ಧರ್ಮಸ್ಥಳದಲ್ಲಿ ಶವಗಳ ಶೋಧ ಕಾರ್ಯ ಮುಂದುವರಿದಿದೆ. ಇಂದು (ಗುರುವಾರ) ದೂರುದಾರ ತೋರಿಸಿರುವ ಪಾಯಿಂಟ್ 6ರಲ್ಲಿ ಮನುಷ್ಯರ ಅಸ್ತಿಪಂಜರದ ಅವಶೇಷಗಳು ಪತ್ತೆಯಾಗಿದ್ದು, ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ.
ಪಾಯಿಂಟ್ ನಂಬರ್ 6ರಲ್ಲಿ ಇನ್ನೂ ಹೆಚ್ಚಿನ ಅವೇಶಷಗಳು ಪತ್ತೆಯಾಗುತ್ತಿದ್ದು, ಶೋಧ ಕಾರ್ಯ ಮುಂದುವರಿಸಲು ಮಳೆ ಅಡ್ಡಿಯಾಗಿದೆ. ಹಾಗಾಗಿ, ಈ ಸ್ಥಳದಲ್ಲಿ ತಗಡಿನ ಶೀಟಿನ ತಾತ್ಕಾಲಿಕ ಶೆಡ್ ನಿರ್ಮಿಸಲಾಗಿದೆ.
ನಾಳೆಯೂ ಪಾಯಿಂಟ್ ನಂಬರ್ 6ರಲ್ಲಿ ಶೋಧ ಮುಂದುವರಿಯುವ ಸಾಧ್ಯತೆ ಇದೆ. ಇಂದಿನ ಕಾರ್ಯಾಚರಣೆ ಸಂಜೆ ಸ್ಥಗಿತಗೊಳಿಸಲಾಗುತ್ತದಾ..ಇಲ್ಲ ರಾತ್ರಿಯೂ ಮುಂದುವರಿಯಲಿದೆಯಾ? ಎಂಬ ಸ್ಪಷ್ಟತೆ ಸಿಕ್ಕಿಲ್ಲ.
ಇಂದು ಮಧ್ಯಾಹ್ನ 12.30ರ ಸುಮಾರಿಗೆ ಧರ್ಮಸ್ಥಳ ಸ್ನಾನಘಟ್ಟದ ಸಮೀಪದಲ್ಲೇ ಇರುವ ನೇತ್ರಾವತಿ ನದಿಯ ಸೇತುವೆ ಬಳಿ ಮಣ್ಣು ಅಗೆಯು ಕಾರ್ಯ ಆರಂಭಿಸಲಾಯಿತು. ಇಲ್ಲಿ ದೂರುದಾರ ಪಾಯಿಂಟ್ ನಂಬರ್ 6ರನ್ನು ಗುರುತಿಸಿದ್ದರು. ಸುಮಾರು 3 ಅಡಿ ಮಣ್ಣು ಅಗೆಯುವಾಗ ಮನುಷ್ಯರ ಅಸ್ತಿಪಂಜರದ ಅವಶೇಷಗಳು, ಅಂದರೆ ಮೂಳೆ, ತಲೆ ಬುರುಡೆಯ ತುಂಡು ಪತ್ತೆಯಾಗಿದೆ ಎಂದು ಹೇಳಲಾಗ್ತಿದೆ.
ಸಿಕ್ಕಿರುವ ಅವಶೇಷಗಳನ್ನು ಎಫ್‌ಎಸ್‌ಎಲ್ ತಂಡ ಸಂರಕ್ಷಿಸಿದೆ. ಅದನ್ನು ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂಬ ಮಾಹಿತಿ ದೊರೆತಿದೆ.
ಪಾಯಿಂಟ್ ನಂಬರ್ 6ರಲ್ಲಿ ಅವಶೇಷ ಪತ್ತೆಯಾಗಿದೆ ಎಂಬ ಸುದ್ದಿ ಬೆನ್ನಲ್ಲೇ, ಅಲ್ಲಿಗೆ ಉಪ್ಪು, ಪ್ಲಾಸ್ಟಿಕ್ ಕಂಟೇನರ್ ಮತ್ತು ಪ್ಲಾಸ್ಟಿಕ್ ಟಾರ್ಪಲ್ ತರಿಸಲಾಗಿದೆ. ಶ್ವಾನದಳವು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ.
ಧರ್ಮಸ್ಥಳದಲ್ಲಿ ಶವ ಶೋಧ: 6ನೇ ಪಾಯಿಂಟ್‌ನಲ್ಲಿ ಅಸ್ತಿಪಂಜರದ ಅವಶೇಷ ಪತ್ತೆ


