ್ಟು ಜೇಬಿನೊಳಕ್ಕೆ ಸ್ವರ್ಗವನ್ನೇ ಪ್ಯಾಕ್ ಮಾಡಿ ಇಡ್ತೀವಿ ಅಂತ ಬೊಗಳಿದ್ದ ದ್ವೇಷಭಕ್ತರ ಕಮಲ ಪಕ್ಷದವರು ಕೊನೆಗೆ ನಿಮ್ಮದೇ ಸ್ವಂತದೇ ಮಲದ ಗೊಬ್ಬರದಲ್ಲಿ ನಿಮಗಿಷ್ಟ ಬಂದ ತರಕಾರಿ ಬೆಳೆದುಕೊಂಡು ಚಪ್ಪರಿಸಿಕೊಂಡು ತಿನ್ನಿ ಎನ್ನುತ್ತಿದ್ದಾರೆ, ಇದಕ್ಕೆ ಅಕ್ಷಯ್‍ಕುಮಾರ್‍ನಂತಹ ಗುಲಾಮರ ಗುಲಾಮನು ಜಾಹಿರಾತಿನಲ್ಲಿ ನಟಿಸಿ ನಾನೂ ಮನುಷ್ಯರ ಮಲದಲ್ಲಿ ಬೆಳೆದ ತರಕಾರಿ ತಿನ್ನುತ್ತೇನೆಂದು ಎದೆ ತಟ್ಟಿಕೊಂಡು ಹೇಳಿರುವುದು ದೇಶಾದ್ಯಂತ ಅಪಹಾಸ್ಯಕ್ಕೆ ಗುರಿಯಾಗಿದೆ.
.                                       *****
ಹಾಫ್‍ಮೆಂಟ್ಲು ಆದಿತ್ಯನಾಥ ಬಿತ್ತು ಫುಲ್‍ಮೆಂಟ್ಲು ಡ್ರೀಮ್ ಪ್ಯಾಕೇಜು: 2000 ವರ್ಷದ ಹಿಂದೆ ಇಂಡಿಯಾಗು ಕೊರಿಯಾಗು ಆಯ್ತಂತೆ ಮ್ಯಾರೇಜು
ಯುಪಿ ರಾಜ್ಯದಲ್ಲಿ ಕಂಡಕಂಡ ಟಾಯ್ಲೆಟ್ಟುಗಳಿಗೆಲ್ಲ ಕೇಸರಿ ಬಣ್ಣ ಹೊಡೆದುಕೊಂಡು ಆರಾಮಾಗಿ ಓಡಾಡುತ್ತಿರುವ ಅಲ್ಲಿನ ಸನ್ಯಾಸಿ ಸಿಎಂ ಯೋಗಿ ಹಾದಿತ್ಯನಾಥ ಅಲಿಯಾಸ್ ಅಜಯ್‍ಸಿಂಗ್ ಭಿಷ್ಟ್ ಎಂಬ ತಲೆತಿಕ್ಕಲು ಐಲು ಗಿರಾಕಿಯ ತಲೆಯಲ್ಲಿರುವ ನಟ್ಟು ಬೋಲ್ಟುಗಳೆಲ್ಲ ತೊಪತೊಪನೆ ಉದುರಿ ಹೋಗಿರುವ ವರ್ತಮಾನ ಇದೀಗತಾನೇ ಲಭ್ಯವಾಗಿದೆ. ಜನರ ಬದುಕನ್ನು ಹಸನು ಮಾಡು ಪುಣ್ಯದ ಕೆಲಸವೊಂದನ್ನು ಬಿಟ್ಟು ಮಿಕ್ಕೆಲ್ಲ ಕೋತಿಚೇಷ್ಟೆ ಮಾಡಿಕೊಂಡು ತಿರುಗುತ್ತಿರುವ ಈ ಬೋಳುಮಂಡೆ ಸೋಂಬೇರಿ ಸಿಎಂ ಇತ್ತೀಚೆಗಷ್ಟೇ ಒಂದು ಬ್ರೈನ್‍ಲೆಸ್ ಹೇಳಿಕೆಯೊಂದನ್ನು ಕೊಟ್ಟು ನಗೆಪಾಟಲಿಗೆ ಈಡಾಗಿದೆ. ಅಯೋಧ್ಯೆಯ ರಾಜಕುಮಾರಿಯನ್ನು 2 ಸಾವಿರ ವರ್ಷಗಳ ಹಿಂದೆ ದಕ್ಷಿಣ ಕೊರಿಯಾದ ರಾಜಕುಮಾರನಿಗೆ ಕೊಟ್ಟು ಮದುವೆ ಮಾಡಲಾಗಿತ್ತು ಎಂದಿದ್ದಾನೆÀ ಯುಪಿ ರಾಜ್ಯದ ಸನ್ಯಾಸಿ ಸಿಎಂ, ಈ ಬಗ್ಗೆ ಅಧಿಕೃತ ಮಾಹಿತಿ ಎಲ್ಲಿಂದ ಲಭಿಸಿತು? ಆವಾಗ ನೀವು ಯಾವ ಕುದುರೆಲಾಯದಲ್ಲಿ ಲಂಗೋಟಿ ಹಾಕ್ಕೊಂಡು ಸೆಗಣಿ ಎತ್ತುತ್ತ ಇದನ್ನೆಲ್ಲ ಗಮನಿಸಿದಿರಿ.. ಎಂಬ ಪತ್ರಕರ್ತರ ಪ್ರಶ್ನೆಗೆ ತೀವ್ರವಾಗಿ ಬೇಜಾರು ಮಾಡಿಕೊಂಡ ಈ ಕೆಪರಗೇಡಿಯು, ಪ್ರಶ್ನೆ ಕೇಳಿದ ಟಿವಿ ಚಾನೆಲ್‍ನ ಮೈಕನ್ನು ಕೈಗೆತ್ತಿಕೊಂಡು ತನ್ನ ಬಾಣಲಿತಲೆಗೆ ¥sಟ್ ಫಟ್ ಫಟ್ ಎಂದು ಹೊಡೆದುಕೊಂಡು ತಮ್ಮ ಅಸಮಾಧಾನವನ್ನು ಹೊರಹಾಕಿಲ್ಲವೆಂದು ತಿಳಿದುಬಂದಿದೆ.
.                                       *****
ಸನಾತನಿ ಸಂಘಿ-ಮಂಕಿಗಳ ಭ್ರಮೆಯ ರೋಗವಾಯ್ತು ವಿಪರೀತ: ಲಂಗೋಟಿಗೆ ಬಿದ್ದ ಬೆಂಕಿಗೆ ಮಾಡ್ತಿದ್ದಾರೆ ತೋಂ ತಕಿಟ ತಕಧಿಮಿತ
ಇತ್ತೀಚೆಗೆ ಯಾರ ಕಣ್ಣಿಗೂ ಕಾಣದ್ದೆಲ್ಲ ಭ್ರಮೆಯಲ್ಲೇ ನುಗುರುಕೊಂಡು ಓಡಾಡುವ ಸಂಘಿ ಮಂಕಿಗಳಿಗೆ ಕಾಣುತ್ತಿರುವುದು ಆಶ್ಚರ್ಯದ ವಿಷಯವೇ ಸರಿ. ದನದ ಮೂತ್ರದಲ್ಲಿ ಜಗತ್ತಿನ ಎಲ್ಲ ಕಾಯಿಲೆಗಳಿಗೂ ಔಷಧಿ ಕಂಡುಹಿಡಿದ ಈ ಇಂಕಿ ಮಂಕಿ ಪಾಂಕಿಗಳು ಇದೀಗ ತಮ್ಮ ಎಂಜಲುಕಾಸಿನ ದೊರೆ ಅಂಬಾನಿಯು ಇನ್ನೂ ಸ್ಥಾಪಿಸದೇ ಇರುವ ಸಂಸ್ಥೆಯೊಂದು ಕಂಡುಬಿಟ್ಟಿದೆಯಂತೆ. ‘ಜಿಯೋ ಇನ್ಸ್‍ಟಿಟ್ಯೂಟ್’ ಎಂಬ ಅಸ್ತಿತ್ವದಲ್ಲೇ ಇಲ್ಲದ ಅಂಬಾನಿಯ ಸಂಸ್ಥೆಯು ದೇಶದ ಅತ್ಯುತ್ತಮ ಸಂಸ್ಥೆಗಳಲ್ಲೊಂದು ಎಂದು ತಮ್ಮ ಗುಲಾಮಿ ಸರ್ಕಾರದ ಮೂಲದ ಘೋಷಿಸಿರುವ ಈ ಸಾಂಪ್ ಸಂಘಿಗಳು ಈ ಮೂಲಕ ತಾವು ಹ್ಯಾಲೂಸಿನೇಷನ್ ರೋಗದಿಂದ ನರಳಾಡಿ ಹುಳ ಬಿದ್ದು ಒದ್ದಾಡುತ್ತಿದ್ದೇವೆಂದು ಘಂಟಾಘೋಷವಾಗಿ ಸಾರಿಬಿಟ್ಟಿದ್ದಾರೆÉ. ಈ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಸಂಘಿಗಳ ಮಾನಸಿಕ ಅಸ್ವಸ್ಥತೆಯ ಮೇಲೆ ಮುಗಿಬಿದ್ದ ಅಷ್ಟಿಷ್ಟು ಮಾಧ್ಯಮಗಳು ಸಂಘಿಗಳ ಲಂಗೋಟಿಗೆ ಸೀಮೆಎಣ್ಣೆ ಎರಚಿ ಕಡ್ಡಿ ಗೀರಿದ್ದಾರೆಂದು, ಉರಿ ತಡೆಯಲಾಗದೆ ಸಂಘಿ-ಮಂಕಿಗಳು ಲಡಕಾಸಿ ನೃತ್ಯ ಮಾಡುತ್ತ ಉರಿ ಶಮನ ಮಾಡಿಕೊಳ್ಳುತ್ತಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.
