ಕಾಂಗ್ರೆಸ್ಸುವೆ, ಜೇಡಿಯೆಸ್ಸುವೆ ಸೇರಿ ಮಾಡ್ಕ್ಯಂಡಿರೋ ಸಮ್ಮಿಸ್ರ ಸರ್ಕಾರ

`ಕಾಂಗ್ರೆಸ್ಸುವೆ, ಜೇಡಿಯೆಸ್ಸುವೆ ಸೇರಿ ಮಾಡ್ಕ್ಯಂಡಿರೋ ಸಮ್ಮಿಸ್ರ ಸರ್ಕಾರುದೊಳಗೆ ಶ್ಯಾನೆ ನ್ಯೆಲಬಾಂಬುಗಳು ಅವೆ. ಅವು ಯಾವಾಗ ಬೇಕಾದ್ರು ಢಮೀಲ್ ಅನಬೈದು. ಅವು ಢಂ ಅಂದೇಟಿಗೆ ಈ ಸರ್ಕಾರ ಬಿದ್ದೋಯ್ತದೆ ನೋಡ್ಕಂಡಿರಿ. ನಾ ದಿಟವುನೇ ಹ್ಯೇಳ್ತೀನಿ, ಸುಳ್ಳು ಪಳ್ಳು ನಂಗೆ ಬರಾಕಿಲ್ಲ. ನಾವು ಈ ಎಲ್ಡೂ ಪಕ್ಸುದ ಯಾರ್ನೂವೆ ಸಂಪರ್ಕಿಸಿಲ್ಲ. ಆದ್ರುವೇ, ಲೋಕ್ಸಭೆ ಎಲೆಕ್ಷನ್ ಒಳೀಕೆ ಈ ಗೋರ್ಮೆಂಟ್ ಬಿದ್ದೋಗದ್ರಲ್ಲಿ ಡೌಟೇ ಇಲ್ಲಾ ಕಣ್ರ. ಯಾಕಂದ್ರೆ ನ್ಯೆಲಬಾಂಬುಗಳು ಅಷ್ಟು ಸ್ಟ್ರಾಂಗಾಗವೆ’

– ಯೆಮ್ಪಿ ರೇಣುಕಾಚಾರ್ಯ, ನರ್ಸ್ ವೃತ್ತಿಗೆ ಅಪಾರ ಗೌರವ ಕೊಡೊ ಬಿಎಸ್‍ವೈ ಮಾನಸಪುತ್ರ

*****

`
ನೋಡಿ, ನಾವು ಈರಸೈವ ಲಿಂಗಾಯುತ್ರು ರಾಜಕೀಯುದಾಗೆ ಶ್ಯಾನೆ ವೀಕ್ ಆಗ್ತಾ ಇದೀವಿ. ನಾವ್ಯೆಲ್ರುವೆ ಒಗ್ಗಟ್ಟಾಗಬ್ಯೇಕಿದೆ. ಬ್ಯಾರೆಬ್ಯಾರೆ ಸಮುದಾಯುದವ್ರು, ಅವುರ ರಾಜಕೀಯ ನಾಯುಕ್ರ ಬಗ್ಗೆ `ನಮ್ಮವೃ’ ಅಂತ ಎದೆಯ ತಟಿಗಂಡು ಹ್ಯೇಳ್ಕಬೇಕಾರೆ, ನಾವ್ಯಾಕೆ ಯಡ್ಯೋರಪ್ನೋರನ್ನ ನಂ ಸಮಾಜುದ ಧ್ಯೀಮಂತ ನಾಯುಕ ಅಂತ ಹ್ಯೇಳ್ಕಬಾರುದು. ಅದ್ರಲ್ಲಿ ಏನೂ ತ್ಯೆಪ್ಪಿಲ್ಲ. ಕಳುದ ಯೆಲೆಕ್ಸೆನ್ನಾಗೆ ವರುಣಾ ಕ್ಸೇತ್ರುದಿಂದ ಯಡ್ಯೋರಪ್ನೋರ ಮಗ ಇಜಯೇಂದ್ರ ಕಂಟೆಸ್ಟ್ ಮಾಡಿದ್ದ್ರೆ, ಆ ಭಾಗುದ ಐದಾರು ಕ್ಸೇತೃಗುಳಲ್ಲಿ ಬೀಜೇಪಿ ಗ್ಯೆಲ್ತಿತ್ತು, ಸುಲುಬವಾಗಿ ಸರ್ಕಾರನೂ ಮಾಡ್ತಿತ್ತು. ಈ ಮಾತ್ನ ನಾನು ಹ್ಯೇಳ್ತಿಲ್ಲ, ಜ್ಯನ ನನ್ನತ್ರ ಹ್ಯೇಳ್ತಾ ಅವುರೆ..’
– ಸ್ರೀ ಸ್ರೀ ಸಿದ್ದಲಿಂಗ ಸ್ವಾಮಿಗಳು, ನಡೆದಾಡೊ ದೇವರಿರುವ ತುಮಕೂರು ಮಠದ ಅಧ್ಯಕ್ಷರು

