ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಾಗಿ 50 ವರ್ಷದ ಅಂಗವಾಗಿ ಕೇಂದ್ರ ಸರ್ಕಾರ ‘ಸಂವಿಧಾನ ಹತ್ಯೆ ದಿನ’ ಆಚರಿಸುತ್ತಿದೆ. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, “ದೇಶದಲ್ಲಿ ಕಳೆದ 11 ವರ್ಷಗಳಿಂದ ಅಘೋಷಿತ ತುರ್ತು ಪರಿಸ್ಥಿತಿಯಿದೆ. ಭಾರತದ ಪ್ರಜಾಪ್ರಭುತ್ವದ ಮೇಲೆ ಆಡಳಿತವು (ಕೇಂದ್ರ ಸರಕಾರ) ನಿರಂತರ ಮತ್ತು ಅಪಾಯಕಾರಿ ದಾಳಿಯನ್ನು ನಡೆಸುತ್ತಿದೆ” ಎಂದು ಹೇಳಿದೆ.
ಪ್ರಸ್ತುತ ಆಡಳಿತದಲ್ಲಿ ನಾಗರಿಕ ಸ್ವಾತಂತ್ರ್ಯಗಳನ್ನು ಹತ್ತಿಕ್ಕಲಾಗುತ್ತಿದೆ ಮತ್ತು ದ್ವೇಷ ಭಾಷಣವು ಅತಿರೇಕವಾಗಿದೆ ಎಂದು ಆರೋಪಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಸಂವಹನ ವಿಭಾಗದ ಉಸ್ತುವಾರಿ ಜೈರಾಮ್ ರಮೇಶ್ ಹೇಳಿಕೆ ನೀಡಿ, “ಸರ್ಕಾರದ ಟೀಕಾಕಾರರನ್ನು ನಿರಂತರವಾಗಿ ರಾಕ್ಷಸೀಕರಿಸಲಾಗುತ್ತಿದೆ. ಅಧಿಕಾರದಲ್ಲಿರುವವರು ದ್ವೇಷ ಮತ್ತು ಧರ್ಮಾಂಧತೆಯನ್ನು ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದಾರೆ. ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕಲಾಗುತ್ತಿದೆ. ಪ್ರತಿಭಟನಾ ನಿರತ ರೈತರನ್ನು ‘ಖಲಿಸ್ತಾನಿಗಳು’ ಎಂದು ಬ್ರಾಂಡ್ ಮಾಡಲಾಗಿದೆ. ಜಾತಿ ಜನಗಣತಿಯ ಬೆಂಬಲಿಗರನ್ನು ‘ನಗರ ನಕ್ಸಲರು’ ಎನ್ನಲಾಗಿದೆ ಎಂದಿದ್ದಾರೆ.
“ಮಹಾತ್ಮ ಗಾಂಧಿಯ ಹಂತಕರನ್ನು ವೈಭವೀಕರಿಸುವ ವ್ಯಕ್ತಿಗಳನ್ನು ಕೊಂಡಾಡುತ್ತಿದ್ದಾರೆ. ಅಲ್ಪಸಂಖ್ಯಾತ ಸಮುದಾಯಗಳು ಭಯದಲ್ಲಿ ಬದುಕುತ್ತಿವೆ. ದುರ್ಬಲ ವರ್ಗದವರು, ವಿಶೇಷವಾಗಿ ದಲಿತರು ಅಸಮಾನತೆಗೆ ಗುರಿಯಾಗುತ್ತಿದ್ದಾರೆ. ಆಘಾತಕಾರಿಯಾಗಿ, ದ್ವೇಷದ ಹೇಳಿಕೆಗಳನ್ನು ನೀಡುವ ಸಚಿವರಿಗೆ ಬಡ್ತಿ ನೀಡಲಾಗುತ್ತಿದೆ” ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
“ಕಳೆದ ಹನ್ನೊಂದು ವರ್ಷಗಳು ಮತ್ತು ಮೂವತ್ತು ದಿನಗಳಲ್ಲಿ, ಭಾರತೀಯ ಪ್ರಜಾಪ್ರಭುತ್ವದ ಮೇಲಿನ ವ್ಯವಸ್ಥಿತ ಮತ್ತು ಅಪಾಯಕಾರಿ ದಾಳಿಯು ಐದು ಪಟ್ಟು ಹೆಚ್ಚಾಗಿದೆ. ಇದನ್ನು ಅಘೋಷಿತ ತುರ್ತು ಪರಿಸ್ಥಿತಿ@11 ಎಂದು ಉತ್ತಮವಾಗಿ ವಿವರಿಸಬಹುದು” ಎಂದು ಜೈರಾಮ್ ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
