ರಾಜಸ್ಥಾನದ ಚುರು ಜಿಲ್ಲೆಯ ಬನೋಡಾ ಗ್ರಾಮದ ಬಳಿ ಬುಧವಾರ ಮಧ್ಯಾಹ್ನ 1.25ರ ಸುಮಾರಿಗೆ ಭಾರತೀಯ ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಪತನಗೊಂಡಿದೆ.
ಅವಘಡ ನಡೆದ ಸ್ಥಳದಲ್ಲಿ ಮನುಷ್ಯರ ದೇಹದ ಭಾಗಗಳು ಹರಡಿಕೊಂಡಿವೆ ಎಂದು ಪ್ರಾಥಮಿಕ ಮಾಹಿತಿ ದೊರೆತಿದ್ದಾಗಿ ವರದಿಗಳು ಹೇಳಿವೆ. ಇದರಿಂದ ವಿಮಾನದಲ್ಲಿದ್ದ ಪೈಲಟ್‌ಗಳು ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.
ಕೆಲ ವರದಿಗಳು, ಇಬ್ಬರು ಗಾಯಗೊಂಡಿದ್ದಾರೆ. ವಿಮಾನದ ಪೈಲಟ್‌ಗಳ ಬಗ್ಗೆ ಇನ್ನೂ ಮಾಹಿತಿ ದೊರೆತಿಲ್ಲ. ಅವರು ಬದುಕಿರುವ ಸಾಧ್ಯತೆ ಕಡೆಮೆಯಿದೆ ಎಂದು ಹೇಳಿವೆ.
ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಮೂರು ತಿಂಗಳಲ್ಲಿ ಎರಡನೇ ಪತನ
ಈ ವರ್ಷದಲ್ಲಿ ಅಥವಾ ಕಳೆದ ಮೂರು ತಿಂಗಳ ಅವಧಿಯಲ್ಲಿ ಜಾಗ್ವಾರ್ ಯುದ್ಧ ವಿಮಾನ ಪತನಗೊಂಡಿರುವ ಎರಡನೇ ಘಟನೆ ಇದಾಗಿದೆ. ಕಳೆದ ಏಪ್ರಿಲ್‌ನಲ್ಲಿ ಗುಜರಾತ್‌ನ ಜಾಮ್‌ನಗರ ವಾಯುಪಡೆ ನಿಲ್ದಾಣದ ಬಳಿ ನಿಯಮಿತ ತರಬೇತಿ ಕಾರ್ಯಾಚರಣೆಯ ಸಮಯದಲ್ಲಿ ಮತ್ತೊಂದು ಐಎಎಫ್ ಜಾಗ್ವಾರ್ ಪತನಗೊಂಡಿತ್ತು.
ಆ ವಿಮಾನವು ಜಾಮ್‌ನಗರ ನಗರದಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿರುವ ಸುವರ್ದಾ ಗ್ರಾಮದ ಬಳಿಯ ತೆರೆದ ಮೈದಾನಕ್ಕೆ ಅಪ್ಪಳಿಸಿತ್ತು.
ಈ ಘಟನೆಯಲ್ಲಿ ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳ ಪೈಕಿ ಒಬ್ಬರು ಸುರಕ್ಷಿತವಾಗಿ ಹೊರ ಬರುವಲ್ಲಿ ಯಶಸ್ವಿಯಾಗಿದ್ದರು. ಇನ್ನೊಬ್ಬರು ಸಾವನ್ನಪ್ಪಿರುವುದನ್ನು ಸ್ಥಳೀಯ ಗ್ರಾಮಸ್ಥರು ಪತ್ತೆ ಖಚಿತಪಡಿಸಿದ್ದರು.
ಗುಜರಾತ್‌ನಲ್ಲಿ ಮತ್ತೊಂದು ಸೇತುವೆ ಕುಸಿತ: ನದಿಗೆ ಬಿದ್ದ ವಾಹನಗಳು; 9 ಸಾವು