*****

`ದೇಖೋ ಬಾಯಿಸಾಬ್, ಈ ಅತ್ಯಾಚಾರ ಅನ್ನೋದು ಏನದೆ, ಅದು ನಂ ಸಮಾಜುದ ಸಹಜ ಸೋಸಿಯಲ್ ಪ್ರದೂಷಣೆ ಅದೆ. ಅದುನ್ನ ತಡಿಯೋಕೆ ಯಾರಿಂದ್ಲೂ ಸಾದ್ಯ ಇಲ್ರ. ನಮ್ಮಂತ ನರಮನುಸ್ಯರ ಕಥೆಯ ಬ್ಯಿಡಿ. ಸಾಕ್ಸಾತ್ ಸ್ರೀ ರಾಮಚಂದ್ರ ಪ್ರಭುವೇ ಮತ್ತೆ ಹ್ವುಟ್ಟಿ ಬಂದ್ರೂ, ಆತುನಿಗೂ ಇದುನ್ನ ತಡಿಯೋಕೆ ಆಗಕ್ಕಿಲ್ಲ ಅಂತೀನಿ’
– ಸುರೇಂದ್ರ ಸಿಂಗ್, ರಾಮರಾಜ್ಯದ ಅಂಬಾಸಿಡರ್ರು ಯೋಗಿ ಆದಿತ್ಯನಾಥರ ಬೆಟಾಲಿಯನ್‍ನ ಬಿಜೆಪಿ ಶಾಸಕ

*****

`ರೈತೃ ಆತುಮಹತ್ಯೆಯ ಮಾಡ್ಕ್ಯಂತಿರೋದು ನಿಜ. ಆದುರೆ, ಹಿಂಗೆ ರೈತೃ ಸಾಯ್ತಾ ಇರೋದು ಇದೇ ಮೊದುಲುನೇ ಕಿತಾ ಏನು ಅಲ್ವಲ್ಲಾ. ಅದು ಹಳೇ ಸಮಸ್ಯೆ. ಶ್ಯಾನೆ ವರ್ಸುಗಳಿಂದ ಅವುರು ಆತುಮಹತ್ಯೆಯ ಮಾಡ್ಕ್ಯಂತಲೇ ಬಂದವುರೆ. ಅದುಕ್ಕೆ ನಮ್ಮುನ್ನ್ಯಾಕೆ ದೂರುತೀರಿ. ಆಕ್ಚುಲೀ, ನಂ ಮ್ವೋದಿಯವುರ ಸರ್ಕಾರ ಬಂದ ಮ್ಯಾಲೆ ರೈತುರ ಉದ್ದಾರಕ್ಕೆ ಅಂತ ಬೆಂಬುಲ ಬೆಲೆಯ ಜ್ಯಾಸ್ತಿ ಮಾಡ್ಯವುರೆ, ಕೃಷಿ ಸಾಲ ಮನ್ನಾ ಮಾಡ್ಯವುರೆ (?), ಬೆಳೆ ಇಮೆಯ ಮಾಡಿಕೊಟ್ಟವುರೆ. ಆದ್ರೂ ರೈತೃ ಸಾಯ್ತಾಲೆ ಅವುರೆ ಅಂದ್ರೆ, ಅದುಕ್ಕೆ ಬ್ಯಾರೇದೆ ಕಾರುಣ ಇರ್ಬೇಕು..’
– ಸುರೇಶ್ ಪ್ರಭು, ಹೊಲದಿಂದ ಹೊಲಕ್ಕೆ ಟ್ರಿಪ್ ಮಾಡುತ್ತಿರುವ ರೈತಬಂಧು ಮೋದಿಯವರ ಸಂಪುಟದ ಕಾಮರ್ಸ್ ಮಂತ್ರಿ

