ಧರ್ಮಸ್ಥಳದಲ್ಲಿ ಹೂತು ಹಾಕಲಾಗಿದೆ ಎನ್ನಲಾದ ಶವಗಳ ಶೋಧ ಕಾರ್ಯ ಮುಂದುವರಿದಿದೆ. ಈ ಸುದ್ದಿ ಬರೆಯುವ ಹೊತ್ತಿಗೆ (ಸಂಜೆ 5 ಗಂಟೆ) ದೂರುದಾರ ತೋರಿಸಿರುವ ನಾಲ್ಕನೇ ಪಾಯಿಂಟ್ ಬಳಿ ಮಣ್ಣು ಅಗೆಯಲು ಎಸ್‌ಐಟಿ ಶುರು ಮಾಡಿತ್ತು.
ಇಂದು (ಬುಧವಾರ) ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಪಾಯಿಂಟ್ ನಂಬರ್ 2ರಿಂದ ಮಣ್ಣು ಅಗೆಯುವ ಕಾರ್ಯ ಪ್ರಾರಂಭಿಸಲಾಗಿದೆ. ಸಂಜೆ 5ಗಂಟೆಯವರೆಗೆ ಪಾಯಿಂಟ್ ನಂಬರ್ 2,3ಗಳಲ್ಲಿ ಮಣ್ಣು ಅಗೆಯಲಾಗಿದೆ. ಆದರೆ, ಅಲ್ಲಿ ಶವಗಳನ್ನು ಹೂತಿರುವ ಯಾವ ಕುರುಹುಗಳು ಪತ್ತೆಯಾಗಿಲ್ಲ ಎನ್ನಲಾಗಿದೆ.
ಹರಿದ ಕೆಂಪು ಬ್ಲೌಸ್, ಪಾನ್ ಕಾರ್ಡ್, ಎಟಿಎಂ ಕಾರ್ಡ್ ಪತ್ತೆ
ಪಾಯಿಂಟ್ ನಂಬರ್ 1ರಲ್ಲಿ ಅಗೆಯುವ ವೇಳೆ 2 ಐಡಿ ಕಾರ್ಡ್, 1 ಪಾನ್ ಕಾರ್ಡ್ ಮತ್ತು 1 ಡೆಬಿಟ್ ಕಾರ್ಡ್ ಪತ್ತೆಯಾಗಿದೆ ಎಂದು ನ್ಯೂಸ್ 18 ಕನ್ನಡ ವರದಿ ಮಾಡಿದೆ.
ಮಂಗಳವಾರದ ಕಾರ್ಯಚರಣೆಯ ವೇಳೆ ಪಾಯಿಂಟ್ ನಂಬರ್ 1ರ ಬಳಿ ಸುಮಾರು 2.5 ಅಡಿ ಆಳದಲ್ಲಿ ಕೆಂಪು ಬಣ್ಣದ ರವಿಕೆ, ಪಾನ್ ಕಾರ್ಡ್ ಹಾಗೂ ಎಟಿಎಂ ಕಾರ್ಡ್ ಪತ್ತೆಯಾಗಿದೆ ಎಂದು ವಾರ್ತಾಭಾರತಿ ವರದಿ ಹೇಳಿದೆ.
ಈ ಬಗ್ಗೆ ಎಸ್‌ಐಟಿ ತನಿಖೆ ಆರಂಭಿಸಿದೆ ಎಂದು ವರದಿಯಾಗಿದೆ.
ಪ್ರಣಬ್ ಮೊಹಂತಿ ಕೇಂದ್ರ ಸೇವೆಗೆ ಹೋದರೆ ಎಸ್ಐಟಿಗೆ ಬೇರೆ ಅಧಿಕಾರಿ ನೇಮಕ ಕುರಿತು ಚರ್ಚೆ: ಡಾ. ಜಿ ಪರಮೇಶ್ವರ್


