ದಲಿತ ಮಹಿಳೆಯ ಮೇಲೆ ಹಲ್ಲೆ ಮತ್ತು ಕಿರುಕುಳ ನೀಡಿದ 12 ವರ್ಷಗಳ ಹಿಂದಿನ ಪ್ರಕರಣದಲ್ಲಿ, ಖಾದೂರ್ ಸಾಹಿಬ್‌ನ ಎಎಪಿ ಶಾಸಕ ಮಂಜಿಂದರ್ ಸಿಂಗ್ ಲಾಲ್‌ಪುರ ಅವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು, ಪ್ರಕರಣದಲ್ಲಿ ಆರು ಜನ ಪೊಲೀಸರು ಸೇರಿದಂತೆ ಹನ್ನೊಂದು ಜನರನ್ನು ದೋಷಿಗಳೆಂದು ನಿರ್ಣಯಿಸಿದ್ದಾರೆ. ಲಾಲ್‌ಪುರ ಮತ್ತು ಇತರ ಆರು ಜನರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ, ಉಳಿದ ಮೂವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಬುಧವಾರ, ನ್ಯಾಯಾಲಯವು ಈ ಪ್ರಕರಣದಲ್ಲಿ ಆರು ಪೊಲೀಸರು ಸೇರಿದಂತೆ 11 ಜನರನ್ನು ದೋಷಿಗಳು ಎಂದು ತೀರ್ಪು ನೀಡಿತು. ಶುಕ್ರವಾರ ಶಿಕ್ಷೆಯನ್ನು ಪ್ರಕಟಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪ್ರೇಮ್ ಕುಮಾರ್, ಲಾಲ್ಪುರ ಮತ್ತು ಇತರ ಆರು ಜನರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದರು. ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿರುವ ಆರೋಪಿಗಳಲ್ಲಿ ಒಬ್ಬನಾದ ಹರ್ವಿಂದರ್ ಸಿಂಗ್ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ಅವನ ಶಿಕ್ಷೆಯ ಪ್ರಮಾಣವು ಸೆಪ್ಟೆಂಬರ್ 16 ರಂದು ನಿಗದಿಯಾಗಿದೆ. ಮತ್ತೊಬ್ಬ ಆರೋಪಿ ಪರಮ್ಜಿತ್ ಸಿಂಗ್ ವಿಚಾರಣೆಯ ಸಮಯದಲ್ಲಿ ಸಾವನ್ನಪ್ಪಿದ್ದಾನೆ.
“ನ್ಯಾಯಾಲಯವು ಆರೋಪಿಗಳಿಗೆ ತಲಾ 50,000 ರೂ. ದಂಡವನ್ನು ವಿಧಿಸಿದೆ. ಕಾನೂನಿನ ಪ್ರಕಾರ ಬಲಿಪಶುವಿಗೆ ಪರಿಹಾರವನ್ನು ಪಾವತಿಸಬೇಕೆಂದು ನಿರ್ದೇಶಿಸಿತು” ಎಂದು ಸಂತ್ರಸ್ತೆ ಪರ ವಕೀಲ ಅಮಿತ್ ಧವನ್ ಹೇಳಿದರು. ಶಿಕ್ಷೆಯ ಘೋಷಣೆಯ ನಂತರ, ಶಾಸಕರನ್ನು ವಶಕ್ಕೆ ತೆಗೆದುಕೊಂಡು ಜೈಲಿಗೆ ಕಳುಹಿಸಲಾಯಿತು.
ಸೆಪ್ಟೆಂಬರ್ 4, 2013 ರಂದು, ಟ್ಯಾಕ್ಸಿ ಚಾಲಕ ಮತ್ತು ಇತರ ಕೆಲವು ಪುರುಷರು 19 ವರ್ಷದ ಮಹಿಳೆ ಮತ್ತು ಆಕೆಯ ಕುಟುಂಬ ಸದಸ್ಯರು ಮದುವೆಗೆ ಹೋಗುತ್ತಿದ್ದಾಗ ಆಕೆಯ ಮೇಲೆ ಹಲ್ಲೆ ನಡೆಸಿ ಲೈಂಗಿಕ ದೌರ್ಜನ್ಯ ಎಸಗಿದರು. ಸ್ಥಳಕ್ಕೆ ಬಂದ ಪೊಲೀಸ್ ತಂಡವೂ ಮಹಿಳೆಯ ಮೇಲೆ ಹಲ್ಲೆ ನಡೆಸಿತು ಎನ್ನಲಾಗಿದೆ.
ತುಮಕೂರು: ಕುಡಿಯುವ ನೀರಿನ ಸಂಪರ್ಕ ವಿಚಾರಕ್ಕೆ ಜಗಳ; ದಲಿತ ವ್ಯಕ್ತಿಯ ಭೀಕರ ಕೊಲೆ


