ಗಾಝಾದಲ್ಲಿ ಕದನ ವಿರಾಮ ಜಾರಿಯಾಗುತ್ತಿರುವ ನಡುವೆ, ಪ್ಯಾಲೆಸ್ತೀನ್‌ನ ಪ್ರಮುಖ ಪತ್ರಕರ್ತ ಸಾಲೇಹ್ ಅಲ್-ಜಾಫರಾವಿ ಅವರನ್ನು ಶಸ್ತ್ರದಾರಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ವರದಿಯಾಗಿದೆ.
ಯುದ್ಧದ ವರದಿ ಮಾಡುವ ವಿಡಿಯೋಗಳಿಂದ ಖ್ಯಾತಿ ಗಳಿಸಿದ್ದ 28 ವರ್ಷದ ಜಾಫರಾವಿ ಅವರನ್ನು, ಗಾಝಾ ನಗರದ ಸಬ್ರಾ ಸಮೀಪ ನಡೆದ ಘರ್ಷಣೆಗಳ ವರದಿ ಮಾಡುವಾಗ ಸಶಸ್ತ್ರ ಗುಂಪಿನ ಸದಸ್ಯ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂದು ಸುದ್ದಿ ಸಂಸ್ಥೆ ಅಲ್-ಜಝೀರಾ ವರದಿ ಮಾಡಿದೆ.
ತನ್ನ ಸನದ್ ಏಜೆನ್ಸಿಯು ಕೆಲವು ವರದಿಗಾರರು ಮತ್ತು ಹೋರಾಟಗಾರರು ಹಂಚಿಕೊಂಡಿರುವ ವಿಡಿಯೋಗಳನ್ನು ಪರಿಶೀಲಿಸಿದೆ. ಆ ವಿಡಿಯೋದಲ್ಲಿ ‘ಪ್ರೆಸ್’ ಎಂದು ಬರೆದ ಜಾಕೆಟ್ ಧರಿಸಿರುವ ಒಬ್ಬರು ವ್ಯಕ್ತಿಯ ದೇಹ ಟ್ರಕ್ ಒಂದರ ಹಿಂದೆ ಬಿದ್ದಿರುವುದು ಕಾಣಿಸಿದೆ. ಸಾಲೇಹ್ ಅಲ್-ಜಾಫರಾವಿ ಭಾನುವಾರ ಬೆಳಿಗ್ಗೆಯಿಂದ ಕಾಣಿಯಾಗಿದ್ದಾರೆ ಎಂದು ಅಲ್-ಜಝೀರಾ ಸುದ್ದಿ ಸಂಸ್ಥೆ ವರದಿ ವಿವರಿಸಿದೆ.
ಭಾನುವಾರ ಸಬ್ರಾದಲ್ಲಿ ಹಮಾಸ್, ಭದ್ರತಾ ಪಡೆಗಳು ಮತ್ತು ಡೋಗ್ಮುಶ್ ಕುಟುಂಬದ ಹೋರಾಟಗಾರರ ನಡುವೆ ಘರ್ಷಣೆಗಳು ನಡೆದಿವೆ ಎಂದು ಪ್ಯಾಲೆಸ್ತೀನ್ ಮೂಲಗಳು ತಿಳಿಸಿವೆ. ಆದರೆ, ಸ್ಥಳೀಯ ಅಧಿಕಾರಿಗಳು ಇದನ್ನು ದೃಢಪಡಿಸಿಲ್ಲ ಎಂದು ಅಲ್-ಜಝೀರಾ ಹೇಳಿದೆ.
ಸಬ್ರಾದಲ್ಲಿ ನಡೆದ ಘರ್ಷಣೆ ಇಸ್ರೇಲ್ ಬೆಂಬಲಿತ ಶಸಸ್ತ್ರ ಗುಂಪೊಂದಕ್ಕೆ ಸಂಬಂಧಿಸಿದೆ ಎಂದು ಗಾಝಾದ ಒಳಾಡಳಿತ ಸಚಿವಾಲಯದ ಮೂಲವೊಂದು ಹೇಳಿರುವುದಾಗಿ ಆಲ್- ಜಝೀರಾ ತಿಳಿಸಿದೆ.