*****

`ಈ ಬೀಜೇಪಿಯವುರು ಅಮಾಯುಕ ಹುಡುಗ್ರನ್ನ ಬಲಿಕ್ವೊಟ್ಟು, ಬಾಬುರಿ ಮಸೀದಿಯ ಕ್ಯೆಡುವಿ ಹಾಕಿದ್ರು. ಭಗುವಂತ ರಾಮುನ ಹೆಸುರಲ್ಲಿ ರಾಜಕೀಯವ ಮಾಡಿ, ಅಧಿಕಾರುವ ಪಡಕಂಡ್ರು. ಆದ್ರುವೆ ರಾಮಮಂದಿರುವ ಕಟ್ಟುಲೇ ಇಲ್ಲ. ಪರ್ದಾನಿ ಮ್ವೋದಿ ಸಾಹೇಬರು ಅಂಡ್ ಎಗುಸ್ಟ್ರಾ ಬೀಜೇಪಿ ಲೀಡ್ರುಗಳಿಗೆ ದಿಟವಾಗುಲೂ ಧಂ ಇದ್ದ್ರೆ, ಅಯೋಧ್ಯನಾಗೆ ಮೊದಲು ರಾಮಮಂದಿರುಕ್ಕೆ ಅಡಿಪಾಯುವ ಹಾಕಿ, ಆಮ್ಯಾಕೆ ಎಂಪಿ ಯೆಲೆಕ್ಸನ್ ಪ್ರಚಾರುಕ್ಕೆ ಇಳೀಲಿ. ಈ ಬೀಜೇಪಿನೋರು ಮ್ವೋದಿ ಹೆಸುರಲ್ಲಿ ಕತ್ತೆಯ ನಿಲ್ಲಿಸಿದ್ರೂ, ಗ್ಯೆಲ್ಲುತ್ತೆ ಅನ್ಕೊಂಡು, ಟಿಕೇಟುಗಳ ಮಾರಾಟ ಮಾಡ್ತಾ ಅವುರೆ. ನಾಚ್ಯಿಕೆ ಆಗ್ಬೇಕು…’
– ಎಸ್ಕೆ ಬೆಳ್ಳುಬ್ಬಿ, ಜೆಡಿಎಸ್ ನಿರಾಶ್ರಿತ ಶಿಬಿರದಲ್ಲಿ ನಿಟ್ಟುಸಿರು ಬಿಡುತ್ತಿರುವ ಮಾಜಿ ಬಿಜೆಪಿಗ

*****

`ದ್ಯೇವರು ಇದಾನೆ ಅನ್ನೋದಕ್ಕೆ ಯಾವನಾರ ಒಂದ್ ಸಾಕ್ಷಿಯ ನೀಡ್ಲಪ್ಪಾ, ಆ ಕೂಡ್ಲೇ ನಾನು ನನ್ನ ಸ್ಥಾನುಕ್ಕೆ ರಾಜೀನಾಮೆಯ ಕೊಟ್ಟುಬುಡ್ತೀನಿ. ದ್ಯೇವುರ ಪಾಸ್‍ಪೋರ್ಟ್ ಸೈಜಿನ ಲೈವ್‍ಫೋಟೊ, ಅಥುವಾ ಮನುಸ್ಯರ ಜ್ವತೆ ಆತ ತ್ಯೆಗಿಸಿಕೊಂಡಿರೊ ಸೆಲ್ಫಿ, ಅಥುವಾ ನಾನು ದ್ಯೇವುರ ಕೂಟೆ ಮಾತಾಡಿದೀನಿ ಅನ್ನೋದುಕ್ಕೆ ಯಾರಾದ್ರು ಪುರಾವೆ ತಂದ್ರೆ ನನ್ನ ರಾಜೀನಾಮೆ ಫಿಕ್ಸು…’
– ರೊಡ್ರಿಗೊ ಡುಟೆರ್ಟಾ, ವಿಲಕ್ಷಣ ವ್ಯಕ್ತಿತ್ವದ ಕ್ರೂರ ಸ್ವಭಾವದ ಫಿಲಿಫೈನ್ಸ್ ಅಧ್ಯಕ್ಷ

