ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದ ಸ್ಥಾಪಕ ಶಿಬು ಸೊರೇನ್ (81) ಅವರು ದೀರ್ಘಕಾಲದ ಅನಾರೋಗ್ಯದ ನಂತರ ದೆಹಲಿಯ ಶ್ರೀ ಗಂಗಾರಾಮ್ ಆಸ್ಪತ್ರೆಯಲ್ಲಿ ಸೋಮವಾರ (ಆ.4) ನಿಧನರಾಗಿದ್ದಾರೆ.
ಶಿಬು ಅವರ ಮಗ, ಜಾರ್ಖಂಡ್‌ನ ಹಾಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಮರಣದ ವಿಷಯವನ್ನು ತಿಳಿಸಿದ್ದು, “ಪೂಜ್ಯ ‘ಗುರು ದಿಶೋಮ್’ ನಮ್ಮೆಲ್ಲರನ್ನೂ ಅಗಲಿದ್ದಾರೆ. ಇಂದು ನನಗೆ ಎಲ್ಲವೂ ಶೂನ್ಯ ಅನ್ನಿಸುತ್ತಿದೆ” ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
आदरणीय दिशोम गुरुजी हम सभी को छोड़कर चले गए हैं।
आज मैं शून्य हो गया हूँ…
— Hemant Soren (@HemantSorenJMM) August 4, 2025
ಜೂನ್ ಕೊನೆಯ ವಾರದಲ್ಲಿ ಮೂತ್ರಪಿಂಡದ ಸಮಸ್ಯೆ ಹಿನ್ನೆಲೆ ಶಿಬು ಸೊರೇನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
‘ಗುರೂಜಿ’ ಎಂದು ಜನರು ಪ್ರೀತಿಯಿಂದ ಕರೆಯುತ್ತಿದ್ದ ಶಿಬು ಸೊರೇನ್ ಅವರು, ಪ್ರತ್ಯೇಕ ಜಾರ್ಖಂಡ್ ರಾಜ್ಯಕ್ಕಾಗಿ ನಡೆದ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬುಡಕಟ್ಟು ಮತ್ತು ತಳ ಸಮುದಾಯಗಳ ಜನರ ಹಕ್ಕುಗಳನ್ನು ರಕ್ಷಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟವರು.
ಶಿಬು ಅವರ ರಾಜಕೀಯ ಜೀವನವು ಜಾರ್ಖಂಡ್‌ನ ಆದಿವಾಸಿ ಜನರೊಂದಿಗೆ ಆಳವಾಗಿ ಬೆಸೆದುಕೊಂಡಿತ್ತು. ದಶಕಗಳ ಕಾಲ ಅವರು ಜಾರ್ಖಂಡ್ ರಾಜ್ಯ ಮತ್ತು ರಾಷ್ಟ್ರೀಯ ರಾಜಕೀಯದಲ್ಲಿ ಪ್ರಮುಖ ಶಕ್ತಿಯಾಗಿ ಇದ್ದರು.
ಪುಣೆಯಲ್ಲಿ ಕೋಮು ಉದ್ವಿಗ್ನತೆ: ಮುಸ್ಲಿಮರದೆಂದು ತಪ್ಪಾಗಿ ಭಾವಿಸಿ ಅಮಾಯಕ ಹಿಂದೂ ಬೇಕರಿ ಭಸ್ಮ