11 साल के अघोषित आपातकाल और भारतीय लोकतंत्र पर पांच दिशाओं से हो रहे लगातार हमले पर कांग्रेस महासचिव (संचार) श्री @Jairam_Ramesh का वक्तव्य- pic.twitter.com/cwjgfR2UUD
— Congress (@INCIndia) June 25, 2025
“ಸಂವಿಧಾನದ ಮೇಲಿನ ದಾಳಿಗಳು, ತೆರಿಗೆ ಭಯೋತ್ಪಾದನೆ, ವ್ಯವಹಾರಗಳು ಮತ್ತು ಸಂಸ್ಥೆಗಳ ಮೇಲಿನ ಬೆದರಿಕೆ, ಮಾಧ್ಯಮಗಳ ಮೇಲಿನ ನಿಯಂತ್ರಣ ಮತ್ತು ತನಿಖಾ ಸಂಸ್ಥೆಗಳ ದುರುಪಯೋಗ” ವನ್ನು ಉಲ್ಲೇಖಿಸಿ “ಅಘೋಷಿತ ತುರ್ತು ಪರಿಸ್ಥಿತಿ” ಜಾರಿಯಲ್ಲಿದೆ ಎಂದು ಜೈರಾಮ್ ರಮೇಶ್ ಹೇಳಿಕೆ ನೀಡಿದ್ದಾರೆ.
2024 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನವನ್ನು ಬದಲಾಯಿಸಲು ಮತ್ತು ಬಿ.ಆರ್ ಅಂಬೇಡ್ಕರ್ ಅವರ ಪರಂಪರೆಯನ್ನು ದುರ್ಬಲಗೊಳಿಸಲು “400 ಪಾರ್” ಜನಾದೇಶವನ್ನು ಬಯಸಿದ್ದರು. ಆದರೆ, ಅವರ ಬಯಕೆಯನ್ನು ಭಾರತದ ಜನರು ನಿರ್ಣಾಯಕವಾಗಿ ತಿರಸ್ಕರಿಸಿದರು. ಜನರು ಪ್ರಸ್ತುತ ಅಸ್ತಿತ್ವದಲ್ಲಿರುವ ಸಂವಿಧಾನ ಮತ್ತು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ನ್ಯಾಯದ ಮೌಲ್ಯಗಳನ್ನು ರಕ್ಷಿಸಲು ಮತ್ತು ಬಲಪಡಿಸಲು ಮತ ಚಲಾಯಿಸಿದರು” ಎಂದು ಹೇಳಿದ್ದಾರೆ.
ಸಾರ್ವಜನಿಕ ಸಮಸ್ಯೆಗಳನ್ನು ಎತ್ತಿದ್ದಕ್ಕಾಗಿ ಸಂಸದರನ್ನು ಅಮಾನತುಗೊಳಿಸುವ ಮೂಲಕ, ಸಂಸದೀಯ ಸಮಿತಿಗಳನ್ನು ಬೈಪಾಸ್ ಮಾಡುವ ಮೂಲಕ ಮತ್ತು ಚರ್ಚೆಯಿಲ್ಲದೆ ಪ್ರಮುಖ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಮೋದಿ ಸರ್ಕಾರ ಸಂಸತ್ತನ್ನು ದುರ್ಬಲಗೊಳಿಸುತ್ತಿದೆ ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಸಾಂವಿಧಾನಿಕ ಸಂಸ್ಥೆಗಳು ಸವೆದು ಹೋಗುತ್ತಿವೆ ಎಂದು ಆರೋಪಿಸಿರುವ ಜೈರಾಮ್ ರಮೇಶ್, “ಸಿಎಜಿ ಅಪ್ರಸ್ತುತವಾಗಿದೆ, ಚುನಾವಣಾ ಆಯೋಗದ ಸಮಗ್ರತೆಗೆ ಧಕ್ಕೆಯಾಗಿದೆ ಮತ್ತು ಆಡಳಿತ ಪಕ್ಷಕ್ಕೆ ಅನುಕೂಲವಾಗುವಂತೆ ಚುನಾವಣಾ ವೇಳಾಪಟ್ಟಿಯನ್ನು ರೂಪಿಸಲಾಗಿದೆ” ಎಂದು ಹೇಳಿದ್ದಾರೆ.