*****

`ದ್ಯಾವೇಗೋಡ್ರು ಜಾತುಕವ ಶ್ಯಾನೆ ನಂಬುತಾರೆ. ಅವುರದು ಮತ್ತು ರೇವಣ್ಣುಂದೂ ಜ್ಯಾತುಕ ಹ್ವೊಂದಾಣಿಕೆ ಆಯ್ತವೆ. ಆದ್ರೆ ಕುಮಾರ್ಸೋಮಿಗಳುದ್ದೇ ಒಸಿ ಇಂಡಿಪೆಂಡೆಂಟು. ಅಟ್ಟು ದಿ ಸೇಮ್ ಠೇಮ್, ದ್ಯಾವೇಗೋಡ್ರು ಜಾತುಕವೂ ಸಿದ್ರಾಮಯ್ಯುನ ಜ್ಯಾತುಕವೂ ತಾಳೆ ಆಗ್ತವೆ. ಅದುಕ್ಕೆ ಅವುರಿಬ್ರು ಒಂದಾದಾಗ ಅಧಿಕಾರ ಸಿಕ್ತದೆ, ದೂರದೂರ ಆದ ಕೂಡ್ಲೆ ಅಧಿಕಾರುವೂ ಕೈಬಿಟ್ಟು ಹೋಯ್ತದೆ. ಈ ಜ್ಯಾತುಕ ಹ್ಯೇಳೋರ್ದೂ ಒಂದ್ ದ್ವೊಡ್ಡ್ ಲಾಬಿ ಐತಿ ನೋಡ್ರಿ ಮತಾ….. ಬೈದುಬೈ ಜ್ಯಾತುಕವ ನೋಡಿಯೇ ನಾವು ಟಿಕೇಟ್ ಕೊಟ್ಟಿದ್ದು ಬ್ಯಾರೇ ಮಾತು ಬಿಡ್ರಿ…’
– ಬಸವರಾಜ ಬೊಮ್ಮಾಯಿ, ಯಡ್ಯೂರಪ್ಪ ಸಿಎಂಗಿರಿಯಲ್ಲಿ ನೀರಾವರಿ ಮಂತ್ರಿಯಾಗೊ ಕನವರಿಕೆಯಲ್ಲಿರುವ ಕನಸುಗಾರ

*****

`ರೈತೃ ತಮ್ಮತಮ್ಮ ಹೊಲಗುಳು, ಗೆದ್ದೆಗುಳಲ್ಲಿ ವೇದ ಮಂತೃಗುಳನ್ನ ಹ್ಯೇಳಿಕಂಡು, `ಬ್ರಹ್ಮಾಂಡ ಬ್ಯಾಸಾಯ’ವ ಅಳುವಡಿಸಿಕೊಂಡ್ರೆ, ಭತ್ತದ ಫಸಲು ವೈನಾಗಿ ಬತ್ತದೆ. ಆದಾಯುವೂ ಹೆಚ್ಚಾಯ್ತದೆ. ಬೈದುಬೈ, ರೈತುರ ಇಳುವರಿಗೆ ಜ್ಯಾಸ್ತಿ ಮಾಡೊ ಸಲುವಾಗೇ ನಂ ಬೀಜೇಪಿ ಸರ್ಕಾರ ಗೋವಾದಗೆ `ಶಿವಯೋಗ್ ಬ್ರಹ್ಮಾಂಡ ಬ್ಯಾಸಾಯ’ ಅನ್ನೋ ಯೋಜುನೆಯ ಜ್ಯಾರಿಗೆ ತಂದದೆ. ನೋಡ್ತಾ ಇರಿ, ಇನ್ನು ಮ್ಯಾಲೆ ರೈತೃ ಹ್ಯೆಂಗೆ ಉದ್ದಾರ ಆಯ್ತಾರೆ ಅಂತ’
– ವಿಜಯ್ ಸರ್ದೇಸಾಯಿ, ಟೂರಿಸಂ ಆದಾಯವಿರುವ ಗೋವಾ ರಾಜ್ಯದ ಬಿಜೆಪಿ ಕೃಷಿ ಮಂತ್ರಿ

*****

`ಬರಾಕಿಲ್ಲ, ಬರಾಕಿಲ್ಲ, ಬರಾಕಿಲ್ಲ.. ನಾನು ಸತ್ರುವೇ ಇಂಡಿಯಾಕ್ಕೆ ಬರಾಕಿಲ್ಲ. ನನಿಗೊತ್ತು ನನ್ನ ಕರ್ಕಂಡ್ಹೋಗಿ, ನೋಡಿ ಮಲ್ಯನ್ನ ಹಿಡ್ಕ್ಯಂಬಂದೀವಿ ಅಂತ ಜನುಕ್ಕೆ ತೋರ್ಸಿ ವೋಟು ಹಾಕಿಸಿಗಣಕ್ಕೆ ಪ್ಲ್ಯಾನು ಮಾಡ್ಯವುರೆ. ಬೇಕಾರೆ ಲಂಡನ್ನಾಗಿರೊ ನನ್ನ ಆಸ್ತಿಗುಳ ವಸ ಪಡಿಸ್ಕ್ಯಣಲಿ. ನನ್ನ ಅಭ್ಯಂತುರುವೆ ಇಲ್ಲ. ಆದ್ರೆ ಅವ್ಯಾವು ನನ್ನ ಹೆಸುರಿನ್ಯಾಗೆ ಇಲ್ಲ… ಕಿಲಕಿಲಾ…
– ವಿಜಯ್ ಮಲ್ಯ, ಹೆಂಡದ ದೊರೆ

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here