ಯುಎಸ್‌ನ ಟೆಕ್ಸಾಸ್‌ನಲ್ಲಿ ಸಂಭವಿಸಿದ ಹಠಾತ್ ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ ಈಗ 100ಕ್ಕೆ ಏರಿಕೆಯಾಗಿದೆ. ಇನ್ನೂ ಅನೇಕರು ಕಾಣೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಡುಗು ಸಹಿತ ಭಾರಿ ಮಳೆಯಿಂದಾಗಿ ಈ ಪ್ರದೇಶವು ನಲುಗುತ್ತಿದ್ದು, ಶೋಧ ಮತ್ತು ರಕ್ಷಣಾ ತಂಡಗಳು ಕೆಸರಿನಿಂದ ಕೂಡಿದ ನದಿ ದಂಡೆಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಆದರೆ, ದುರಂತದ ನಾಲ್ಕು ದಿನಗಳ ನಂತರವೂ ಕಾಣೆಯಾದವರು ಪತ್ತೆಯಾಗುವ ಭರವಸೆ ಮಸುಕಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.
ಕ್ರಿಶ್ಚಿಯನ್ ಬಾಲಕಿಯರ ಬೇಸಿಗೆ ಶಿಬಿರ ಕ್ಯಾಂಪ್‌ನಲ್ಲಿ ಕನಿಷ್ಠ 27 ಹುಡುಗಿಯರು ಸಾವನ್ನಪ್ಪಿದ್ದು, ಹಲವು ಸಿಬ್ಬಂದಿ ಸಹ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಹತ್ತು ಜನ ಹುಡುಗಿಯರು ಮತ್ತು ಶಿಬಿರ ಸಲಹೆಗಾರ ಇನ್ನೂ ಪತ್ತೆಯಾಗಿಲ್ಲ.
ಈ ಮಧ್ಯೆ, ರಾಷ್ಟ್ರೀಯ ಹವಾಮಾನ ಸೇವೆ (ಎನ್‌ಡಬ್ಲ್ಯೂಎಸ್) ಯಲ್ಲಿ ಬಜೆಟ್ ಕಡಿತವು ವಿಪತ್ತು ಪ್ರತಿಕ್ರಿಯೆಯನ್ನು ತಡೆಯಬಹುದೆಂಬ ಸಲಹೆಗಳನ್ನು ಶ್ವೇತಭವನ ತಿರಸ್ಕರಿಸಿದೆ.
ಜುಲೈ ನಾಲ್ಕನೇ ಸಾರ್ವಜನಿಕ ರಜಾದಿನವಾದ ಶುಕ್ರವಾರ ಬೆಳಗಿನ ಜಾವದ ಮೊದಲು ಧಾರಾಕಾರ ಮಳೆಯಿಂದ ಗ್ವಾಡಾಲುಪೆ ನದಿ ಉಕ್ಕಿ ಹರಿಯುತ್ತಿತ್ತು, ಅಲ್ಲಿ ಕನಿಷ್ಠ 84 ಜನರು ಸಾವನ್ನಪ್ಪಿದರು. 56 ಜನ ವಯಸ್ಕರು ಮತ್ತು 28 ಮಕ್ಕಳು ಕೆರ್ ಕೌಂಟಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ಸುಮಾರು 22 ವಯಸ್ಕರು ಮತ್ತು 10 ಮಕ್ಕಳ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ.
ಟೆಕ್ಸಾಸ್ ಪ್ರವಾಹ: ಕನಿಷ್ಠ 13 ಮಂದಿ ಸಾವು, 20 ಕ್ಕೂ ಹೆಚ್ಚು ಹುಡುಗಿಯರು ನಾಪತ್ತೆ


