Homeಮುಖಪುಟಅತ್ಯಾಚಾರಕ್ಕೊಳಗಾದ ನಂತರ ಬನ್ನಿ: ದೂರು ದಾಖಲಿಸಲು ನಿರಾಕರಿಸಿದ ಉತ್ತರ ಪ್ರದೇಶ ಪೊಲೀಸ್

ಅತ್ಯಾಚಾರಕ್ಕೊಳಗಾದ ನಂತರ ಬನ್ನಿ: ದೂರು ದಾಖಲಿಸಲು ನಿರಾಕರಿಸಿದ ಉತ್ತರ ಪ್ರದೇಶ ಪೊಲೀಸ್

- Advertisement -
- Advertisement -

“ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ” ಎಂದು ದೂರು ನೀಡಲು ಮುಂದಾದ ಮಹಿಳೆಯ ದೂರು ದಾಖಲಿಸಲು ಪೊಲೀಸರು ನಿರಾಕರಿಸಿರುವ ಘಟನೆಗೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉನ್ನಾವ್‌ನ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಮೇಲೆ ಗುರುವಾರ ಬೆಂಕಿ ಹಚ್ಚಿದ ಅದೇ ಸ್ಥಳದ ಹಿಂದೂಪುರ ಗ್ರಾಮದ ಮಹಿಳೆಯೊಬ್ಬರು, ಅತ್ಯಾಚಾರಕ್ಕೆ ಯತ್ನಿಸಿದವರ ಮೇಲೆ ದೂರು ದಾಖಲಿಸಲು ಪೊಲೀಸರು ನಿರಾಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ತನ್ನ ಆರೋಪಿಗಳಿಂದಲೇ ಬೆಂಕಿಗೆ ಆಹುತಿಯಾಗಿ ಸಾವನಪ್ಪಿದ ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಸಾವಿನ ಬಗ್ಗೆ ದೇಶಾದ್ಯಂತ ವ್ಯಕ್ತವಾಗುತ್ತಿರುವ ಆಕ್ರೋಶದ ಹೊರತಾಗಿಯೂ, ಉತ್ತರ ಪ್ರದೇಶದ ಪೊಲೀಸರು ಎಂದಿನಂತೆ ಕರ್ತವ್ಯ ಲೋಪ ಎಸಗುತ್ತಿರುವುದಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ.

ಹಿಂದೂಪುರ ಪೊಲೀಸ್‌ ಠಾಣೆಗೆ ಆ ಮಹಿಳೆ ದೂರು ನೀಡಲು ಮುಂದಾದಾಗ ಅತ್ಯಾಚಾರ ನಡೆದ ನಂತರ ತನ್ನ ದೂರಿನೊಂದಿಗೆ ಬರಲು ಪೊಲೀಸರು ತಿಳಿಸಿದ್ದಾರೆ. “ತೋಹ್ ಹುವಾ ನಹಿ, ಜಬ್ ಹೊಗಾ ಟ್ಯಾಬ್ ಆನಾ (ಅತ್ಯಾಚಾರ ಸಂಭವಿಸಿಲ್ಲ, ಅದು ಸಂಭವಿಸಿದಾಗ ಬನ್ನಿ)” ಎಂದು ಪೊಲೀಸ್ ಠಾಣೆಯಲ್ಲಿ ಒಬ್ಬ ಪೋಲೀಸ್ ಮಹಿಳೆಗೆ ಹೇಳಿದ್ದಾನೆ.

ಕೆಲವು ತಿಂಗಳ ಹಿಂದೆ ಔಷಧಿಗಳನ್ನು ಖರೀದಿಸಲು ತೆರಳುತ್ತಿದ್ದಾಗ ಗ್ರಾಮದ ಮೂವರು ಪುರುಷರು ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರು ಎಂದು ದೂರು ದಾಖಲಿಸಲು ಆ ಮಹಿಳ ಮುಂದಾಗಿದ್ದರು.

“ನಾನು ನನ್ನ ಔಷಧಿಗಳನ್ನು ತೆಗೆದುಕೊಳ್ಳಲು ಹೊರಟಿದ್ದೆ. ಈ ಮೂವರು ನನ್ನನ್ನು ತಡೆದು ನನ್ನ ಬಟ್ಟೆಗಳನ್ನು ಎಳೆಯಲು ಪ್ರಾರಂಭಿಸಿದರು. ಅವರು ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದರು” ಎಂದಿರುವ ಮಹಿಳೆ ಆರೋಪಿಗಳನ್ನೂ ಗುರುತಿಸಿದ್ದಾಳೆ.

ತಾನು ಮೂರು ತಿಂಗಳಿನಿಂದ ಪೊಲೀಸ್ ಠಾಣೆಗೆ ಭೇಟಿ ನೀಡುತ್ತಿದ್ದೇನೆ ಆದರೆ ನನ್ನ ಸಮಸ್ಯೆಯನ್ನು ಯಾರೂ ಕೇಳುತ್ತಿಲ್ಲ ಎಂದು ಮಹಿಳೆ ಹೇಳಿದ್ದಾರೆ. “ಘಟನೆಯ ನಂತರ, ನಾನು 1090 (ಮಹಿಳಾ ಸಹಾಯವಾಣಿ) ಗೆ ಕರೆ ಮಾಡಿದೆ ಮತ್ತು ಅವರು ನನ್ನನ್ನು 100 ಡಯಲ್ ಮಾಡಲು ಕೇಳಿದರು. ನಂತರ ಅವರು ಈ ವಿಷಯವನ್ನು ಉನ್ನಾವೊ ಪೊಲೀಸರಿಗೆ ವರದಿ ಮಾಡಲು ಹೇಳಿದರು” ಎಂದು ಅವರು ವಿವರಿಸಿದ್ದಾರೆ.

ಮೂವರು ಆರೋಪಿಗಳು ಈಗ ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. “ಅವರು ಪ್ರತಿದಿನ ನನ್ನ ಮನೆಗೆ ಬರುತ್ತಾರೆ ಮತ್ತು ನಾನು ದೂರು ನೀಡಿದರೆ ನನಗೆ ಭೀಕರ ಪರಿಣಾಮ ಬೀರುತ್ತದೆ” ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...