ಹರಿಯಾಣದ ಪಾಣಿಪತ್‌ನಲ್ಲಿರುವ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿ ಮೇಲಿನ ದೌರ್ಜನ್ಯದ ಆಘಾತಕಾರಿ ಪ್ರಕರಣವೊಂದು ಆಕ್ರೋಶಕ್ಕೆ ಕಾರಣವಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇಲ್ಲಿನ ಜಟ್ಟಲ್ ರಸ್ತೆಯಲ್ಲಿರುವ ಶಾಲೆಯೊಂದರಲ್ಲಿ ನಡೆದೆ ಎನ್ನಲಾದ ಎರಡು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಿಬ್ಬಂದಿಗಳು ಚಿಕ್ಕ ಮಕ್ಕಳ ಮೇಲೆ ಕ್ರೂರವಾಗಿ ವರ್ತಿಸುವುದನ್ನು ಕಾಣಬಹುದು.
ಒಂದನೇ ವೀಡಿಯೊದಲ್ಲಿ, 2 ನೇ ತರಗತಿಯ ವಿದ್ಯಾರ್ಥಿಯನ್ನು ಹಗ್ಗಗಳಿಂದ ಕಟ್ಟಿ, ಕಿಟಕಿಗೆ ತಲೆಕೆಳಗಾಗಿ ನೇತುಹಾಕಲಾಗಿದೆ. ಆತನ ಹೋಮ್‌ವರ್ಕ್ ಪೂರ್ಣಗೊಳಿಸದಿದ್ದಕ್ಕಾಗಿ ಶಾಲಾ ಚಾಲಕ ಥಳಿಸಿದ್ದಾನೆ. ಮುಖಿಜಾ ಕಾಲೋನಿಯ ನಿವಾಸಿಯಾಗಿರುವ ಬಾಲಕನ ತಾಯಿ ಡೋಲಿ, ತನ್ನ ಏಳು ವರ್ಷದ ಮಗನನ್ನು ಇತ್ತೀಚೆಗೆ ಶಾಲೆಗೆ ಸೇರಿಸಲಾಗಿತ್ತು ಎಂದು ಹೇಳಿದರು. ಪ್ರಾಂಶುಪಾಲರಾದ ರೀನಾ ಮಗುವನ್ನು ಶಿಕ್ಷಿಸಲು ಚಾಲಕ ಅಜಯ್‌ಗೆ ತಿಳಿಸಿದ್ದಾರೆ, ನಂತರ ಅವನು ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.
ಅಜಯ್ ಬಾಲಕನಿಗೆ ಕಪಾಳಮೋಕ್ಷ ಮಾಡಿದರು, ಆತನನ್ನು ನಿಂದಿಸುವಾಗ ಸ್ನೇಹಿತರಿಗೆ ವೀಡಿಯೊ ಕರೆಗಳನ್ನು ಮಾಡಿದ್ದಾರೆ. ಆತನ ಸ್ನೇಹಿತರು ವೀಡಿಯೊವನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದರು. ವೈರಲ್ ವಿಡಿಯೊ ಅಂತಿಮವಾಗಿ ಮಗುವಿನ ಕುಟುಂಬವನ್ನು ತಲುಪಿದ ಬಳಿಕ ದೌರ್ಜನ್ಯ ಬಹಿರಂಗವಾಗಿದೆ.
ಮತ್ತೊಂದು ವೈರಲ್ ವೀಡಿಯೊದಲ್ಲಿ, ಪ್ರಾಂಶುಪಾಲರಾದ ರೀನಾ ಸ್ವತಃ ಇತರ ವಿದ್ಯಾರ್ಥಿಗಳ ಸಂಪೂರ್ಣ ಸಮ್ಮುಖದಲ್ಲಿ ಚಿಕ್ಕ ಮಕ್ಕಳ ಕಪಾಳಕ್ಕೆ ಹೊಡೆಯುವುದು ರೆಕಾರ್ಡ್ ಆಗಿದೆ. ನಂತರ ಆಕೆ ತನ್ನ ಕೃತ್ಯಗಳನ್ನು ಸಮರ್ಥಿಸಿಕೊಂಡಿದ್ದು, ಮಕ್ಕಳು ಇಬ್ಬರು ಸಹೋದರಿಯರೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅವರಿಗೆ ಶಿಕ್ಷೆ ನೀಡುವ ಮೊದಲು ಪೋಷಕರಿಗೆ ತಿಳಿಸಿದ್ದರು ಎಂದು ಹೇಳಿದ್ದಾರೆ.
ಆದರೂ, ಆಕೆಯ ಸಮರ್ಥನೆಯು ಶಿಕ್ಷಣ ಸಚಿವಾಲಯದ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ. ಇದು ದೈಹಿಕ ಶಿಕ್ಷೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ. ಶಿಕ್ಷೆಯಾಗಿ ಮಕ್ಕಳನ್ನು ಕೆಲವೊಮ್ಮೆ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಒತ್ತಾಯಿಸಲಾಗುತ್ತದೆ ಎಂದು ಪೋಷಕರು ಆರೋಪಿಸಿದ್ದಾರೆ.
ಪ್ರಾಂಶುಪಾಲೆ ರೀನಾ, ಆಗಸ್ಟ್ 13 ರಂದು ಬಾಲಕನನ್ನು ಗದರಿಸುವಂತೆ ಅಜಯ್ ಅವರನ್ನು ಕೇಳಿಕೊಂಡಿದ್ದಾಗಿ ಒಪ್ಪಿಕೊಂಡರು. ಆದರೆ, ಚಾಲಕನ ನಡವಳಿಕೆಯ ಬಗ್ಗೆ ಪದೇ ಪದೇ ದೂರುಗಳು ಬಂದ ಕಾರಣ ಆಗಸ್ಟ್‌ನಲ್ಲಿಯೇ ಅವರನ್ನು ವಜಾಗೊಳಿಸಲಾಗಿದೆ ಎಂದು ಹೇಳಿದ್ದಾರೆ. ವೀಡಿಯೊ ಕಾಣಿಸಿಕೊಂಡ ನಂತರ ಅಜಯ್ ನಮ್ಮ ಮನೆಗೆ ಗುಂಪನ್ನು ಕಳುಹಿಸುವ ಮೂಲಕ ಬೆದರಿಸಲು ಪ್ರಯತ್ನಿಸಿದ ಎಂದು ಹುಡುಗನ ಕುಟುಂಬ ಆರೋಪಿಸಿದೆ.
ದೂರಿನ ನಂತರ, ಮಾಡೆಲ್ ಟೌನ್ ಠಾಣೆಯ ಪೊಲೀಸರು ಬಾಲ ನ್ಯಾಯ ಕಾಯ್ದೆ, 2015 ರ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಷ್ಯಾ ಕಪ್। ಪಾಕಿಸ್ತಾನ ಸಚಿವ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಪಡೆಯಲು ನಿರಾಕರಿಸಿದ ಭಾರತ ತಂಡ


