ರಾಷ್ಟ್ರ ರಾಜಧಾನಿ ದೆಹಲಿ-ಎನ್‌ಸಿಆರ್‌ನಲ್ಲಿ ಗುರುವಾರ 4.4 ತೀವ್ರತೆಯ ಭೂಕಂಪ ಸಂಭವಿಸಿದೆ. ಉತ್ತರ ಭಾರತದ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ.
ದೆಹಲಿ-ಎನ್‌ಸಿಆರ್‌ನಲ್ಲಿ ಜನರು ಕಚೇರಿ ಕೆಲಸಗಳಿಗೆ ತೆರಳಲು ಸಿದ್ದರಾಗುತ್ತಿದ್ದ ಸಮಯ, ಅಂದರೆ ಬೆಳಿಗ್ಗೆ 9.04ರ ಸುಮಾರಿಗೆ 5ರಿಂದ 10 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ಘಟನೆಯಲ್ಲಿ ಇದುವರೆಗೆ ಯಾವುದೇ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ದೆಹಲಿ-ಎನ್‌ಸಿಆರ್‌ನ ನೋಯ್ಡಾ, ಗಾಝಿಯಾಬಾದ್, ಗುರುಗ್ರಾಮ ಮತ್ತು ಫರಿದಾಬಾದ್ ಹಾಗೂ ಉತ್ತರ ಪ್ರದೇಶದ ಮೀರತ್ ಮತ್ತು ಶಾಮ್ಲಿಯಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ವರದಿಗಳು ಹೇಳಿವೆ.
ಭೂಕಂಪದ ಕೇಂದ್ರಬಿಂದು ದೆಹಲಿಯಿಂದ ಪಶ್ಚಿಮಕ್ಕೆ ಸುಮಾರು 60 ಕಿ.ಮೀ ದೂರದಲ್ಲಿರುವ ಹರಿಯಾಣದ ಜಜ್ಜರ್‌ನ ಕಂಡು ಬಂದಿದೆ ಎಂದು ದೇಶದಲ್ಲಿ ಭೂಕಂಪನ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುವ ಭಾರತ ಸರ್ಕಾರದ ನೋಡಲ್ ಏಜೆನ್ಸಿಯಾದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.
ಎನ್‌ಸಿಎಸ್ ಪ್ರಕಾರ, ಜಜ್ಜರ್‌ನಲ್ಲಿ ಭೂಮಿಯ 10 ಕಿ.ಮೀ ಆಳದಲ್ಲಿ ಉತ್ತರಕ್ಕೆ 28.63° ಅಕ್ಷಾಂಶ ಮತ್ತು ಪೂರ್ವಕ್ಕೆ 76.68°ರೇಖಾಂಶದಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದೆ.
EQ of M: 4.4, On: 10/07/2025 09:04:50 IST, Lat: 28.63 N, Long: 76.68 E, Depth: 10 Km, Location: Jhajjar, Haryana.
For more information Download the BhooKamp App https://t.co/5gCOtjcVGs @DrJitendraSingh @OfficeOfDrJS @Ravi_MoES @Dr_Mishra1966 @ndmaindia pic.twitter.com/uDNjvD8rWT— National Center for Seismology (@NCS_Earthquake) July 10, 2025
ದೆಹಲಿ ಭೂಕಂಪಗಳಿಗೆ ಗುರಿಯಾಗುವ ಪ್ರದೇಶವಾಗಿದ್ದು, ಇಲ್ಲಿ ಆಗಾಗ ಕಂಪನಗಳು ಸಂಭವಿಸುತ್ತಿರುತ್ತವೆ. ಕಳೆದ ಐದು ತಿಂಗಳಲ್ಲಿ ದೆಹಲಿಯಲ್ಲಿ ಸಂಭವಿಸಿದ ಎರಡನೇ ಪ್ರಮುಖ ಭೂಕಂಪ ಇದಾಗಿದೆ.
ಇದಕ್ಕೂ ಮೊದಲು, ದೆಹಲಿ-ಎನ್‌ಸಿಆರ್‌ನಲ್ಲಿ ಫೆಬ್ರವರಿ 17ರಂದು ಬೆಳಿಗ್ಗೆ 4.0 ಗಂಟೆಗೆ ಭೂಕಂಪ ಸಂಭವಿಸಿತ್ತು. ದೆಹಲಿಯ ಧೌಲಾ ಕುವಾನ್‌ನಲ್ಲಿ ಭೂಮಿಯ 5 ಕಿ.ಮೀ ಆಳದಲ್ಲಿ ಕಂಪನದ ಕೇಂದ್ರಬಿಂದು ಪತ್ತೆಯಾಗಿತ್ತು.
ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ದೆಹಲಿಯ ಸುತ್ತಮುತ್ತಲಿನ ಭೂಕಂಪನವು ದೆಹಲಿ-ಹರಿದ್ವಾರ ಪರ್ವತ ಶ್ರೇಣಿಯೊಂದಿಗೆ ಸಂಬಂಧಿಸಿದೆ. ಇದು ಭೂಕಂಪಗಳಿಗೆ ಗುರಿಯಾಗುವ ಪ್ರಮುಖ ವಲಯವಾಗಿದೆ.
ಪೋರ್ಷೆ ಕಾರು ಅಪಘಾತ ಪ್ರಕರಣ: ಎರಡನೇ ಬಾರಿ ರಕ್ತದ ಮಾದರಿ ತಿರುಚಲು ಯತ್ನಿಸಿದ್ದ ಆರೋಪಿಗಳು!