ವಿರೋಧ ಪಕ್ಷದ ನೇತೃತ್ವದ ರಾಜ್ಯ ಸರ್ಕಾರಗಳನ್ನು ಉರುಳಿಸಲು ಹಣಬಲವನ್ನು ಬಳಸಿಕೊಳ್ಳಲಾಗಿದೆ. ರಾಜ್ಯದ ಮಸೂದೆಗಳನ್ನು ತಡೆಯಲು ಮತ್ತು ವಿಶ್ವವಿದ್ಯಾಲಯಗಳಲ್ಲಿ ಹಸ್ತಕ್ಷೇಪ ಮಾಡಲು ರಾಜ್ಯಪಾಲರನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ರಾಜ್ಯಗಳಿಗೆ ನ್ಯಾಯಯುತ ಆದಾಯದ ಪಾಲನ್ನು ನಿರಾಕರಿಸಲು ಸೆಸ್‌ಗಳನ್ನು ಅತಿಯಾಗಿ ಬಳಸಲಾಗಿದೆ ಎಂದು ರಮೇಶ್ ಆರೋಪಿಸಿದ್ದಾರೆ.
ಮಾಧ್ಯಮ ಸಂಸ್ಥೆಗಳು ದೊಡ್ಡ ಮಟ್ಟದ ಒತ್ತಡಕ್ಕೆ ಒಳಗಾಗಿವೆ. ಪ್ರಮುಖ ಪತ್ರಕರ್ತರು ಬಂಧನಗಳು ಮತ್ತು ದಾಳಿಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರಿ ಮಾಧ್ಯಮಗಳು ಪ್ರಚಾರ ಸಾಧನಗಳಾಗಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆಯನ್ನು ಪೊಳ್ಳಾಗಿಸಲಾಗಿಸಲಾಗಿದೆ. ಇಡಿ, ಸಿಬಿಐ ಮತ್ತು ಐಟಿ ಇಲಾಖೆಯಂತಹ ಸಂಸ್ಥೆಗಳನ್ನು ವಿರೋಧ ಪಕ್ಷಗಳನ್ನು ಗುರಿಯಾಗಿಸಲು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಈ ಸಂಸ್ಥೆಗಳನ್ನು ಬಳಸಿಕೊಂಡು ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿ 8,000 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.
“ಬಿಜೆಪಿಗೆ ಸೇರುವವರು ಇಡಿ, ಸಿಬಿಐ ಪ್ರಕರಣಗಳಿಂದ ಮುಕ್ತರು” ಎಂದು ಅವರು ಹೇಳಿದ್ದಾರೆ.
Emergency @50 | ಪ್ರಜಾಪ್ರಭುತ್ವ ಇತಿಹಾಸದ ಅತ್ಯಂತ ಕರಾಳ ಅಧ್ಯಾಯ: ಪ್ರಧಾನಿ ಮೋದಿ



What Jairam Ramesh has revealed is 100 percent true
Since 2014 there is an Undeclared Emergency is attributing
There is no doubt in Democracy has been destroyed in a systamatic manner
If anyone opened their lips against the wrong doing they will becomes anti Indian, they are going to punish in one or the other way by the Ruling Government
This is why the Publics voted to the wrong persons
This is to be changed immediately