‘ಕಪೋಲಕಲ್ಪಿತ’ ಮತ್ತು ‘ಕಾಲ್ಪನಿಕ’ ಸಾಕ್ಷ್ಯಗಳು ಹಾಗೂ ‘ತಿರುಚಿದ’ ಪ್ರಕರಣಗಳನ್ನು ಉಲ್ಲೇಖಿಸಿ, 2020ರ ಗಲಭೆಗಳಿಗೆ ಸಂಬಂಧಿಸಿದ ಕನಿಷ್ಠ 17 ಪ್ರಕರಣಗಳಲ್ಲಿ ದೆಹಲಿ ನ್ಯಾಯಾಲಯಗಳು ಆರೋಪಿಗಳನ್ನು ಖುಲಾಸೆಗೊಳಿಸಿವೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿ ಮಾಡಿದೆ.
ಒಟ್ಟು 93 ಖುಲಾಸೆ ಆದೇಶಗಳ ಪರಿಶೀಲನೆಯಿಂದ ನ್ಯಾಯಾಲಯಗಳು ದೆಹಲಿ ಪೊಲೀಸರ ವಿರುದ್ಧ ಗಂಭೀರ ಆಕ್ಷೇಪಗಳನ್ನು ವ್ಯಕ್ತಪಡಿಸಿರುವುದು ಗೊತ್ತಾಗಿದೆ. ಸುಮಾರು 20% ಪ್ರಕರಣಗಳಲ್ಲಿ (ಅಂದರೆ, ಪ್ರತಿ ಐದು ಪ್ರಕರಣಗಳಲ್ಲಿ ಒಂದರಲ್ಲಿ), ನ್ಯಾಯಾಧೀಶರು ಪೊಲೀಸರಿಂದ ಗಂಭೀರ ತಪ್ಪುಗಳು ಅಥವಾ ದುರ್ವರ್ತನೆಯನ್ನು ಗಮನಿಸಿದ್ದಾರೆ. ಒಟ್ಟಾರೆ, 116 ಗಲಭೆ ಪ್ರಕರಣಗಳಲ್ಲಿ ತೀರ್ಪು ನೀಡಲಾಗಿದ್ದು, ಅದರಲ್ಲಿ 97 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊಂಡಿದ್ದಾರೆ, ಅಂದರೆ ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳನ್ನು ದೋಷಮುಕ್ತರೆಂದು ಘೋಷಿಸಲಾಗಿದೆ ಎಂದು ವರದಿ ವಿವರಿಸಿದೆ.
ಕನಿಷ್ಠ 12 ಆದೇಶಗಳಲ್ಲಿ, ಪೊಲೀಸರು ‘ಕೃತಕ’ ಅಥವಾ ಸ್ಪಷ್ಟವಾಗಿ ‘ಕಲ್ಪಿತ’ ಸಾಕ್ಷ್ಯಗಳನ್ನು ಪರಿಚಯಿಸಿದ್ದಾರೆ ಎಂದು ನ್ಯಾಯಾಧೀಶರು ಕಂಡುಕೊಂಡಿದ್ದಾರೆ. ಅಂದರೆ, ಪೊಲೀಸರು ಸುಳ್ಳು ಅಥವಾ ತಿರುಚಿದ ಸಾಕ್ಷ್ಯಗಳನ್ನು ಸೃಷ್ಟಿಸಿದ್ದಾರೆ ಎಂದು ಗುರುತಿಸಿದ್ದಾರೆ. ಇದರ ಜೊತೆಗೆ, ಇನ್ನೆರಡು ಪ್ರಕರಣಗಳಲ್ಲಿ, ಸಾಕ್ಷಿಗಳು ತಮ್ಮ ಹೇಳಿಕೆಗಳನ್ನು ಪೊಲೀಸ್ ಅಧಿಕಾರಿಗಳು ನಿರ್ದೇಶಿಸಿದಂತೆ ದಾಖಲಿಸಲಾಗಿದೆ. ಅವರು ಸೂಚಿಸಿದಂತೆ ಹೇಳಿಕೆ ನೀಡಲು ಪೊಲೀಸರು ನಮ್ಮನ್ನು ಒತ್ತಾಯಿಸಿದ್ದಾರೆ ಎಂದು ನ್ಯಾಯಾಲಯದ ಮುಂದೆ ಹೇಳಿದ್ದಾರೆ.
