ಮಣಿಪುರದ ಚುರಾಚಂದ್‌ಪುರದ 45 ವರ್ಷದ ವ್ಯಕ್ತಿಯೊಬ್ಬ ಬಿಷ್ಣುಪುರ ಜಿಲ್ಲೆಯ ಬಳಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ತುಯಿಬಾಂಗ್ ನಿವಾಸಿ ಸೋಖೊಂಗಮ್ ಬೈಟೆ ಗುರುವಾರ ಸಂಜೆ ಬಿದಿರಿನ ಕಳಲೆ ಸಂಗ್ರಹಿಸಲು ಕಾಡಿಗೆ ತೆರಳಿದ ನಂತರ ಕಾಣೆಯಾಗಿದ್ದಾನೆ ಎಂದು ಅವರು ಹೇಳಿದರು. ಘಟನೆಯ ನಂತರ ರಾತ್ರಿ ಚುರಾಚಂದ್‌ಪುರ ಪಟ್ಟಣದಲ್ಲಿ ಸ್ವಲ್ಪ ಸಮಯದವರೆಗೆ ಉದ್ವಿಗ್ನತೆ ಆವರಿಸಿತು.
ಚುರಾಚಂದ್‌ಪುರ ಮತ್ತು ಬಿಷ್ಣುಪುರ ಜಿಲ್ಲೆಗಳಲ್ಲಿ ನಿಯೋಜಿಸಲಾದ ಭದ್ರತಾ ಸಿಬ್ಬಂದಿ ಬೈಟೆಗಾಗಿ ಹುಡುಕಾಟ ನಡೆಸಿದರು. ಆದರೆ, ಅವರ ಶವವು ಅವರ ಮನೆಯಿಂದ ಸುಮಾರು 13 ಕಿ.ಮೀ ದೂರದಲ್ಲಿರುವ ಟೋರ್‌ಬಂಗ್ ಪ್ರದೇಶದ ವಿದ್ಯುತ್ ಪರಿವರ್ತಕದ ಬಳಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕ ವೋಲ್ಟೇಜ್ ವಿದ್ಯುತ್ ತಂತಿಗಳು ಇದ್ದ ಕಾರಣ ರಾತ್ರಿಯವರೆಗೆ ಶವವನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ. ಶುಕ್ರವಾರ ಬೆಳಿಗ್ಗೆ ಅದನ್ನು ಹೊರತೆಗೆಯಲಾಯಿತು. ಮರಣೋತ್ತರ ಪರೀಕ್ಷೆಗಾಗಿ ಚುರಾಚಂದ್‌ಪುರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
“ಮರಣೋತ್ತರ ಪರೀಕ್ಷೆಯಿಂದ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ. ವಿದ್ಯುತ್ ಆಘಾತದಿಂದ ಅವರು ಸಾವನ್ನಪ್ಪಿರಬಹುದು ಎಂದು ಪ್ರಾಥಮಿಕ ತನಿಖೆಗಳು ಸೂಚಿಸುತ್ತವೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕುಕಿ ಸಮುದಾಯದ ಜನರು ಚುರಚಂದ್‌ಪುರದಲ್ಲಿ ವಾಸಿಸುತ್ತಿದ್ದರೆ, ಬಿಷ್ಣುಪುರ ಜಿಲ್ಲೆಯಲ್ಲಿ ಮೈತೇಯಿಗಳು ಪ್ರಾಬಲ್ಯ ಹೊಂದಿದ್ದಾರೆ. ಮೇ 2023 ರಲ್ಲಿ ಕುಕಿಗಳು ಮತ್ತು ಮೈತೇಯಿಗಳ ನಡುವೆ ಜನಾಂಗೀಯ ಘರ್ಷಣೆಗಳು ಭುಗಿಲೆದ್ದ ನಂತರ 260 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.
ಘರ್ಷಣೆಗೆ ಕಾರಣವಾದ ಮೊದಲ ಹಿಂಸಾಚಾರದ ಘಟನೆಗಳು ಟೋರ್ಬಂಗ್‌ನಿಂದ ವರದಿಯಾಗಿವೆ, ಅಲ್ಲಿ ಶವ ಪತ್ತೆಯಾಗಿತ್ತು.
ಜಮ್ಮು-ಕಾಶ್ಮೀರ ಮೇಘಸ್ಪೋಟ| ಕಿಶ್ತ್ವಾರ್‌ನಲ್ಲಿ ತೀವ್ರಗೊಂಡ ರಕ್ಷಣಾ ಕಾರ್ಯಾಚರಣೆ; ಎನ್‌ಡಿಆರ್‌ಎಫ್ ಕಾರ್ಯಾಚರಣೆ


