ಬಿಜೆಪಿ ಶಾಸಕನಿಗೆ ಸೀಟು ನೀಡಲು ನಿರಾಕರಿಸಿದ ಕಾರಣ ದೆಹಲಿ-ಭೋಪಾಲ್ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ ಥಳಿಸಲಾಗಿದೆ ಎಂದು ಎನ್‌ಡಿಟಿವಿ ಸೋಮವಾರ ವರದಿ ಮಾಡಿದೆ. ಘಟನೆ ಕಳೆದ ವಾರದ ಗುರುವಾರದಂದು ನಡೆದಿದ್ದು, ಉತ್ತರ ಪ್ರದೇಶದ ಝಾನ್ಸಿಯ ಶಾಸಕರಾದ ಬಿಜೆಪಿಯ ರಾಜೀವ್ ಸಿಂಗ್ ತಮ್ಮ ಪತ್ನಿ ಮತ್ತು ಮಗನೊಂದಿಗೆ ತಮ್ಮ ಕ್ಷೇತ್ರಕ್ಕೆ ಪ್ರಯಾಣಿಸುತ್ತಿದ್ದಾಗ ಪ್ರಯಾಣಿಕನಿಗೆ ಥಳಿಸಲಾಗಿದೆ ಎಂದು ವರದಿ ಹೇಳಿದೆ. ವೀಕ್ಷಿಸಿ | ಬಿಜೆಪಿ ಶಾಸಕನಿಗೆ
ಶಾಸಕ ರಾಜೀವ್ ಸಿಂಗ್ ಅವರಿಗೆ ರೈಲು ಬೋಗಿಯ ಹಿಂಭಾಗದಲ್ಲಿ ಆಸನ ಸಿಕ್ಕಿತ್ತು. ಆದರೆ ಅವರ ಕುಟುಂಬ ಸದಸ್ಯರು ಮುಂಭಾಗದಲ್ಲಿ ಇದ್ದರು. ಈ ವೇಳೆ ಶಾಸಕ ಪ್ರಯಾಣಿಕರೊಬ್ಬರ ಜೊತೆಗೆ ಸೀಟು ಬದಲಾಯಿಸಲು ಕೇಳಿಕೊಂಡಿದ್ದರು. ಆದರೆ ಪ್ರಯಾಣಿಕ ಇದಕ್ಕೆ ನಿರಾಕರಿಸಿದ್ದರು.
ಅದಾಗ್ಯೂ, ರಾಜೀವ್ ಸಿಂಗ್ ಅವರ ಆಪ್ತರು ಎನ್ನಲಾದ ಕೆಲವು ದುಷ್ಕರ್ಮಿಗಳು ಝಾನ್ಸಿ ನಿಲ್ದಾಣದಲ್ಲಿ ರೈಲು ಹತ್ತಿ ಭೋಪಾಲ್‌ಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ಥಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಘಟನೆಯ ವಿಡಿಯೊ ವೈರಲ್ ಆಗಿದ್ದು, ವೀಡಿಯೊದಲ್ಲಿ ಹಲವು ವ್ಯಕ್ತಿಗಳು ಪ್ರಯಾಣಿಕ ತನ್ನ ಸೀಟಿನಲ್ಲಿದ್ದಾಗ ಅವರ ಮೇಲೆ ಗುದ್ದಾಟ ನಡೆಸಿದ್ದಾರೆ.
ಜೊತೆಗೆ ದುಷ್ಕರ್ಮಿಗಳು ಚಪ್ಪಲಿಗಳನ್ನು ಬಳಸಿ ಹಲ್ಲೆ ನಡೆಸುತ್ತಿರುವುದನ್ನು ಸಹ ವಿಡಿಯೊದಲ್ಲಿ ದಾಖಲಾಗಿದೆ. ವೀಡಿಯೊದಲ್ಲಿ ಸಂತ್ರಸ್ತ ವ್ಯಕ್ತಿಯ ಮೂಗಿನಿಂದ ರಕ್ತ ಸೋರುತ್ತಿರುವುದನ್ನು ಮತ್ತು ಅವರ ಬಟ್ಟೆಗಳು ರಕ್ತದಲ್ಲಿ ತೊಯ್ದಿರುವುದನ್ನು ಸಹ ರೆಕಾರ್ಡ್ ಆಗಿದೆ.
Video: Man Thrashed On Vande Bharat After Refusing Seat To BJP MLA pic.twitter.com/5FAZYergk0
— NDTV (@ndtv) June 23, 2025
ಸೀಟು ಬದಲಾಯಿಸುವ ವಿಚಾರದಲ್ಲಿ ಈ ವಾಗ್ವಾದ ನಡೆದಿದೆ ಎಂದು ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ (ಝಾನ್ಸಿ) ವಿಪುಲ್ ಕುಮಾರ್ ಶ್ರೀವಾಸ್ತವ ಅವರು ದೃಢಪಡಿಸಿದ್ದಾರೆ ಎಂದು ಎನ್‌ಡಿಟಿವಿ ಹೇಳಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಅದಾಗ್ಯೂ, ರಾಜೀವ್ ಸಿಂಗ್ ಅವರೇ ಪ್ರಯಾಣಿಕನ ವಿರುದ್ಧ ದೂರು ನೀಡಿದ್ದು, ಹಾಗಾಗಿ ಝಾನ್ಸಿಯ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ನಾನ್-ಕಾಗ್ನಿಜೇಬಲ್ ರಿಪೋರ್ಟ್ (ಎನ್‌ಸಿಆರ್) ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ. ರಾಜೀವ್ ತಮ್ಮ ದೂರಿನಲ್ಲಿ, ತಮ್ಮ ಪತ್ನಿ ಮತ್ತು ಮಗನೊಂದಿಗೆ ಪ್ರಯಾಣಿಸುತ್ತಿದ್ದಾಗ ಸಹ-ಪ್ರಯಾಣಿಕರೊಬ್ಬರು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ವೀಕ್ಷಿಸಿ | ಬಿಜೆಪಿ ಶಾಸಕನಿಗೆ