ದಕ್ಷಿಣ ಗಾಝಾದಿಂದ ಗಾಝಾ ನಗರಕ್ಕೆ ಹಿಂತಿರುಗುತ್ತಿರುವ ಸ್ಥಳಾಂತರಗೊಂಡ ಜನರನ್ನು ಶಸಸ್ತ್ರ ಗುಂಪಿನ ಸದಸ್ಯರು ಹತ್ಯೆಗೈದಿದ್ದಾರೆ. ಈ ವೇಳೆ ಭದ್ರತಾ ಪಡೆಗಳು ಆ ಗುಂಪಿನ ಮೇಲೆ ಮುತ್ತಿಗೆ ಹಾಕಿದವು ಎಂದು ಮೂಲಗಳನ್ನು ಉಲ್ಲೇಖಿಸಿ ಅಲ್-ಜಝೀರಾ ಹೇಳಿದೆ.
“ನಾನು ಪ್ರತಿ ಕ್ಷಣವೂ ಭಯದಲ್ಲಿ ಬದುಕುತ್ತಿದ್ದೇನೆ”
ಕಳೆದ ಜನವರಿಯಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಿಸಿದ್ದಾಗ ಅಲ್-ಜಝೀರಾ ಜೊತೆ ಮಾತನಾಡಿದ್ದ ಅಲ್-ಜಾಫರಾವಿ, ಉತ್ತರ ಗಾಝಾದಿಂದ ಸ್ಥಳಾಂತರಗೊಂಡ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದರು.
ತನ್ನ ಕೆಲಸದ ಕಾರಣದಿಂದಾಗಿ ಇಸ್ರೇಲ್‌ನಿಂದ ಹಲವಾರು ಬೆದರಿಕೆಗಳು ಬಂದಿವೆ ಎಂದು ಹೇಳಿಕೊಂಡಿದ್ದರು.
“ನಿಜ ಹೇಳಬೇಕೆಂದರೆ, ನಾನು ಪ್ರತಿ ಸೆಕೆಂಡ್ ಭಯದಲ್ಲಿ ಬದುಕುತ್ತಿದ್ದೇನೆ. ವಿಶೇಷವಾಗಿ ಇಸ್ರೇಲಿ ಪಡೆಗಳು ನನ್ನ ಬಗ್ಗೆ ಏನು ಹೇಳುತ್ತಿದೆ ಎಂದು ಕೇಳಿದ ನಂತರ. ಮುಂದಿನ ಸೆಕೆಂಡ್ ಏನಾಗುತ್ತದೆ ಎಂದು ತಿಳಿಯದೆ ನಾನು ಎರಡನೇ ದರ್ಜೆಯ ಜೀವನ ನಡೆಸುತ್ತಿದ್ದೇನೆ” ಎಂದಿದ್ದರು.
ಅಕ್ಟೋಬರ್ 2023ರಲ್ಲಿ ಇಸ್ರೇಲ್ ಗಾಝಾ ಮೇಲೆ ಆಕ್ರಮಣ ಪ್ರಾರಂಭಿಸಿದಾಗಿನಿಂದ ಗಾಝಾದಲ್ಲಿ 270ಕ್ಕೂ ಹೆಚ್ಚು ಮಾಧ್ಯಮ ಸಿಬ್ಬಂದಿ ಸಾವನ್ನಪ್ಪಿದ್ದಾರೆ.
ಕದನ ವಿರಾಮ: ಮೊದಲ ಹಂತದಲ್ಲಿ 7 ಮಂದಿ ಇಸ್ರೇಲಿ ಒತ್ತೆಯಾಳುಗಳನ್ನು ಹಸ್ತಾಂತರಿಸಿದ ಹಮಾಸ್