ನ್ಯಾಯಾಧೀಶ ಪರವೀನ್ ಸಿಂಗ್, ಅವರು ಒಂದು ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸುವಾಗ, ತನಿಖಾಧಿಕಾರಿಯಿಂದ (IO) ಸಾಕ್ಷ್ಯಗಳನ್ನು ಉದ್ದೇಶಪೂರ್ವಕವಾಗಿ ತಿರುಚಿದ್ದಾರೆ ಅಥವಾ ಸುಳ್ಳು ಸಾಕ್ಷ್ಯಗಳನ್ನು ಸೇರಿಸಿದ್ದಾರೆ ಎಂದು ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂತಹ ಕೃತ್ಯಗಳು ಜನರಲ್ಲಿ ತನಿಖಾ ಪ್ರಕ್ರಿಯೆ ಮತ್ತು ಕಾನೂನಿನ ಆಡಳಿತದ ಮೇಲಿನ ವಿಶ್ವಾಸವನ್ನುಕಡಿಮೆ ಮಾಡುತ್ತವೆ ಎಂದು ಎಚ್ಚರಿಸಿದ್ದಾರೆ.
2020 ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಗಳ ನಡುವೆ ಭುಗಿಲೆದ್ದ ಗಲಭೆಯಲ್ಲಿ ಕನಿಷ್ಠ 53 ಜನರು ಸಾವನ್ನಪ್ಪಿದ್ದರು ಮತ್ತು 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಕೆಲ ಆದೇಶಗಳಲ್ಲಿ ನ್ಯಾಯಾಲಯಗಳು ಪ್ರಾಸಿಕ್ಯೂಷನ್‌ನ (ಅಭಿಯೋಗದ) ವಾದವನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ಒಂದು ಪ್ರಕರಣದಲ್ಲಿ, ನ್ಯಾಯಾಧೀಶರು ಪ್ರಮುಖ ಸಾಕ್ಷಿಯ ಇರುವಿಕೆಯ ಬಗ್ಗೆಯೇ ಸಂದೇಹ ವ್ಯಕ್ತಪಡಿಸಿದ್ದಾರೆ ಮತ್ತು ಆ ಸಾಕ್ಷಿಯು ಕಾಲ್ಪನಿಕ (ನಕಲಿ) ವ್ಯಕ್ತಿಯಾಗಿರಬಹುದು ಎಂದು ತಿಳಿಸಿದ್ದಾರೆ. ಇನ್ನೆರಡು ಸಮಾನ ಆದೇಶಗಳಲ್ಲಿ, ಪೊಲೀಸರು ಪ್ರಕರಣವನ್ನು ತಿರುಚಿರುವುದು (ಸುಳ್ಳು ಸಾಕ್ಷ್ಯಗಳಿಂದ ಕೂಡಿದೆ) ಅವರಿಗೆ ಗೊತ್ತಿದೆ ಎಂದು ನ್ಯಾಯಾಲಯ ತೀರ್ಮಾನಿಸಿದೆ. ಏಕೆಂದರೆ, ಅವರು ಟೆಸ್ಟ್ ಐಡೆಂಟಿಫಿಕೇಶನ್ ಪರೇಡ್ (ಟಿಐಪಿ)ನಡೆಸಿಲ್ಲ, ಇದು ತನಿಖೆಯಲ್ಲಿ ಪ್ರಮುಖ ಕ್ರಮವಾಗಿದೆ ಎಂದಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಹೇಳಿದೆ.
ನ್ಯಾಯಾಧೀಶರ ಈ ಟೀಕೆಗಳು, ತನಿಖೆಯ ಸಂದರ್ಭದಲ್ಲಿ ಕೇಸ್ ಡೈರಿಯಲ್ಲಿ ಉದ್ದೇಶಪೂರ್ವಕವಾಗಿ ತಿರುಚಲಾಗಿರುವ ಸಾಧ್ಯತೆಯನ್ನು ಮತ್ತು ಪೊಲೀಸ್ ಕಾನ್‌ಸ್ಟೇಬಲ್‌ನಿಂದ ಕೃತಕವಾಗಿ ರಚಿಸಲಾದ ಆರೋಪವನ್ನು ಒತ್ತಿಹೇಳುತ್ತವೆ. ಇದು, ನಗರದಲ್ಲಿ ನಡೆದ ಗಂಭೀರ ಸಾಮುದಾಯಿಕ ಹಿಂಸಾಚಾರದ ಘಟನೆಯ ತನಿಖೆಯಲ್ಲಿ ಗಂಭೀರ ಲೋಪಗಳು ಇದ್ದವು ಎಂದು ಸೂಚಿಸುತ್ತದೆ, ಇದು ಒಟ್ಟಾರೆ ತನಿಖಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡುತ್ತದೆ ವರದಿ ಅಭಿಪ್ರಾಯಪಟ್ಟಿದೆ.
ಅದಾನಿ ಕುರಿತ ಪೋಸ್ಟ್ ತೆಗೆದು ಹಾಕಲು ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಆದೇಶ; ವರದಿ