.                                       *****

ಹೆಡ್ಡಪ್ಪನ ಮರೆಗುಳಿ ಅಧ್ವಾನಗಳಿಗೆ ಸ್ಕೋಪಕ್ಕ ಆದ್ರು ಕಕ್ಕಾಬಿಕ್ಕಿ: ಇವರಿಗೆ ಕೊಡೋದು ಅವ್ರಿಗೆ, ಅವ್ರಿಗೆ ಕೊಡೋದು ಇವ್ರಿಗೆ..
ಹತ್ತನ್ನೆರಡು ವರ್ಷಗಳ ಹಿಂದೆ 38 ಎಮ್ಮೆಲ್ಲೆಗಳನ್ನು ಹೊಂದಿದ್ದ ಕುಮಾರಣ್ಣನನ್ನು ಸಿಎಂ ಮಾಡಿ ಅಪ್ಪಿ ಮುದ್ದಾಡಿ ಲೊಚಲೊಚನೆ ಕಿಸ್ಸು ಕೊಟ್ಟಿದ್ದ ಕರ್ನಾಟಕ ಕಮಲ ಪಕ್ಷದವರು ಇದೀಗ, ಅದೇ ರೀತಿ ಕಾಂಗ್ರೆಸ್ ಕುಮಾರಣ್ಣನನ್ನು ಸಿಎಂ ಮಾಡಿರುವುದಕ್ಕೆ ಚಡ್ಡಿಯೊಳಗೆ ಓತಿಕ್ಯಾತ ಹೊಕ್ಕಂತೆ ಆಡುತ್ತಿರುವುದು ಬಯಲಾಗಿದೆ. ಸತ್ಯಹರಿಶ್ಚಂದ್ರ ದೇವರಪಾದ ಸೇರಿದ ಮೇಲೆ ಮತ್ತೆ ಶಿಕಾರಿಪುರದಲ್ಲಿ ರೈಸ್ ಮಿಲ್ ರೈಟರಾಗಿ ಮರುಜನ್ಮ ಪಡೆದು ಹುಟ್ಟಿರೋದೇ ನಾನು ಎಂಬಂತೆ ನೈತಿಕತೆಯ ಭಾಷಣ ಬೊಗಳುತ್ತಿರುವ ಹೆಡ್ಯೂರಪ್ಪನಿಗೆ ತನ್ನ ಹಳೆಯ ಬ್ಲಾಕಂಡ್ ವೈಟ್ ಡ್ರಾಮಾಗಳು ನೆನಪಾಗದಿರುವುದಕ್ಕೆ ನಿವೃತ್ತ ಕುಮಾರಿ ಸ್ಕೋಪಕ್ಕನಿಗೆ ಶ್ಯಾನೆ ಬೇಜಾರಾಗಿದೆಯಂತೆ. ಹಳೆಯದೆಲ್ಲವನ್ನೂ ಮರೆತು ಇನ್ನೇನೋ ಹೊಸ ಅಧ್ವಾನ ಮಾಡಿ ಮಾಡಿ ಎಲ್ರಿಂದಲೂ ಬೈಸಿಕೊಳ್ಳುವ ಹೆಡ್ಯೂರಪ್ಪ.. ಮನೆಯಲ್ಲಿ ಡ್ರೈವರನ್ನು ಸ್ಕೋಪÀಕ್ಕನೆಂದೂ, ಸ್ಕೋಪಕ್ಕನನ್ನು ಡ್ರೈವರೆಂದು ಕನ್ ಫ್ಯೂಸು ಮಾಡಿಕೊಂಡು ಇವರಿಗೆ ಕೊಡೋದನ್ನ ಅವರಿಗೆ ಕೊಟ್ಟು, ಅವರಿಗೆ ಕೊಡೋದನ್ನ ಇವರಿಗೆ ಕೊಟ್ಟು ಎಡವಟ್ಟಿನ ಮೇಲೆ ಎಡವಟ್ಟು ಮಾಡ್ತಿರುವುದು ಸ್ಕೋಪಕ್ಕನ ಚಿಂತೆಗೆ ಕಾರಣವಾಗಿದೆಯಂತೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ಮುಂದಿನವಾರ ಇಂಥಹದೇ ಅನಾಹುತಕಾರಿ ಸುದ್ದಿಗಳೊಡನೆ ನಿಮಗೆ ಸಿಗುತ್ತೇನೆ. ಅಲ್ಲೀತನಕ ಸಲಾಂ ನಮಸ್ತೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...