ಮಹತ್ವದ ಬೆಳವಣಿಗೆಯೊಂದರಲ್ಲಿ, ಸುಪ್ರೀಂ ಕೋರ್ಟ್ ತನ್ನ ಸಿಬ್ಬಂದಿಯ ನೇರ ನೇಮಕಾತಿ ಮತ್ತು ಬಡ್ತಿಯಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಮೀಸಲಾತಿಯನ್ನು ಪರಿಚಯಿಸಿದೆ.
ಜೂನ್ 23ರಿಂದ ಮಾದರಿ ಮೀಸಲಾತಿ ಪಟ್ಟಿಯನ್ನು ಜಾರಿಗೆ ತರಲಾಗಿದೆ ಎಂದು ನೌಕರರಿಗೆ ಜೂನ್ 24ರಂದು ಸುತ್ತೋಲೆಯ ಮೂಲಕ ತಿಳಿಸಲಾಗಿದೆ.
ಗಮನಾರ್ಹವಾಗಿ, ಮೊದಲ ಬಾರಿಗೆ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಬಿಆರ್ ಗವಾಯಿ ಅವರ ಅಧಿಕಾರಾವಧಿಯಲ್ಲಿ ಮೀಸಲಾತಿ ಪರಿಚಯಿಸಲಾಗಿದೆ. ಗವಾಯಿ ಅವರು ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯಕ್ಕೆ ಸೇರಿದ ಎರಡನೇ ಸಿಜೆಐ ಕೂಡ ಆಗಿದ್ದಾರೆ.
ಜೂನ್ 24 ರಂದು ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಹೊರಡಿಸಿದ ಅಧಿಕೃತ ಸುತ್ತೋಲೆಯಲ್ಲಿ ಹೀಗೆ ಹೇಳಲಾಗಿದೆ:
ಸಕ್ಷಮ ಪ್ರಾಧಿಕಾರದ ನಿರ್ದೇಶನಗಳ ಪ್ರಕಾರ, ಮಾದರಿ ಮೀಸಲಾತಿ ರೋಸ್ಟರ್ ಮತ್ತು ರಿಜಿಸ್ಟರ್ ಅನ್ನು ಸೂಪರ್‌ನೆಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಮತ್ತು ಇದು 23.06.2025 ರಿಂದ ಜಾರಿಗೆ ಬಂದಿದೆ.
ರೋಸ್ಟರ್ ಅಥವಾ ರಿಜಿಸ್ಟರ್‌ನಲ್ಲಿನ ತಪ್ಪುಗಳು ಮತ್ತು ಯಾವುದೇ ಸಿಬ್ಬಂದಿಗೆ ಆಕ್ಷೇಪಣೆಗಳು ಇದ್ದರೆ ಅವರು ಅದರ ಬಗ್ಗೆ ರಿಜಿಸ್ಟ್ರಾರ್‌ಗೆ (ನೇಮಕಾತಿ) ತಿಳಿಸಬಹುದು.
ಮಾದರಿ ರೋಸ್ಟರ್, ಹಿರಿಯ ವೈಯಕ್ತಿಕ ಸಹಾಯಕ ಹುದ್ದೆ, ಸಹಾಯಕ ಗ್ರಂಥಪಾಲಕ ಹುದ್ದೆ, ಕಿರಿಯ ನ್ಯಾಯಾಲಯ ಸಹಾಯಕ ಹಾಗೂ ಕಿರಿಯ ಪ್ರೋಗ್ರಾಮರ್, ಚೇಂಬರ್ ಅಟೆಂಡೆಂಟ್ (ರಿಜಿಸ್ಟ್ರಾರ್), ಹಿರಿಯ ವೈಯಕ್ತಿಕ ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಮೀಸಲಾದ ವರ್ಗಗಳಿಗೆ ನೇರ ನೇಮಕಾತಿ ಮತ್ತು ಬಡ್ತಿ ನೀತಿಯನ್ನು ವಿವರಿಸುತ್ತದೆ.
ಮೀಸಲಾತಿ ನೀತಿಯ ಪ್ರಕಾರ, ನೇರ ನೇಮಕಾತಿ ಮತ್ತು ಬಡ್ತಿಯಲ್ಲಿ ಪರಿಶಿಷ್ಟ ಜಾತಿಗಳಿಗೆ (ಎಸ್‌ಸಿ) ಶೇಕಡ 15ರಷ್ಟು, ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಶೇ 7.5ರಷ್ಟು ಮೀಸಲಾತಿ ಲಭ್ಯವಾಗಲಿದೆ.
ದೆಹಲಿಯಲ್ಲಿ ದೇವನಹಳ್ಳಿ ರೈತ ಹೋರಾಟದ ಸದ್ದು: ಜೆಪಿಸಿ ಸಭೆಯಿಂದ ಪಲಾಯನಗೈದ ಬಿಜೆಪಿ ಸದಸ್ಯರು


